ಮಲ್ಲಿಗೆ ಆಕರ್ಷಕ ಹಾಗೂ ಪ್ರಮುಖ ವಾಣಿಜ್ಯ ಬಿಡಿ ಹೂ ಬೆಳೆಯಾಗಿದ್ದು, ಇದನ್ನು ಸುಗಂಧ ದ್ರವ್ಯ ತಯಾರಿಕೆಗೆ ಕೂಡಾ ಉಪಯೋಗಿಸುತ್ತಾರೆ. ಬಿಡಿ ಹೂಗಳನ್ನು ಸಾಮಾನ್ಯವಾಗಿ ಹಾರ ಮತ್ತು ಮಾಲೆಗಳನ್ನು ತಯಾರಿಸಲು ಬಳಸುತ್ತಾರೆ. ಸುಗಂಧ ದ್ರವ್ಯಕ್ಕೆ ಹೆಚ್ಚಿನ ರಫ್ತು ಮಾಡುವ ಅವಕಾಶವಿರುವ ಜೊತೆಗೆ ಔಷಧಿಯ ಮಹತ್ವವ್ರ ಇದೆ.
ಮಲ್ಲಿಗೆಯನ್ನು ನಾಟಿ ಮಾಡಲು ಮಳೆಗಾಲ ಯೋಗ್ಯ-ಜೂನ್‌ನಿಂದ ಆಗಸ್ಟ್ ತಿಂಗಳುಗಳು ನಾಟಿಗೆ ಅತಿ ಉತ್ತಮ ಕಾಲ. ನೀರಾವರಿ ವ್ಯವಸ್ಥೆ ಇದ್ದಲ್ಲಿ ಸೆಪ್ಟೆಂಬರ್ ಅಕ್ಟೋಬರ್- ತಿಂಗಳಲ್ಲಿ ಸಹ ನಾಟಿ ಮಾಡಬಹುದು.
ಮಲ್ಲಿಗೆಯನ್ನು ಎಲ್ಲ ವಿಧದ ಮಣ್ಣಿನಲ್ಲಿ ಬೆಳೆಯಬಹುದಾದರೂ, ಚೆನ್ನಾಗಿ ನೀರು ಬಸಿದು ಹೋಗುವಂತಹ ಫಲವತ್ತಾದ ಕೆಂಪು ಗೋಡು ಮಣ್ಣು ಮತ್ತು ಮರಳು ಮಿಶ್ರಿತ ಗೋಡು ಮಣ್ಣು ಅತಿ ಸೂಕ್ತ. ಮಣ್ಣಿನ ರಸಸಾರ 5.5 ರಿಂದ 6.5 ಇದ್ದರೆ ಒಳ್ಳೆಯದು
1. ಕಾಕಡ (ಜಾಸ್ಮಿನಮ್ ಮಲ್ಟಿಪ್ಲೋರಮ್): : ಗಿಡಗಳು ಪೊದೆಯಾಕಾರದಲ್ಲಿದ್ದು ವರ್ಷವಿಡೀ ಹೂ ಬಿಡುತ್ತವೆ. ಬೇಸಿಗೆಯಲ್ಲಿ ಕಡಿಮೆ ಹೂ ಬಿಡುತ್ತವೆ. ಸುವಾಸನೆ ರಹಿತವಾದ ಈ ತಳಿಯ ಹೂಗಳು ಹೆಚ್ಚು ಕಾಲ ಬಾಡುವ್ರದಿಲ್ಲ. ಐ.ಐ.ಎಚ್.ಆರ್. ಸಂಸ್ಥೆಯ ಅರ್ಕ ಅರ್ಪಣ್ ಸುವಾಸನೆಯುಳ್ಳದ್ದಾಗಿದೆ.
2. ಗುಂಡು / ದುಂಡು ಮಲ್ಲಿಗೆ (ಜಾಸ್ಮಿನಮ್ ಸಾಂಬ್ಯಾಕ್: ಇದನ್ನು ಮೈಸೂರು ಅಥವಾ ಬಳ್ಳಾರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಇದರಲ್ಲಿ ಒಂದು, ಎರಡು ಮತ್ತು ಅನೇಕ ಸುತ್ತಿನ ಹೂದಳಗಳಿರುವ ಹೂವಿನ ವಿಧಗಳಿವೆ. ಗಿಡಗಳು ಪೊದೆಯಾಕಾರದಲ್ಲಿದ್ದರೂ ಅದನ್ನು ಸರಿಯಾಗಿ ಸವರಿ ಬಳ್ಳಿಯಂತೆ ಬೆಳೆಸಬಹುದಾಗಿದೆ. ಹೂಗಳು ಸುವಾಸನೆ ಭರಿತವಾಗಿದ್ದು, ಮೊಗ್ಗುಗಳು ದೊಡ್ಡ ಗಾತ್ರ ಹೊಂದಿ ಗುಂಡಗಿರುತ್ತವೆ. ಬೇಸಿಗೆ ಮತ್ತು ಮಳೆಗಾಲಗಳಲ್ಲಿ (ಮಾರ್ಚ್‌ನಿಂದ ಅಕ್ಟೋಬರ್ ತಿಂಗಳವರೆಗೆ) ಹೂ ಕೊಡುತ್ತದೆ. ಈ ಮಲ್ಲಿಗೆಯ ಇತರ ತಳಿಗಳೆಂದರೆ ಅರ್ಕ ಆರಾಧನಾ, ಮೋಗ್ರ, ರಾಮನಾಥಪುರಂ, ರಾಮಬಾಣಂ, ಏಳುಸುತ್ತಿನ ಮಲ್ಲಿಗೆ, ಕಸ್ತೂರಿ ಮಲ್ಲಿಗೆ, ಬೇಲಾ, ವಿರೂಪಾಕ್ಷಿ ಇತ್ತಾದಿ.
3. ವಸಂತ ಮಲ್ಲಿಗೆ (ಜಾಸ್ಮಿನಮ್ ಆರಿಕ್ಯುಲೇಟಮ್: ಪೊದೆ ಜಾತಿಯ ಈ ತಳಿ ವರ್ಷದಾದ್ಯಂತ ಹೂ ಕೊಡುತ್ತದೆ. ಆದರೆ ಮುಂಗಾರಿನಲ್ಲಿ ಹೆಚ್ಚು ಇಳುವರಿ ಕೊಡುತ್ತದೆ. ಹೂಗಳು ಸುವಾಸನೆ ಭರಿತವಾಗಿದ್ದು ಹೆಚ್ಚಿನ ಪ್ರಮಾಣದ ಸುಗಂಧದ್ರವ್ಯ ಕೊಡಬಲ್ಲವ್ರ (ಶೇ. 0.28 ರಿಂದ 0.36). ಹುಗಳನ್ನು ಬಿಡಿ ಹೂವಾಗಿ ಒಳಾಂಗಣ ಅಂದಗೊಳಿಸಲು ಮತ್ತು ಸುಗಂಧದ್ರವ್ಯ ತೆಗೆಯಲು ಬಳಸುತ್ತಾರೆ. ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆ ಮಾಡಲಾಗಿರುವ ಪಾರಿಮುಲ್ಲೈ, ಸಿ.ಓ.-1 ಮುಲ್ಲೈ ಹಾಗೂ ಸಿ.ಓ.-2 ಮುಲ್ಲೈ ಮತ್ತು ಅಂಬೂರ್ ಮಲ್ಲಿಗೆಗಳು ಈ ಮಲ್ಲಿಗೆಯ ಮುಖ್ಯ ತಳಿಗಳು.
4. ಜಾಜಿ ಮಲ್ಲಿಗೆ (ಜಾಸ್ಮಿನಮ್ ಗ್ರ್ಯಾಂಡಿಪ್ಲೋರಮ್): ಬಳ್ಳಿಯಂತೆ ಬೆಳೆಯುವ ಇದು ಸುವಾಸನೆಭರಿತ ಹೂಗಳನ್ನು ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಕೊಡುತ್ತದೆ. ಅಧಿಕ ಸುಗಂಧ ಎಣ್ಣೆಯನ್ನೊಳಗೊಂಡಿರುವ ಇದರ ಹೂಗಳನ್ನು ಹೆಚ್ಚಾಗಿ ಸುಗಂಧದ್ರವ್ಯ ತಯಾರಿಕೆಗೆ ಹಾಗೂ ಬಿಡಿ ಹೂವಾಗಿ ಕೂಡ ಉಪಯೋಗಿಸುತ್ತಾರೆ. ಹೂಗಳಲ್ಲಿ ಸುಗಂಧ ಎಣ್ಣೆಯ ಪ್ರಮಾಣ ಶೇ. 0.24 ರಿಂದ 0.42 ರಷ್ಟು ಇರುತ್ತದೆ. ಐ.ಐ.ಎಚ್.ಆರ್. ನಿಂದ ಅರ್ಕ ಸುರಭಿ, ತಮಿಳುನಾಡು ಕೃಷಿ ವಿಶ್ವವಿದ್ಯಾನಿಯಲದಿಂದ ಸಿ.ಓ.-1 ಪಿಚ್ಚಿ, ಸಿ.ಓ.-2 ಪಿಚ್ಚಿ ತಳಿಗಳು ಮುಖ್ಯವಾದವ್ರ.
ಉಡುಪಿ ಮಲ್ಲಿಗೆ: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಉತ್ತಮವಾಗಿ ಬೆಳೆಯಬಹುದಾದ ಈ ತಳಿಯು ಜಾಸ್ಮಿನಮ್ ಸಾಂಬಾಕ್ ಪ್ರಭೇದಕ್ಕೆ ಸೇರಿದೆ. ಸಾಮಾನ್ಯವಾಗಿ ಪೊದೆಯಾಕಾರದಲ್ಲಿ ಬೆಳೆದು ಉದ್ದನೆಯ ಚೂಪಾದ ಒಂದು ಸುತ್ತಿನ ಸುಗಂಧಭರಿತ ಸಣ್ಣಗಾತ್ರದ ಹೂಗಳನ್ನು ಜನವರಿಯಿಂದ ನವೆಂಬರ್ ತಿಂಗಳವರೆಗೂ ಬಿಡುತ್ತದೆ. ಇದರ ಮೊಗ್ಗುಗಳು ಕೊಯ್ಲಿಗೆ ನಂತರ 10-12 ಗಂಟೆಗಳವರೆಗೂ ಅರಳುವ್ರದಿಲ್ಲ ಮತ್ತು ಬಾಡುವ್ರದಿಲ್ಲ.
ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ
1. ಗೂಟಿ/ಕಾಂಡದ ತುಂಡುಗಳು/ಕಂದುಗಳು
ಅ) ಕಾಕಸ 6950
ಆ) ಗುಂಡು ಮಲ್ಲಿಗೆ ಮತ್ತು ವಸಂತ ಮಲ್ಲಿಗೆ 4444
ಇ) ಜಾಜಿ ಮಲ್ಲಿಗೆ 3333
ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ
1. ಸಾವಯವ ಗೊಬ್ಬರ: 20 ಕಿ.ಗ್ರಾಂ ಪ್ರತಿ ಗಿಡಕ್ಕೆ ಪ್ರತಿ ವರ್ಷಕ್ಕೆ
2. ರಾಸಾಯನಿಕ ಗೊಬ್ಬರ
ಸಾರಜನಕ 120 ಗ್ರಾಂ
ರಂಜಕ 240 ಗ್ರಾಂ
ಪೊಟ್ಯಾಷ್ 240 ಗ್ರಾಂ
ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು 2 ಸಮಕಂತುಗಳಲ್ಲಿ ಜನವರಿ ಮತ್ತು ಜೂನ್ ತಿಂಗಳುಗಳಲ್ಲಿ ಬಳ್ಳಿ ಕತ್ತರಿಸಿದ ನಂತರ ಕೊಡಬೇಕು. ಕರಾವಳಿ ಪ್ರದೇಶದಲ್ಲಿ ಮಾರ್ಚ್-ಏಪ್ರಿಲ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕೊಡುವ್ರದು. ನೀರಾವರಿ ಇದ್ದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ವಾರಕ್ಕೊಮ್ಮೆ ನೀರು ಕೊಟ್ಟರೆ ಸಾಕು, ಮಳೆಗಾಲದಲ್ಲಿ ನೀರು ನಿಲ್ಲದಂತೆ ಬಸಿಕಾಲುವೆಗಳನ್ನು ತೆಗೆಯಬೇಕು, ಪ್ರತಿ ವರ್ಷ ಗಿಡಗಳನ್ನು ಸವರುವ್ರದು ಸೂಕ್ತ.
ರೋಗಗಳು: ಎಲೆಚುಕ್ಕೆ ರೋಗ, ಸೊರಗು ರೋಗ, ಬೂದಿ ರೋಗ, ತುಕ್ಕು ರೋಗ.
ಕೀಟಗಳು: ಕೆಂಪು ಶಲ್ಕ ಕೀಟ, ಹಿಟ್ಟು ತಿಗಣೆ, ಮಲ್ಲಿಗೆ ತಿಗಣೆ, ನುಸಿ (ಮಜ್ಜಿಗೆ ರೋಗ), ಎಲೆ ತಿನ್ನುವ ಹುಳು ಮತ್ತು ಬಿಳಿ ನೊಣ.
1. ಕಾಕಡ |
ವರ್ಷದಾದ್ಯಂತ (ಮಾಚ್-ಮೇ ತಿಂಗಳುಗಳು ಹೊರತುಪಡಿಸಿ) |
2. ಗುಂಡು ಮಲ್ಲಿಗೆ |
ಮಾರ್ಚ್-ಅಕ್ಟೋಬರ್ |
3. ವಸಂತ ಮಲ್ಲಿಗೆ |
ಏಪ್ರಿಲ್-ಅಕ್ಟೋಬರ್ |
4. ಜಾಜಿ ಮಲ್ಲಿಗೆ |
ಜೂನ್-ಸೆಪ್ಟೆಂಬರ್ |
ಹಾರ ಹಾಗೂ ಹೂಮಾಲೆ ತಯಾರಿಸಲು ಹೂಗಳನ್ನು ಮೊಗ್ಗಿದ್ದಾಗ ಹಾಗೂ ಸುಗಂಧದ್ರವ್ಯ ತಯಾರಿಕೆಗೆ ಪೂರ್ಣ ಅರಳಿದ ಹೂಗಳನ್ನು ಬೆಳಗಿನ ಸಮಯದಲ್ಲಿ ಕೊಯ್ಲು ಮಾಡಬೇಕು.
ವಿವಿಧ ತಳಿಗಳಲ್ಲಿ 1-4 ವರ್ಷಗಳ ಇಳುವರಿ ಪ್ರಮಾಣ ಪ್ರತಿ ಹೆಕ್ಟೇರಿಗೆ (ಕಿ.ಗ್ರಾಂ)
ಕ್ರ.ಸಂ |
ವಿವರ |
ಮೊದಲ ವರ್ಷ |
ಎರಡನೇ ವರ್ಷ |
ಮೂರನೇ ವರ್ಷ |
ನಾಲ್ಕನೇ ವರ್ಷ ಹಾಗೂ ನಂತರ |
1. |
ಕಾಕಡ |
1000 |
5000 |
7500 |
8000 |
2. |
ಗುಂಡು ಮಲ್ಲಿಗೆ |
1250 |
2500 |
5000 |
7500 |
3. |
ವಸಂತ ಮಲ್ಲಿಗೆ |
1250 |
2500 |
5000 |
10000 |
4. |
ಜಾಜಿ ಮಲ್ಲಿಗೆ |
1250 |
3750 |
10000 |
10000 |
ಮೂಲ : ಆಗ್ರೋಪೀಡಿಯ
ಕೊನೆಯ ಮಾರ್ಪಾಟು : 5/24/2020