ಸೇವಂತಿಗೆ ಪ್ರಮುಖ ವಾಣಿಜ್ಯ ಹೂವಿನ ಬೆಳೆಗಳಲ್ಲಿ ಒಂದಾಗಿದೆ. ಸೇವಂತಿಗೆಯನ್ನು ಬಿಡಿ ಹೂ ಮತ್ತು ಕತ್ತರಿಸಿದ ಹೂವನ್ನಾಗಿ ಉಪಯೋಗಿಸುತ್ತಾರಲ್ಲದೆ ಸುಗಂಧ ತೈಲ ಹಾಗೂ ಪೈರಿಥ್ರಮ್ ಕೀಟನಾಶಕ ತಯಾರಿಕೆಯಲ್ಲಿ ಬಳಸುತ್ತಾರೆ.
ಮಣ್ಣು
ಸೇವಂತಿಗೆಯನ್ನು 6-7 ರಸಸಾರವಿರುವ ಎಲ್ಲ ತರಹದ ಮಣ್ಣುಗಳಲ್ಲಿ ಬೆಳೆಯುತ್ತಾರೆ. ಮರಳು ಮಿಶ್ರಿತ ಚೆನ್ನಾಗಿ ನೀರು ಬಸಿದು ಹೋಗುವಂತಹ ಗೋಡು ಮಣ್ಣು ಈ ಬೆಳೆಗೆ ಅತಿ ಸೂಕ್ತ.
ತಳಿಗಳು
ಹಳದಿ ಮತ್ತು ಬಿಳಿ ಹೂಗಳ ತಳಿಗಳನ್ನು ಸಾಮಾನ್ಯವಾಗಿ ನಮ್ಮ ರಾಜ್ಯದಲ್ಲಿ ಕೃಷಿ ಮಾಡುತ್ತಾರೆ.
- ರೆಡ್‌ಗೋಲ್ಡ್, ಇಂದಿರಾ, ನೀಲಿಮಾ, ಚಂದ್ರಿಕ, ರವಿಕಿರಣ್, ಯಲ್ಲೋಗೋಲ್ಡ್, ಪಂಕಜ್ (ಐ.ಐ.ಎಚ್.ಆರ್. ತಳಿಗಳು) ಮತ್ತು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದವರು ಸಿ.ಓ.-1 ಮತ್ತು ಸಿ.ಓ.-2 ಎಂಬ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ.
- ಅರ್ಕಾರವಿ, ಅರ್ಕಾಗಂಗಾ, ಉಷಾಕಿರಣ್, ಕೀರ್ತಿ, ಅರ್ಕಾಸ್ವರ್ಣ ಸಹ ಕೃಷಿ ಮಾಡುತ್ತಾರೆ.
- ಪಂಜಾಬ್ ಅನುರಾಧ: ಇತ್ತೀಚಿಗೆ ಬಿಡುಗಡೆಯಾದ ಹೊಸ ತಳಿಯಾಗಿದ್ದು ಹೊಂಬಣ್ಣದ. ಆಕರ್ಷಕ ಹೂಗಳನ್ನು ಬಿಡುತ್ತದೆ. ಕಡಿಮೆ ಅವಧಿಯ, ಅಧಿಕ ಇಳುವರಿ ಕೊಡುವ ಹಾಗೂ ಹೆಚ್ಚು ದಿನ ತಾಜಾತನ ಉಳಿಸಿಕೊಳ್ಳುವ ತಳಿಯಾಗಿದ್ದು ಬಿಡಿ ಹೂಗಳಾಗಿ ಹಾಗೂ ಕತ್ತರಿಸಿ ಹೂದಾನಿಗಳಲ್ಲಿ ಇಡಲು ಸಹ ಉಪಯೋಗಿಸಬಹುದು.
ಬೇಸಾಯ ಸಾಮಗ್ರಿಗಳು
- ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ
- ಮೃದು ಕಾಂಡದ ತುಂಡುಗಳು ಅಥವಾ ಕಂದುಗಳು 60,000-1,00,000
- ಬಿತ್ತನೆ ಕಾಲ
- ತಂಪಾದ ವಾತಾವರಣ ಮತ್ತು 16-180 ಸೆಲ್ಸಿಯಸ್ ರಾತ್ರಿಯ ಉಷ್ಣಾಂಶವಿರುವ ಹವಾಮಾನ ಈ ಬೆಳೆಗೆ ಯೋಗ್ಯ. ಮುಖ್ಯ ಬೆಳೆಯ ಕಾಲ ಆಗಸ್ಟ್‌ನಿಂದ ನವೆಂಬರ್. ಬೆಳೆಯನ್ನು ಫೆಬ್ರವರಿ-ಮಾರ್ಚ್ ನಲ್ಲಿ ಪ್ರಾರಂಭಿಸಬಹುದು.
- ಭೂಮಿಯನ್ನು ಆಳವಾಗಿ, ಮುರು ನಾಲ್ಕು ಸಲ ಉಳುಮೆ ಮಾಡಿ ಹದಗೊಳಿಸಬೇಕು. ಪ್ರತಿ ಹೆಕ್ಟೇರಿಗೆ 20 ಟನ್ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಬೇಕು. ಏರು ಮಡಿಗಳನ್ನು 30-45 ಸೆಂ.ಮೀ. ಅಂತರದಲ್ಲಿ ತಯಾರಿಸಿ ಕಾಲುವೆಗಳಲ್ಲಿ ಪ್ರತಿ ಹೆಕ್ಟೇರಿಗೆ 40 ಕಿ.ಗ್ರಾಂ ಸಾರಜನಕ, 150 ಕಿ.ಗ್ರಾಂ ರಂಜಕ ಮತ್ತು 100 ಕಿ.ಗ್ರಾಂ ಪೊಟ್ಯಾಷ್‌ಯುಕ್ತ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಮಿಶ್ರಣಗೊಳಿಸಬೇಕು. ಮೃದು ಕಾಂಡದ ತುಂಡುಗಳನ್ನು ಇಲ್ಲವೆ ಕಂದುಗಳನ್ನು ಬದುಗಳ ಒಂದು ಬದಿಗೆ 30-40 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಸಸಿಗಳ ತುದಿಗಳನ್ನು ಚಿವ್ರಟಿದ ಸಮಯದಲ್ಲಿ ಪ್ರತಿ ಹೆಕ್ಟೇರಿಗೆ 40 ಕಿ.ಗ್ರಾಂ ಸಾರಜನಕ ಹಾಗೂ ಒಂದು ತಿಂಗಳ ನಮತರ 40 ಕಿ.ಗ್ರಾಂ ಸಾರಜನಕ ಗೊಬ್ಬರವನ್ನು ಮೇಲುಗೊಬ್ಬರ ರೂಪದಲ್ಲಿ ಬೆಳೆಗೆ ಒದಗಿಸಬೇಕು.
ಬೇಸಾಯ ಸಾಮಗ್ರಿಗಳು
- ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ
- 1 ಕೊಟ್ಟಿಗೆ ಗೊಬ್ಬರ 20 ಟನ್
- 2 ರಾಸಾಯನಿಕ ಗೊಬ್ಬರ
- # ಸಾರಜನಕ 120 ಕಿ.ಗ್ರಾಂ
- # ರಂಜಕ 150 ಕಿ.ಗ್ರಾಂ
- # ಪೊಟ್ಯಾಷ್ 100 ಕಿ.ಗ್ರಾಂ
ನೀರಾವರಿ ಮತ್ತು ಅಂತರ ಬೇಸಾಯ
-
- ಸಸಿಗಳ ತುದಿಯನ್ನು ಸಸಿಗಳು 15-20 ಸೆಂ.ಮೀ. ಎತ್ತರವಾಗಿರುವಾಗ ಅಥವಾ 4 ವಾರಗಳ ನಂತರ ಚಿವ್ರಟಿ ಹಾಕಬೇಕು. ಇದರಿಂದ ಹೆಚ್ಚು ಕವಲುಗಳು ಒಡೆಯುತ್ತವೆ. ಈ ಕವಲುಗಳ ತುದಿಯನ್ನು ಕೂಡ 7-8 ವಾರಗಳ ನಂತರ ಚಿವ್ರಟಬೇಕು. ಕಳೆಯನ್ನು ಒಂದೆರಡು ಸಲ ತೆಗೆದು ಕ್ಷೇತ್ರವನ್ನು ಸ್ವಚ್ಛವಾಗಿರಿಸಬೇಕು. ಪ್ರತಿ 4-5 ದಿನಗಳಿಗೊಮ್ಮೆ ಮಣ್ಣು ಮತ್ತು ಹವಾಗುಣಕ್ಕನುಗುಣವಾಗಿ ಬೆಳೆಗೆ ನೀರು ಒದಗಿಸಬೇಕು.
ಸಸ್ಯ ಸಂರಕ್ಷಣೆ
ರೋಗಗಳು: ಹಳದಿ ನಂಜು ರೋಗ, ಬೇರು ಕೊಳೆ ರೋಗ, ಎಲೆ ಚುಕ್ಕೆ ರೋಗ ಮತ್ತು ತುಕ್ಕು ರೋಗ.
ಹತೋಟಿ ವಿಧಾನ
- ರೋಗಬಾಧೆ ಕಂಡುಬಂದಾಗ 2 ಗ್ರಾಂ ಮ್ಯಾಂಕೋಜೆಬ್ ಅಥವಾ 1 ಗ್ರಾಂ ಕಾರ್ಬೆಂಡಜಿಂ ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂದಕವನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
- ಹಳದಿ ನಂಜು ರೋಗದ ಬಾಧೆಗೊಳಗಾದ ಸಸಿಗಳನ್ನು ಕಿತ್ತು ನಾಶಪಡಿಸಿ ರೋಗ ಹರಡುವ್ರದನ್ನು ನಿಯಂತ್ರಿಸಬೇಕು.
- ನೀರು ಚೆನ್ನಾಗಿ ಬಸಿದುಹೋಗುವಂತೆ ಮಾಡಿ ಬೆಳೆಯನ್ನು ಬೇರು ಕೊಳೆ ರೋಗದಿಂದ ರಕ್ಷಿಸಬೇಕು.
ಸಸ್ಯ ಸಂರಕ್ಷಣೆ
- ಕೀಟಗಳು: ಹೇನು, ಥ್ರಿಪ್ಸ್ ಮತ್ತು ಮೊಗ್ಗು ಕೊರೆಯುವ ಹುಳು.
- ಹತೋಟಿ ವಿಧಾನ
ಕೀಟ ಬಾಧೆ ಕಂಡುಬಂದಾಗ ಬೆಳೆಗೆ 1 ಮಿ.ಲೀ. ಮೀಥೈಲ್ ಪ್ಯಾರಾಥಿಯಾನ್ ಅಥವಾ 1 ಮಿ.ಲೀ. ಮಾನೋಕ್ರೊಟೋಫಾಸ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕೊಯ್ಲು
ನಾಟಿ ಮಾಡಿದ ಮೂರುವರೆ ತಿಂಗಳಲ್ಲಿ ಹೂಗಳು ಬರಲು ಆರಂಭವಾಗಿ ನಂತರ 45 ದಿನಗಳವರೆಗೆ ಮುಂದುವರೆಯುತ್ತವೆ. ಮುಕ್ಕಾಲು ಅಥವಾ ಪೂರ್ತಿ ಅರಳಿದ ಹೂಗಳನ್ನು ಕೊಯ್ಲು ಮಾಡಬೇಕು.
ಇಳುವರಿ
ಪ್ರತಿ ಹೆಕ್ಟೇರಿನಿಂದ 10,000 ದಿಂದ 15,000 ಕಿ.ಗ್ರಾಂ ಹೂಗಳ ಇಳುವರಿಯನ್ನು ನಿರೀಕ್ಷಿಸಬಹುದು.
ಮೂಲ : ಆಗ್ರೋಪೀಡಿಯ
ಕೊನೆಯ ಮಾರ್ಪಾಟು : 4/23/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.