ಇದೊಂದು ಅತಿ ಮುಖ್ಯವಾದ ಗಡ್ಡೆ ತರಕಾರಿ ಬೆಳೆಯಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಠವನ್ನು ಹೊಂದಿರುತ್ತದೆ. ಈ ಬೆಳೆಯನ್ನು ಮಳೆಯಾಶ್ರಿತ ಹಾಗೂ ನೀರಾವರಿಯಲ್ಲಿ ಬೆಳೆಯಬಹುದಾಗಿದ್ದು ಸ್ವಲ್ಪಮಟ್ಟಿಗೆ ಒಣ ಹವೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.
ಸಾಮಾನ್ಯವಾಗಿ ದಕ್ಷಿಣ ಒಣಪ್ರದೇಶಗಳಲ್ಲಿ ಮಳೆ ಆಶ್ರಿತ ಬೆಳೆಯನ್ನು ಜೂನ್-ಜುಲೈ ತಿಂಗಳುಗಳಲ್ಲಿ, ಕರಾವಳಿ ಪ್ರದೇಶದಲ್ಲಿ ಮೇ-ಜೂನ್ ತಿಂಗಳಲ್ಲಿ ಪ್ರಾರಂಭಿಸಬಹುದು. ಎರಡನೇ ಬೆಳೆಯನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಬೆಳೆಯಬಹುದಾಗಿದ್ದು ಇದರಿಂದ ಆಗ್ನೇಯ ಮಳೆಗಳ ಉಪಯೋಗವನ್ನು ಪಡೆಯಬಹುದಾಗಿದೆ. ನೀರಾವರಿ ಬೆಳೆಯನ್ನು ದಕ್ಷಿಣ ಒಣ ಪ್ರದೇಶದಲ್ಲಿ ಅಕ್ಟೋಬರ್-ಡಿಸೆಂಬರ್ ಮತ್ತು ಕರಾವಳಿ ಪ್ರದೇಶದಲ್ಲಿ ಸೆಪ್ಟೆಂಬರ್ ತಿಂಗಳುಗಳಲ್ಲಿ ಪ್ರಾರಂಭಿಸಬಹುದು.
ಹಗುರವಾದ ಹಾಗೂ ಫಲವತ್ತಾದ ಮರಳು ಮಿಶ್ರಿತ ಗೋಡು ಮಣ್ಣುಗಳಲ್ಲಿ ಚೆನ್ನಾಗಿ ಬೆಳೆಯಬಹುದು.
ದಕ್ಷಿಣ ಒಣ ಪ್ರದೇಶಕ್ಕೆ
1. ಸಿ-43 : ಮಧ್ಯಮವಾಗಿ ಹರಡುವ ತಳಿಯಾಗಿದ್ದು ಬಿಳಿ ಗೆಡ್ಡೆಗಳನ್ನು ಹೊಂದಿರುತ್ತದೆ. ಶೀಘ್ರವಾಗಿ ಅಧಿಕ ಇಳುವರಿ ಕೊಡುವ ತಳಿ. 100 ರಿಂದ 110 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.
2. ವಿ-35: ಅತಿಯಾಗಿ ಹಬ್ಬುವ ತಳಿಯಾಗಿದ್ದು 120 ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ ಗೆಡ್ಡೆಗಳೂ ಮಧ್ಯಮ ಗಾತ್ರದವಾಗಿದ್ದು ಬಿಳಿ ಬಣ್ಣ ಹೊಂದಿರುತ್ತವೆ.
3. ವಿ-30: ಗೆಡ್ಡೆಗಳು ಮಧ್ಯಮ ಗಾತ್ರವಾಗಿದ್ದು ಹಳದಿ ಬಣ್ಣ ಹೊಂದಿರುತ್ತವೆ.
4. ಹೊಸೂರ್ ರೆಡ್.
5. ಎಚ್-41 ಮತ್ತು ಎಚ್-42.
ಬೇಸಾಯ ಸಾಮಗ್ರಿಗಳು
ಕ್ರ.ಸಂ |
ವಿವರಗಳೂ |
ಪ್ರತಿ ಹೆಕ್ಟೇರಿಗೆ |
|
|
|
ದಕ್ಷಿಣ ಒಣ ಪ್ರದೇಶ |
ಕರಾವಳಿ ಪ್ರದೇಶ |
1. |
ಬಿತ್ತನೆ ತುಂಡುಗಳು (3 ರಿಂದ 4 ಕಣ್ಣುಗಳಿರುವ ತುಂಡುಗಳು) |
55,500 |
50,000 |
ಭೂಮಿಯನ್ನು ಹದ ಮಾಡಿದ ನಂತರ 60 ಸೆಂ.ಮೀ. ಅಂತರದಲ್ಲಿ ಸಾಲುಗಳನ್ನು ತಯಾರಿಸಿ. ನಂತರ ಪೂರ್ತಿ ಪ್ರಮಾಣದ ಕೊಟ್ಟಿಗೆ ಗೊಬ್ಬರ, ರಂಜಕ ಮತ್ತು ಪೊಟ್ಯಾಷ್ ಹಾಗೂ ಪೂರ್ಣ ಪ್ರಮಾಣದ ರಂಜಕವನ್ನು ಮನ್ಣಿಗೆ ಸೇರಿಸಿ. 30 ಸೆಂ.ಮೀ. ಅಂತರದಲ್ಲಿ ತುಂಡುಗಳನ್ನು ನೆಡಬೇಕು. ನಂತರ ಭೂಮಿಗೆ ತೆಳುವಾಗಿ ನೀರನ್ನು ಹಾಯಿಸಿ. ನಾಟಿ ಮಾಡಿದ 5-6 ವಾರಗಳ ನಂತರ ಉಳಿದ ಶೇ. 50 ರಷ್ಟು ಸಾರಜನಕವನ್ನು ಕೊಡಿ. ಕರಾವಳಿ ಪ್ರದೇಶದಲ್ಲಿ ಶೇ. 50 ರಷ್ಟು ಸಾರಜನಕ ಮತ್ತು ಪೊಟ್ಯಾಷ್ ಅನ್ನು ನಾಟಿ ಮಾಡಿದ 5-6 ವಾರಗಳಲ್ಲಿ ಕೊಡಿ. ಹವಾಗುಣಕ್ಕನುಸಾರವಾಗಿ, 7 ರಿಂದ 8 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಕಳೆಯನ್ನು ಹತೋಟಿ ಮಾಡಿ.
ಬೆಳೆ ಪರಿವರ್ತನೆ: ಮಳೆ ಆಶ್ರಿತ ಬೆಳೆಯನ್ನು ಬೆಳೆಯುವಾಗ ಹಸಿರೆಲೆ ಗೊಬ್ಬರಗಳಾದ "ಲೆಗ್ಯುಮ್' ಬೆಳೆಗಳನ್ನು ಬೆಳೆದು ಮಣ್ಣಿಗೆ ಸೇರಿಸುವ್ರದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
ಕ್ರ.ಸಂ |
ವಿವರಗಳೂ |
|
|
|
|
ದಕ್ಷಿಣ ಒಣ ಪ್ರದೇಶ |
ಕರಾವಳಿ ಪ್ರದೇಶ |
1. |
ಕೊಟ್ಟಿಗೆ ಗೊಬ್ಬರ |
10 ಟನ್ |
20 ಟನ್ |
2. |
ರಾಸಾಯನಿಕ ಗೊಬ್ಬರಗಳು |
|
|
|
ಸಾರಜನಕ |
75 ಕಿ.ಗ್ರಾಂ |
75 ಕಿ.ಗ್ರಾಂ |
|
ರಂಜಕ |
50 ಕಿ.ಗ್ರಾಂ |
50 ಕಿ.ಗ್ರಾಂ |
|
ಪೊಟ್ಯಾಷ್ |
75 ಕಿ.ಗ್ರಾಂ |
75 ಕಿ.ಗ್ರಾಂ |
ರೋಗ: ಎಲೆ ಚುಕ್ಕೆರೋಗ, ಮೊಜಾಯಿಕ್ ನಂಜು ರೋಗ.
1. ಮೊಜಾಯಿಕ್ ನಂಜುರೋಗ ಹತೋಟಿ ಮಾಡಲು ರೋಗರಹಿತ ಬಳ್ಳಿಗಳ ತುಂಡುಗಳನ್ನು ನಾಟಿಗೆ ಉಪಯೊಗಿಸಬೇಕು. ರೋಗ ಕಂಡ ತಕ್ಷಣ ಕಿತ್ತು ನಾಶಪಡಿಸಬೇಕು.
2. ಎಲೆ ಚುಕ್ಕೆ ರೋಗ ತಡೆಯಲು 1 ಗ್ರಾಂ ಕಾರ್ಬೆಂಡೆಜಿಂ ಅಥವಾ 2 ಗ್ರಾಂ ಮ್ಯಾಂಕೊಜೆಬ್ ಅಥವಾ 2 ಗ್ರಾಂ ಕ್ಲೋರೋಥಲೋನಿಲ್ ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
ಕೀಟ: ಗೆಣಸಿನ ಮೂತಿ ಹುಳು.
ಕೀಟದ ಬಾಧೆ ಕಂಡೊಡನೆ 1 ಮಿ.ಲೀ. ಮೀಥೈಲ್ ಪ್ಯಾರಾಥಿಯಾನ್ ಅಥವಾ 1 ಮಿ.ಲೀ. ಆಕ್ಸಿಡೆಮಿಟಾನ್ ಮೀಥೈಲ್ 1 ಲೀಟರ್ ನೀರಿನಲ್ಲಿ ಕರಗಿಸಿ ಬೆಳೆಗೆ ಸಿಂಪಡಿಸಬೇಕು.
ಇದು ತಳಿಗನುಸಾರವಾಗಿ ನಾಟಿ ಮಾಡಿದ 4 ರಿಂದ 5 ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಅಗೆಯುವ್ರದಕ್ಕೆ ಮುನ್ನ ಬಳ್ಳಿಯನ್ನು ಕತ್ತರಿಸಿ ತೆಗೆಯಬೇಕು.
ಪ್ರತಿ ಹೆಕ್ಟೇರಿಗೆ 12,500 ಕಿ.ಗ್ರಾಂ ನಿಂದ 15,000 ಕಿ.ಗ್ರಾಂ ಗೆಡ್ಡೆಗಳನ್ನು ಪಡೆಯಬಹುದು.
ಮೂಲ : ಆಗ್ರೋಪೀಡಿಯ
ಕೊನೆಯ ಮಾರ್ಪಾಟು : 1/28/2020