ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಉಳುಮೆ

ಉಳುಮೆ

ಉಳುಮೆ - ವಿಧಾನಗಳು

 • ಅಂತರ್‍ಬದು ಪ್ರದೇಶದ ಸ್ಥಳೀಯ ಉಬ್ಬುತಗ್ಗುಗಳನ್ನು ಸಮ ಮಾಡುವುದರಿಂದ ತೇವಾಂಶದ ಸಮಾನ ಹಂಚಿಕೆಯಲ್ಲದೆ, ತಗ್ಗುಗಳಲ್ಲಿ ನೀರು ನಿಲ್ಲುವುದನ್ನು ತಡೆಯಬಹುದು.
 • ಖುಷ್ಕಿ ಜಮೀನಿನಲ್ಲಿ ಮಾಗಿ ಉಳುಮೆ ಮಾಡುವುದರಿಂದ ನಂತರ ಬೀಳುವ ಮಳೆಯ ನೀರು ಭೂಮಿಯಲ್ಲಿ ಹಚ್ಚಾಗಿ ಇಂಗಿ, ಭೂಮಿ ಸಿದ್ಧತೆ ಮತ್ತು ಬಿತ್ತನೆಯನ್ನು ಮುಂದಾಗೊ ಸಕಾಲದಲ್ಲಿ ಮಾಡಲು ಅನುವಾಗುತ್ತದೆ.
 • ಕೆಂಪು ಮಣ್ಣಿನ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಕನಿಷ್ಠ 5-6 ಅಂಗು ಮತ್ತು ಪ್ರತಿ ಎರಡು ಅಥವಾ ಮೂರು ವರ್ಷಕ್ಕೊಮ್ಮೆ 8-10 ಅಂಗುಲಕ್ಕಿಂತ ಆಳವಾಗಿ ಕಬ್ಬಿಣದ ನೇಗಿಲಿನಿಂದ ಉಳುಮೆ ಮಾಡಿ ಮೇಲ್ಬಾಗದ ಗಟ್ಟಿ ಪದರವನ್ನು ಸಡಿಲಗೊಳಿಸುವುದರಿಂದ ಹೆಚ್ಚಿನ ನೀರು ಭೂಮಿಯಲ್ಲಿ ಇಂಗಲು ಸಹಾಯಕವಾಗಿ ಬೆಳೆಗಳ ಬೆಳವಣಿಗೆ ಮತ್ತು ಹೆಚ್ಚಿನ ಇಳುವರಿಗೆ ಅನುವಾಗುತ್ತದೆ.
 • ಖುಷ್ಕಿ ಭೂಮಿಯಲ್ಲಿ ಉಳುಮೆ, ಬಿತ್ತನೆ ಮತ್ತು ಅಂತರ ಬೇಸಾಯವನ್ನು ಸಮಪಾತಳಿಯಲ್ಲಿ ಅಥವಾ ಇಳಿಜಾರಿಗೆ ಅಡ್ಡಲಾಗಿ ಮಾಡುವುದು. ತೇವಾಂಶ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಗತ್ಯ.
 • ಅಗಲ ಸಾಲುಗಳಲ್ಲಿ ಬಿತ್ತಿದ ತೊಗರಿ, ಮುಸುಕಿನಜೋಳ, ಹರಳುಮ ಸೂರ್ಯಕಾಂತಿ ಇತ್ಯಾದಿ ಬೆಳೆಗಳ ಸಾಲುಗಳ ನಡುವೆ 20 ಅಂಗುಲ ಆಳವಾದ ದೋಣಿ ಸಾಲು ತೆಗೆಯುವುದರಿಂದ ಬೆಳೆಗಳಿಗೆ ಹೆಚ್ಚಿನ ತೇವಾಂಶ ದೊರೆಯುವಂತೆ ಮಾಡಬಹುದು. ಹತ್ತಿರ ಸಾಲುಳ್ಳ ಬೆಳೆಗಳಾದ ರಾಗಿ, ನೆಲಗಡಲೆ, ಹುರುಳಿ, ಇತ್ಯಾದಿ ಬೆಳೆಗಳಲ್ಲಿ ಪ್ರತಿ 10 ಅಡಿ ಅಂತರದಲ್ಲಿ ಇದೇ ರೀತಿಯ ದೋಣಿ ಸಾಲು ತೆಗೆದು ಅವುಗಳ ಎರಡು ಬದಿಯಲ್ಲಿ ಸೂಕ್ತ ಅಂತರ್ ಬೆಳೆ ಬೆಳೆಯುವುದರಿಂದ ತೇವಾಂಶ ಸಂರಕ್ಷಣೆಯಲ್ಲದೆ ಹೆಚ್ಚಿನ ಆದಾಯ ಪಡೆಯುವ ಸಾಧ್ಯತೆ ಇದೆ.
 • ಕೃಷಿ ಜಮೀನಿನಿಂಧ ಅನಿವಾರ್ಯವಾಗಿ ಹರಿದು ಹೋಗುವ ಹೆಚ್ಚುವರಿ ಮಳೆ ನೀರು ಸುರಕ್ಷಿತವಾಗಿ ಹರಿದು ಹೋಗುವಂತೆ ನೀರುಗಾಲುವೆಗಳನ್ನು ನಿರ್ಮಿಸಿ ಅವುಗಳನ್ನು ಕಿಕಿಯಾ, ನಸೆ ಅಥವಾ ಖಸ್, ಲಾವಂಚ ಹುಲ್ಲನ್ನು ಬೆಳೆಸಿ ಸುಭದ್ರಗೊಳಿಸಬೇಕು.

ಬಿತ್ತನೆ ವಿಧಾನಗಳು - ಬಿತ್ತನೆ/ನಾಟಿಯ ವಿನ್ಯಾಸಗಳು

ಬೀಜವನ್ನು ಉಳುಮೆ ಮಾಡಿರುವ ಮಣ್ಣಿನಲ್ಲಿ ಸೇರಿಸುವ ವಿಧಾನವೇ ಬಿತ್ತನೆ.

ವಿಧಾನಗಳು

 1. ಬೀಜಗಳನ್ನು ಕೈಚೆಲ್ಲುವುದು : ಈ ವಿಧಾನವನ್ನು ಬೀಜದ ಪಾತ್ರ ಚಿಕ್ಕದಾಗಿದ್ದಾಗ ಈ ಮಾದರಿಯನ್ನು ಬಳಸಲಾಗುವುದು ಬೀಜಗಳನ್ನು ಸರಳವಾಗಿ ಕೈಚೆಲ್ಲಲಾಗುತ್ತದೆ. ಈ ಮಾದರಿಯಲ್ಲಿ ಸಸಿಗಳ ಹಾಗೂ ಸಾಲುಗಳ ನಡುವೆ ಅಂತರವನ್ನು ಕಾಪಾಡುವುದಿಲ್ಲ. ಆದ್ದರಿಂದ ಕಳೆ ನಿರ್ವಹಣೆ ಕ್ಲಿಷ್ಟಕರ.
 2. ಸಾಲು ಬಿತ್ತನೆ. : ಈ ಮಾದರಿಯನ್ನು ನೇಗಿಲಿನಲ್ಲಿ ಉಳುಮೆ ಮಾಡುತ್ತ ಅದರ ಹಿಂದೆ ಬೀಜವನ್ನು ಹಾಕಲಾಗುವುದು. ಉಳುಮೆ ಮಾಡಿದ ಸಾಲಿನಲ್ಲಿ ಬಿತ್ತನೆ ಮಾಡುವುದರಿಂದ ಸಾಲಿನ ನಡುವೆ ಅಂತರವನ್ನು ಕಾಪಾಡಬಹುದು. ಕಳೆ ನಿರ್ವಹಣೆ ಸುಲಭಕರ.
 3. ಕೂರಿಗೆ ಬಿತ್ತನೆ  : (ಸಂಯುಕ್ತ ಬೀಜ ರಸಗೊಬ್ಬರದ ಕೊರಿಗೆ ) ಕೊರಿಗೆಯಲ್ಲಿ ಬಿತ್ತನೆ ಮಾಡುವುರಿಂದ ಒಂದೇ ಭಾರಿಗೆ ಬೀಜ ಹಾಗೂ ರಸಗೊಬ್ಬರವನ್ನು ಹಾಕಬಹುದು. ಇದರಿಂದ ಬಿತ್ತನೆ ಬೇಕಾದ ಸಮಯದ ವೆಚ್ಚ ಹಾಗೂ ಕೂಲಿ ಕಡಿಮೆಯಾಗುತ್ತದೆ. ಹಾಗೂ ಅಂತರ ಕಾಪಾಡಬಹುದು.
 4. ಬೀಜವನ್ನು ನೆಲಕ್ಕೆ ಊರುವುದು  : ಈ ವಿಧಾನವನ್ನು ಬೀಜದ ಪಾತ್ರ ದೊಡ್ಡದಾಗಿದ್ದ ಸಂಧರ್ಭದಲ್ಲಿ ಒಂದೂಂದು ಬೀಜವನ್ನು ತೆಗೆದುಕೊಂಡು ನೆಲಕ್ಕೆ ಊರುವುದಕ್ಕೆ ಡಿಬ್ಲಿಂಗ್ ಎಂದು ಕರೆಯಲ್ಪಡುತ್ತದೆ. ಹೆಚ್ಚಾಗಿ ದ್ವಿದಳ ಧಾನ್ಯಗಳಿಗೆ ಇದನ್ನು ಅಳವಡಿಸಲಾಗುತ್ತದೆ.
 5. ನಾಟಿ : ಸೀಡ್‍ಬೆಡ್‍ನಲ್ಲಿ ಬೆಳೆಸಿದ 18-21 ದಿನಗಳ ಸಸಿಗಳನ್ನು ಉಳುಮೆ ಮಾಡಿದ ಭೂಮಿಯಲ್ಲಿ 2 ಅಥವಾ 3 ಸಸಿಗಳನ್ನು ನಾಟಿಮಾಡುವುದು. ಇದನ್ನು ಹೆಚ್ಚಾಗಿ ಏಕದಳ ಧಾನ್ಯ ಬೆಳೆಗಳಾದ ರಾಗಿ ಹಾಗೂ ಭತ್ತದಲ್ಲಿ ಅಳವಡಿಸಲಾಗುವುದು.

ಮೂಲ :

ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

2.95402298851
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top