ಆಳವಾದ ಮಣ್ಣು ಹೊಂದಿದ್ದು, 5-6 ತಿಂಗಳುದ್ದಕ್ಕೂ ಮಳೆ ಸಮವಾಗಿ ಬೀಳುವ ಪ್ರದೇಶಗಳಲ್ಲಿ ಎರಡು ಪದ್ಧತಿಯನ್ನು ಅನುಸರಿಸಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.
ಅಲಸಂದೆ-ರಾಗಿ 2. ಎಳ್ಳು-ಹುರುಳಿ ಅಥವಾ ರಾಗಿ ನಾಟಿ 3. ಕಡಲೆಕಾಯಿ-ರಾಗಿನಾಟಿ/ಕಡಲೆ/ಧನಿಯಾ ಎರಡು ಬೆಳೆ ಪದ್ಧತಿ ಅನುಸರಿಸುವ ರೈತರು ಸದಾ ಜಾಗರೂಕರಾಗಿ, ಬೀಳುವ ಮಳೆಯನ್ನು ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡಿಕೊಂಡು ಹೆಚ್ಚಿನ ಖರ್ಚು ಭರಿಸಲು ಸಿದ್ಧವಿದ್ದಲ್ಲಿ ವರ್ಷದಲ್ಲಿ ಎರಡು ಬೆಳೆಗಳನ್ನು ಖುಷ್ಕಿ ಪ್ರದೇಶದಲ್ಲಿ ತೆಗೆದುಕೊಳ್ಳಲು ಸಾಧ್ಯ.
ಸೂಕ್ತವಾದ ಮಿಶ್ರ ಬೆಳೆ ಪದ್ಧತಿಗಳನ್ನು ಅನುಸರಿಸುವುದರಿಂದ ಅಧಿಕ ಲಾಭವನ್ನು ಪಡೆಯುವುದೇ ಅಲ್ಲದೆ ಮಳೆಯ ಏರುಪೇರುಗಳಿಂದಾಗಿ ಆಗಬಹುದಾದ ಬೆಳೆ ಹಾನಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಎರಡು ಅಥವಾ ಹೆಚ್ಚು ಬೆಳೆಗಳನ್ನು ಮಿಶ್ರಮಾಡಿ (ಜೊತೆಯಾಗಿ) ಬಿತ್ತಿ ಬೆಳೆಯುವುದಕ್ಕೆ ಮಿಶ್ರಬೆಳೆ ಪದ್ಧತಿಯೆನ್ನುವುದು ರೂಢಿ. ರಾಗಿ ಜೊತೆಗೆ 9 ಇತರೆ ಬೆಳೆಗಳನ್ನು ಮಿಶ್ರಮಾಡಿ ಬೆಳೆಯುವುದನ್ನು (ಅಕ್ಕಡಿಸಾಲು) ಕಾಣಬಹುದು. ಮಿಶ್ರಮಾಡಿ ಬೆಳೆದ ಬೆಳೆಯಲ್ಲಿ ಅಂತರ ಬೇಸಾಯ, ಕಳೆನಿಯಂತ್ರಣ ಅಥವಾ ರೋಗ ಬಾಧೆ ನಿಯಂತ್ರಣ ಕಷ್ಟಕರ, ಆದ್ದರಿಂದ ಈ ಎಲ್ಲಾ ಬೆಳೆಗಳನ್ನು ಸಾಲುಗಳಲ್ಲಿ ಬೆಳೆಯುವುದು. ಹೆಚ್ಚು ಸೂಕ್ತವೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಕೆಲವು ಮುಖ್ಯ ಮಿಶ್ರ ಬೆಳೆ ಪದ್ಧತಿಗಳನ್ನು ಇಲ್ಲಿ ಕೊಡಲಾಗಿದೆ.
ಮಿಶ್ರ ಬೆಳೆಯಾಗಿ ಬೆಳೆಯಲು ಅನುಕೂಲವಾದ ಬೆಳೆಗಳಲ್ಲಿ ತೊಗರಿ ಹರಳು ಮತ್ತು ಅವರೆ ಪ್ರಮುಖವಾದ ಬೆಳೆಗಳು, ಏಕೆಂದರೆ ಇವು ಆಳವಾಗಿ ಬೇರು ಬೆಳೆಯುವ ಬೆಳೆಗಳಾಗಿದ್ದು, ಮಳೆ ಕಡಿಮೆಯಾದ ವರ್ಷಗಳಲ್ಲಿಯೂ ನೆಲದಾಳದಿಂದ ನೀರು ಹೀರಿಕೊಂಡು ಸಾಮಾನ್ಯವಾದ ಇಳುವರಿ ಕೊಡುವುದರಿಂದ ತೊಗರಿ, ಹರಳು ಹಾಗೂ ಅವರೆ ಬೆಳೆಗಳಿಗೆ ಖುಷ್ಕಿ ಬೇಸಾಯದಲ್ಲಿ ಒಂದು ವಿಶಿಷ್ಟ ಸ್ಥಾನವಿದ.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 2/15/2020