ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕಳೆ

ಕಳೆಯ ಹತೋಟಿಯ ಪದ್ಧತಿಗಳು, ಕಳೆನಾಶಕಗಳ - ವರ್ಗೀಕರಣ

ಸಮಗ್ರ ಕಳೆ ನಿರ್ವಹಣೆ

ಸಮಗ್ರ ಪೀಡೆ ನಿರ್ವಹಣೆಯಲ್ಲಿ ಕಳೆ ನಿರ್ವಹಣೆ ಒಂದು ಅಂಶವಾಗಿದೆ. ಎಲ್ಲಾ ಪೀಡೆಗಳಿಂದ ಬೆಳೆಗಳ ಉತ್ಪಾದನೆಯಲ್ಲಿ ಆಗುತ್ತಿರುವ ಒಟ್ಟು ನಷ್ಟದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಕಳೆಯಿಂದ ಆಗುತ್ತದೆ. ಎಂದು ತಿಳಿದುಬಂದಿದೆ. ಕಳೆಗಳು ಬೆಳೆಗಳ ಬೆಳವಣಿಗೆಗೆ ಬೇಕಾಗುವ ಬೆಳಕು. ತೇವಾಂಶ, ಪೋಷಕಾಂಶಗಳು ಮತ್ತು ಜಾಗಕ್ಕೂ ಪೈಪೋಟಿ ನಡೆಸುವುದರ ಕಾರಣ ಬೆಳೆಗಳ ಇಳುವರಿ ಮತ್ತು ಗುಣಮಟ್ಟವು ಕಡಿಮೆಯಾಗುತ್ತದೆ.

ಕಳೆಗಳು ಬೆಳೆಗಳಿಗಿಂತ ಪೈಪೋಟಿಯಲ್ಲಿ ಮುಂದೆ ಇವೆ, ಕಾರಣ ಇವುಗಳಲ್ಲಿರುವ ವೈವಿಧ್ಯತೆಗಳು ಅಂದರೆ :

  • ಕೆಲವು ಕಳೆಗಳು ಸಮೃದ್ಧಿಯಾಗಿ ಬೀಜ ಉತ್ಪಾದಿಸು ಶಕ್ತಿಯನ್ನು ಹೊಂದಿದೆ.
  • ಕೆಲವು ಬಹುವಾರ್ಷಿಕ ಕಳೆಗಳಲ್ಲಿ ಗೆಡ್ಡೆಗಳು, ಬೇರುಗಳು ಮತ್ತು ಕಾಂಡದ ತುಂಡುಗಳು ಆಹಾರವನ್ನು ಶೇಖರಿಸಿಟ್ಟು  ಕೊಳ್ಲುವ ಶಕ್ತಿಯನ್ನು ಹೊಂದಿರುತ್ತವೆ.
  • ಕೆಲವು ಕಳೆ ಬೀಜಗಳಲ್ಲಿ ಮತ್ತು ಗೆಡ್ಡೆಗಳಲ್ಲಿ ವಿವಿಧ ರೀತಿಯ ಜಡತ್ವ ಇರುವುದರಿಂದ ಅಧಿಕಕಾಲ ಬದುಕುತ್ತವೆ.
  • ಕೆಲವು ಕಳೆ ಬೀಜಗಳು ಮಣ್ಣಿನಲ್ಲಿ ಬಹು ಆಳಕ್ಕೆ ಸೇರಿಸಿಕೊಳ್ಳುತ್ತವೆ ಹಾಗೂ ಅಧಿಕ ಕಾಲ ಬದುಕಿ ಉಳಿದಿರುತ್ತವೆ.

ಸಮಗ್ರ ಕಳೆ ನಿರ್ವಹಣಾ ಪದ್ದತಿ ಎಂದರೇನು ?

ಒಂದು ಬೆಳೆ ಅಥವಾ ಬೆಳೆ ಪದ್ದತಿಯಲ್ಲಿ ಆರ್ಥಿಕ ಹಾನಿ ಮಟ್ಟಕ್ಕಿಂತ ಇಳುವರಿ ಕಡಿಮೆಯಾಗದಂತೆ ಕಳೆಗಳ ಪೈಪೋಟಿಯನ್ನು ಕಡಿಮೆ ಖರ್ಚಿನ ಎರಡು ಅಥವಾ ಎರಡಕ್ಕಿಂತ ಹೆಚ್ಚು ಕಳೆ ನಿರ್ವಹಣಾ ಪದ್ಧತಿಗಳನ್ನು ಸಂಯೋಜಿಸಿ, ಕಳೆ ನಿಯಂತ್ರಣ ಮಾಡುವುದಕ್ಕೆ ಸಮಗ್ರ ಕಳೆ ನಿರ್ವಹಣಾ ಪದ್ಧತಿ ಎಂದು ಹೇಳುತ್ತೇವೆ.

ಕಳೆ ನಿರ್ವಹಣ ಪದ್ದತಿಗಳು

  • ಬೇಸಾಯ ಪದ್ದತಿಗಳು
  • ಯಾಂತ್ರಿಕ ಪದ್ಧತಿಗಳು
  • ಕಳೆ ನಾಶಕಗಳ ಬಳಕೆ
  • ಜೈವಿಕ ಪದ್ಧತಿಗಳು

ಈ ಸಮಗ್ರ ಕಳೆ ನಿರ್ವಹಣಾ ಪದ್ಧತಿಯು ಪರಿಣಾಮಕಾರಿಯಾದ, ಅವಲಂಬಿಸ ಬಹುದಾದ, ಅನುಷ್ಠಾನಕ್ಕೆ ತರಲು ಸಾಧ್ಯವಾದ ಮತ್ತು ಪರಿಸರಕ್ಕೆ ಧಕ್ಕೆ ಮಾಡದಂತಹ ಸಂಯೋಜಿತವಾದಂತಹ ಪದ್ಧತಿಯಾಗಿರಬೇಕು

ಮೂಲ :

ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

 

3.15315315315
ಮಹಾಂತೇಶ ವೈ ಆರ್ Jul 19, 2020 07:46 AM

ಮೆಕ್ಕೆ ಜೋಳದ ಲ್ಲಿ ಮುಳ್ಳುಸ ಜ್ಜೆ ನಿರ್ಮೂಲನೆ ಮಾಡುವ ರಾಸಾಯನಿಕ ಔಷಧಕ್ರಮ ತಿಳಿಸಿ ಕೊಡಿ ದಯವಿಟ್ಟು,

ಮಂಜುನಾಥ Dec 28, 2019 02:14 PM

ಬಳ್ಳಿ ಬೀನ್ಸಲ್ಲಿ ಕಳೆ ನಿಯಂತ್ರಣ ಮಾಡುವುದು ಹೇಗೆ

Krishnappa s Jul 02, 2019 03:56 PM

ನಮ್ಮ ಹೊಲದಲ್ಲಿ ಈಗಳಿ ಮತ್ತು ಕರಿಕೆ ಜಾಸ್ತಿ ಇದೆ ಅದಕ್ಕೆ ಏನು ಮಾಡಬೇಕು ? ದಯವಿಟ್ಟು ಉಪಾಯ ನೀಡಿ.

ಕೆ ತಿಮ್ಮಪ್ಪ Jan 10, 2019 10:38 AM

ಹತ್ತಿಯಲ್ಲಿ ಪಿಂಕ್ ಬೋಲವರ್ಮ್ ಬಗ್ಗೆ ಮಾಯಿತಿ

ಮಂಜುನಾಥ್ ಮಠಪತಿ Jul 24, 2018 03:43 PM

ಕಬ್ಬು ಬೆಳೆಗೆ ಸೂಕ್ತ ಗೊಬ್ಬರ ಮತ್ತು ಕಳೆ ನಾಶಕದ ಬಗ್ಗೆ ತಿಳಿಸಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top