ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕಳೆನಾಶಕ

ಕಳೆನಾಶಕಗಳ ಬಗ್ಗೆ

ರಾಸಾಯನಿಕ  ಪದ್ಧತಿಗಳು

ಕಳೆನಾಶಕ (ರಾಸಾಯನಿಕ ವಸ್ತು) ಗಳನ್ನು ಬೆಳೆಗಳಲ್ಲಿ ಉಪಯೋಗಿಸಿದಾಗ ಬೆಳೆಗಳಿಗೆ ಹಾನಿಮಾಡದೆ ಕಳೆಗಳನ್ನು ಮಾತ್ರ ಕೊಲ್ಲಬೇಕು. ಈ ರೀತಿ ಕಳೆನಾಶಕಗಳು ಕೆಲಸ ಮಾಡಬೇಕಾದರೆ ಆಯ್ಕೆ ನಿಯಮವನ್ನು ಮತ್ತು ಇನಿತರೆ ಮಾರ್ಪಾಟುಗಳನ್ನು ಮಾಡುವುದರಿಂದ ಸಾಧ್ಯವಾಗುತ್ತದೆ. ಅಂದರೆ ಒಂದು ಕಳೆನಾಶಕವನ್ನು ಎಲ್ಲಾ ಬೆಳೆಗಳಲ್ಲಿಯೂ ಉಪಯೋಗಿಸುವುದಕ್ಕೆ ಬರುವುದಿಲ್ಲ.

ಕಳೆನಾಶಕ ವಿಧಗಳು

ಉದಯ ಪೂರ್ವ ಕಳೆನಾಶಕಗಳು : ಕಳೆನಾಶಕಗಳು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 3-5 ದಿವಸಗಳೊಳಗೆ ನೆಲದ ಮೇಲೆ ಎಲ್ಲಾ ಭಾಗಕ್ಕೂ ಬೀಳುವಾಗೆ ಸಿಂಪರಣೆ ಮಾಡುವುದು.

ಉದಯೋತ್ತರ ಕಳೆನಾಶಕಗಳು

ಕಳೆನಾಶಕಗಳು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ  15-20 ದಿವಸಗಳಲ್ಲಿ ಕಳೆಗಳು 2-4 ಎಲೆ ಬಿಟ್ಟಿರುವ ಸಮಯದಲ್ಲಿ ಬೆಳೆಗಳು ಸೇರಿ ನೆಲದ ಮೇಲೂ ಎಲ್ಲಾ ಭಾಗಕ್ಕೂ ಬೀಳುವಾಗೆ ಸಿಂಪರಣೆ ಮಾಡುವುದು.

ರಾಸಾಯನಿಕ ಕಳೆನಾಶಕಗಳ ಬಳಕೆ

ಈ ಕೆಳಕಂಡ ವಿಶೇಷ ಪರಿಸ್ಥತಿಗಳಲ್ಲಿ ಮಾತ್ರ ಅನ್ಯ ಮಾರ್ಗವಿಲ್ಲದೆ ರಾಸಾಯನಿಕ ಕಳೆನಾಶಕಗಳನ್ನು ಅತೀ ಎಚ್ಚರಿಕೆಯಿಂದ ಬಳಸಬೇಕು.

  • ಕೈಯಲ್ಲಿ ಕಳೆ ಕೀಳುವುದಕ್ಕೆ ಆಗದಿರುವುದು
  • ಎಲ್ಲಿ ಕಳೆ ಮತ್ತು ಸಸಿಗಳು ಒಂದೇ ರೀತಿ ಕಾಣುತ್ತವೆ (ಭತ್ತ/ಗೋಧಿ)
  • ಎಲ್ಲಿ ಕೃಷಿ ಕಾರ್ಮಿಕರಿಗೆ ಕೊಡುವ ಕೂಲಿ ಖರ್ಚು ಹೆಚ್ಚಾಗಿ, ರಾಸಾಯನಿಕ ಕಳೆನಾಶಕ ಬಳಕೆಗಿಂತ    ಹೆಚ್ಚಿರುತ್ತದೆಯೋ ಅಂತಹ ಪ್ರದೇಶದಲ್ಲಿ.
  • ಎಲ್ಲಿ ಕೃಷಿಕಾರ್ಮಿಕರು ಸಿಕ್ಕುವುದಿಲ್ಲವೋ, ಆ ಪ್ರದೇಶದಲ್ಲಿ

ಮೂಲ :ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

3.10948905109
ಓಂಕಾರಗೌಡ. ಕೆ Jul 23, 2020 06:24 PM

ನಾನು ಸಜ್ಜೆ ಬೆಳೆ ಬಿತ್ತನೆ ಮಾಡಿದ್ದೇನೆ, ಇದರಲ್ಲಿ ತುಂಬಾನೆ ಕಳೆ ಇದೆ ಆದ್ದರಿಂದ ಕಳೆ ನಾಶಮಾಡಲು, ಯಾವ ಕಳೆನಾಶಕ ಸಿಂಪಡಿಸಬೇಕು, ಬಿತ್ತನೆ ಮಾಡಿ ಏಂಟು ದಿನಗಳಾಗಿದೆ, ತಿಳಿಸುವಿರಾ.

ರಮೇಶ Jun 26, 2020 09:06 AM

ನಮ್ಮದು ಹೊನ್ನಾಳಿ ತಾಲೂಕ್ ನಮ್ಮಲ್ಲಿ ಇತ್ತೀಚೆಗೆ ಮುಳ್ಳು ಸಜ್ಜೆ ಎಂಬ ಕಳೆ ತುಂಬಾ ಹಾವಳಿ ಮಾಡಿದ್ದು ಮೆಕ್ಕೆ ಜೋಳಕ್ಕೆ ತುಂಬಾ ತೊಂದರೆ ಕೊಡ್ತಾ ಇದೆ ಇದಕ್ಕೆ ಏನಾದರೂ ಪರಿಹಾರ ಇದ್ರೆ ಕೊಡಿ ಈವಾಗ ಮೆಕ್ಕೆಜೋಳ ಬಿತ್ತನೆ ಮಾಡಿ 8 ದಿನಗಳು ಆಗಿದೆ ಜೋಳದ ಜೊತೆಗೆ ಈ ಕಳೆ ಬೇಳಿತ ಇದೆ ಕಳೆ ನಾಶಕ ಬಳಸಿದ್ದಿವಿ ಆದರೆ ಮುಳ್ಳು ಸಜ್ಜೆ ಮಾತ್ರ ಕಂಟ್ರೋಲ್ ಗೆ ಬರ್ತಾ ಎಲ್ಲ

ಷಣ್ಮುಖಯ್ಯ ಎಚ್. Dec 04, 2018 10:53 PM

ಭೂಮಿಗೆ ಕಳೆ ನಾಶಕ ಬಳಸುದ್ರಿಂದ ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತೆ. ಹೌದಾ ಅಥವಾ ಇಲ್ವಾ. ತಿಳಿಸಿ.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top