ಬಿತ್ತಿದಂತೆ ಬೆಳೆ ಎನ್ನುವ ಗಾದೆಯ ನೈಜ ಅರ್ಥಕ್ಕೆ ನಾನಾ ಆಯಾಮಗಳಿವೆ. ಇಳುವರಿಯನ್ನು ಲಕ್ಷ್ಯದಲ್ಲಿರಿಸಿಕೊಂಡಾಗ, ಬಿತ್ತನೆ ಬೀಜ ಸಮಯ, ಹವಾಮಾನ, ಮಣ್ಣಿನ ಗುಣ ಧರ್ಮಗಳ ಜೊತೆಗೆ ಬೆಳೆಗಳನ್ನು ಕಾಡುವ ವಿವಿಧ ರೋಗಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ವಿವಿಧ ಬೆಳೆಗಳಿಗೆ ತಗಲುವ ನಾನಾ ರೋಗಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಬೆಳೆ ರೋಗಗಳನ್ನು ಸಂಪೂರ್ಣವಾಗಿ ತಡೆಯಲಾಗದಿದ್ದರೂ ಆಗಬಹುದಾದ ನಷ್ಟದ ಪ್ರಮಾಣವನ್ನು ತಗ್ಗಿಸಬಹುದು. ಅಂತಹ ನಿರ್ವಹಣಾ ಕ್ರಮಗಳ ಸಮಗ್ರ ಮಾಹಿತಿ ಇಲ್ಲಿದೆ.
ರೈತರು ಬೆಳೆಯುವ ಪ್ರತಿಯೊಂದು ಬೆಳೆಯೂ (ಕೃಷಿ ಅಥವಾ ತೋಟಗಾರಿಕೆ ಬೆಳೆ ) ಒಂದಾದರೊಂದು ರೋಗಕ್ಕೆ ತುತ್ತಾಗುವದು ಸಾಮಾನ್ಯ. ಅವುಗಳಿಂದಾಗುವ ಹಾನಿ ಅಪಾರ. ಈ ರೋಗಗಳಿಗೆ ಕಾರಣವಾದ ರೋಗಾಣು, ಅವುಗಳ ಜೀವನ ಚರಿತ್ರೆ, ಅವು ಹರಡುವ ವಿಧಾನಗಳನ್ನು ತಿಳಿದುಕೊಂಡಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ನಾಶಪಡಿಸುವ ವಿಧಾನ ಅನುಸರಿಸಲು ಸಾಧ್ಯವಾಗುತ್ತದೆ. ಸಂರಕ್ಷಣಾ ಕ್ರಮಗಳು ಒಂದೇ ರೀತಿಯಾಗಿರದೇ ನಾನಾ ತೆರನಾಗಿರುತ್ತವೆ. ಅವುಗಳನ್ನೆಲ್ಲಾ ಅರಿತು ಸಂದರ್ಭಕ್ಕನುಸಾರವಾಗಿ ಕೈ ಕೊಂಡಲ್ಲಿ ಸಸ್ಯ ರೋಗಗಳ ತೀವ್ರತೆಯನ್ನು ಕಡಿಮೆಗೊಳಿಸುವುದಲ್ಲದೆ ಅಧಿಕ ಇಳುವರಿ ಹಾಗೂ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ:
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 11/14/2019
ರಾಷ್ಟ್ರೀಯ ವ್ಯವಸಾಯ ವಿಮಾ ಯೋಜನೆ ರಾಷ್ಟ್ರೀಯ ಕೃಷಿ ವಿ ಮಾ ...
ಭತ್ತದ ಬೆಳೆಗೆ ಬೆಂಕಿರೋಗ, ಕಂದು ಜಿಗಿ ಹುಳುವಿನ ಬಾಧೆ ಕಂಡು...
ಬೆಳೆ ದೃಢೀಕರಣ ಪ್ರಮಾಣ ಪತ್ರದ ಕುರಿತಾದ ಮಾಹಿತಿ ಇಲ್ಲಿ...
ಬೆಳೆ ನಾಶಪಡಿಸುವ ವನ್ಯಮೃಗಗಳ ನಿಗ್ರಹಕ್ಕೆ ರೈತನ ತಂತ್ರಗಳು