অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜನವರಿ ಸಂಚಿಕೆ

ಜನವರಿ ಸಂಚಿಕೆ

ಬೇಸಿಗೆ ಹಂಗಾಮಿನಲ್ಲಿ ಎಳ್ಳು ಬೆಳೆ ಲಾಭದಾಯಕ -  "ಎಳ್ಳು" ದಿನನಿತ್ಯ ಬಳಕೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ. ಮುಂಗಾರು ಹಂಗಾಮಿನಲ್ಲೂ ಹೆಚ್ಚಾಗಿ ಬೆಳೆಯುತ್ತಿದ್ದರೂ, ಬೇಸಿಗೆಯಲ್ಲಿ ಅಲ್ಪ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಬಹುದಾಗಿದೆ. ರೋಗ-ಕೀಟ ಬಾಧೆಯೂ ಕಡಿಮೆ ಕಂಡುಬಂದು ಹೆಚ್ಚು ಇಳುವರಿ ಸಾಧ್ಯ. ನೀರಾವರಿ ಲಭ್ಯವಿದ್ದಲ್ಲಿ ಬೇಸಿಗೆ ಬೆಳೆಯಾಗಿ ಎಳ್ಳು ಲಾಭದಾಯಕವಾಗಬಹುದಾಗಿದೆ.

ಒಂದು ಕಣ್ಣಿನ ಸಸಿ ನಾಟಿ ಪದ್ಧತಿ : ಆಶಾದಾಯಕ ತಂತ್ರಜ್ಞಾನ -  ಕಬ್ಬು ಬೆಳೆಗಾರರು ಲಕ್ಷ್ಯವಹಿಸಬೇಕಾದದ್ದು ಆಧುನಿಕ ನಾಟಿ ಪದ್ಧತಿಯ ಕಡೆ. ಈ ಪದ್ಧತಿ ಇಂದ ಸಾಂಪ್ರಾದಾಯಿಕ ನಾಟಿ ಪದ್ಧತಿಗಿಂತ ಹೆಚ್ಚು ಅರೋಗ್ಯಕರವಾದ ಕಬ್ಬಿನ ಬೆಳೆಯನ್ನು ಪಡೆಯಬಹುದಾಗಿದೆ. ಒಂದು ಕಣ್ಣಿನ ಕಬ್ಬಿನ ಸಸಿ ನಾಟಿ ಪದ್ಧತಿಯಿಂದ ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚು ಪ್ರಯೋಜನವಾಗುವುದು ಹೇಗೆ ಎಂಬುದನ್ನು ಈ ಲೇಖನ ವಿವರಿಸುತ್ತದೆ

ಧಾರವಾಡ ಕೃಷಿ ವಿಶ್ವವಿದ್ಯಾಲಯ ದಿಂದ ಬಿಡುಗಡೆ ಯಾದ ಹೊಸತಳಿಗಳು

ಬ್ಯಾಸಗಿ ಶೇಂಗಾ ವೈಜ್ಞಾನಿಕವಾಗಿ ಬೆಳೆಯುವುದು ಹ್ಯಾಂಗ  - ಬೆಳೆಯೊಂದರ ಇಳುವರಿಯಲ್ಲಿ ವ್ಯತ್ಯಾಸವಾಗುವುದು ಅನೇಕ ಕಾರಣಗಳಿಂದಾಗಿ. ಈ ವ್ಯತ್ಯಾಸವನ್ನು ಕಡಿಮೆ ಮಾಡಲು "ವೈಜ್ಞಾನಿಕ ಪದ್ಧತಿ"ಯನ್ನು ಬೇಸಾಯ ಕ್ರಮದಲ್ಲಿ ಅಳವಡಿಸಿಕೊಳ್ಳುವುದು. ಶೇಂಗಾ ಬೆಳೆಯಲ್ಲೂ ಕೂಡ ಆಧುನಿಕ ಪದ್ಧತಿ ಕೈಕೊಂಡಲ್ಲಿ ಅಧಿಕ ಉತ್ಪಾದನೆ ಸಾಧ್ಯ. ಈ ವಿಷಯ ಕುರಿತು ಸಮಗ್ರ ಮಾಹಿತಿಯನ್ನು ಈ ಲೇಖನ ಒದಗಿಸುತ್ತದೆ.

ಸಾವಯವ ಬೆಲ್ಲದ ಮಹತ್ವ -  ಸಂಶೋಧನೆಗಳು ಸ್ವಾಗತಾರ್ಹವೇ ಸರಿ. ಆದರೆ ಅವುಗಳಿಂದ ಅಡ್ಡ ಪರಿಣಾಮಗಳು ಆಗುತ್ತಿದ್ದರೆ ಅವುಗಳು ಅಳವಡಿಕೆಗೆ ಯೋಗ್ಯವಾಗುವುದಿಲ್ಲ. ರಾಸಾಯನಿಕಗಳ ಬಳಕೆಯು ಆಧುನಿಕ ಯುಗದಲ್ಲಿ ಶಾಪವಾಗಿಯೂ ಪರಿಣಮಿಸಿರುವ ಅನೇಕ ಉದಾಹರಣೆಗಳಿವೆ. ಹೆಚ್ಚು ಸಂಸ್ಕರಿತ ಪದಾರ್ಥಗಳನ್ನು ಆರೋಗ್ಯದ ದೃಷ್ಟಿಯಿಂದ ವರ್ಜಿಸಬೇಕಾಗುತ್ತದೆ. ಕಾರಣಗಳಿಂದಾಗಿ ಸಕ್ಕರೆಗಿಂತ ಒಳ್ಳೆಯದೆನ್ನಬಹುದು. ಬೆಲ್ಲವು ಇವೆಲ್ಲ ಸಾವಯವ ಬೆಲ್ಲ ಕುರಿತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಮುಧೋಳ ಹಾಗೂ ಸಂಕೇಶ್ವರ ಬೆಲ್ಲದ ಪಾರ್ಕ್‍ಗಳ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಸಮಗ್ರ ಕೃಷಿಯಲ್ಲಿ  ಸಾಲು ನಾಟಿಯ ಭರಾಟೆ - ನಿರಂತರ ಆದಾಯ ಪಡೆಯುವಲ್ಲಿ ಶ್ರಮದ ಜೊತೆಗೆ ಜಾಣ್ಮೆಯ ಅವಶ್ಯಕತೆಯೂ ಇದೆ. ಸಮಗ್ರ ಕೃಷಿ, ಸುಧಾರಿತ ಬೇಸಾಯ ಕ್ರಮಗಳು ಹಾಗೂ ಪಶುಪಾಲನೆಗಳನ್ನು ಹಿತವಾಗಿ ಅಳವಡಿಸಿಕೊಂಡಾಗ ಆದಾಯ ಸುಸ್ಥಿರವಾಗುತ್ತದೆ. ಬೆಳೆ ವೈವಿಧ್ಯವಿರುವೆಡೆ ಜಾಗರೂಕತೆಯಿಂದ ಮತ್ತು ತಾಳ್ಮೆಯಿಂದ ಕೃಷಿಯನ್ನು ಕೈಕೊಂಡಲ್ಲಿ ಯಶಸ್ಸು ಸಿದ್ಧಿಸುತ್ತದೆ.ಅಂತಹ ಸಾಹಸಿ ರೈತರೊಬ್ಬರ ಪರಿಚಯವನ್ನು ಲೇಖಕರು ಇಲ್ಲಿ ಮಾಡಿಕೊಟ್ಟಿದ್ದಾರೆ.

ರಕ್ತ ಚಂದನ : ಕೆಂಪು ಚಿನ್ನದ ಮರ -  ಅವಶ್ಯಕತೆ ಹೆಚ್ಚಾದಂತೆ ಆವಿಷ್ಕಾರಗಳೂ ಹೆಚ್ಚಾಗುತ್ತವೆ."ರಕ್ತ ಚಂದನ"ವೆಂದು ಕರೆಯಲಾಗುವ ಈ ಮರದ ವಿವಿಧ ಭಾಗಗಳಿಂದಾಗುವ ಉಪಯೋಗಗಳ ಬಗ್ಗೆ ಸಂಶೋಧನಾ ವರದಿಗಳು ಬಂದಿವೆ. ಕ್ಯಾನ್ಸರ್‍ನಂತಹ ಕಾಯಿಲೆಗಳಿಗೆ ಔಷಧಿಯಾಗುವುದೆಂಬ ಮಾಹಿತಿಯು ಈ ಮರಕ್ಕೆ ಇನ್ನು ಮುಂದೆ ಬರಬಹುದಾದ ಅಪಾರ ಬೇಡಿಕೆಯ ಮುನ್ಸೂಚನೆಯಾಗಿದೆ. ಆಹಾರ, ಗೃಹೋಪಕರಣಗಳು ಮತ್ತು ಔಷಧವಾಗಬಲ್ಲ ರಕ್ತ ಚಂದನವನ್ನು "ಕೆಂಪು ಚಿನ್ನದ ಮರ"ವೆಂದು ಹೆಸರಿಸಿರುದು ಸಮಂಜಸ. ದೂರಾಲೋಚನೆ ಹಾಗೂ ವಾಣಿಜ್ಯದ ದೃಷ್ಟಿಕೋನದಿಂದ ಅನುಕೂಲವಿರುವ ರೈತರಿಗೆ ಈ ಮರವು ವರವಾಗಿ ಪರಿಣಮಿಸಬಲ್ಲದು.

ಕಡಲೆಯಿಂದ ಸಂಪೂರ್ಣ ಆರ್ಥಿಕ ಲಾಭ ಸಿಗಬೇಕಾದರೆ  ಇಳುವರಿ ಅಧಿಕ ವಾಗಬೇಕು. ಕೀಡೆಗಳ ಭಾದೆಯು ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಅಂಥವುಗಳಲ್ಲಿ ಹಸಿರು ಕೀಡೆಯು ಪ್ರಮುಖ. ಇದರ ಜೀವನ ಚಕ್ರ  ಇದರಿಂದಾಗುವ ಹಾನಿ ಹಾಗು ಸೂಕ್ತ ಹತೋಟಿ ಕ್ರಮಗಳನ್ನು ಕುರಿತು ಈ ಲೇಖನ ಮಾಹಿತಿ ನೀಡುತ್ತದೆ. ಕೀಡೆ ನಾಶಕ ಅಥವಾ ರಾಸಾಯನಿಕ ಗಳನ್ನು ಬಳಸುವಾಗ ತಜ್ಞರ ಸಲಹೆ ಪಡೆಯುವುದು ಅವಶ್ಯ. - ಕಡಲೆ ಯನ್ನು ಪೀಡಿಸುವ ಹಸಿರು ಕೀಡೆ

ಆಕರ್ಷಣೆ ಇಂದ ಮೃತ್ಯು ಗೀದಗುವ ಹಣ್ಣಿನ ನೊಣ-  ಪೇರಲ ಹಣ್ಣು ಅತ್ಯಂತ ಸ್ವಾದಿಷ್ಟ ಹಣ್ಣುಗಳಲ್ಲಿ ಒಂದು. ಈ ಹಣ್ಣನ್ನು ಎಲ್ಲಾ ವಯಸ್ಸಿನವರು ಇಷ್ಟ ಪಡಲು ಕಾರಣ ಕೈಗೆಟಕುವ ದರ ಮತ್ತು ವರ್ಷವಿಡೀ ಲಭ್ಯತೆ ಆದ್ದರಿಂದಲೇ ಈ ಹಣ್ಣನ್ನು "ಬಡವರ ಸೇಬು" ಎಂದು ಕರೆಯಲಾಗುತ್ತದೆ. ಅದಲ್ಲದೆ

ಈ ಹಣ್ಣು ಸಧೃಡ ಆರೋಗ್ಯಕ್ಕೆ ಅವಶ್ಯವಾದ ‘ಸಿ’ ಜೀವಸತ್ವ, ಸುಣ್ಣ ಮತ್ತು ರಂಜಕ ಮುಂತಾದ ಖನಿಜಾಂಶಗಳನ್ನು ಹೊಂದಿದೆ.

ಇದರ ಜೊತೆಗೆ ಈ ಹಣ್ಣನ್ನು ಮಧುಮೇಹಿಗಳು ಕೂಡ ಸೇವಿಸಬಹುದಾದ್ದರಿಂದ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ

ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಹಣ್ಣಿಗೆ ಮಾರಿಯಾಗಿ ಕಾಡುತ್ತಿರುವುದು, ಹಣ್ಣಿನ ನೊಣ. ಇದರಿಂದ ರೈತರು ಗಣನೀಯ ಪ್ರಮಾಣ ದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.

ಮೈ ಹಾಯ್ದ ಪಶುಗಳ ಯಾತನೆ ಕಡಿಮೆ ಮಾಡಲು - ಪಶುಗಳ ಸಾಮಿಪ್ಯದಲ್ಲಿಯೇ ಪಶುಪಾಲಕರು ಸದಾ ಇರಬೇಕಾಗಿರುವುದು ಪಶು ಪಾಲನೆಯಲ್ಲಿ ಅತ್ಯಂತ ಪಮುಖ ಅಂಶ. ತುರ್ತು ಪರಿಸ್ಥಿತಿ ಗಳು ಉದ್ಭವಿಸಿದಾಗ ಮಾಲಿಕನು ಅಲ್ಲಿರದಿದ್ದರೆ ಪಶು ಗಳಿಗೆ ಪ್ರಣಾಪಾಯವು ಆಗಬಹುದು ಗರ್ಭದರಿಸಿದ  ಅಥವಾ ಕರುಹಾಕಿದ ಕೆಲ ಹಸು-ಎಮ್ಮೆಗಳಲ್ಲಿ ಕಂಡುಬರುವ ಗಂಡಾಂತರಕಾರಿ ಪ್ರಸಂಗವೆಂದರೆ ಮೈ ಹಾಯುವುದು. ಈ ಗಂಡಾಂತರವೇಕೆ ಅಷ್ಟೊಂದು ಅಪಾಯಕಾರಿ, ಅಂತಹ ಪ್ರಸಂಗಗಳಲ್ಲಿ ಏನು ಮಾಡಬೇಕು ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ವಿದೆಯೇ? ಎಂದೆಲ್ಲ ವಿಷಯವನ್ನು ಲೇಖಕರು ಇಲ್ಲಿ ಚರ್ಚಿಸಿದ್ದಾರೆ.

ಕೊಂಬು ತೊಂದರೆ ಗಳಿಗೆ ಸಿಗದಿರಲಿ ಇಂಬು -  ದನಗಳಿಗೆ ಕೊಂಬುಗಳು ನಿಸರ್ಗದತ್ತವಾಗಿ ಬಂದಿವೆ. ಮೂಲತಃ ಸ್ವರಕ್ಷಣೆ ಗಾಗಿ ಬಳಸಬೇಕಾದ ಕೊಂಬುಗಳು ನಾನಾವಿಧ ತೊಂದರೆ ಗಳಿಗೆ ಈಡಾಗುತ್ತದೆ. ಕೊಂಬಿನ ಕೆಲವು ಕಾಯಿಲೆ ಗಳನ್ನು ಕುರಿತು ಈ ಲೇಖನ ದಲ್ಲಿ ಚರ್ಚಿಸಲಾಗಿದೆ ಮುಂಜಾಗ್ರತೆ ಇದ್ದಲ್ಲಿ ಅಪಾಯವನ್ನು ತಡೆಗಟ್ಟಬಹುದು. ಆಕಸ್ಮಿಕ ವಾಗಿ ಘಟಿಸುವ ತೊಂದರೆಗಳಿಗೆ ಪಶು ವೈದ್ಯರ ಸಲಹೆ ಪಡೆಯುವುದು ಅವಶ್ಯ.

ಚೆಂಡು ಹೂ ಕೃಷಿ ತಂದ ಖುಷಿ  - ಕೃಷಿಯಲ್ಲಿ `ಪರ್ಯಾಯ' ಬೆಳೆಗಳಿಗೆ ತನ್ನದೇ ಆದ ಮಹತ್ವ ವಿದೆ. ಕಬ್ಬನ್ನು ಮಾತ್ರ ನಂಬಿಕೊಂಡಿರದೇ ಪುಷ್ಪಗಾರಿಕೆಯನ್ನು ಅಳವಡಿಸಿ ಯಶಸ್ವಿಯಾದ ರೈತರ ಅನುಭವ ಕಥನದಿಂದ ಅನೇಕರು ಸ್ಫೂರ್ತಿಗೊಂಡಿದ್ದಾರೆ. ಖಾಸಗಿ ಕಂಪನಿಗಳೊಂದಿಗೆ

"ಚೆಂಡು ಹೂವಿನ" ವ್ಯಾಪಾರದಿಂದ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಕೃಷಿ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆಯಿರಬೇಕು. ಗರಿಷ್ಠ ಬೆಲೆ ಬರಬೇಕು. ಖರೀದಿದಾರ ಖಾಸಗಿ ಕಂಪನಿಗಳ "ಗ್ಯಾರಂಟಿ"ಯೂ ಅವಶ್ಯ.

ಆಹಾರಭ್ಯಾಸ ಹಾಗು ಅವಶ್ಯ ಕತೆ ಗೆ ತಕ್ಕಂತೆ ಕೆಲವೊಂದು ಬೆಳೆಗಳು ಮುಂಗಾರಿನದಾಗಿದ್ದರೂ ಅವುಗಳನ್ನು ಹಿಂಗಾರಿನಲ್ಲಿ ಅಥವಾ ಬೇಸಿಗೆಯಲ್ಲಿ ಬೆಳೆಯಬೇಕಾದ ಅನಿವಾರ್ಯತೆ ಇರುತ್ತದೆ, ದೇಶದಲ್ಲಿ ಸಸ್ಯ ಹಾರಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಇರುವುದರಿಂದ ಬೇಳೆಕಾಳುಗಳಿಗೆ ಹೆಚ್ಹಿನ ಬೇಡಿಕೆ ಇದೆ.  ಈ ಹಿನ್ನಲೆಯಲ್ಲಿ ಎಲ್ಲ ಹಂಗಾಮುಗಳಲ್ಲಿ ದ್ವಿದಳ ಧಾನ್ಯ ಗಳ ಬೆಳೆ ಬೆಳೆದು ಬೇಳೆಕಾಳುಗಳ ಉತ್ಪಾದನೆ ಹೆಚ್ಚೆಸಬೇಕಾಗಿದೆ, ಇದಕ್ಕೆ ಪೂರಕವಾಗಿ ಈಗ ಸುಧಾರಿತ ಹೆಸರು ತಳಿ ಐ ಪಿ ಯಮ್ ೨ - ೧೪ (ಶ್ರೇಯಾ) ಬಂದಿದೆ. ಬೇಸಿಗೆ ಹಂಗಾಮಿನಲ್ಲಿ ಅಧಿಕ ಇಳುವರಿ ಹಾಗೂ ಲಾಭಕ್ಕಾಗಿ ಅನುಸರಿಸಬೇಕಾದ  ಬೇಸಾಯ ಕ್ರಮದ ಮಾಹಿತಿ ಈ ಲೇಖನದಲ್ಲಿ ಇದೆ - ಶ್ರೇಯಾ ಹೆಸರು ತಳಿ ಬೇಸಿಗೆ ಹಂಗಾಮಿಗೆ ಸೂಕ್ತ

ಮೂಲ : ಕೃಷಿ ಮುನ್ನಡೆ

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate