ಹಿಂಗಾರು ಹಿಪ್ಪುನೆರಳೆಗೆ ಬೂದಿ ರೋಗ
ಹಿಪ್ಪುನೇರಳೆ ಬೆಳೆಯ ಎಲೆಗಳ ಗುಣಮಟ್ಟವು ರೇಷ್ಮೆ ಹುಳುಗಳ ಗೂಡು ಉತ್ಪಾದನಾ ಸಾಮರ್ಥ್ಯವನ್ನು ಹಾಗೂ ಅದರಿಂದಾಗುವ ಲಾಭದ ಪ್ರಮಾಣವನ್ನು ನಿರ್ಧರಿಸುತ್ತದೆ. ಎಲೆ ರೋಗ ಪೀಡಿತವಾದರೆ ಸತ್ವ ಭರಿತ ಆಹಾರವಾಗಲಾರದು. ಹಿಪ್ಪುನೆರಲೆಯನ್ನು ಬಾಧಿಸುವ ಬೂದಿ ರೋಗ ಎಂದರೇನು, ಅದು ಯಾವಾಗ ಕಾಣಿಸಿಕೊಳ್ಳುತ್ತದೆ, ರೋಗದಿಂದಾಗುವ ನಷ್ಟ ಮತ್ತು ನಿಯಂತ್ರಣ ಕ್ರಮಗಳೇನು ಎಂಬುದರ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ.
ಬಹು ವಾರ್ಷಿಕ ಬೆಳೆಯಾದ ಹಿಪ್ಪುನೆರಳೆಯನ್ನು ರೇಷ್ಮೆ ಹುಳು ಸಾಕಿ ರೇಷ್ಮೆ ಗೂಡು ಉತ್ಪಾದಿಸಲು ವಾಣಿಜ್ಯ ಬೆಳೆಯಾಗಿ ನಮ್ಮ ರಾಜ್ಯದಲ್ಲೆಡೆ ಬೆಳೆಯಲಾಗುತ್ತಿದೆ.ಹಿಪ್ಪು ನೇರಳೆ ಬೆಳೆಯ ಎಲೆಗಳು ರೇಷ್ಮೆ ಹುಳುಗಳ ಏಕೈಕ ಆಹಾರ. ಹುಳುಗಳು ದಷ್ಟ ಪುಷ್ಟವಾಗಿ ಬೆಳೆದು ಉತ್ತಮ ಗುಣಮಟ್ಟದ ಅಧಿಕ ರೇಷ್ಮೆ ಗೂಡು ಉತ್ಪಾದಿಸಲು ಪುಷ್ಟಿಕರವಾದ ಹಿಪ್ಪು ನೇರಳೆ ಸೊಪ್ಪನ್ನು ಉಪಯೋಗಿಸುವುದು ಅತಿ ಮುಖ್ಯ. ಆದರೆ ಇತರೆ ಬೆಳೆಗಳಂತೆ ಹಿಪ್ಪುನೇರಳೆ ಬೆಳೆಯೂ ಕೂಡ ವಿವಿಧ ಬಗೆ ರೋಗಗಳ ಬಾಧೆಗೆ ತುತ್ತಾಗುತ್ತದೆ. ಆಯಾ ಪ್ರದೇಶದ ಹವಾಗುಣ ಮತ್ತು ಋತುಮಾನಗನುಗುನವಾಗಿ ಬೇರೆ ಬೇರೆ ರೋಗಗಳು ಹಿಪ್ಪುನೆರಳೆಗೆ ಬಾಧಿಸಿ ಸೊಪ್ಪಿನ ಇಳುವರಿ ಮತ್ತು ಗುಣಮಟ್ಟವನ್ನು ತಗ್ಗಿಸುತ್ತವೆ. ನಮ್ಮ ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಹಿಪ್ಪುನೇರಳೆ ಬೆಳೆ ಸೆಪ್ಟಂಬರ್ ದಿಂದ ಜನವರಿ ತಿಂಗಳಲ್ಲಿ, ಬೂದಿ ರೋಗಕ್ಕೆ ತೀವ್ರವಾಗಿ ತುತ್ತಾಗುತ್ತದೆ. ಈ ರೋಗದ ಬಾಧೆಯಿಂದ ಹಿಪ್ಪು ನೇರಳೆ ಬೆಳೆಯಲ್ಲಿ ಸುಮಾರು ಶೇ. ೪೦ ರಷ್ಟು ಸೊಪ್ಪಿನ ಇಳುವರಿ ಕಡಿಮೆಯಾಗುವುದು. ಹೆಚ್ಚು ರೇಷ್ಮೆ ಉತ್ಪತ್ತಿ ಮಾಡಲು ಅತಿ ಅವಶ್ಯಕವಾದ ಪ್ರೋಟೀನ್ ಅಂಶ ಬೂದಿರೋಗ ಬಾಧಿತ ಎಲೆಗಳಲ್ಲಿ ಶೇ. ೩೦ ರಷ್ಟು ಕಡಿಮೆಯಾಗುವುದು ಹಾಗೂ ಅಂತಹ ಎಲೆಗಳಲ್ಲಿ ನೀರಿನಾಂಶ ಕಡಿಮೆಯಾಗಿ ಎಲೆಗಳು ಒರಟಾಗುವುವು. ಇತರೆ ಪೌಷ್ಟಿಕಾಂಶಗಳ ಪ್ರಮಾಣವೂ ಕಡಿಮೆಯಾಗಿ ಎಲೆಗಳ ಗುಣಮಟ್ಟ ತಗ್ಗುವುದು. ಇಂತಹ ಎಲೆಗಳು ಹುಳು ಸಾಕಲು ನಿರುಪಯುಕ್ತವಾಗುವುವು. ಆದರೆ ಬೂದಿ ರೋಗಬಾಧಿತ ಎಲೆಗಳು ರೇಷ್ಮೆ ಹುಳುಗಳಿಗೆ ವಿಷಕಾರಿಯಲ್ಲ. ರೋಗಬಾಧಿತ ಎಲೆಗಳನ್ನು ಹುಳು ಸಾಕಲು ಉಪಯೋಗಿಸುವುದರಿಂದ ಹುಳುಗಳ ಬೆಳವಣಿಗೆ ಕುಂಟಿತಗೊಂಡು ಕೆಳಮಟ್ಟದ ಗೂಡುಗಳನ್ನು ಕಟ್ಟುವವು. ಇದರಿಂದ ನಷ್ಟವಾಗುವುದು. ಈ ದಿಶೆಯಲ್ಲಿ ಹಿಪ್ಪುನೇರಳೆ ಬೆಳೆಯಲ್ಲಿ ಬೂದಿ ರೋಗದ ನಿರ್ವಹಣೆ ಮಾಡಿ ಉತ್ತಮ ಗುಣಮಟ್ಟದ ಸೊಪ್ಪು ಉತ್ಪಾದಿಸುವತ್ತ ಗಮನಹರಿಸುವುದು ಅವಶ್ಯ.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಹಿಂಗಾರು ಹಿಪ್ಪುನೆರಳೆಗೆ ಬೂದಿ ರೋಗ
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 1/28/2020
ಆಯುರ್ವೇದವು ಭಾರತ ಉಪಖಂಡದ ಅತಿ ಪುರಾತನ ವೈದ್ಯಕೀಯ ಪದ್ಧತಿಯ...
ಇದೊಂದು ಪ್ರಸವದ ನಂತರದ ಅವಧಿಗೆ ಬಳಸುವ ವೈದ್ಯಕೀಯ ಶಬ್ದವಾಗಿ...
ಕಾಲು ಬಾಯಿ ರೋಗವು ಗೊರಸು ಕಾಲುಗಳುಳ್ಳ ಪ್ರಾಣಿಗಳಾದ ದನಗಳು,...
ರೋಗ ನಿರೋಧಕ ಲಸಿಕೆಗಳು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ....