ತುಮಕೂರು: ಸಾಲ ತೆಗೆದುಕೊಂಡು ಮೃತಪಟ್ಟ ರೈತರ ಸಾಲ ಮನ್ನಾ ಮಾಡುವ ಮೂಲಕ ಡಿಸಿಸಿ ಬ್ಯಾಂಕ್ ಹೊಸ ದಾಖಲೆ ಬರೆದಿದೆ.
ಏಪ್ರಿಲ್ 2014ರಿಂದ ಮಾರ್ಚ್ 2015ರ ಅವಧಿಯಲ್ಲಿ ಸಾಲ ತೆಗೆದುಕೊಂಡಿದ್ದ ರೈತರಿಗಷ್ಟೇ ಈ ಸೌಲಭ್ಯ ಸಿಕ್ಕಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕ್ ಆಡಳಿತ ಮಂಡಳಿಯ ತೀರ್ಮಾನದಂತೆ ಸಾಲಮನ್ನಾ ಮಾಡಲಾಗಿದೆ. ಒಂದು ಲಕ್ಷ ಹಾಗೂ ಅದಕ್ಕಿಂತ ಕಡಿಮೆ ಸಾಲ ಪಡೆದು ಮೃತರಾದ ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಾಗಿದೆ ಎಂದು ವಿವರಿಸಿದರು.
ಸಾವಿಗೀಡಾದ 1160 ರೈತರ ಕುಟುಂಬಗಳಿಗೆ ಪ್ರಯೋಜವಾಗಿದೆ. ರೂ. 3.25 ಕೋಟಿ ಮೊತ್ತದಷ್ಟು ಸಾಲ ಮನ್ನಾ ಮಾಡಿದಂತಾಗಿದೆ. ಬ್ಯಾಂಕ್ ಲಾಭಾಂಶದಲ್ಲಿ ಇದನ್ನು ಭರಿಸಲಾಗಿದೆ. ಅದಾಗ್ಯೂ, ಬ್ಯಾಂಕ್ ರೂ. 13 ಕೋಟಿ ಲಾಭದಲ್ಲಿದೆ. ಸಾವಿಗೀಡಾದವರಲ್ಲಿ ಯಾರೂ ಕೂಡ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ. ಮುಖ್ಯಮಂತ್ರಿ ಹೆಸರಿನಲ್ಲಿ ಈ ಸೌಲಭ್ಯ ನೀಡಲಾಗಿದೆ. ಆದರೆ ಮುಂದಿನ ವರ್ಷದಿಂದ ಯೋಜನೆ ಜಾರಿ ಬಗ್ಗೆ ಹೊಸ ಆಡಳಿತ ಮಂಡಳಿ ನಿರ್ಧರಿಸಬೇಕಾಗುತ್ತದೆ ಎಂದರು.
ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳಲ್ಲೂ ಇಂಥ ಯೋಜನೆ ಜಾರಿಗೆ ತರುವಂತೆ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿ ಗಮನಕ್ಕೂ ಇದನ್ನು ತರಲಾಗುವುದು ಎಂದು ತಿಳಿಸಿದರು.
ಶೈಕ್ಷಣಿಕ ಸಾಲ ಯೋಜನೆ ರೂಪಿಸಲಾಗಿದ್ದು, ಅನುಷ್ಠಾನಗೊಳಿಸುವ ಸಂಬಂಧ ಚರ್ಚೆ ನಡೆಯುತ್ತಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಹೊರಬೀಳಲಿದೆ ಎಂದು ಅವರು ತಿಳಿಸಿದರು.
ಮುಖ್ಯಾಂಶಗಳು
ಏಪ್ರಿಲ್ 2014ರಿಂದ ಮಾರ್ಚ್ 2015ರವರೆಗೆ ಸಾಲ ಪಡೆದವರಿಗೆ ಮಾತ್ರ
ಒಂದು ಲಕ್ಷ ಮತ್ತು ಅದಕ್ಕಿಂತ ಕಡಿಮೆ ಸಾಲ ಪಡೆದು ಮೃತರಾದವರು
1160 ರೈತರ ಕುಟುಂಬಗಳಿಗೆ ಪ್ರಯೋಜನ
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 1/28/2020
ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾ...
ಕಿಸಾನ ಕ್ರೆಡಿಟ್ ಯೋಜನೆ (ಕೆ ಸಿಸಿ) ರೈತರಿಗೆ ಸಾಕಾಗುವಷ್ಟು...
ಭಾರತದ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯ ಬ್ಯಾಂಕ್ಗ ಳು ಅಗ...