অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಮಗ್ರ ಕೃಷಿ

ಸಮಗ್ರ ಕೃಷಿ ಪದ್ಧತಿಗಳು

ಕೃಷಿ ಉತ್ಪಾದನೆ, ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟ ಸುಧಾರಿಸಲು ಸಮಗ್ರ ಕೃಷಿ ಪದ್ಧತಿಗಳು ತುಂಬಾ ಸಹಕಾರಿಯಾಗಿದೆ. ಅನಿಶ್ಚಿತ ಮಳೆ, ಹವಾಮಾನ ವೈಪರಿತ್ಯಗಳಿಂದ ಕೃಷಿ ಉತ್ಪಾದನೆಯ ಸುಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದು, ಕೇವಲ ಬೆಳೆಗಳಿಂದ ಬರುತ್ತಿರುವ ಉತ್ಪಾದನೆಯು ಹಾಗೂ ಆದಾಯ ಕುಂಠಿತಗೊಳ್ಳುತ್ತಿದ್ದು, ಕಾರಣ ಬೆಳೆಗಳ ಜೊತೆಗೆ ಕೃಷಿ ಅವಲಂಬಿತ ಉಪಕಸುಬುಗಳ ಸೂಕ್ತ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಪಡೆದು ಆದಾಯವನ್ನು ಉತ್ತಮಪಡಿಸುವುದರ ಜೊತೆಗೆ ವರ್ಷ ಪೂರ್ತಿ ರೈತರ ಕುಟುಂಬಕ್ಕೆ ಉದ್ಯೋಗ ಸೃಷ್ಟಿಸಿ ಸ್ವಾವಲಂಬಿ ಜೀವನೋಪಾಯ ಪಡೆಯುವುದೇ “ಸಮಗ್ರ ಕೃಷಿ ಪದ್ಧತಿ”ಯ ತತ್ವವಾಗಿದೆ.

ವಿಧಾನಗಳು

ಬೆಳೆ ಆಧಾರಿತ ಸಮಗ್ರ ಕೃಷಿ ಪದ್ಧತಿ : ಈ ಪದ್ಧತಿಯಲ್ಲಿ ಬೆಳೆ ಉತ್ಪಾದನೆ ಮುಖ್ಯ ಗುರಿಯಾಗಿದ್ದು, ಇತರೆ ಪದ್ಧತಿಗಳು ಬೆಳೆ ಉತ್ಪಾದನೆಗೆ ಪೂರಕವಾಗಿರುತ್ತವೆ.

  • ಜಾನುವಾರು ಆಧಾರಿತ ಸಮಗ್ರ ಕೃಷಿ ಪದ್ಧತಿ : ಜಾನುವಾರು ಸಾಕಾಣಿಕೆಯೇ ಮಖ್ಯವಾಗಿದ್ದು ಕುಟುಂಬದ ಒಟ್ಟು ಆದಾಯಕ್ಕೆ ಇದರಿಂದ ಹೆಚ್ಚಿನ ಪಾಲು ದೊರೆಯುತ್ತದೆ. ಬೆಳೆ ಉತ್ಪಾದನೆಯು ದನಕರುಗಳಿಗೆ ಮೇವವನ್ನು ಒದಗಿಸಲು ಸಹಾಯಕಾರಿಯಾಗುತ್ತದೆ.
  • ಮರ ಆಧಾರಿತ ಸಮಗ್ರ ಕೃಷಿ ಪದ್ಧತಿ : ವಿವಿಧೋದ್ದೇಶ ಮರಗಳನ್ನು ಬೆಳೆದು ಅವುಗಳಿಂದ ಮೇವು, ಕಟ್ಟಿಗೆ ಮತ್ತು ಉರುವಲುಗಳನ್ನು ಪಡೆಯಬಹುದು.
  • ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ : ಈ ಪದ್ಧತಿಯಲ್ಲಿ ಹಣ್ಣಿನ ಗಿಡಗಳು, ತರಕಾರಿಗಳು ಮತ್ತು ಹೂ ಬೆಳೆಗಳು ಮುಖ್ಯ ಪಾತ್ರವಹಿಸುತ್ತವೆ.
  • ರಷ್ಮೆ ಕೃಷಿ ಆಧಾರಿತ ಸಮಗ್ರ ಕೃಷಿ ಪದ್ಧತಿ : ರೇಷ್ಮೆ ಕೃಷಿಯಿಂದ ಹೆಚ್ಚು ಆದಾಯ ಪಡೆಯುವಲ್ಲಿ ಸಫಲವಾಗಿದ್ದು, ಇತರೆ ಚಟುವಟಿಕೆಗಳು ಇದಕ್ಕೆ ಪೂರಕವಾಗಿರುತ್ತವೆ.
  • ಮೀನುಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ : ಈ ಪದ್ಧತಿಯಲ್ಲಿ ಮೀನು ಸಾಕಾಣಿಕೆ ಒಂದು ಮುಖ್ಯ ಕಸುಬಾಗಿದ್ದು, ಇದರಲ್ಲಿ ಹೆಚ್ಚು ಆದಾಯ ನಿರೀಕ್ಷಿಸುವುದರ ಜೊತೆಗೆ ಇತರೆ ಚಟುವಟಿಕೆಗಳು ಮೀನು ಉತ್ಪಾದನೆಗೆ ಸಹಕಾರಿಯಾಗುತ್ತದೆ.

ಸೂಕ್ತವಾದ ಹಾಗೂ ಹೆಚ್ಚಿಗೆ ಆದಾಯ ನೀಡಬಲ್ಲ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯು ಆಯಾ ಪ್ರದೇಶದ

ಹವಾಗುಣ, ದೊರಕುವ ಇತರ ಪರಿಕರಗಳು ಇವುಗಳ ಮೇಲೆ ಅವಲಂಬಿತವಾಗಿದ್ದು, ಸಮಗ್ರ ಕೃಷಿ ಪದ್ಧತಿಯನ್ನು ಕೃಷಿ ವಲಯ ಆಧಾರಿತ ಮತ್ತು ನೀರಾವರಿ ಆಧಾರಿತ ಪದ್ಧತಿಗಳೆಂದು ವಿಂಗಡಿಸುವುದು. ಸೂಕ್ತವೆಂದು ತಿಳಿದುಬಂದಿದೆ. ಅದರಂತೆ, ಈ ಕೆಳಕಾಣಿಸಿರುವ ಸಮಗ್ರ ಕೃಷಿ ಪದ್ಧತಿಗಳನ್ನು ನೀಡಲಾಗಿದೆ.

ಸೂಕ್ತವಾದ ಪದ್ಧತಿಗಳು

ನೀರಾವರಿ ಪ್ರದೇಶಕ್ಕೆ ಸೂಕ್ತವಾದ ಸಮಗ್ರ ಕೃಷಿ ಪದ್ಧತಿಗಳು

  1. ಬೆಳೆ ಉತ್ಪಾದನೆ + ಹೈನುಗಾರಿಕೆ + ಜೈವಿಕ ಅನಿಲ ಉತ್ಪಾದನೆ + ಎರೆಹುಳು ಗೊಬ್ಬರ ತಯಾರಿಕೆ.
  2. ಬೆಳೆ ಉತ್ಪಾದನೆ + ಹೈನುಗಾರಿಕೆ + ಜೀನುಸಾಕಾಣಿಕೆ.
  3. ಬೆಳೆ ಉತ್ಪಾದನೆ + ರೇಷ್ಮೆ ಕೃಷಿ + ಎರೆಹುಳು ಗೊಬ್ಬರ ತಯಾರಿಕೆ
  4. ಬೆಳೆ ಉತ್ಪಾದನೆ + ಕೋಳಿಸಾಕಾಣಿಕೆ + ಕುರಿ ಸಾಕಾಣಿಕೆ

ಮಲೆನಾಡು ಪ್ರದೇಶಕ್ಕೆ ಸೂಕ್ತವಾದ ಸಮಗ್ರ ಕೃಷಿ ಪದ್ಧತಿಗಳು :

  1. ಬೆಳೆ ಉತ್ಪಾದನೆ + ಹೈನುಗಾರಿಕೆ + ಕೋಳಿಸಾಕಾಣಿಕೆ
  2. ಬೆಳೆ ಉತ್ಪಾದನೆ + ಮೀನು ಸಾಕಾಣಿಕೆ
  3. ಬೆಳೆ ಉತ್ಪಾದನೆ + ಅಣಬೆ ಬೇಸಾಯ + ಹಂದಿ ಸಾಕಾಣಿಕೆ
  4. ಬೆಳೆ ಉತ್ಪಾದನೆ + ಮೀನು ಸಾಕಾಣಿಕೆ + ಕೋಳಿ ಸಾಕಾಣಿಕೆ
  5. ಬೆಳೆ ಉತ್ಪಾದನೆ + ಮೀನು ಸಾಕಾಣಿಕೆ + ಬಾತುಕೋಳಿ ಸಾಕಾಣಿಕೆ
  6. ಭತ್ತ + ಮೀನು ಸಾಕಾಣಿಕೆ + ಅಜೋಲ + ಬಾತುಕೋಳಿ ಸಾಕಾಣಿಕೆ

ಒಣ ಪ್ರದೇಶಕ್ಕೆ ಸೂಕ್ತವಾದ ಸಮಗ್ರ ಕೃಷಿ ಪದ್ಧತಿಗಳು :

  1. ಬೆಳೆ ಉತ್ಪಾದನೆ + ತೋಟಗಾರಿಕೆ ಹಣ್ಣಿನ ಬೆಳೆಗಳು + ಕುರಿ/ಆಡು ಸಾಕಾಣಿಕೆ.
  2. ಬೆಳೆ ಉತ್ಪಾದನೆ + ಕುರಿ /ಆಡು ಸಾಕಾಣಿಕೆ + ಕೃಷಿ ಅರಣ್ಯ ಪದ್ಧತಿ
  3. ಬೆಳೆ ಉತ್ಪಾದನೆ + ಹೈನುಗಾರಿಕೆ + ಕುರಿ / ಆಡು ಸಾಕಾಣಿಕೆ + ಕೋಳಿ ಸಾಕಾಣಿಕೆ + ಕೃಷಿ ಅರಣ್ಯ.
  4. ಬೆಳೆ ಉತ್ಪಾದನೆ + ಹಂದಿ ಸಾಕಾಣಿಕೆ + ಜೈವಿಕ ಅನಿಲ

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate