ರಾಸಾಯನಿಕ ಗೊಬ್ಬರಗಳ ಹೆಚ್ಚುತ್ತಿರುವ ಬೆಲೆ, ಪರಿಸರ ಕಾಳಜಿ ಮತ್ತು ಇಂಧನ ಬಿಕ್ಕಟ್ಟು ಹೆಚ್ಚುತ್ತಿರುವುದರಿಂದ ಸಸ್ಯ ಪೋಷಕಾಂಶಗಳಿಗೆ ಪರ್ಯಾಯವಾಗಿ ಅಗ್ಗದ ಮೂಲಗಳ ಹುಡುಕಾಟ ಗಣನೀಯ ಆಸಕ್ತಿ ಸೃಷ್ಟಿಸಿದೆ. ಸಾವಯವ ಗೊಬ್ಬರದ ಮೂಲವಾಗಿ, ರಾಸಾಯನಿಕ ಗೊಬ್ಬರಗಳ ಬದಲಿಗೆ, ಎರೆಹುಳುವಿನ ಗೊಬ್ಬರವು ದೇಶದ ರೈತರಲ್ಲಿ ಜನಪ್ರಿಯವಾಗಿದೆ.
ಎರೆಹುಳು ಸಾಕಾಣಿಕೆಗೆ ಅನುಸರಿಸಬೇಕಾದ ಕ್ರಮಗಳು
- ಸಿಮೆಂಟ್ ಇಟ್ಟಿಗೆ, ಕಲ್ಲಿನ ಚಪ್ಪಡಿ, ಹಲಗೆ ಅಥವಾ ಇತರೆ ಯಾವುದೇ ಕಡಿಮೆ ವೆಚ್ಚದಲ್ಲಿ ದೊರಕುಬಹುದಾದ ವಸ್ತುಗಳನ್ನು ಬಳಸಿ 8’*4’*3’ ಅಳತೆಯ ಎರಡು ತೊಟ್ಟಿಗಳನ್ನು ಕಟ್ಟಿ, ಈ ತೊಟ್ಟಿಗಳಲ್ಲಿ 1-2 ಗಾಡಿ ಕಸ ತುಂಬಲು ಸಾಧ್ಯ.
- ತೊಟ್ಟಿಗಳನ್ನು ನೆಲದ ಮೇಲೆ ಕಟ್ಟಿದರೆ ಒಳ್ಳೆಯದು.
- ಕಸಕ್ಕೆ ದೊರಕುವಷ್ಟು ಸಗಣಿಯ ಬಗ್ಗಡ ಮಾಡಿ ಬೆರೆಸಿ ಒಳ್ಳೆಯ ಮಿಶ್ರಣ ಮಾಡಬೇಕು.
- ತೊಟ್ಟಿಯಲ್ಲಿ ನೀರು ನಿಲ್ಲಬಾರದು. ಹಾಕಿದ ಕಸವನ್ನು ಮುಷ್ಟಿಯಲ್ಲಿ ಹಿಡಿದು ಹಿಂಡಿದರೆ ನೀರು ಹೆಚ್ಚೆಂದರೆ ಕೆಲವು ಹನಿಗಳು ಹೊರಬೀಳುವಂತಿರಬೇಕು.
- ಹೀಗೆ ತಯಾರಿಸಿದ ಕಸದಲ್ಲಿ 15 ದಿನಗಳ ನಂತರ 10,000 ಎರೆ ಹುಳುಗಳನ್ನು (7 ಕಿ.ಗ್ರಂ.) ಬಿಟ್ಟಲ್ಲಿ ಅವು ಪದರ ಪದರವಾಗಿ ಕಸವನ್ನು ತಿಂದು ಹಿಕ್ಕೆಯನ್ನು ಹೊರಹಾಕುತ್ತವೆ. ಈ ಹಿಕ್ಕೆಯೇ ಎರೆಹುಳುಗೊಬ್ಬರ, 6-8 ವಾರಗಳಲ್ಲಿ 2 ತೊಟ್ಟಿಯಿಂದ 600-800 ಕಿ.ಗ್ರಂ. ಗೊಬ್ಬರ ದೊರೆಯುವುದು.
- ಪೂರ್ಣವಾಗಿ ಹಾಕಿದ ಕಸವೆಲ್ಲವೂ ಗೊಬ್ಬರವಾಗುವ ಮೊದಲೇ, ಆಗಿಂದಾಗಲೇ ಮೇಲಿಂದ ಗೊಬ್ಬರವನ್ನು ಸವರಿ ತೆಗೆಯಲು ಸಾಧ್ಯ. ಹುಳುಗಳು ತಾವು ತಿಂದು ತ್ಯಜಿಸುವ ವಸ್ತುವಿನ್ಲಲಿ ಇರದೇ ತಳಕ್ಕೆ ಹೋಗುವುದರಿಂದ ಗೊಬ್ಬರವನ್ನು ಬೇರ್ಪಡಿಸುವುದು ಸುಲಭ.
- ಗೊಬ್ಬರದಲ್ಲಿ ಸಣ್ಣ ಮರಿಗಳು ಇರುವುದರಿಂದ ಬೇಕಿದ್ದಲ್ಲಿ 3-4 ಮಿ.ಮೀ. ಜಾಲರಿಯಲ್ಲಿ ತೂರಿದಲ್ಲಿ, ಮರಿ ಮತ್ತು ತತ್ತಿಗಳನ್ನು ಬೇರ್ಪಡಿಸಿ ಮತ್ತೆ ಹೊಸ ಕೆಲಸಕ್ಕೆ ಬಿಟ್ಟು ಅವುಗಳ ಸಂಖ್ಯೆಯನ್ನು ಹೆಚ್ಚಿಸಬಹುದು.
- ಇಲಿ, ಹೆಗ್ಗಣದಿಂದ ಕಾಪಾಡಲು ತೊಟ್ಟಿಗೆ ಸಾಕಷ್ಟು ಮಟ್ಟಿಗೆ ಎರೆಹುಳುಗಳ ಸಂಖ್ಯೆ ಹೆಚ್ಚಾಗುವವರೆಗೂ ಜಾಲರಿಯಿಂದ ತಪಟ್ಟಿಯನ್ನು ಮುಚ್ಚಬೇಕಾಗುವುದು. ಇರುವೆಯ ಬಾಧೆ ಇರುವ ಕಡೆ ತೊಟ್ಟಿಯ ಸುತ್ತ ಸಣ್ಣ ಕಾಲುವೆ ಮಾಡಿ ಅದರಲ್ಲಿ ನೀರು ಅಥವಾ ಕೀಲು ಎಣ್ಣೆ ಬಿಟ್ಟಲ್ಲಿ ಇರುವೆ ತೊಟ್ಟಿಗೆ ಹತ್ತಲಾರವು. ಮಳೆಯ ನೀರು ತೊಟ್ಟಿಯಲ್ಲಿ ತುಂಬದಂತೆ ಚಪ್ಪರದಿಂದ ರಕ್ಷಿಸುವುದು ಅಥವಾ ಮಳೆರುವ ಮುನ್ನ ಒಂದು ಪ್ಲಾಸ್ಟಿಕ್ ಹಾಳೆಯಿಂದ ತೊಟ್ಟಿಗಳನ್ನು ಮುಚ್ಚಬೇಕು.
ಎರೆಹುಳು ಗೊಬ್ಬರದಲ್ಲಿ ಸಇಗುವ ಪೋಷಕಾಂಶಗಳು :
ಸಾವಯವ ಇಂಗಾಲ (%) 9.15 ರಿಂದ 18.00, ಸಾರಜನಕ (ಒಟ್ಟು%) 0.5 ರಿಂದ 4.12, ರಂಜಕ (ದೊರೆಯುವ %) 0.1 ರಿಂದ 0.3, ಪೊಟ್ಯಾಷಿಯಂ (ದೊರೆಯುವ %) 0.15 ರಿಂದ 0.56 ಹಾಗೂ ಇತರೆ ಲಘು ಪೋಷಕಾಂಶಗಳು ಸಹ ದೊರೆಯುತ್ತವೆ.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 3/10/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.