ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ರಾಸಾಯನಿಕ ಗೊಬ್ಬರಗಳು / ನೈಟ್ರೋಫಾಸ್ಫೇಟ್ ಮತ್ತು ಡೈ-ಅಮೋನಿಯಂ ಫಾಸ್ಟೇಟ್
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನೈಟ್ರೋಫಾಸ್ಫೇಟ್ ಮತ್ತು ಡೈ-ಅಮೋನಿಯಂ ಫಾಸ್ಟೇಟ್

ನೈಟ್ರೋಫಾಸ್ಫೇಟ್ ಮತ್ತು ಡೈ-ಅಮೋನಿಯಂ ಫಾಸ್ಟೇಟ್ ನ ಬಗ್ಗೆ

ನೈಟ್ರೋಫಾಸ್ಫೇಟ್ (20:20:0)

ನೈಟ್ರೋಫಾಸ್ಫೇಟ್ ಗೊಬ್ಬರವು ಹರಳಿನ ರೂಪದಲ್ಲಿ ದೊರೆಯುತ್ತದೆ. ಇದು ಸ್ಟೇಬಿಲೈಸರ್ ಗೂಣವನ್ನು ಹೊಂದಿರುವುದರಿಂದ ಸಿಟ್ರೇಟ್ ಕರಗುವ ರೂಪದ ಫಾಸ್ಫೇಟ್, ಕರಗದ ರೂಪದ ಫಾಸ್ಫೇಟ್‍ಗೆ ಪರಿವರ್ತನೆಯಾಗುವುದನ್ನು ತಡೆಯುತ್ತದೆ. ಹರಳು ಹರಳಾಗಿರುವುದರಿಂದ ಶೇಖರಣೆ ಮತ್ತು ನಿರ್ವಹಣೆಯ ಸಮಯದಲ್ಲಿ ಅತ್ಯತ್ತಮ ಭೌತಿಕ ಸ್ಥತಿಯನ್ನು ಸ್ಥಿರವಾಗಿಸುತ್ತದೆ. ನೈಟ್ರೋಫಾಸ್ಫೇಟ್ ಶೇ. 20 ರಷ್ಟು ಸಾರಜನಕ ಮತ್ತು ಶೇ. 20 ರಷ್ಟು ರಂಜಕವನ್ನು ಒಳಗೊಂಡಿದ್ದು, ಉತ್ಪಾದನೆ ಪ್ರತಿಕ್ರಿಯೆ ವಿವಿಧ ಅಂ±ಗಳ ಆಧಾರದ ಮೇಲೆ ವಿವಿಧ ಪ್ರಮಾಣದಲ್ಲಿ ಸಾರಜನಕ ರಂಜಕವನ್ನು ಹೊಂದಿದ್ದು, ಇದರಲ್ಲಿ ಪೊಟ್ಯಾಷ್ ಇರುವುದಿಲ್ಲ. ಸಾರಜನಕವು ಅಮೋನಿಯಂ ನೈಟ್ರೇಟ್ ರೂಪದಲ್ಲಿರುತ್ತದೆ. ರಂಜಕವು ಭಾಗಶ: ನೀರಿನಲ್ಲಿ ಕರಗುವ ಮತ್ತು ಭಾಗಶ: ಸಿಟ್ರೇಟ್ ರೂಪದಲ್ಲಿ ಕರಗುವ ರೂಪಗಳೆರಡಲ್ಲಯೂ ಇರುತ್ತದೆ.

ಎಲ್ಲಾ ಬಗೆಯ ನೈಟ್ರೋಫಾಸ್ಫೇಟ್ ಸುಲಭವಾಗಿ ಕರಗುವ ಮತ್ತು ಸುಲಭವಾಗಿ ಲಭ್ಯವಿರುವ ನೈಟ್ರೇಟ್ ಹಾಗೂ ಅಮೋನಿಕಲ್ ರೂಪದ ಸಾರಜನಕವನ್ನು ಹೊಂದಿರುತ್ತದೆ. ಸಲ್ಫ್ ನೈಟ್ರಿಕ್ ನೈಟ್ರೋಪಾಸ್ಫೇಟ್, ರಂಜಕ ಭಾಗವು ನೀರಿನಲ್ಲಿ ಕರಗುವ ಮತ್ತು ಸಿಟ್ರೇಟ್ನಲ್ಲಿ ಕರಗುವ ರೂಪದಲ್ಲಿ ಇರುತ್ತದೆ. ನೀರಿನಲ್ಲಿ ಕರಗುವ ಫಾಸಫೇಟ್ ಸಸ್ಯ ಬೆಳೆಯಲು ಮತ್ತು ಬೆಳೆ ಶೀಘ್ರವಾಗಿ ಮಾಗಲು ಸಹಾಯಮಾಡುತ್ತದೆ. ಕಾರ್ಬೋನಿಕ್ ನೈಟ್ರೋಫಾಸ್ಫೇಟ್ ರಂಜಕವು ಸಂಪೂರ್ಣವಾಗಿ ಸಿಟ್ರೇಟ್‍ನಲ್ಲಿ ಕರಗುವ ರೂಪದಲ್ಲಿದ್ದು ಮತ್ತು ಅವುಗಳ ಲಭ್ಯತೆಯು ಸಸ್ಯಗಳ ಬೆಳವಣಿಗೆ ಅವಧಿಯಲ್ಲಿ ಕ್ರಮೇಣವಾಗಿ ಸಿಗುತ್ತದೆ. ಎಲ್ಲಾ ನೈಟ್ರೋಫಾಸ್ಫೇಟ್ ಇತರಗೊಬ್ಬರಗಳಿಗೆ ಹೋಲಿಸಿದರೆ ಮಣ್ಣಿನಲ್ಲಿ ಕಡಿಮೆ ಆಮ್ಲೀಯ ಪರಿಣಾಮ ಉಂಟುಮಾಡುತ್ತದೆ.

ಡೈ-ಅಮೋನಿಯಂ ಫಾಸ್ಟೇಟ್ (ಡಿ.ಎ.ಪಿ.) :

ಸಾರಜನಕ ಜೊತೆಗೆ, ಡಿಎಪಿಯು ಸಹ ಎರಡನೆ ಅತಿ ಪ್ರಮುಖ ಪ್ರಾಥಮಿಕ ಪೋಷಕಾಂಶದ ರಂಜಕವನ್ನು    (ಶೇ. 46 ರಷ್ಟು) ಹೊಂದಿರುತ್ತದೆ. ಇದು ನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತದೆ. ಇದರಲ್ಲಿ ಉತ್ತಮವಾಗಿ ಶೇಖರಣೆ ಮಾಡುವ ಗುಣಲಕ್ಷಣಗಳಿವೆ. ಇದು ಶೇ. 16-18 ರಷ್ಟು ಸಾರಜನಕವನ್ನು ಹೊಂದಿದ್ದರೂ ಕೂಡ ಈ ರಸಗೊಬ್ಬರವನ್ನು ಮುಖ್ಯವಾಗಿ ಫಾಸ್ಫೇಟ್ ಪೂರೈಕೆಗೆ ಬಳಸುವ ಗೊಬ್ಬರವೆಂದು ಪರಿಗಣಿಸಲಾಗಿದೆ. ತರಕಾರಿ ಬೆಳೆಗಳಲ್ಲಿ ಸಾರಜನಕಕ್ಕಿಂತ ಹೆಚ್ಚು ರಂಜಕದ ಅವಶ್ಯಕತೆಯಿರುವುದರಿಂದ ಡಿ.ಎ.ಪಿ. ಗೊಬ್ಬರದ ಬಳಕೆಗೆ ಪ್ರಾಮುಖ್ಯತೆಯಿರುತ್ತದೆ.

ಸಾರಜನಕ, ರಂಜಕ, ಪೊಟ್ಯಾಷ್ ಸಂಕೀರ್ಣ ರಸಗೊಬ್ಬರಗಳು

ಸಂಕೀರ್ಣ ಅಥವಾ ಸಂಯುಕ್ತ ಗೊಬ್ಬರಗಳು ಎರಡು ಅಥವಾ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ, ಕಚ್ಚಾವಸ್ತುಗಳು ಮತ್ತು ಮಧ್ಯವರ್ಥಿಗಳ ರಾಸಾಯನಿಕ ಪ್ರಕ್ರಿಯೆಗಳಲ್ಲಿ ತಯಾರಿಸಲಾಗುವ ಗೊಬ್ಬರವಾಗಿವೆ. ಸಂಕೀರ್ಣ ರಸಗೊಬ್ಬರಗಳನ್ನು ವಿವಿಧ ಪ್ರಮಾಣದಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಪೋಷಕಾಂಶಗಳನ್ನು ಮಿಶ್ರಣಮಾಡಿ ದೊಡ್ಡ ಪ್ರಮಾಣದಲ್ಲಿ ತಯಾರಿಕೆ ಮಾಡಲಾಗುತ್ತದೆ. ಅವುಗಳೆಂದರೆ, 15-15-15, 17-17-17, 19-19-19, 10-26-26, 12-32-16, 14-28-14, 14-35-14, 20-10-20 ಮತ್ತು 22-12-11 ರ ಶೇಕಡ ಪ್ರಮಾಣದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳನ್ನೊಳಗೊಂಡಿರುವ ಸಂಕೀರ್ಣ ರಸಗೊಬ್ಬರಗಳು.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

3.04347826087
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top