ಈ ಗೊಬ್ಬರವನ್ನು ಸಾಮಾನ್ಯವಾಗಿ ಮ್ಯುರಿಯೇಟ್ ಆಫ್ ಪೊಟ್ಯಾಷ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಹರಳು ರೂಪದಲ್ಲಿ ದೊರೆಯುವ ರಸಗೊಬ್ಬರ. ಜೊತೆಗೆ ಇದು ಪುಡಿಯ ರೂಪದಲ್ಲಿ ಲಭ್ಯವಿದೆ; ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಅತ್ಯಂತ ವ್ಯಾಪಲವಗಿ ಬಳಸುವ ಪೊಟ್ಯಾಷಿಯಂ ಗೊಬ್ಬರವಾಗಿದೆ. ಪೊಟ್ಯಾಷಿಯಂ ಅಂಶವನ್ನು (ಶೇ. 50-52 ) ಹೊಂದಿದ್ದು ಮತ್ತು ಇದು ತಟಸ್ಥ ಉಪ್ಪು. ಮಣ್ಣಿಗೆ ಸೇರಿಸಿದಾಗ ಇದು ಸುಲಭವಾಗಿ ಮಣ್ಣಿನ ನೀರಿನಲ್ಲಿ ಕರಗುತ್ತದೆ. ಈ ಗೊಬ್ಬರವನ್ನು ಮಿಶ್ರಗೊಬ್ಬಗಳ ಜೊತೆ ವ್ಯಾಪಕವಾಗಿ ಬಳಸಲಾಗುತ್ತದೆ. ಮತ್ತು ಮಣ್ಣಿಗೆ ನೇರವಾಗಿ ಬಳಸುತ್ತಾರೆ. ಕೃಷಿಯಲ್ಲಿ ಬಳಸುವ ಶೇ. 90 ಮತ್ತು ಅದಕ್ಕಿಂತ ಹೆಚ್ಚು ಪೊಟ್ಯಾಷಿಯಂಅನ್ನು ಈ ಮೂಲದ ಮೂಲಕವೇ ಸರಬರಾಜು ಮಾಡಲಾಗುತ್ತದೆ. ಮಣ್ಣಿಗೆ ಹಾಕಿದಾಗ ಪೊಟ್ಯಾಷಿಯಂ ಮತ್ತು ಜಕ್ಲೋರೈಡ್ ಅಯಾನುಗಳಾಗಿ ಯೋಜನೆಯ ಅಯಾನೀಕೃತವಾಗುತ್ತದೆ. ಪೊಟ್ಯಾಷಿಯಂ ಜೋಡಿಸಲ್ಪಟ್ಟಿದೆ. ಅಥವಾ ಮಣ್ಣಿನ ಸಂಕೀರ್ಣದ ಮೇಲೆ ಹೀರಿಕೊಳ್ಳುತ್ತದೆ. ಮ್ಯೂರಿಯೇಟ್ ಆಫ್ ಪೊಟ್ಯಾಷ್ ಸುಲಭವಾಗಿ ನೀರಿನಲ್ಲಿ ಕರಗಿದರೂ ಸಹ ನೈಟ್ರೇಟ್‍ಗೆ ಹೋಲಿಸಿದರೆ ಕಡುಮೆ ಸವಕಳಿಯನ್ನು ಹೊಂದಿರುತ್ತದೆ.
ತಕಾರಕಾರಿ ಬೆಳೆಗಳಲ್ಲಿ ಪೊಟ್ಯಾಷಿಯಂ ಸರಬರಾಜು ಮಾಡಲು ವ್ಯಾಪಕವಾಗಿ ಮ್ಯೂರಿಯೇಟ್ ಆಫ್ ಪೊಟ್ಯಾಷನ್ನು ಬಳಸಲಾಗುತ್ತದೆ. ಪೊಟ್ಯಾಷ್ ಜೊತೆಗೆ Pಕ್ಲೋರಿನ್ ಪೂರೈಕೆಯು ಕೆಲವೊಂದು ಸಂದರ್ಭಗಳಲ್ಲಿ ಬಹಳ ಉಪಯುಕ್ತವಾಗಿರುತ್ತದೆ
ಇದು ಬಿಳಿ ಬಣ್ಣದ್ದಾಗಿದ್ದು, ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಇದು ಶೇ. 41.6 ರಷ್ಟು ಪೊಟ್ಯಾಷಿಯಂ ಹೊಂದಿದೆ. ಇದು ತಟಸ್ಥ ಉಪ್ಪು ಮತ್ತು ತಟಸ್ಥ ಗೊಬ್ಬರವಾಗಿದೆ. ಪೊಟ್ಯಾಷಿಯಂ ಮತ್ತು ಗಂಧಕ ಮೂಲವಾಗಿ ಬಳಸಲಾಗುತ್ತದೆ. ಸಸ್ಯಗಳ ವಿಪರೀತ ಕ್ಲೋರೈಡ್ ಸೇರಿಸುವುದರಿಂದ ಉಪ್ಪಿನಿಂದ ಒತ್ತಡ ಉಂಟಾಗುತ್ತದೆ. ಸಲ್ಫೇಟ್ ಆಫ್ ಪೊಟ್ಯಾಷ್ ಸಾಮಾನ್ಯವಾಗಿ ಉತ್ತಮ ಗುಣಮಟ್ಟ ಮತ್ತು ಶೆಲ್ಫಾ ಜೀವನವನ್ನು ವಿಸ್ತರಿಸುತ್ತದೆ. ತರಕಾರಿ ಉತ್ಪಾದನೆಯಲ್ಲಿ ಪೊಟ್ಯಾಷಿಯಂನ ಆದ್ಯತೆಯ ರೂಪ ಪೊಟ್ಯಾಷಿಯಂ ಸಲ್ಫೇಟ್. ವಿಶೇಷವಾಗಿ ತರಕಾರಿಗಳನ್ನು ಲಾಭದಾಯಕ ಹಾಗೂ ಸ್ಪರ್ಧಾತ್ಮಕ ದೇಶೀಯ, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಂಸ್ಕರಣೆಗಾಗಿಬೆಳೆಸುವಾಗ ಖಚಿತವಾಗಿ ಮತ್ತು ನಿರ್ಧಿಷ್ಟವಾಗಿ ಇದೇ ಗೊಬ್ಬರವನ್ನು ಬಳಸಲಗುತ್ತದೆ. ಬೇರಿನ ಬೆಳೆಗಳಲ್ಲಿ ಪೊಟ್ಯಾಷಿಯಂ ಮೂಲವಾಗಿ ಸಲ್ಫೇಟ್‍ನ್ನು ಹೇರಳವಾಗಿ ಬಳಸುತ್ತಾರೆ. ವಿಶೇಷವಾಗಿ ಆಲೂಗೆಡ್ಡೆ ಬೆಳೆಯಲ್ಲಿ ಮ್ಯೂರಿಯೇಟ್ ಆಫ್ ಪೊಟ್ಯಾಷ್ ಬಳಸಿದಾಗ ಸಸ್ಯಗಳಲ್ಲಿನ ಪಿಷ್ಟ ಸಂಶ್ಲೇಷಣೆಯ ಸಾಮಥ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಪೊಟ್ಯಾಷಿಯಂ ಸಲ್ಫೇಟ್ ಆದ್ಯತೆಯು ಸಾಮಾನ್ಯವಾಗಿ ಪ್ರಕಟವಾಗುವ ಸುಧಾರಣೆ ಮತ್ತು ರುಚಿ, ಹೆಚ್ಚಿನ ಪೌಷ್ಟಿಕ ಮೌಲ್ಯ, ಒತ್ತಡಗಳ ಸುಧಾರಿತ ಪ್ರತಿರೋಧ ಮತ್ತು ಅತಿ ಮುಖ್ಯವಾಗಿ, ಉತ್ತಮ ಸಾಗಾಣಿಕೆ ಗುಣಲಕ್ಷಣಗಳು ಮತ್ತು ಉನ್ನತ ಒಣ ಉಳಿಕೆಗಳ ಕಾರಣದಿಂದ ವಿಸ್ತøತ ಶೆಲ್ಫ್ ಜೀವನದ ಮೇಲೆ ಅವಲಂಬಿತವಾಗಿರುತ್ತದೆ.
ತೀವ್ರ ತರಕಾರಿ ಉತ್ಪಾದನೆ ವ್ಯವಸ್ಥೆಗಳಿಂದ ಹೆಚ್ಚಿನ ಮಟ್ಟದ ಸಮರ್ಪಕ ಪೋಷಕಾಂಶ ಪೂರೈಕೆಯ ಬೇಡಿಕೆ ಹೆಚ್ಚಾಗುತ್ತದೆ. ಪೊಟ್ಯಾಷಿಯಂ ಸಲ್ಫೇಟ್‍ನ್ನು ಸಾಮಾನ್ಯವಾಗಿ ಕ್ಲೋರೈಡ್ ಮುಕ್ತ ಮತ್ತು ಕಡಿಮೆ ಉಪ್ಪಿನ ಸೂಚ್ಯಾಂಕದ ಕಾರಣದಿಂದ ಮಣ್ಣಿಗೆ ಸೇರಿಸಿದಾಗ ನಾಟಿಯಿಂದ ಕೊಯ್ಲಿನವರೆಗೂ ಉತ್ತಮ ಬೆಳವಣಿಗೆಯನ್ನು ಖಾತ್ರಿಪಡಿಸುವ ಗುಣಗಳನ್ನು ಹೊಂದಿರುತ್ತದೆ. ಅನೇಕ ತರಕಾರಿ ಬೆಳೆಗಳಲ್ಲಿ ಗರಿಷ್ಠ ಇಳುವರಿ ಪಡೆಯಲು ಬೇಕಾದ ಹೆಚ್ಚು ಪೊಟ್ಯಾಷಿಯಂ ಮಟ್ಟವು ಅತ್ಯತ್ತಮ ಗುಣಮಟ್ಟದ ತರಕಾರಿ ಉತ್ಪಾದನೆಗೆ ಅಗತ್ಯವಾಗಿರುತ್ತದೆ. ಪೊಟ್ಯಾಷಿಯಂ ಸ್ಫೇಟ್ ಗೊಬ್ಬರವು ಇಳುವರಿ, ಒಣ ಉಳಿಕೆ ಸಕ್ಕರೆ, ಜೀವಸತ್ವ `ಸಿ` ಅಂಶ ಬಣ್ಣ, ಶೆಲ್ಫ್ ಜೀವನ ಮತ್ತು ರಉಚಿಯು ಸಕಾರಾತ್ಮಕವಾಗಿ ಪ್ರಭಾವ ನೀಡುವ ಕಾರಣದಿಂದ ಇದು ತರಕಾರಿ ಬೆಳೆಗಳಲ್ಲಿ ಒಂದು ಮುಖ್ಯವದ ಆದ್ಯತೆಯ ರೂವಪೆನ್ನಬಹುದು.
ಪೊಟ್ಯಾಷಿಯಂ ಸಲ್ಫೇಟ್ ಪೂರೈಕೆ ಬೆಳೆಗಳಿಗೆ ಉತ್ತಮ ಪರಿಣಾಮವನ್ನು ಉಂಟುಮಾಡುತ್ತದೆ. ಏಕೆಂದರೆ, ಇದು ಚಳಿಗಾಲಕ್ಕೆ ಸಹಿಷ್ಣುತೆ ಹೆಚ್ಚಳ, ಬರಗಾಲದ ಹಾಗೂ ಲವಣತ್ವ ಸಹಿಷ್ಣುತೆಯು ವಾಣಿಜ್ಯ ಸಂಕೀರ್ಣ ಕಾಪಾಡುತ್ತದೆ.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 10/15/2019
ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.
ಕ್ಯಾಲ್ಸಿಯಂ,ಮೆಗ್ನೀಶಿಯಂ,ಗಂಧಕ ರಸ ಗೊಬ್ಬರಗಳು
ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ...
ಕಬ್ಬಿಣ,ಮ್ಯಾಂಗನೀಸ್,ತಾಮ್ರರಸಗೊಬ್ಬರಗಳು