ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪರಿಚಯ

ರಾಸಾಯನಿಕ ಗೊಬ್ಬರಗಳ ಪರಿಚಯ

ಗೊಬ್ಬರಗಳು ರಾಸಾಯನಿಕ ಸಂಯೋಜಿತ ಪದಾರ್ಥಗಳು, ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ಅಥವಾ ಸಂಸ್ಕರಿಸಿದ ವಸ್ತುಗಳು ಹಾಗೂ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸಸ್ಯ ಪೋಷಕಾಂಶಗಳನ್ನು ಸಾಂದ್ರೀಕರಿಸಿದ ಮತ್ತು ಸುಲಭವಾಗಿ ಲಭ್ಯವಿರುವ ರೂಪದಲ್ಲಿ ಒಯುತ್ತವೆ. ಇವು ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಕೇವಲ ಒಂದು ಪ್ರಾಥಮಿಕ ಪೋಷಕಾಂಶವನ್ನು ಹೊಂದಿರುವ ಗೊಬ್ಬರಕ್ಕೆ ನೇರ ಅಥವಾ ಸರಳ ಗೊಬ್ಬರಗಳೆಂದು ಕರೆಯಲಾಗುತ್ತದೆ. ಎರಡು ಅಥವಾ ಹೆಚ್ಚು ಪ್ರಾಥಮಿಕ ಪೋಷಕಾಂಶಗಳಿದ್ದರೆ ಅದನ್ನು ಸಂಯುಕ್ತ ಅಥವಾ ಹೆಚ್ಚು ಪೋಷಕಾಂಶ ಗೊಬ್ಬರವೆಂದು ಕರೆಯುತ್ತಾರೆ. ರಾಸಾಯನಿಕ ಗೊಬ್ಬರಗಳನ್ನು ಸಾವಯವ ಗೊಬ್ಬರಗಳಿಗೆ ಹೋಲಿಸಿದರೆ ಪ್ರಕೃತಿಯಲ್ಲಿ ಬಹಳ ಸಾಂದ್ರೀಕರಿಸಿರುತ್ತದೆ. ಗೊಬ್ಬರವು ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಮೇಲೆ ತಕ್ಷಣ ಪರಿಣಾಮವನ್ನುಂಟು ಮಾಡುತ್ತದೆ.

ಗೊಬ್ಬರಗಳು ಹೆಚ್ಚಿನ ಸಾಂದ್ರತೆಯಲ್ಲಿನ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದ್ದರಿಂದ ಕಡಿಮೆ ಆಕಾರದ ಮತ್ತು ದೀರ್ಘ ಅಂತರದವರೆಗೆ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸಾಗಿಸಬಹುದು, ಕಡಿಮೆ ಶೇಖರಣಾ ಸಾಮಥ್ರ್ಯದ ಅಗತ್ಯವಿದೆ. ಗೊಬ್ಬರಗಳ ರಾಸಾಯನಿಕ ಸಂಯೋಜನೆ ಮತ್ತು ಅದರಿಂದ ಪೋಷಕಾಂಶಗಳನ್ನು ಸಮನಾಗಿರುತ್ತವೆ. ಮತ್ತು ತಮ್ಮ ವಿಶಿಷ್ಟ ಪ್ರಮಾಣವನ್ನು ಸೂಚಿಸಲು ಸುಲಭವಾಗುತ್ತದೆ.

ಹೆಚ್ಚುತ್ತಿರುವ ಬೆಳೆ ಉತ್ಪಾದನೆಯ ಉದೇಶದಲ್ಲಿ ಮಣ್ಣಿನಲ್ಲಿನ ಸಸ್ಯ ಪೋಷಕಾಂಶಗಳನ್ನು ನೈಸರ್ಗಿಕ ಪೂರೈಕೆ ಮಾಡುವುದರ ಜೊತೆಗೆ ಮಣ್ಣಿ ಫಲವತ್ತತೆಯನ್ನು ಸುಧಾರಿಸುತ್ತದೆ. ಬಹುತೇಕ ಮಣ್ಣಿನಲ್ಲಿ ಸಸ್ಯ ಪೋಷಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಸರಬರಾಜು ಮಾಡಿ ಹೆಚ್ಚಿನ ಇಳುವರಿಗೆ ವರ್ಷದಿಂದ ವರ್ಷಕ್ಕೆ ಬದಲಾವಣೆ ಮಾಡುವ ಸಾಮಥ್ರ್ಯವನ್ನು ಹೊಂದಿರುವುದಿಲ್ಲ. ಪೋಷಕಾಂಶಗಳ ಕೊರತೆಯಿರುವ ಮಣ್ಣಿನಲ್ಲಿ ಬೆಳೆದ ಬೆಳೆಗಳು ಬರಿದಾಗಿ ಉಳಿದಿದೆ. ಪೋಷಕಾಂಶ ಕೊರತೆ ಬೆಳೆಯಲ್ಲಿ ಅಪೇಕ್ಷಿತ ಇಳುವರಿ ಪಡೆಯಲು ಸಾಧ್ಯವಿಲ್ಲ, ಹೆಚ್ಚು ಬಾಹ್ಯ ಗೊಬ್ಬರ ಬೆಳೆಸಿದ ಬೆಳೆಯಲ್ಲಿ ತನ್ನ ಸುಪ್ತ ಇಳುವರಿಗಿಂತ ಕಡಿಮೆ ಸಾಮಥ್ರ್ಯ ಇರುತ್ತದೆ. ಗೊಬ್ಬರಗಳ ಬಳಕೆಯ ಆಧುನಿಕ ಕೃಷಿಯಲ್ಲಿ ಬಹಳ ಪ್ರಮುಖವಾದ ಪರಿಕರ ಇದನ್ನು ಬಳಸದಿದ್ದಾಗ ಸಾಕಷ್ಟು ಆಹಾರ ಧನ್ಯಗಳು, ತರಕಾರಿಗಳು, ಬೆಳೆಯುತ್ತಿರುವ ಜನಸಂಖ್ಯೆಗೆ ಬೇಕಾದ ಹಣ್ಣುಗಳನ್ನು ಒದಗಿಸುತ್ತದೆ.

ಹಿಂದಿನ ವರ್ಷದಲ್ಲೂ ದೊಡ್ಡ ಪ್ರಮಾಣದಲ್ಲಿ ಸಾವಯವ ಗೊಬ್ಬರದ ಬಳಕೆಯು, ತರಕಾರಿ ಉತ್ಪಾದನೆಯಲ್ಲಿ ಪ್ರಮುಖ ಪೋಷಕಾಂಶದ ಮೂಲವಾಗಿತ್ತು ಇಂದು ಸಾವಯವ ಗೊಬ್ಬರ ಇನ್ನೂ ತರಕಾರಿ ಉತ್ಪಾದನೆಯಲ್ಲಿ ಪೋಷಕಾಂಶಗಳ ಮಾದರಿ ಮೂಲವೆಂದು ಪರಿಗಣಿಸಬಹುದು. ಸಾವಯವ ಗೊಬ್ಬರದ ಲಭ್ಯತೆ, ಸಾಗಣಿಕೆ ಮತ್ತು ಬಳಕೆಯಲ್ಲಾಗುವ  ಖರ್ಚು ಇದರ ಬಳಕೆಯನ್ನು ಗಣನೀಯವಾಗಿ ಮಿತಗೊಳಿಸಿದೆ. ಅಧುನಿಕ ತರಕಾರಿ ಉತ್ಪಾದನೆಯಲ್ಲಿ ಸಮತೋಲಿತ ಪೋಷಣೆಯು ಒಂದು ಮಹತ್ವವಾದ ಕೀಲಿ ಕೈ, ರಸಗೊಬ್ಬರವನ್ನು ಮಾತ್ರವೇ ಬೆಳೆಗಳಿಗೆ ಉಪಯೋಗಿಸಬಹುದು. ಇಲ್ಲವೆ ಸಾವಯವ ಗೊಬ್ಬರದಲ್ಲಿ ಮಿಶ್ರಮಾಡಿ ಬೆಳೆಗೆ ಹಾಕಬಹುದು.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

3.21739130435
Arunkumar Sep 14, 2019 03:22 PM

Super

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top