অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಂಜಕದ ರಸಗೊಬ್ಬರಗಳು

ರಾಕ್ ಫಾಸ್ಫೇಟ್  :

ಆಮ್ಲ ಮಣ್ಣಿನಲ್ಲಿ ಬಹಳ ಪರಿಣಾಮಕಾರಿ ರಸಗೊಬ್ಬರ. ವಾಸ್ತವವಾಗಿ ಆಮ್ಲ ಮಣ್ಣಿನಲ್ಲಿ ಬಹಳ ಅಗ್ಗದ ಮತ್ತು ಉತ್ತಮ ಮೂಲದ ರಂಜಕ ಹೊಂದಿರುವ ಗೊಬ್ಬರ. ಸಸ್ಯಗಳಿಗೆ ರಂಜಕದ ಅಗತ್ಯ ಬೇಕಾಗುವುದಕ್ಕೂ ಮುಂಚಿತವಾಗಿ ಕೂಡ ಮಣ್ಣಿಗೆ ಬಳಸಬಹುದು. ರಂಜಕದ ಅಂಶವು ಸಾಮಾನ್ಯವಾಗಿ ಶೇ. 11 ರಿಂದ 15 ರಷ್ಟು ವ್ಯಾಪ್ತಿಯೊಳಗಿರುತ್ತದೆ. ಈ ರಂಜಕದ ಗುಂಪಿನಲ್ಲಿ ವಸ್ತುಗಳು ನೀರು, ಸಿಟ್ರಿಕ್ ಆಮ್ಲ ಅತವಾ ಅಮೋನಿಯಂ ನೈಟ್ರೇಟ್ ಯಾವುದರಲ್ಲಿಯೂ ಕರಗುವುದಿಲ್ಲ. ನುಣ್ಣಗೆ ಪುಡಿ ಮಾಡಿದ ಫಾಸ್ಫೇಟ್ ಗೊಬ್ಬರದ ವಿಶೀಷ ಪ್ರಯೋಜನದ ಬಳಕೆಯು ಆಮ್ಲ ಮಣ್ಣಿನಲ್ಲಿ ಅಂದರೆ 6 ಕ್ಕಿಂತ ಕಡಿಮೆ ರಸಸಾರವಿರುವ ಮಣ್ಣಿನಲ್ಲಿ ಬಹಳ ಉಪಯುಕ್ತವಾಗಿರುತ್ತದೆ. ಈ ವಸ್ತುವು ನಿಧಾನವಾಗಿ ಲಭ್ಯವಾಗುವುದರಿಂದ ದೀರ್ಘ ಅವಧಿಯಲ್ಲಿ ದೊರಕುತ್ತದೆ. ತಟಸ್ಥ ಮಣ್ಣಿನಲ್ಲಿ ರಾಕ್‍ಫಾಸ್ಫೇಟ್ ಅನ್ನು ಸಾವಯವ ಗೊಬ್ಬರದ ಜೊತೆ ಉಪಯೋಗಿಸಿದಾಗ ಹೆಚ್ಚು ರಂಜಕವು ಲಭ್ಯವಾಗುತ್ತದೆ.

ಮೆಣಸನ್ನು ಆಮ್ಲಿಯ ಮಣ್ಣುಗಳಲ್ಲಿ ರಂಜಕವು ನೀರಿನಲ್ಲಿ ಕರಗುವ ಮೂಲಗಳಲ್ಲಿ ಬೆಳೆಯುವುದಕ್ಕಿಂತ ಸಾಮಾನ್ಯವಾಗಿ ನೇರ ಉಪಯೋಗಿಸುವ ರಾಕ್ ಫಾಸ್ಫೇಟ್‍ಗಳು ಆರ್ಥಿಕವಾಗಿ ಹೆಚ್ಚು ಆಕರ್ಷಿಸುತ್ತದೆ. ಒಂದು ವಾರಕ್ಕೆ ಮೊದಲು ಆಮ್ಲ ಮಣ್ಣಿನಲ್ಲಿ ಬಳಸುವುದಕ್ಕೆ ಮುಂಚೆ ರಾಕ್ ಫಾಸ್ಫೇಟ್‍ನ್ನು ಕೊಟ್ಟಿಗೆ ಗೊಬ್ಬರದ ಜೊತೆ ಇನ್‍ಕ್ಯೂಬೇಟ್ ಮಾಡುವುದರಿಂದ ಪುನ: ಸ್ಥಿತಿಗೆ ಬರುವಿಕೆ ಮತ್ತು ಬೇಸಾಯದ ದಕ್ಷತೆಯು ಹೆಚ್ಚಾಗುತ್ತದೆ.

ಸಿಂಗಲ್ ಸೂಪರ್ ಫಾಸ್ಫೇಟ್.

 

ಇದು ಸುಲಭವಾಗಿ ಲಭ್ಯವಿರುವ ರಂಜಕವನ್ನು ಪೂರೈಸುವ ಎಲ್ಲಾ ಫಾಸ್ಫೇಟಿಕ್ ಗೊಬ್ಬರಗಳ ಪ್ರಮುಖ ವಸ್ತುವಾಗಿದೆ. ರಂಜಕದ ಜೊತೆಗೆ ಇದು ದೊಡ್ಡ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸಲ್ಫೇಟ್‍ನ್ನು ಹೊಂದಿದೆ. ಸೂಪರ್ ಫಾಸ್ಫೇಟ್ ಸಹ ಸಣ್ಣ     ಪ್ರಮಾಣದಲ್ಲಿ ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಿಬ್ಡಿನಂ ಮತ್ತು ಸತು ಸಏರಿದಂತೆ ಸಸ್ಯಗಳ ಬೆಳವಣಿಗೆಗೆ ಬೇಕಾದ ಇತರೇ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ವಾಸ್ತವವಾಗಿ ಅದರ ಮೌಲ್ಯ ಹೆಚ್ಚಿಸುವುದರ ಜೊತೆಗೆ ಕೆಲವು ಶುದ್ಧ ರಾಸಾಯನಿಕವಾಗಿ ದೊರೆಯುವ ಫಾಸ್ಫೇಟಿಕ್ ಗೊಬ್ಬರಗಳು ಸಸ್ಯಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

ಇದು ಬೂದ ಬಣ್ಣದ ಶುಷ್ಕ, ಹರಳು ರೂಪದ ಅಥವಾ ಪುಡಿಯಾದ ಫಾಸ್ಫೇಟಿಕ್ ಗೊಬ್ಬರವಾಗಿದೆ. ಇದನ್ನು ಗೋಣಿಚೀಲದಲ್ಲಿ ಪಾಲಿಥೀನ್ ಲೈನಿಂಗೆ ಅಥವಾ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಮಾರಲಾಗುತ್ತದೆ. ಸೂಪರ್ ಫಾಸ್ಪೇಟ್ ಗೊಬ್ಬರವನ್ನು ತೇವಭರಿತ ಅಥವಾ ಮೆಳೆಬಿದ್ದ/ನೀರಾವರಿ ಮಾಡಿದ ಒಣ ಮಣ್ಣಿನಲ್ಲಿ ಬಳಸಿದಾಗ, ಫಾಸ್ಪೇಟಿಕ್ ಭಾ (ಶೇ. 16 ರಷ್ಟು ರಂಜಕ, 12 ರಷ್ಟು ಗಂಧಕ )ವು ಮಣ್ಣಿನ ನೀರಿನಲ್ಲಿ ಕರಗುವುದರಿಂದ ಬೆಳೆಯುತ್ತಿರುವ ಸಸ್ಯಗಳ ಬೇರುಗಳು ಸುಲಭವಾಗಿ ರಂಜಕವನ್ನು ಇದೇ ರೂಪದಲ್ಲಿ ತೆಗೆದುಕೊಳ್ಳುತ್ತದೆ.

ಫಾಸ್ಫೇಟ್ ಮಣ್ಣಿನಲ್ಲಿ ಚಲನಶಕ್ತಿಯನ್ನು ಹೊಂದಿರುವುದಿಲ್ಲ. ಆದ್ದರಿಂದ ಸೂಪರ್ ಫಾಸ್ಫೇಟ್ ಬೇರಿನ ವಲಯ ಅಥವಾ ಬೇರುಗಳು ಅತ್ಯಂತ ಸಕ್ರಿಯವಾದ ಮಣ್ಣಿನ ಪದರದಲ್ಲಿ ಉಪಯೋಗಿಸಲಾಗುತ್ತದೆ. ಹೆಚ್ಚು ಆಮ್ಲೀಯ ಮಣ್ಣಿನಲ್ಲಿ ಸಿಂಗಲ್ ಸೂಪರ್ ಫಾಸ್ಫೇಟ್ ರಂಜಕದ ಹೆಚ್ಚಿನ ಸ್ಥರೀಕರಣದ ಕಾರಣದಿಂದ ಇದು ಪ್ರೋತ್ಸಾಹ ವಂಚಿತವಾಗುತ್ತದೆ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate