ಇದು ಸ್ಥಿರ ಗೊಬ್ಬರ ಶುದ್ಧ. ಉಪ್ಪು ಬಿಳಿ ಬಣ್ಣವಾಗಿರುತ್ತದೆ. ಕೃಷಿ ವರ್ಗದ ವಸ್ತುವು ವಿವಿಧ ಛಾಯೆಗಳ ಬಣ್ಣ ಬದಲಾಗುತ್ತದೆ. ಬಿಳಿಯಿಂದ ವಿವಿಧ ಛಾಯೆಗಳ ಬೂದು ಬಣ್ಣಕ್ಕೆ ಬದಲಾವಣೆ ಹೊಂದುತ್ತದೆ. ಈ ಬಣ್ಣವು ಭರ್ತಿ ಸಾಮಗ್ರಿಯ ಮೇಲೆ ಅವಲಂಬಿತವಾಗಿರುತ್ತದೆ. ಆ ಉಪ್ಪು ಬಹಳ ಕಡಿಮೆ ತೇವಾಂಶವನ್ನು ಹೀರಿಕೊಳ್ಲುತ್ತದೆ. ಇದು ಸಾರಜನಕ ಮತ್ತು ಗಂಧಕದ ಎರಡೂ ಉತ್ತಮ ಮೂಲಗಳಾಗಿದೆ. ಇದು ಸಾರಜನಕ ಅಂಶವು ಶೇ. 20.6 ಅಮೋನಿಕಲ್ ಸ್ವರೂಪ ಹಾಗೂ ಗಂಧಕ ಅಂಶವು ಶೇ. 24 ಇರುತ್ತದೆ. ಪ್ರಬಲ ಆಮ್ಲೀಯತೆ ಹೊಂದಿರುವ ಪ್ರಕ್ರಿಯೆಯ ಅಮೋನಿಯಂ ಸಲ್ಫೇಟ್ ತಟಸ್ಥ. ಆದರೆ ಕ್ಷಾರೀಯ ಮಣ್ಣಿನಲ್ಲಿ ಬಹಳ ಪ್ರಯೋಜನಕಾರಿ ತರಕಾರಿ ಬೆಳೆಗಳಲ್ಲಿ ಸಾಮಾನ್ಯವಾಗಿ ಯೂರಿಯಾ ಬದಲಿಗೆ ಅಮೋನಿಯಂ ಸಲ್ಫೇಟ್‍ನ ಬಳಕೆಗೆ ಆದ್ಯತೆ ನೀಡಲಾಗುತ್ತದೆ.
100 ಕೆ.ಜಿ. ಅಮೋನಿಯಂ ಸಲ್ಫೇಟ್ ಬಳಕೆಯಿಂದ ಮಣ್ಣಿನಲ್ಲಿ ಆಮ್ಲೀಯತೆಯನ್ನು ಉತ್ಪತ್ತಿ ಮಾಡುತ್ತದೆ. ಈ ಮಣ್ಣನ್ನು ತಟಸ್ಥಗೊಳಿಸಲು ಸುಮಾರು 110 ಕೆ.ಜಿ. ಸುಣ್ಣದ ಕಾರ್ಬೋನೇಟ್ ಬೇಕಾಗುತ್ತದೆ. ಅಮೋನಿಯಂ ಸಲ್ಫೇಟ್‍ನ ಮುಖ್ಯ ಲಕ್ಷಣವೆಂದರೆ ಇದು ಮಣ್ಣಿನ ಆಮ್ಲೀಯತೆಯನ್ನು ಉಂಟುಮಾಡುತ್ತದೆ. ಅಮೋನಿಯಂ ಸಲ್ಫೇಟ್ ಎರಡು ಭಾಗಗಳನ್ನು ಹೊಂದಿದೆ. ಅಮೋನಿಯಂ ಮತ್ತು ಸಲ್ಫೇಟ್ ಮಣ್ಣಿನಲ್ಲಿರುವ ಬ್ಯಾಂಕ್ಟೀರಿಯಾಗಳಿಂದ ಅಮೋನಿಯಂ ಸ್ವರೂಪದ ಭಾಗವು ನೂಟ್ರೇಟ್ ಆಗಿ ರೂಪಾಂತರವಾಗುತ್ತದೆ. ಮತ್ತು ಇದನ್ನು ಬೆಳೆಗಳಲ್ಲಿ ಬಳಸಲಾಗುತ್ತದೆ. ಸಲ್ಫೇಟ್ ಭಾಗವು ಸುಣ್ಣದ ಜೊತೆ ಸೇರಿ ಸುಣ್ಣದ ಸಲ್ಫೇಟ್ ಆಗಿ ಪರಿವರ್ತನೆಯಾಗುತ್ತದೆ. ಸುಣ್ಣದ ಸಲ್ಫೇಟ್ ನೀರಿನಲ್ಲಿ ಜೊತೆ ಸೇರಿ ಸುಣ್ಣದ ಸಲ್ಫೇಟ್ ಆಗಿ ಪರಿವರ್ತನೆಯಾಗುತ್ತದೆ. ಸುಣ್ಣದ ಸಲ್ಫೇಟ್ ನೀರಿನಲ್ಲಿ ಕರಗುವುದರಿಂದ ಭಾಗಶ: ಸಸ್ಯಗಳು ಹೀರಿಕೊಳ್ಳುತ್ತವೆ. ಆದರೆ ಹೇರಳವಾಗಿ ಮಳೆ ಬೀಳುವ ಸಂದರ್ಭದಲ್ಲಿ ಮಣ್ಣಿನಿಂದ ಸವಕಳಿಯಾಗುತ್ತದೆ. ಹಾಗಾಗಿ ಸುಣ್ಣದ ಸಲ್ಫೇಟ್ ನಷ್ಟವನ್ನು ಹೋಂದುತ್ತದೆ. ಇದೇ ಮಣ್ಣು ಆಮ್ಲೀಯವಾಗಲು ಪ್ರಮುಖ ಕಾರಣವೆನ್ನಬಹುದು.
ಯೂರಿಯ ನೀರಿನಲ್ಲಿ ಸುಲಭವಾಗಿ ಕರಗುವ ಮತ್ತು ಪ್ರತಿ ಘಟಕ ಪೋಷಕಾಂಶದ ವೆಚ್ಚವನ್ನು ಪರಿಗಣಿಸಿದರೆ ಯೂರಿಯಾ ಬಹುಶ: ಅಗ್ಗದ ಸಾರಜನಕಯುಕ್ತ ಗೊಬ್ಬರವಾಗಿದೆ. ಇದು ಬಿಳಿ, ಹರಳು ಹರಳಾಗಿರುವ ಘನ ಮತ್ತು ಕೊಂಚ ಹೈಗ್ರೋಸ್ಕೋಪಿಕ್ ಗೊಬ್ಬರವಾಗಿದೆ. ಇದನ್ನು ತುಂತುರು ದ್ರಾವಣದ ರೂಪದಲ್ಲಿ ಉಪಯೋಗಿಸಬಹುದು. 100 ಕೆ.ಜಿ. ಯೂರಿಯಾ ಗೊಬ್ಬರ ಬಳಕೆಯಿಂದ ಉಂಟಾಗುವ ಆಮ್ಲಿಯತೆಯನ್ನು ತಟಸ್ಥಗಿಳಿಸಲು 80 ಕೆ.ಜಿ. ಕ್ಯಾಲ್ಸಿಯಂ ಕಾರ್ಬೊನೇಟ್ ಬೇಕಾಗುತ್ತದೆ. ಮತ್ತು ಇದು ಅಮೋನಿಯಂ ಸಲ್ಫೇಟ್‍ಗಿಂತ ಕಡಿಮೆ ಆಮ್ಲೀಕರಿಸುತ್ತದೆ. ಆದ್ದರಿಂದ ಹೆಚ್ಚು ರಸಸಾರ ಹೊಂದಿರುವ ಮಣ್ಣಿಗೆ ಯೂರಿಯಾ ಬಳಕೆಗೆ ಆದ್ಯತೆ ನೀಡಲಾಗುತ್ತದೆ.
ಇದು ಒಂದು ವಾಣಿಜ್ಯ ಸಾರಜನಕಯುಕ್ತ ಗೊಬ್ಬರ ಇದು ಅಮೋನಿಯಂ ನೈಟ್ರೇಟ್ ಹಾಗೂ ಪುಡಿಮಾಡಿ ಸುಣ್ಣ ಅಥವಾ ಡೋಲೋಮೈಟ್‍ಗಳನ್ನು ಹೊಂದಿದ್ದು ಶೇ. 20 ರಷ್ಟು ಸಾರಜನಕವಿರುತ್ತದೆ. ಸಿ.ಎ.ಎನ್. ನಲ್ಲಿನ ಅರ್ಧಭಾಗದ ಸಾರಜನಕವು ನೈಟ್ರೇಟ್ ಹಾಗೂ ಉಳಿದ ಅರ್ಧಭಾಗವು ಅಮೋನಿಕಲ್ ರೋಪಸಲ್ಲಿರುತ್ತದೆ. ಇದು ಬೂದು ಅಥವಾ ತಿಳಿಕಂದು ಬಣ್ಣದಲ್ಲಿರುತ್ತದೆ. ಈ ಗೊಬ್ಬರವು ಕ್ಯಾಲ್ಸಯಂ ಕಾರ್ಬೋನೇಟ್ ಮತ್ತು ಅಮೋನಿಯಂ ನೈಟ್ರೇಟ್‍ಗಳನ್ನು ಹೊಂದಿದೆ. ಕ್ಯಾಲ್ಸಿಯಂ ಕಾರ್ಬೋನೇಟ್ ನೀರಿನಲ್ಲಿ ಕರಗದ (ಭಾಗಶ: ಕರಗುವ) ಮತ್ತು ಅಮೋನಿಯಂ ನೈಟ್ರೇಟ್ ಕರಗಬಲ್ಲದ ರೂಪದ್ದಾಗಿರುತ್ತದೆ. ಈ ಗೊಬ್ಬರದ ವಸ್ತುಗಳು ಅಮೋನಿಯಂ ನೈಟ್ರೇಟ್‍ಗಿಂತ ಭಾಗಶ: ಕರಗುವ, ಕಡಿಮೆ ಹೈಗ್ರೋಸ್ಕೋಪಿಕ್‍ಗಳಾಗಿದ್ದು. ಅಮೋನಿಯಂ ಸಲ್ಫೇಟ್ ಹೋಲಿಸಿದರೆ ಇದು ಹೆಚ್ಚು ಹೈಗ್ರೋಸ್ಕೋಪಿಕ್. ಶೇ. 25 ರಷ್ಟು ಸಾರಜನಕ ಅಥವಾ ಶೇ. 26 ರಷ್ಟು ಸಾರಜನಕ ಸಹ ಲಭ್ಯವಿದೆ. ಅರ್ಧಭಾಗವು ಅಮೋನಿಯಂ ಸ್ವರೂಪ ಮತ್ತು ಉಳಿದ ಅರ್ಧಭಾಗವು ನೈಟ್ರೇಟ್ ರೂಪದಲ್ಲಿದ್ದು, ಇದನ್ನು ತಟಸ್ಥ ಗೊಬ್ಬರವೆಂದು ಕೂಡ ಕರೆಯಬಹುದು.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 6/25/2020
ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ...
ಕ್ಯಾಲ್ಸಿಯಂ,ಮೆಗ್ನೀಶಿಯಂ,ಗಂಧಕ ರಸ ಗೊಬ್ಬರಗಳು
ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್...
ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.