ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ಲಘು ಪೋಷಕಾಂಶ ಮತ್ತು ಕಿಲೇಟ್ಸ್ಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಲಘು ಪೋಷಕಾಂಶ ಮತ್ತು ಕಿಲೇಟ್ಸ್ಗಳು

ಲಘು ಪೋಷಕಾಂಶಗಳ ರಸಗೊಬ್ಬರಗಳು ಕಿಲೇಟ್ಸ್ಗಳು

ಲಘು ಪೋಷಕಾಂಶಗಳ ರಸಗೊಬ್ಬರಗಳು

ಇತ್ತೀಚೆಗೆ ಲಘು ಪೋಷಕಂಶಗಳ ಕೊರತೆಯು ಹೆಚ್ಚುತ್ತಿದ್ದು, ಹೆಚ್ಚಿನ ಇಳುವರಿಯನ್ನು ಲಘು ಪೋಷಕಾಂಶಗಳ ಬಳಕೆಯಿಂದ ಭಾರತೀಯ ಮಣ್ಣಿನಲ್ಲಿ ಪಡೆಯಬಹುದಾಗಿದೆ. ಗೊಬ್ಬರಗಳ ತಾರತಮ್ಯವಿಲ್ಲದೆ ಬಳಸುವ ಸಮಯದಲ್ಲಿ ಪ್ರಮುಖ ಹಾಗೂ ಲಘು ಪೋಷಕಾಂಶಗಳ ನಡುವಿನ ಸಂವಹನಗಳಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ಪಡೆಯುವಂತೆ ಮಾಡುತ್ತದೆ. ನಿರ್ಧಿಷ್ಟ ಲಘು ಪೋಷಕಾಂಶಗಳನ್ನು ಮಣ್ಣಿನಲ್ಲಿ ಹೆಚ್ಚಿನ ಕೊರತೆಯಿರುವ ಅಥವಾ ಬೆಳೆಗಳಿಗೆ ಹೇರಳವಾಗಿ ಲಘು ಪೋಷಕಾಂಶದ ಅವಶ್ಯಕತೆಯಿರುವ ಸಂಧರ್ಭಗಳಲ್ಲಿ ಬಳಸಲಾಗುತ್ತದೆ. ಲಘು ಪೋಷಕಾಂಶಗಳನ್ನು ಗೊಬ್ಬರದಲ್ಲಿ ಬೆರೆಸಿ ಮಣ್ಣಿಗೆ ಎರಚುವುದು/ಹರಡುವುದು ಅಥವ ಎಲೆಗಳ ಮೇಲೆ ತುಂತುರಾಗಿ ಸಿಂಪರಣೆಯ ಮೂಲಕ ಸೇರಿಸಬಹುದು.

ಅಜೈವಿಕ / ರಾಸಾಯನಿಕ ಲವಣಗಳು:

ಲಘು ಪೋಷಕಾಂಶಗಳ ಗೊಬ್ಬರಗಳನ್ನು ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು. ಅವುಗಳೆಂದರೆ:

ಅಜೈವಿಕ / ರಾಸಾಯನಿಕ ಲವಣಗಳು :

ಈ ಲವಣಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಇವುಗಳನ್ನು ಮಣ್ಣಿಗೆ ಹಾಕಬಹುದು ಹಾಗೂ ಎಲೆಗಳ ಮೇಲೆ ತುಂತುರಾಗಿ ಬಳಸಬಹುದು.

ಕಿಲೇಟ್ಸ್‍ಗಳು  :

ಕಿಲೇಟ್ ಎಂಬ ಪದವು ಗ್ರೀಕ್ ಪದದಿಂದ ಉತ್ಪತ್ತಿಯಾಗಿದೆ. ಕೀಲೆ ಅಂದರೆ `ಚೇಳಿನ ಕೊಂಡಿ` ಎಂದು ಅರ್ಥ. ಕಿಲೇಟ್ ಅರ್ಗೆನೋ ಲೋಹದ ಅಣುಗಳ ವಿವಿಧ ಗಾತ್ರ ಮತ್ತು ಆಕಾರದಲ್ಲಿ ಸಾವಯವ ಭಾಗದ ರಚನೆಯ ಕಣಗಳಲ್ಲಿ ಉಂಗುರ ಆಕಾರದಲ್ಲಿ ಪೋಷಕಾಂಶಗಳನ್ನು ಬಂಧಿಸಿರುತ್ತದೆ. ಹೀಗಾಗಿ ಇದು ಹೆಚ್ಚು ಕಡಿಮೆ ಸಸ್ಯಗಳಿಗೆ ಲಭ್ಯವಿರುವ ರೂಪದಲ್ಲಿಯೇ ಹೊಂದಿರುತ್ತದೆ. ಲಘು ಪೋಷಕಾಂಶಗಳ ಕಿಲೇಷನ್‍ನಿಂದ ಸಾರೀಕರಣವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕಿಲೇಟೆಡ್ ರಸಗೊಬ್ಬರಗಳನ್ನು ಹಾಕುವುದರಿಂದ ಪೋಷಕಾಂಶಗಳ ಲಭ್ಯತೆಯು ಹೆಚ್ಚಾಗುತ್ತದೆ ಎಂದು ಸೂಚಿಸಲಾಗುತ್ತದೆ. ಕಬ್ಬಿಣ, ಮ್ಯಾಗನೀಸ್, ಸತು ಮತ್ತು ತಾಮ್ರಗಳ ಮೂಲಕ ಉತ್ತಮ ಕಿಲೇಟ್ ಉಪ್ಪುಗಳು ಒದಗಿಸಲ್ಪಡುತ್ತವೆ. ಈ ರೂಪಗಳು ರಸಸಾರ ಸ್ಥಳಾಂತರವಾದಾಗ ಹೆಚ್ಚು ಕರಗುವ, ಹೆಚ್ಚು ಸ್ಥಿರವಾಗಿರುತ್ತದೆ. ಮತ್ತು ಸುಲಭವಾಗಿ ಸಸ್ಯಗಳಿಗೆ ಲಭ್ಯವಿರುವ ರೂಪದಲ್ಲಿ ಮಾರ್ಪಾಡಾಗುತ್ತದೆ. ಈ ಕಿಲೇಟ್ ಉಪ್ಪು ಸ್ಥಿರವಾಗಿದ್ದು ಸಾವಯವ ಸಂಯುಕ್ತ ರೂಪದ ಇ.ಡಿ.ಟಿ.ಎ. ಮತ್ತು ಒಂದು ಲೋಹದ ಅಯಾನು ಜೊತೆ ಪ್ರತಿಕ್ರಿಯಿಸುವ ಮೂಲಕ ನೀರಿನಲ್ಲಿ ಕರಗುವ ಸಂಕಿರ್ಣ ರೂಪದಲ್ಲಿ ತಯಾರಿಸಲಾಗುತ್ತದೆ.

ಕಿಲೇಷನ್ ಪೋಷಕಾಂಶಗಳ ಧನ ಅಯಾನು, ಸೂಕ್ಷ್ಮಪೋಷಕಾಂಶಗಳ ಕಿಲೇಟ್‍ನಲ್ಲಿ ಸಾಮಾನ್ಯವಾಗಿ ಬಳಸುವ ಕೆಲವು ಮಧ್ಯವರ್ತಿಗಳು ಈ ಕೆಳಕಂಡಂತಿದೆ.

  1. ಇ.ಡಿ.ಟಿ.ಎ
  2. ಸತು - ಇ.ಡಿ.ಟಿ.ಎ ( ಶೇ. 12 ರಷ್ಟು ಸತು )
  3. ಕಬ್ಬಿಣ – ಇ.ಡಿ.ಟಿ.ಎ. ( ಶೇ. 12 ರಷ್ಟು ಕಬ್ಬಿಣ )
  4. ಮ್ಯಾಂಗನೀಸ್ – ಇ.ಡಿ.ಟಿ.ಎ. ( ಶೇ. 12 ರಷ್ಟು ಮ್ಯಾಂಗನೀಸ್ )
  5. ತಾಮ್ರದ - ಇ.ಡಿ.ಟಿ.ಎ. (ಶೇ. 12 ರಷ್ಟು ತಾಮ್ರ )
  6. ಹೆಚ್.ಇ.ಡಿ.ಟಿ.ಎ.
  7. ಡಿ.ಟಿ.ಪಿ.ಎ.
  8. ಇ.ಡಿ.ಡಿ.ಎಚ್.ಎ.

ಭಾರತದಲ್ಲಿ ವಿವಿಧ ರಾಜ್ಯ ಕೃಷಿ ಇಲಾಖೆಯು ರಾಜ್ಯದಲ್ಲೂ ಮಾರಾಟ ಮಾಡಬಹುದಾದ ಅನುಮೋದಿತ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣಗಳ ಪಟ್ಟಿಯನ್ನು ವಿತರಣೆ ಮಾಡಲಾಗಿದೆ. ಈ ಪ್ರಕಾರವಾಗಿ ಲಘು ಪೋಷಕಾಂಶಗಳ ಮಿಶ್ರಣವನ್ನು ಮಣ್ಣಿಗೆ ಹಾಕುವ ಹಾಗೂ ಎಲೆಗಳ ಮೇಲೆ ತುಂತುರು ಸಿಂಪರಣೆಗೆ ಸೂಕ್ತವಾದ ಹಲವಾರು ಬಹು ಪೋಷಕಾಂಶಗಳ ಉತ್ಪನ್ನಗಳ ಮಾರುಕಟ್ಟೆಯಲ್ಲಿವೆ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

2.96428571429
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top