ಸಾವಯವ ಗೊಬ್ಬರಗಳು ಬೆಳೆಗಳ ಉಪುತ್ಪನ್ನ ಹಾಗೂ ಸಸ್ಯ, ಪ್ರಾಣಿ ಮತ್ತು ಕೈಗಾರಿಕಾ ಮೂಲದ ತ್ಯಾಜ್ಯಗಳಿಂದ ಪಡೆದ ಗೊಬ್ಬರಗಳೆನ್ನಬಹುದು. ಅವು ಕಡಿಮೆ ಪೋಷಕಾಂಷಗಳನ್ನು ಹೊಂದಿದ್ದು, ಆಕೃತಿಯಲ್ಲಿ ದೊಡ್ಡ ಗಾತ್ರದಲ್ಲಿದ್ದು ಮತ್ತು ದೂರದ ಅಂತರಕ್ಕೆ ಸಾಗಿಸಲು ಲಾಭಕರವಾಗಿರುವುದಿಲ್ಲ.ಇದು ದೊಡ್ಡದಾಗಿರುವುದರಿಂದ ಶೇಖರಣೆಗೆ ಹೆಚ್ಚಿನ ಜಾಗದ ಅವಶ್ಯಕತೆ ಇರುತ್ತದೆ. ಸಾವಯವ ಗೊಬ್ಬರದಲ್ಲಿನ ರಾಸಾಯನಿಕ ಸಂಯೋಜನೆ ಮತ್ತು ಪೋಷಕಾಂಶಗಳ ಅಂಶವು ಗೊಬ್ಬರದಲ್ಲಿ ಬಳಸುವ ಕಚ್ಚಾವಸ್ತುವಿನ ವಿಧ ಹಾಗೂ ತಯಾರಿಕಾ ವಿಧಾನಗಳನ್ನು ಅವಲಂಬಿಸಿದ್ದು, ಪ್ರಾಣವು ಕಡಿಮೆ ಇರುತ್ತದೆ. ಇದು ಸಸ್ಯಗಳಿಗೆ ಪೋಷಕಾಂಶಗಲನ್ನು ಒದಗಿಸುವುದಲ್ಲದೇ, ಮಣ್ಣಿನ ರಚನೆ, ನೀರು ಹಿಡಿದಿಡುವ ಸಮಥ್ರ್ಯ, ಬೇರಿನ ಪರಿಸರ ಧನವಿದ್ಯುತ್‍ಕಣ ವಿನಿಮಯ ಸಾಮಥ್ರ್ಯ ಮತ್ತು ಸೂಕ್ಷ್ಮಜೀವಿಗಳ ಸಂಖ್ಯೆಗಳನ್ನು ಸುಧಾರಣೆಗೊಳಿಸುತ್ತದೆ.
ಸಾವಯವ ಗೊಬ್ಬರಗಳನ್ನು ಎರಡು ರೀತಿಯಲ್ಲಿ ವಇಂಗಡಿಸಲಾಗಿದೆ. ಅವುಗಳೆಂದರೆ ಬೃಹತ್ (ದೊಡ್ಡ) ಆಕಾರದ ಸಾವಯವ ಗೊಬ್ಬರಗಳು ಮತ್ತು ಸಾಂದ್ರೀಕೃತ ಸಾವಹಯ ಗೊಬ್ಬರಗಳು.
ಸಂಪೂರ್ಣ ವಿಘಟನೆ ಹೊಂದಿದ ಸಾವಯವ ಗೊಬ್ಬರಗಳಾದ ದೊಡ್ಡ ಆಕಾರದಲ್ಲಿದ್ದು ಸಸ್ಯ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿದ್ದು ಸಾವಯವ ಪದಾರ್ಥಗಳು ಬಾರಿ ಪ್ರಮಾಣದಲ್ಲಿರುತ್ತದೆ.
ಸಸ್ಯಗಳ ಎಲೆ. ಕಾಂಡ ಮತ್ತು ಬೇರು ಇವುಗಳ ಮೂಲದಿಂದ ದೊರೆಯುವ ಸಾವಯವ ವಸ್ತುಗಳನ್ನು ಹಸಿರೆಲೆ ಗೊಬ್ಬರವೆನ್ನುತ್ತಾರೆ. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾದಂತೆ, ಹಸಿರೆಲೆ ಗೊಬ್ಬರದ ಬಳಕೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಮತ್ತು ಭೌತಿಕ ಗುಣಧರ್ಮಗಳ ಮೇಲೆ ಅತಿಯಾದ ಪರಿಣಾಮವನ್ನು ಬೀರಿದೆ. ರಸಗೊಬ್ಬರಗಳ ಅಭಾವ, ಬೆಳೆ ಏರಿಕೆ ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡುವ ದೃಷ್ಠಿಯಿಂದ ಸುಲಭವಾಗಿ ಮತ್ತು ಅಗ್ಗವಾಗಿ ಒದಗುತ್ತಿರುವ ಮತ್ತು ಉಪಯೋಗಿಸಲ್ಪಡಬಹುದಾದ ಹಸಿರೆಲೆ ಗೊಬ್ಬರಗಳನ್ನು ಬಳಸಬೇಕು.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 1/28/2020
ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ...
ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್...
ಕಬ್ಬಿಣ,ಮ್ಯಾಂಗನೀಸ್,ತಾಮ್ರರಸಗೊಬ್ಬರಗಳು
ಕ್ಯಾಲ್ಸಿಯಂ,ಮೆಗ್ನೀಶಿಯಂ,ಗಂಧಕ ರಸ ಗೊಬ್ಬರಗಳು