ಸಾವಯವ ವಸ್ತು ಸೇರ್ಪಡೆಯಿಂದ ಮಣ್ಣಿನ ಹ್ಯೂಮಸ್ ಅಂಶ ಹೆಚ್ಚುವುದು. ಮಣ್ಣಿನ ಭೌತಿಕ ಗುಣಧರ್ಮಗಳಾದ ಕಣ ಜೋಡಣೆ, ಬಸಿಯುವ ಗುಣಧರ್ಮ, ಪೋಷಕಾಂಶ/ನೀರು ಹಿಡಿದಿಟ್ಟುಕೊಳ್ಳುವಿಕೆ ಮುಂತಾದವು ವೃದ್ಧಿಸುತ್ತವೆ. ಮಣ್ಣಿನಲ್ಲಿ ಸಾರಜನಕದ ಪ್ರಮಾಣ ವೃದ್ಧಿಸುವುದು. ಮಣ್ಣಿನ ಸವಕಳಿ ಕಡಿಮೆಯಾಗಿ ಮಣ್ಣು ಮತ್ತು ಪೋಷಕಾಂಶಗಳ ಸಂರಕ್ಷಣೆ. ಮಣ್ಣಿನ ಕೆಳಪದರಗಳಿಂದ ಪೋಷಕಾಂಶ ಮೇಲ್ಪದರಗಳಿಗೆ ಸೇರ್ಪಡೆ. ಮಣ್ಣಿನ ಜೈವಿಕಕ್ರಿಯೆ ಉತ್ತಮಗೊಂಡು, ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆ ಮತ್ತು ಚಟುವಟಿಕೆ ಹೆಚ್ಚುತ್ತದೆ. ಬೆಳೆಗಳಿಗೆ ಮುಖ್ಯ ಪೋಷಕಾಂಶಗಳೇ ಅಲ್ಲದೆ ಸೂಕ್ಷ್ಮ ಜೀವಿಗಳ ಸಂಖ್ಯೆ ಸಹ ದೊರೆಯುತ್ತದೆ. ಕ್ಷಾರ ಮಣ್ಣಿನ ಸುಧಾರಣೆಯಲ್ಲಿ ನೆರವಾಗುವುದು. ಮುಂದಿನ ಬೆಳೆಯ ಇಳುವರಿಯನ್ನು ಹೆಚ್ಚಿಸುತ್ತದೆ. ಮಣ್ಣಿನ ಉತ್ಪಾದನಾ ಸಾಮಥ್ರ್ಯವನ್ನು ಸುಸ್ಥಿರವಾಗಿಡುತ್ತದೆ. ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.