ಹಸಿರೆಲೆ ಗೊಬ್ಬರದ ಬಳಕೆ ವಿಧಾನ
- ತಾಕಿನಲ್ಲಿಯೇ ಬೆಳೆದು ಅಲ್ಲೇ ಉತ್ತು ಮಣ್ಣಿಗೆ ಸೇರಿಸುವುದು.
- ಭೂಮಿ ಸಿದ್ಧತೆ.
- ಸಾಮಾನ್ಯವಾಗಿ ಮೇ, ಜೂನ್ ತಿಂಗಳಲ್ಲಿ ಬಿತ್ತನೆ.
- ಬಿತ್ತನೆ ಬೀಜ ಎರಚುವುದು.
- ಬೀಜವರಿ: ಚೆಂಬೆ - 40-45 ಕೆಜಿ/ಹೆ, ಅಪ್ಸೆಣಬು - 40-45 ಕೆಜಿ/ಹೆ, ಉದ್ದು, ಹೆಸರು - 25-30 ಕೆಜಿ/ಹೆ, ಅಲಸಂದೆ - 40 ಕೆಜಿ/ಹೆ.
- ಗೊಬ್ಬರ: ಎಕರೆಗೆ 50-60 ಕೆಜಿ ಸೂಪರ್ ಫಾಸ್ಫೇಟ್ ಅಥವಾ 80 ಕೆಜಿ ಶಿಲಾರಂಜಕ
- ಚೆಂಬೆಯಾದಲ್ಲಿ 6-7 ವಾರದ ಬೆಳೆಯನ್ನು, ಅಪ್ಸೆಣಬಾದಲ್ಲಿ 4-5 ವಾರದ ಬೆಳೆಯನ್ನು ಉತ್ತು ಮಣ್ಣಿಗೆ ಸೇರಿಸುವುದು.
- ಮಣ್ಣಿಗೆ ಸೇರಿಸುವಾಗ ಸಾಕಷ್ಟು ತೇವಾಂಶವಿರಬೇಕು
- ಮೂರು ವಾರಗಳಷ್ಟು ಕಳೆಯಿಸಿದ ನಂತರ, ಮುಂದಿನ ಮುಖ್ಯ ಬೆಳೆ ಬಿತ್ತನೆ/ನಾಟಿ ಕೈಗೊಳ್ಳಬೇಕು.
- ಹಸಿರು ಎಲೆಗಳುಳ್ಳ ಸಸ್ಯ ಭಾಗಗಳನ್ನು ಹೊರಗಿನಿಂದ ತಂದು ತಾಕಿಗೆ ಸೇರಿಸುವುದು.
- ಹಸಿರು ಎಲೆ ಮತ್ತು ಎಳೆ ಟೊಂಗೆಗಳನ್ನು, ಬಹು ವಾರ್ಷಿಕ ಪೊದೆ ಮತ್ತು ಮರಗಿಡಗಳಿಂದ, ಬೇರೆ ಕಡೆಯಿಂದ ತಂದು ತಾಕಿನಲ್ಲಿ ಸೇರಿಸುವುದು ಸಾಮಾನ್ಯವಾಗಿ ಭತ್ತದ ಗದ್ದೆಯಲ್ಲಿ ವಾಡಿಕೆ.
- ಉದಾ: ಗ್ಲಿರಿಸೀಡಿಯಾ, ಹೊಂಗೆ, ಕ್ಯಾಸಿಯಾ, ಎಕ್ಕ, ಬೇವು, ಬಾಗೆ ಇತ್ಯಾದಿ.
- ಹಸಿರೆಲೆ ಗೊಬ್ಬರಗಳ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದು.
- ದೀರ್ಘಾವಧಿ ಬೆಳೆಗಳಲ್ಲಿ ಎರಡು ಸಾಲುಗಳ ನಡುವೆ ಹೆಚ್ಚಿನ ಅಂತರ ಕೊಡುವುದರಿಂದ ಕೆಲವು ದ್ವಿದಳ ಧಾನ್ಯ ಜಾತಿಯ ಬೆಳೆಗಳನ್ನು ಹಸಿರೆಲೆ ಗೊಬ್ಬರವಾಗಿ ಬೆಳೆಯಬಹುದು.
ಉದಾ: ಕಬ್ಬು - ಡಯಾಂಚ, ಕಬ್ಬು - ಅಲಸಂದೆ, ಹತ್ತಿ - ಅಲಸಂದೆ ಇತ್ಯಾದಿ.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 1/28/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.