অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನೆರಳ/ತಂಪು ಮನೆ

ನೆರಳ/ತಂಪು ಮನೆ

ನೆರಳ/ತಂಪು ಮನೆಯೆಂದರೆ ಸರಿಯಾಗಿ ಗಾಳಿ, ಬೆಳಕು, ಹಾಗೂ ತೇವಾಂಶ (ಆರ್ದ್ರತೆ)ಯನ್ನು ಪೂರೈಸಲು ಅನುಕೂಲವಾಗುವಂತಹ ಕೃಷಿ ಬಲೆ/ ಜಾಲಗಳ ಒಂದು ರಚನೆ. ಅದು ತನ್ನೊಳಗೆ ಸಸ್ಯಗಳ ಬೆಳವಣಿಗೆಗೆ ಅನುಕೂಲಕರವಾಗುವಂತಹ ಒಂದು ಸೂಕ್ಷ್ಮ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಇದನ್ನು ನೆರಳ/ತಂಪು ಜಾಲದ ಮನೆ ಅಥವಾ ಜಾಲದ ಮನೆ ಎಂದೂ ಕರೆಯುತ್ತಾರೆ.

ನೆರಳ/ತಂಪು ಮನೆಯ ಉಪಯೋಗಗಳು

  • ಹೂಬಿಡುವ ಸಸ್ಯಗಳು, ಗೊಂಚಲೆಲೆಗಳ ಸಸ್ಯಗಳು, ಔಷಧೀಯ ಸಸ್ಯಗಳು, ತರಕಾರಿ ಹಾಗೂ ಸಾಂಬಾರ ಪದಾರ್ಥಗಳ ಸಸ್ಯಗಳ ಕೃಷಿಯಲ್ಲಿ ನೆರವಾಗುತ್ತವೆ.
  • ಅರಣ್ಯ ಪ್ರಬೇಧಗಳನ್ನು ಬೆಳೆಸುವುದರ ಜೊತೆಗೆ ಹಣ್ಣು ಹಾಗೂ ತರಕಾರಿ ಬೆಳೆಯ ಸಸ್ಯಕ್ಷೇತ್ರದಲ್ಲೂ ನೆರವಾಗುತ್ತದೆ.
  • ಉತ್ತಮ ದರ್ಜೆಯನ್ನು ಕಾಪಾಡಿಕೊಂಡೇ ವಿವಿಧ ಬಗೆಯ ಕೃಷಿ ಉತ್ಪನ್ನಗಳನ್ನು ಒಣಗಿಸುವಲ್ಲೂ ಸಹಕಾರಿಯಾಗಿದೆ.
  • ಕೀಟಗಳ ಹಾವಳಿಯಿಂದ ತಪ್ಪಿಸಲು ನೆರವಾಗುತ್ತದೆ.
  • ನೈಸರ್ಗಿಕ ಹವಾಮಾನ ವೈಪರೀತ್ಯಗಳಾದ ತೀಕ್ಷ್ಣ ಗಾಳಿ, ಮಳೆ, ಮಂಜು, ಹಾಗೂ ಇಬ್ಬನಿಯಿಂದಲೂ ರಕ್ಷಣೆ ಒದಗಿಸುತ್ತದೆ.
  • ಕಸಿಕಟ್ಟಿದ ಗಿಡಗಳ ತಯಾರಿ ಹಾಗೂ ಬೇಸಗೆಯ ಕಾಲದಲ್ಲಿ ಅವುಗಳ ಸಾವಿನ ದರವನ್ನು ಕಡಿಮೆ ಮಾಡಲು ಉಪಯೋಗಿಸಲಾಗುತ್ತದೆ.
  • ಟಿಶ್ಯೂ ಕಲ್ಚರ್ ವಿಧಾನ (ಅಂಗಾಂಷ ಕೃಷಿ) ದಿಂದ ಉತ್ಪಾದಿತವಾದ ಗಿಡಗಳನ್ನು ನೈಸರ್ಗಿಕ ವಾತಾವರಣಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ.

ನೆರಳ/ತಂಪು ಮನೆಯ ರಚನೆಯ ನಕಾಶೆ/ಯೋಜನೆ

ಬೆಳೆಯಲಿರುವ ಬೆಳೆ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳು, ಹಾಗೂ ಸ್ಥಳೀಯ ಹವಾಮಾನ-ಇವುಗಳನ್ನು ಹೊಂದಿಕೊಂಡು ನೆರಳ/ ತಂಪು ಮನೆಯ ರಚನೆಯ ಯೋಜನೆ ಮಾಡಬೇಕು. ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಮಾಡುವ ಸಾಧ್ಯತೆಯಿದ್ದರೆ ಅದಕ್ಕೂ ಯೋಜನೆಯಲ್ಲೇ ಅನುವು ಮಾಡಿಕೊಡಬೇಕು.

ಪ್ರಶಸ್ತವಾದ ಸ್ಥಳದ ಆಯ್ಕೆ

ನೆರಳ/ತಂಪು ಮನೆಯನ್ನು, ಮಾರುಕಟ್ಟೆಯಿಂದ ಅಗತ್ಯ ಸಾಮಗ್ರಿಗಳ ಪೂರೈಕೆ ಹಾಗೂ, ತನ್ನಲ್ಲಿ ಉತ್ಪಾದಿತವಾದ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ ಮಾರುಕಟ್ಟಗೆ ತಲಪಲು ಪ್ರಶಸ್ತವಾದ ಸ್ಥಳದಲ್ಲಿ ರಚಿಸಬೇಕು. ಇದನ್ನು ಮರಗಿಡಗಳಿಂದ ಹಾಗೂ ಕಟ್ಟಡಗಳಿಂದ ದೂರದಲ್ಲಿ, ಹಾಗೂ ಉದ್ದಿಮೆ ಹಾಗೂ ವಾಹನ ಮಾಲಿನ್ಯದಿಂದ ದೂರವಿರುವಂತೆ ರಚಿಸಬೇಕು. ಸ್ಥಳದಲ್ಲಿ ನೀರು ನಿಂತು ಸಮಸ್ಯೆಯಾಗದಿರುವಂತಿರಬೇಕು. (ಸರಾಗವಾಗಿ ನೀರು ಹರಿಯಬೇಕು). ಉತ್ತಮ ಗುಣಮಟ್ಟದ ನೀರಿನ ಹಾಗೂ ವಿದ್ಯುಶ್ಚಕ್ತಿಯ ಪೂರೈಕೆಯಿರಬೇಕು. ಆದರೂ ಗಾಳಿ ತಡೆ ವ್ಯವಸ್ಥೆಯು ಸುಮಾರು ಮೂವತ್ತು ಮೀಟರುಗಳ ಅಂತರದಲ್ಲಿರಬಹುದು.

ನಿಲುವು/ ಹೊಂದಿಕೆ

ನೆರಳ/ತಂಪು ಮನೆಯನ್ನು ಯಾವ ದಿಕ್ಕಿಗೆ ಹೊಂದಿಸಿಡಬೇಕೆಂಬುದಕ್ಕೆ ಎರಡು ಮಾನದಂಡಗಳಿವೆ. ಅವೆಂದರೆ ಎಲ್ಲ ಸಂದರ್ಭಗಳಲ್ಲೂ ಸಮಾನವಾಗಿರುವ ಬೆಳಕಿನ ತೀಕ್ಷ್ಣತೆ, ಹಾಗೂ ಗಾಳಿಯ ದಿಕ್ಕು. ಏಕಾಯುವಿರುವ ರಚನೆಯಾದರೆ ಪೂರ್ವ-ಪಶ್ಚಿಮ ಅಥವಾ ಉತ್ತರ-ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡಿರಬಹುದು, ಆದರೆ ಬಹು-ಆಯುವಿರುವ ರಚನೆಗಳು ಉತ್ತರ-ದಕ್ಷಿಣ ವಾಗಿಯೇ ಇರುವುದರಿಂದ ಸದಾ ಕಾಲ ಸಮಾನ ಬೆಳಕಿನ ತೀಕ್ಷಣತೆ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಬೇಕಾಗುವ ಸಾಮಗ್ರಿಗಳು

ನೆರಳ/ತಂಪು ಮನೆಯ ರಚನೆಗೆ ಬೇಕಾಗುವ ಎರಡು ಮೂಲಭೂತ ಸಾಮಗ್ರಿಗಳೆಂದರೆ ಚೌಕಟ್ಟು ಮತ್ತು ಹೊದೆಸುವ ವಸ್ತು. ನೆರಳ/ತಂಪುಮನೆಯ ಚೌಕಟ್ಟು ಹೊದಿಕೆಗೆ ಆಧಾರ ಒದಗಿಸುತ್ತದೆ. ಅಲ್ಲದೆ ಗಾಳಿ, ಮಳೆ ಹಾಗೂ ಬೆಳೆಯ ತೂಕವನ್ನು ತಡೆಯುವ ಸಾಮರ್ಥ್ಯ ಹೊಂದಿರುತ್ತದೆ. ನೆರಳ ಮನೆಯ ಮೈಲ್ಡ್ ಸ್ಟೀಲ್ (ಮೃದುವಾದ ಉಕ್ಕಿನ) ಕೋನದ ಚೌಕಟ್ಟು, ಕಾಲಕಾಲಕ್ಕೆ ತುಕ್ಕು ನಿವಾರಕ ಉಪಚಾರವನ್ನು ನೀಡಿದಲ್ಲಿ, ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ವರ್ಷ ಬಾಳಿಕೆ ಬರುತ್ತದೆ. ಬಿದಿರಿನ ಚೌಕಟ್ಟು ಮೂರು ವರ್ಷ ಬಾಳಿಕೆ ಬರುತ್ತದೆ. ಕೃಷಿ ಜಾಲ/ಬಲೆಯು ಹಾವಗುಣಕ್ಕೆ ಹೊಂದಿಕೊಂಡು ಮೂರರಿಂದ ಐದು ವರ್ಷ ಬಾಳಿಕೆ ಬರುತ್ತದೆ. ಕೃಷಿ ಬಲೆಗಳು ಬೇರೆ ಬೇರೆ ಬಣ್ಣಗಳಲ್ಲಿ ವಿವಿಧ ನೆರಳಿನ ಶೇಕಡವಾರು ಹಂಚಿಕೆಯೊಂದಿಗೆ ಲಭ್ಯವಿದೆ; ಉದಾಹರಣೆಗೆ 25%, 30%, 35%, 50%, 60%, 75% ಹಾಗೂ 90%.
ನೆರಳಮನೆ/ತಂಪು ಮನೆಯ ವಿನ್ಯಾಸ ಅಗತ್ಯ ಹಾಗೂ ಕೌಶಲ್ಯವನ್ನು ಹೊಂದಿಕೊಂಡಿರುತ್ತದೆ. ಒರಿಸ್ಸಾಗಳಂತ ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಸ್ಥಳೀಯ ಪರಿಸ್ಥಿತಿಗಳನ್ನು ಹೊಂದಿಕೊಂಡು, ಸ್ವಲ್ಪ ಬದಲಾವಣೆಗಳೊಂದಿಗೆ ಗೇಬಲ್ (ತ್ರಿಕೋನ ಗೋಡೆಯ ರಚನೆಯುಳ್ಳ), ಅಥವಾ ಗೋಥಿಕ್ ಮಾದರಿಯಲ್ಲಿ ರಚಿಸಬಹುದು.

ನೆರಳಮನೆಯ ರಚನೆ ಹಾಗೂ ವಿನ್ಯಾಸ

ಒರಿಸ್ಸಾದ ಭುವನೇಶ್ವರದಲ್ಲಿರುವ ಒರಿಸ್ಸಾ ಕೃಷಿ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾನಿಲಯದ ನಿಷ್ಕೃಷ್ಟ ಕೃಷಿ ಅಭಿವೃದ್ಧಿ ಕೇಂದ್ರದಲ್ಲಿ ಎರಡು ರೀತಿಯ ವಿನ್ಯಾಸವನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ನೆರಳಮನೆಗಳ ಮುಖ್ಯ ಅನುಕೂಲ/ ಪ್ರಯೋಜನವೆಂದರೆ ಈ ರಚನೆಗಳಿಗೆ ಸ್ಥಳದಲ್ಲಿ ಯಾವುದೇ ಬೆಸುಗೆಯ ಅಗತ್ಯವಿರುವುದಿಲ್ಲ. ಅಲ್ಲದೆ ಇನ್ನೊಂದು ಅನುಕೂಲವೆಂದರೆ ಅಡಿಪಾಯದ ಕಂಬಗಳು ಗೆದ್ದಲಿನ ಉಪಠಳವನ್ನು ತಪ್ಪಿಸಲು ಅನುಕೂಲವಾಗುವಂತೆ ರಚಿಸಲ್ಪಟ್ಟಿರುತ್ತವೆ. ಇವುಗಳ ಬಗೆಗಿನ ಹೆಚ್ಚಿನ ವಿವರ ಈ ಕೆಳಗಿನಂತಿವೆ:

ನೆರಳ ಮನೆ/ ತಂಪು ಮನೆ

ತಂಪು ಮನೆ (ಚಿತ್ರ 1) ಮೃದು ಉಕ್ಕಿನ ಕೋನ (35 ಮಿ.ಮೀ x 35 ಮಿ.ಮೀ x 6 ಮಿ.ಮೀ) ಹಾಗೂ ಬಿದಿರಿನ ಚೌಕಟ್ಟನ್ನು ಹೊಂದಿದೆ. ಮೃದು ಉಕ್ಕಿನ ಕೋನವನ್ನು ಅಡಿಪಾಯದ ಕಂಬವಾಗಿ, ತಳದಲ್ಲಿ ಆಧಾರಕ್ಕಾಗಿ ಹಾಗೂ ಬಿದಿರಿನ ಚೌಕಟ್ಟನ್ನು ಹಿಡಿದುಕೊಳ್ಳಲು ಮೇಲ್ಭಾಗದಲ್ಲಿ ‘U’ ಆಕಾರದ ಕ್ಲಿಪ್ ಅನ್ನು ಹೊಂದಿರುವಂತೆ ರಚಿಸಲಾಗಿದೆ. ಬಿದಿರನ್ನು ರಚನೆಯುದ್ದಕ್ಕೂ ಕಟ್ಟಿಗೆಯ ತೊಲೆಯಂತೆ ಮತ್ತು ಚಾವಣಿಯಂತೆ ಬಳಸಲಾಗಿದೆ. ನೆರಳಮನೆಯ ನೆಲವನ್ನು ಸಮತಟ್ಟು ಮಾಡಿದ ಮೇಲೆ ಯೋಜನೆಯ ಕರಡನ್ನು ರಚಿಸಲಾಗುತ್ತದೆ. ಅಡಿಪಾಯಕ್ಕೆ ನೆಡುವ ಕಂಬಗಳನ್ನು ಕೂರಿಸಲು ಗುಂಡಿಗಳನ್ನು ತೋಡಲಾಗುತ್ತದೆ. ಗುಂಡಿಯ ಒಂದು ಮಟ್ಟದವರೆಗೆ ಮರಳನ್ನು ತುಂಬಿ ನಂತರ ಸರಿಯಾಗಿ ಒತ್ತಡಹಾಕಲಾಗುತ್ತದೆ. ಆಧಾರ ಕಂಬಗಳನ್ನು ಮೂರು ಸಮಾನಾಂತರ ಶ್ರೇಣಿಯಲ್ಲಿರುವಂತೆ ಸರಿಯಾಗಿ ಕೂರಿಸಿ ಸಿಮೆಂಟಿನ ಕಾಂಕ್ರೀಟಿನಿಂದ ಭದ್ರಗೊಳಿಸಲಾಗುತ್ತದೆ. ಸರಿಯಾಗಿ ಭದ್ರಪಡಿಸಿದ ಮೇಲೆ, ಬೇಕಾದ ಗಾತ್ರಕ್ಕೆ ಕತ್ತರಿಸಿದ ಬಿದಿರಿನ ತುಂಡುಗಳನ್ನು ತೊಲೆಯಾಗಿ, ಚಾವಣಿಯಾಗಿ ಕೂರಿಸಿ ಗಟ್ಟಿಯಾಗಿ ಕಟ್ಟಲಾಗುತ್ತದೆ. ಮೊದಲೇ ತಯಾರಿಸಿಟ್ಟ ಕೊನೆಯ ರಚನೆಗಳನ್ನು ಹಾಗೂ ಬಾಗಿಲಿನ ಚೌಕಟ್ಟುಗಳನ್ನು ಅಗಣಿ ಗಳಿಂದ ಕೂರಿಸಲಾಗುತ್ತದೆ. ನಂತರ 50% - 75% ದ ಕೃಷಿ ಜಾಲ/ ಬಲೆಯನ್ನು ಮತ್ತು ಬದಿಯ ಚೌಕಟ್ಟಿಗೆ 30% ದ ಬಲೆಯನ್ನೂ ಹೊದಿಸಲಾಗುತ್ತದೆ. ಬಾಗಿಲು ಹಾಗೂ ಕೊನೆಯ ಚೌಕಟ್ಟನ್ನೂ ನೆರಳಬಲೆಯಿಂದ ಮುಚ್ಚಲಾಗುತ್ತದೆ. ಕೊನೆಗೆ ನಡು-ದಾರಿ ಮತ್ತು ಹೊರ ಆವರಣವನ್ನು ಇಟ್ಟಿಗೆಯ ರಚನೆಯಿಂದ ಕಟ್ಟಲಾಗುತ್ತದೆ. ಇಂತಹ ಪ್ರತಿ ನೆರಳ ಮನೆಯ ರಚನೆಗೆ ತಗಲುವ ವೆಚ್ಚ ಸುಮಾರು ರೂ. 225/ಚ.ಮೀ.
ಇದಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಈ ಕೆಳಗಿನ ಪಟ್ಟಿ-1ರಲ್ಲಿ ಕೊಡಲಾಗಿದೆ:

ಅಗತ್ಯ ಸಾಮಗ್ರಿಗಳು (ನೆರಳ ಮನೆ/ ತಂಪು ಮನೆ-I):

ಕ್ರ.ಸಂ.

ವಿವರ

ವಸ್ತು

ವಿಶೇಷತೆಗಳು

ಪ್ರಮಾಣ

1.

"U" ಆಕಾರದೊಂದಿಗಿನ ಆಧಾರ ಸ್ಥಂಭಗಳು

ಮೃದು ಉಕ್ಕಿನ ಕಬ್ಬಿಣದ ಕೋನ

35 ಮಿ.ಮೀ x 35 ಮಿ.ಮೀ x 6 ಮಿ.ಮೀ

209 ಕಿ.ಗ್ರಾಂ.

 

 

ಮೃದು ಉಕ್ಕಿನ ಸಮತಟ್ಟು

25 ಮಿ.ಮೀ x 6 ಮಿ.ಮೀ

7 ಕಿ.ಗ್ರಾಂ.

2.

ಬಾಗಿಲಿನ ಪದ್ಧತಿ  ಮತ್ತು ಕೊನೆಯ ಚೌಕಟ್ಟು

ಮೃದು ಉಕ್ಕಿನ ಕಬ್ಬಿಣದ ಕೋನ

35 ಮಿ.ಮೀ x 35 ಮಿ.ಮೀ x 6 ಮಿ.ಮೀ

71 ಕಿ.ಗ್ರಾಂ.

3.

ಚಾವಣಿ ರಚನೆ

ಬಿದಿರು

75 ಮಿ.ಮೀ – 100 ಮಿ.ಮೀ ವ್ಯಾಸ

20 ಸಂಖ್ಯೆ

4.

ಚಾವಣಿ & ಬದಿಯ ಹೊದಿಕೆ

ಕೃಷಿ ನೆರಳ ಜಾಲ

50% - 70% & 30%

328 ಚ.ಮೀ.

5.

ಅಡಿಪಾಯದ ಭದ್ರತೆ

ಸಿಮೆಂಟ್ ಕಾಂಕ್ರೀಟ್

12 ಮಿ.ಮೀ ಬಿಲ್ಲೆಯೊಂದಿಗೆ 1:2:4

1.3 ಘ.ಮೀ.

6.

ತುಕ್ಕು ನಿರೋಧಕ  ಉಪಚಾರ

ಇನಾಮೆಲ್ ಪೇಂಟ್ ಮತ್ತು ಥಿನ್ನರ್

 

4 ಲೀ.

7.

 

ರಚನೆಯ ಕಟ್ಟೋಣ

(i) ನಟ್ ಮತ್ತು ಅಗಣಿ

3/8”x1”

1 ಕಿ.ಗ್ರಾಂ.

 

 

(ii) ಜಿ.ಐ. ವಯರ್

4 ಮಿ.ಮೀ

2 ಕಿ.ಗ್ರಾಂ.

8.

ಕಲ್ಲು ಹಾಸಿನ ದಾರಿ

ಇಟ್ಟಿಗೆಯ ಗಾರೆಯ  ರಚನೆ

ಸಿಮೆಂಟ್ ಗಾರೆ (1:6)

2.4 ಘ.ಮೀ

 

ನೆರಳ ಮನೆ/ ತಂಪು ಮನೆ- II

ಈ ವಿನ್ಯಾಸವು ನೆರಳ ಮನೆ/ ತಂಪು ಮನೆಯ ತಳಪಾಯದ ಸ್ಥಂಭಗಳಿಗೆ, ತೊಲೆಗಳಿಗೆ, ಕೊನೆಯ ಚೌಕಟ್ಟಿಗೆ, ಮೃದು ಉಕ್ಕಿನ ಕೋನ (40 ಮಿ.ಮೀ x 40 ಮಿ.ಮೀ x 6ಮಿ.ಮೀ.)ದ ಬಳಕೆ ಮಾಡುತ್ತದೆ. ಮೃದು ಉಕ್ಕಿನ ಸಮತಟ್ಟನ್ನು ಹೊದೆಸುವ ವಸ್ತುವಿಗೆ ಆಧಾರವಾಗಿ ಬಳಕೆ ಮಾಡಲಾಗುತ್ತದೆ. ಅವು ತೊಲೆಗಳನ್ನು ಕೂರಿಸುವ ರಚನೆಯನ್ನು ಕೂಡಾ ಹೊಂದಿವೆ. ಮೊದಲಿನ ಮಾದರಿಯಲ್ಲಿ ಹೇಳಿದಂತೆಯೇ ಇಲ್ಲೂ ನೆಲವನ್ನು ಸಮತಟ್ಟು ಮಾಡಿ ನಂತರ ಯೋಜನೆಯ ಕರಡನ್ನು ರಚಿಸಲಾಗುತ್ತದೆ. ಸಿಮೆಂಟ್ ಕಾಂಕ್ರೀಟ್ ನ ಸಹಾಯದಿಂದ ಆಧಾರಸ್ಥಂಭಗಳನ್ನು ಗುಂಡಿಯೊಳಗೆ ಭದ್ರ ಪಡಿಸಿ ಏಳು ದಿನ ಕ್ಯೂರಿಂಗ್ (ಸಿಮೆಂಟ್ ಗಟ್ಟಿಯಾಗಲು) ಮಾಡಲಾಗುತ್ತದೆ.ನಟ್ ಹಾಗೂ ಅಗಣಿಗಳ ನೆರವಿನಿಂದ ತೊಲೆಗಳು, ಹೂಪುಗಳು, ಕೊನೆಯ ಚೌಕಟ್ಟು ಇತ್ಯಾದಿಗಳನ್ನು ಕೂರಿಸಲಾಗುತ್ತದೆ.
ತದನಂತರ ಬಲೆಯನ್ನು ಈ ರಚನೆಯ ಮೇಲೆ ಹೊಂದಿಸಲಾಗುತ್ತದೆ. ಕೊನೆಗೆ ನಡು-ದಾರಿ ಮತ್ತು ಹೊರ ಆವರಣವನ್ನು ಇಟ್ಟಿಗೆಯ ರಚನೆಯಿಂದ ಕಟ್ಟಲಾಗುತ್ತದೆ. ಇಂತಹ ಪ್ರತಿ ನೆರಳ ಮನೆಯ ರಚನೆಗೆ ತಗಲುವ ವೆಚ್ಚ ಸುಮಾರು ರೂ. 500.00 / ಚ.ಮೀ. ಇದಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಈ ಕೆಳಗಿನ ಪಟ್ಟಿ-2ರಲ್ಲಿ ಕೊಡಲಾಗಿದೆ:

ಅಗತ್ಯ ಸಾಮಗ್ರಿಗಳು (ನೆರಳ ಮನೆ/ ತಂಪು ಮನೆ-II):

ಕ್ರ.ಸಂ.

ವಿವರ

ವಸ್ತು

ವಿಶೇಷತೆಗಳು

ಪ್ರಮಾಣ

1.

ಆಧಾರ ಸ್ಥಂಭಗಳು

ಮೃದು ಉಕ್ಕಿನ ಕೋನ

40 ಮಿ.ಮೀ x 40 ಮಿ.ಮೀ x 6 ಮಿ.ಮೀ

336 ಕಿ.ಗ್ರಾಂ

2.

ತೊಲೆ ಮತ್ತು ಕೊನೆಯ  ಚೌಕಟ್ಟು

ಮೃದು ಉಕ್ಕಿನ ಕೋನ

40 ಮಿ.ಮೀ x 40 ಮಿ.ಮೀ x 6 ಮಿ.ಮೀ

305 ಕಿ.ಗ್ರಾಂ

3.

ಬಾಗಿಲಿನ ಚೌಕಟ್ಟು

ಮೃದು ಉಕ್ಕಿನ ಕೋನ

40 ಮಿ.ಮೀ x 40 ಮಿ.ಮೀ x 6 ಮಿ.ಮೀ

41 ಕಿ.ಗ್ರಾಂ

4.

Hoops<

ಮೃದು ಉಕ್ಕಿನ ಸಮತಟ್ಟು

30 ಮಿ.ಮೀ x 6 ಮಿ.ಮೀ

159 ಕಿ.ಗ್ರಾಂ

5.

ಚಾವಣಿ & ಬದಿಯ ಹೊದಿಕೆ

ಕೃಷಿ ನೆರಳ ಜಾಲ

50% - 70% & 30%

328 ಚ.ಮೀ.

6.

ಅಡಿಪಾಯದ ಭದ್ರತೆ

ಸಿಮೆಂಟ್ ಕಾಂಕ್ರೀಟ್

12 ಮಿ.ಮೀ ಬಿಲ್ಲೆಯೊಂದಿಗೆ 1:2:4

1.8 ಘ.ಮೀ

7.

ಕಲ್ಲು ಹಾಸಿನ ದಾರಿ

ಇಟ್ಟಿಗೆಯ ಗಾರೆಯ ರಚನೆ

ಸಿಮೆಂಟ್ ಗಾರೆ(1:6)

2.4 ಘ.ಮೀ

8.

ರಚನೆಯ ಕಟ್ಟೋಣ

(i) ನಟ್- ಅಗಣಿ

3/8”x1”

4 ಕಿ.ಗ್ರಾಂ

 

 

(ii) ಜಿ.ಐ. ವಯರ್

4 ಮಿ.ಮೀ

4 ಕಿ.ಗ್ರಾಂ

9.

ತುಕ್ಕು ವಿರೋಧಿ ಉಪಚಾರ

ಇನಾಮೆಲ್ ಪೇಂಟ್ ಮತ್ತು ಥಿನ್ನರ್

-

8 ಲೀ.


ಆಕರ : ಏನ್.ಸಿ.ಪಿ.ಎ.ಹೆಚ್

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate