অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪದ್ಧತಿಗಳು ಮತ್ತು ಪಾಠಶಾಲೆ

  • ಸಮಗ್ರ ತೇವಾಂಶ ನಿರ್ವಹಣೆ:
  • ಸಮಗ್ರ ಪೌಷ್ಟಿಕಾಂಶ ನಿರ್ವಹಣೆ:
  • ಸಾವಯವ ಕೃಷಿ: ಬೆಳೆ ಬದಲಾಚಣೆ:/li>
  • ಅಂತರ ಬೆಳೆ/ಮಿಶ್ರ ಬೆಳೆ: ಬೆಳೆ ಪರಿವರ್ತನೆ/ಎರಡು ಬೆಳೆ:
  • ಬಹು ಬೆಳೆ ಪದ್ಧತಿ (ಕೃಷಿ+ತೋಟಗಾರಿಕೆ+ಅರಣ್ಯ+ಮೇವು+ಹಸಿರೆಲೆ ಗೊಬ್ಬರ ಬೆಳೆಗಳು ಇತ್ಯಾದಿ):

ರೈತರ ಕ್ಷೇತ್ರ ಪಾಠ ಶಾಲೆ:

  • ಮಗ್ರ ಕೀಟ/ ರೋಗ ನಿರ್ವಹಣೆ: ಸಮಗ್ರ ಕಳೆ ನಿರ್ವಹಣೆ:
  • ಅಂರ್ತಜಲ ವೃದ್ಧಿಯಿಂದ ಅಥವಾ ಮಳೆನೀರು ಕೊಯ್ಲಿನಿಂದ ಹೆಚ್ಚುವರಿ ಸಿಗುವ ನೀರಿನಿಂದ ಕಿರು ನೀರಾವರಿ ಪದ್ಧತಿ ಅಳವಡಿಕೆ
  • ಈ ಮೇಲಿನ ಎಲ್ಲಾ ಕೃಷಿ ಉತ್ಪಾದನಾ ಪದ್ಧತಿಗಳು ಪರಸ್ಪರ ಪೂರಕವಾಗಿದ್ದು ಒಂದನ್ನೊಂದು ಅವಲಂಭಿಸಿರುತ್ತವೆ.
  • ಮಣ್ಣು ಮತ್ತು ನೀರು ಸಂರಕ್ಷಣೆ ಚಟುವಟಿಕೆಗಳಷ್ಟೆ ಪ್ರಾಮುಖ್ಯತೆಯನ್ನು ಬೆಳೆ ಉತ್ಪಾದನೆ ಪದ್ಧತಿಗಳಿಗೆ ನೀಡಬೇಕು.
  • ಇದರಿಂದ ಒಟ್ಟಾರೆ ಜಲಾನಯನ ಪ್ರದೇಶ ಅಭಿವೃದ್ಧಿಗೆ ಹಾಗೂ ಜನರ ಆದಾಯ ವೃದ್ಧಿಗೆ ಸಹಾಯಕವಾಗುತ್ತದೆ.

ಮಳೆ ಮುನ್ಸೂಚನೆ ಮಾಹಿತಿ :

  • ಆಯಾ ಪ್ರದೇಶದ ಮಳೆ ಮಾಪನ ಕೇಂದ್ರಗಳಲ್ಲಿ ಆಗುವ ಮಳೆಯನ್ನು ಆಧರಿಸಿ ಬೇಸಾಯ ಕ್ರಮಗಳನ್ನು ಮುಂಚಿತವಾಗಿಯೇ ರೈತರಿಗೆ ತಿಳಿಸಬಹುದು.
  • ಆಯಾ ಪ್ರದೇಶದ ಮಳೆ ಪ್ರಮಾಣ ಸಂಭವನೀಯತೆ, ಹಂಚಿಕೆ ಮತ್ತು ತೀವ್ರತೆಗಳನ್ನೊಳಗೊಂಡಂತೆ ಮಾಹಿತಿಯನ್ನು ನಕ್ಷೆಗಳ ಮೂಲಕ ಪ್ರದರ್ಶನ.
  • ವರ್ಷದಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಮಳೆ ಪ್ರಮಾಣವನ್ನು ಗ್ರಾಫ್‍ನಲ್ಲಿ ನಮೂದಿಸಿ ಆಯಾ ತಿಂಗಳುಗಳಲ್ಲಿ ಬರುವ ಮಳೆ ಪ್ರಮಾಣ ಊಹಿಸಿ ಮುಂಜಾಗ್ರತೆಯಾಗಿ ಕೃಷಿ ಪರಿಕರಗಳನ್ನು ಜೋಡಿಸಿಕೊಳ್ಳಲು ರೈತರಿಗೆ ಅನುಕೂಲ ಮಾಡಿಕೊಡುವುದು.
  • ಬಿತ್ತನೆಯನ್ನು ಕನಿಷ್ಠ ಮಳೆ ಆಧರಿಸಿ ಮುಂದೆ ಬೆಳವಣಿಗೆ ಹಂತದಲ್ಲಿ ಸಿಗುವ ತೇವಾಂಶವನ್ನು ಪರಿಗಣಿಸಿ ರಸಗೊಬ್ಬರ ನೀಡುವ, ಅಂತರ ಬೇಸಾಯ ಮಾಡುವ, ಕಟಾವು ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮಳೆ ಮುನ್ಸೂಚನೆಯ ಮಾಹಿತಿ ಮತ್ತು ಗ್ರಾಫ್‍ಗಳು ಉಪಯುಕ್ತವಾಗುತ್ತದೆ.

ಸಾವಯುವ ಕೃಷಿ ಪದ್ಧತಿ :

ಸಾವಯವ ಕೃಷಿ ಎಂದರೆ ಪ್ರಕೃತಿದತ್ತವಾದ ಕೃಷಿ ಸಂಪನ್ಮೂಲಗಳಲ್ಲಿ ಒಂದಾದ ಮಣ್ಣನ್ನು ಜೀವಂತವಾಗಿಟ್ಟುಕೊಂಡು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಬೆಳೆ ತೆಗೆಯುವ ವಿಧಾನ.

  • ಕನಿಷ್ಠ ಉಳುಮೆ
  • ಎರೆಗೊಬ್ಬರ ಬಳಕೆ
  • ಸಾವಯವ ಗೊಬ್ಬರ / ಕೊಟ್ಟಿಗೆ ಗೊಬ್ಬರದ ಬಳಕೆ
  • ಹಸಿರೆಲೆ ಗೊಬ್ಬರ ಬಳಕೆ
  • ಜೈವಿಕ ಗೊಬ್ಬರಗಳ ಬಳಕೆ
  • ಹಿಂಡಿ ಗೊಬ್ಬರಗಳ ಬಳಕೆ
  • ಬೀಜಾಮೃತ, ಜೀವಾಮೃತಗಳ ಮತ್ತು ಪಂಚಗವ್ಯಗಳ ಬಳಕೆ
  • ಹೊದಿಕೆ (ಮಲ್ಚಿಂಗ್)

ರೈತ ಕ್ಷೇತ್ರ ಪಾಠಶಾಲೆ :

  • ರೈತರ ಕ್ಷೇತ್ರ ಪಾಠಶಾಲೆ ಒಂದು ವಿಶಿಷ್ಟವಾದ ಗುಂಪು ಕಲಿಕಾ ವಿಧಾನ.
  • ರೈತರು ತಾಂತ್ರಿಕತೆಯ ಬಗ್ಗೆ ಕೇಳಿ, ಕಂಡು, ಅನ್ವೇಷಣೆ ಮಾಡಿ, ಆಚರಿಸಿ, ಪೂರ್ಣಜ್ಞಾನ ಪಡೆದು ಆತ್ಮವಿಶ್ವಾಸ ಗಳಿಸುತ್ತಾರೆ.
  • ರೈತರ ಜಮೀನುಗಳೇ ಕಲಿಕ ಸ್ಥಳವಾಗಿರುತ್ತವೆ.
  • ಧೀರ್ಘಕಾಲ ಗುಂಪಿನಲ್ಲಿ ಕಲಿಯುವ ವಿಧಾನ.
  • ಮಾಡಿ ಕಲಿ ನೋಡಿ ತಿಳಿ ಎಂಬ ವಿಶೇಷ ಶಿಕ್ಷಣ ಪದ್ಧತಿಯಾಗಿದೆ.
  • ರೈತರಿಗೆ ಕಲಿತ ವಿಷಯಗಳು ಪೂರ್ಣವಾಗಿ ಮನದಟ್ಟಾಗುತ್ತದೆ.’

ನೆಲಗಡಲೆ ಹೊಲದಲ್ಲಿ ರೈತರು ಪರಸ್ಪರ ನೋಡಿ ಕಲಿಯುತ್ತಿರುವುದು

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 4/16/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate