ಬೇವಿನ ಬೀಜದ ತಿರುಳಿನ ಸಾರದ ತಯಾರಿ (5 % ದ್ರಾವಣ) ಬೇಕಾಗುವ ಸಾಮಗ್ರಿಗಳು: 5 % ದ್ರಾವಣ ತಯಾರಿಗೆ 100 ಲೀಟರ್ ನಷ್ಟು 5 % ಬೇವಿನ ಬೀಜದ ತಿರುಳಿನ ಸಾರದ ದ್ರಾವಣದ ತಯಾರಿಗೆ: ಚೆನ್ನಾಗಿ ಒಣಗಿದ ಬೇವಿನ ಬೀಜದ ತಿರುಳು: 5 ಕಿ.ಗ್ರಾಂ. ನೀರು (ಸಾಧಾರಣ ಉತ್ತಮ ಗುಣಮಟ್ಟದ): 100 ಲೀಟರ್ ಮಾರ್ಜಕ : 200 ಗ್ರಾಂ ಶೋಧಿಸಲು ಬೇಕಾದ ಮಸ್ಲಿನ್ ಬಟ್ಟೆ ವಿಧಾನ ಅಗತ್ಯ ಪ್ರಮಾಣದ ಬೇವಿನ ಬೀಜದ ತಿರುಳನ್ನು ತೆಗೆದುಕೊಳ್ಳಿ (5 ಕಿ.ಗ್ರಾಂ.). ಅದನ್ನು ಪುಡಿ ಮಾಡಲು ನಯವಾಗಿ ತಿರುವಿ ಅದನ್ನು ಹಿಂದಿನ ರಾತ್ರಿಯೇ ಹತ್ತು ಲೀಟರ್ ನೀರಿನಲ್ಲಿ ನೆನೆಸಿಟ್ಟಿರಿ ಮರುದಿನ ಬೆಳಗ್ಗೆ ದ್ರಾವಣವು ಬಿಳಿ ಬಣ್ಣ ಪಡೆಯುವ ವರೆಗೆ ಮರದ ಕೋಲಿನ ಸಹಾಯದಿಂದ ಚೆನ್ನಾಗಿ ಕಲಕಿ. ಎರಡು ಪದರ ಮಸ್ಲಿನ್ ಬಟ್ಟೆಯಲ್ಲಿ ದ್ರಾವಣವನ್ನು ಶೋಧಿಸಿ ನೂರು ಲೀಟರ್ ಆಗುವವರೆಗೆ ನೀರು ಸೇರಿಸಿ. 1% ಮಾರ್ಜಕವನ್ನು ಸೇರಿಸಿ ( ಮಾರ್ಜಕದ ಲೇಪ ತಯಾರಿಸಿ ಸಿಂಪಡಣಾ ದ್ರಾವಣದಲ್ಲಿ ಮಿಶ್ರ ಮಾಡಿ) ಸಿಂಪಡನಾ ದ್ರಾವಣವನ್ನು ಚೆನ್ನಾಗಿ ಮಿಶ್ರ ಮಾಡಿ ಬಳಸಿ ಗಮನಿಸಿ ಹಣ್ಣಾಗುವ ಸಮಯದಲ್ಲಿ ಬೇವಿನ ಹಣ್ಣುಗಳನ್ನು ಸಂಗ್ರಹಿಸಿ ನೆರಳಿನಲ್ಲಿ ಒಣಗಿಸಿಟ್ಟುಕೊಳ್ಳಿ. ಎಂಟು ತಿಂಗಳಿಗಿಂತ ಹೆಚ್ಚು ಇಟ್ಟ ಹಣ್ಣನ್ನು ಬಳಸಬೇಡಿ. ಅವುಗಳು ತಮ್ಮ ಸತ್ತ್ವವನ್ನು ಕಳೆದುಕೊಂಡಿರುತ್ತವೆ. ಜೊತೆಗೆ ಅವುಗಳು ಸಿಂಪಡನೆಯಲ್ಲಿ ಪರಿಣಾಮಕಾರಿಯಾಗಿರಲು ಸಾಧ್ಯವಾಗುವುದಿಲ್ಲ. ಯಾವತ್ತೂ ಹೊಸತಾಗಿ ತಯಾರಿಸಿದ, ತಾಜಾ ಬೇವಿನ ಬೀಜದ ತಿರುಳಿನ ಸಾರವನ್ನೇ ಬಳಸಿ. ಪರಿಣಾಮಕಾರಿ ಫಲಿತಾಂಶ ಪಡೆಯಲು ಸಾಯಂಕಾಲ 3.30ರ ನಂತರವೇ ಸಿಂಪಡನೆ ಮಾಡಿ. ಮೂಲ: ಪೋರ್ಟಲ್ ತಂಡ