অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೇಸಾಯ ತತ್ವಗಳು

ಬೇಸಾಯ ಶಾಸ್ತ್ರ ಪರಿಚಯ ಅರ್ಥ ಮತ್ತು ವ್ಯಾಪ್ತಿ  : ಬೆಳೆ ಉತ್ಪಾದನೆ ಮೇಲೆ ಪ್ರಭಾವ ಬೀರುವ ಅಂಶಗಳು.

ವಿಜ್ಞಾನಿ ಡಾ: ನಾರ್‍ಮ್ಯಾನ್ ಪ್ರಕಾರ : ಬೇಸಾಯ ಶಾಸ್ತ್ರ ಎಂದರೆ ಬೆಳೆಯುವ ವಾತಾವರಣ ಸಂಕೀರ್ಣವನ್ನು ಮಾರ್ಪಾಡು ಮಾಡಿ ಬೆಳೆ ಉತ್ಪಾದನೆ ಮಾಡುವ ಪ್ರಕ್ರಿಯೆಯನ್ನು  ಅರ್ಥೈಸಿಕೊಳ್ಳುವ  ವಿಜ್ಞಾನದ ವಿಭಾಗಕ್ಕೆ ಬೇಸಾಯ ಶಾಸ್ತ್ರ ಎನ್ನುವರು.

`ಬೇಸಾಯ ಶಾಸ್ತ್ರ` ಎಂಬ ಪದವನ್ನು `ಲ್ಯಾಟೀನ್` ಭಾಷೆಯಿಂದ ಆರಿಸಿಕೊಳ್ಳಲಾಗಿದೆ. `ಏಜರ್` ಎಂದರೆ ಮಣ್ಣು `ಕಲ್ಚರ್` ಎಂದರೆ `ಸಾಗುವಳಿ`. `ಕೃಷಿ` ಎಂಬ ಪದವು ಗ್ರೀಕ್ ಮೂಲ ಶಬ್ದವಾಗಿದ್ದು, `ಅಗರೋಸ್` ಎಂದರೆ `ಜಮೀನು` ಮತ್ತು `ಕಲ್ಚರ್` ಎಂದರೆ `ಸಾಗುವಳಿ` ಎಂಬ ಅರ್ಥ ಕೊಡುತ್ತದೆ.

`ಬೇಸಾಯ ಶಾಸ್ತ್ರ`

ವ್ಯಾಪ್ತಿ : ಬೇಸಾಯ ಶಾಸ್ತ್ರವು ಕ್ರಿಯಾತ್ಮಕ ವಿಷಯವಾಗಿದ್ದು ಜ್ಞಾನದಲ್ಲಿ ಪ್ರಗತಿ ಹೊಂದಿದಂತೆ ಹಾಗೂ ಬೆಳೆ ಮತ್ತು ವಾತಾವರಣವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಂತೆ, ಹೆಚ್ಚು ಉತ್ಪಾದನೆಯನ್ನು  ಪಡೆಯುವಲ್ಲಿ ಕೃಷಿ  ಉತ್ಪಾದನೆಗಳನ್ನು  ಬದಲಾಯಿಸುತ್ತದೆ.

ಬೆಳೆ ಉತ್ಪಾದನೆ ಮೇಲೆ ಪ್ರಭಾವ ಬೀರುವ ಅಂಶಗಳು

ಕೃಷಿ ಮತ್ತು ಹವಾಮಾನ

ಬಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಶೇ. 60 (85 ಮಿ.ಹೆ.) ರಷ್ಟು ಭಾಗ ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿದೆ. ಹವಾಮಾನ ಬದಲಾವಣೆಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಳೆಯ ಅನಿಶ್ಚಿತತೆಯಿಂದಾಗಿ ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾದ ಮಳೆ ನೀರಿನ ಸಮರ್ಥ ಬಳಕೆ, ಬೆಳೆ ಪದ್ಧತಿ ಹಾಗೂ ಉತ್ಪಾದನಾ ತಾಂತ್ರಿಕತೆಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹೊಸ ಆವಿಷ್ಕಾರಗಳು, ವಿವಿಧ ತಳಿಗಳು, ಅಧಿಕ ಇಳುವರಿಗಾಗಿ ಸುಧಾರಿತ ಬೇಸಾಯ ಕ್ರಮಗಳು ಅಥವಾ ಯಾವುದೇ ತರಹದ ಬೆಳೆ ಮತ್ತು ಮಣ್ಣಿಗೆ ಸೂಕ್ತವಾದ ತಂತ್ರಜ್ಞಾನ ವಾತಾವರಣಕ್ಕೆ ಹೊಂದಿಕೊಂಡಲ್ಲಿ ಮಾತ್ರ ಉತ್ಪಾದನೆ ಹೆಚ್ಚಿಸಲು ಸಾಧ್ಯ.

ಕೃಷಿಯ ಮೇಲೆ ಪರಿಣಾವi ಬೀರುವ ವಾತಾವರಣದ ಅಂಶಗಳು

  1. ಮಳೆ
  2. ಸೂರ್ಯನ ಬಿಸಿಲು
  3. ವಾತಾವರಣದಲ್ಲಿನ ಉಷ್ಣಾಂಶ ಮತ್ತು ತೇವಾಂಶ
  4. ಗಾಳಿಯ ವೇಗ ಮತ್ತು ದಿಕ್ಕು
  5. ಮಣ್ಣಿನ ತೇವಾಂಶ ಮತ್ತು ಉಷ್ಣಾಂಶ

ಕರ್ನಾಟಕ ರಾಜ್ಯದಲ್ಲಿ 16 ವರ್ಷಗಳಿಗೊಮ್ಮೆ ಮಳೆಯ ಪುನರಾವರ್ತನೆಯ ಚಕ್ರ ಕಂಡುಬರುತ್ತದೆ. ಮೊದಲ 8 ವರ್ಷ ವಾಸ್ತವ ಮಳೆಯ ಪ್ರಮಾಣಕ್ಕಿಂತ ಮಳೆಯ ಏರಿಕೆ, ನಂತರ ಮಳೆಯ ಇಳಿಮುಖ ಕಂಡುಬಂದಿರುತ್ತದೆ. ಕರ್ನಾಟಕ ರಾಜ್ಯದ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 1148.1 ಮಿ.ಮೀ. ಇದ್ದು ಕರ್ನಾಟಕದ 10 ಕೃಷಿ ವಲಯದಲ್ಲಿ ಈ ಮಳೆಯ ಪ್ರಮಾಣ ಬೇರೆಬೇರೆಯಾಗಿರುತ್ತದೆ.

ಬೇಸಿಗೆ ಹಾಗೂ ಚಳಿಗಾಲ ಮಳೆಯ ಗುಣಲಕ್ಷಣಗಳು

  1. ಜನವರಿ ಮೊದಲನೇ ವಾರ ಪ್ರಾರಂಭವಾಗಿ ಮೇ ಅಂತ್ಯದವರೆಗೆ ಇರುತ್ತದೆ.
  2. ಈ ಅವಧಿಯಲ್ಲಿ ರಾಜ್ಯದ ವಾರ್ಷಿಕ ಮಳೆಯ ಶೇ. 10.7 ಭಾಗ (143 ಮಿ.ಮೀ.) ಮಳೆ ಬರುತ್ತದೆ.
  3. ಸ್ಥಳೀಯ ತಾಪಮಾನದಿಂದ ಬದಲಾವಣೆಗಳು ಕಂಡು ಬರುತ್ತವೆ. ಹೆಚ್ಚು ಉಷ್ಣಾಂಶದಿಂದ ಒತ್ತಡ ಕಡಿಮೆಯಾಗಿ ಸುತ್ತಲಿನ ಮೋಡಗಳು ಒಗ್ಗೂಡುತ್ತವೆ.
  4. ಮೋಡಗಳು 15 ಕಿ.ಮೀ. ಎತ್ತದವರೆಗೆ ಇರುತ್ತವೆ.
  5. ಚಳಿಗಾಲವು ಜನವರಿ ಮತ್ತು ಫಬ್ರವರಿ ತಿಂಗಲುಗಳಲ್ಲಿ ಇದ್ದು, ಈ ಅವಧಿಯಲ್ಲಿ ಅತ್ಯಂತ ಕಡಿಮೆ ಉಷ್ಣಾಂಶವಿರುತ್ತದೆ. ಹಾಗೂ ಮಳೆ ಅಲ್ಪ ಪ್ರಮಾಣದಲ್ಲಿ ಬೀಳುತ್ತದೆ. ಮಾರ್ಚಿನಿಂದ ಮೇ ಅಂತ್ಯದವರೆಗೆ, ಗುಡುಗು ಸಿಡಿಲಿನಿಂದ ಕೂಡಿದ ಮಳೆ ಬರುತ್ತದೆ.
  6. ಈ ಮಳೆ ಭೂಮಿ ಸಿದ್ಧತೆಗೆ ಸಹಾಯಕವಾಗುತ್ತದೆ.

 

ಮುಂಗಾರು ಮಳೆಯ ಗುಣಲಕ್ಷಣಗಳು (ನೈರುತ್ಯ ಮಾರುತ)

  1. ಜೂನ್ ಮೊದಲನೇ ವಾರ ಪ್ರಾರಂಭವಾಗಿ ಅಕ್ಟೋಬರ್ ಮೊದಲನೇ ವಾರದವರೆಗೆ ಇರುತ್ತದೆ. ಈ ಅವಧಿಯಲ್ಲಿ ರಾಜ್ಯದ ವಾರ್ಷಿಕ ಮಳೆಯ ಶೇ. 73.6 ಭಾಗ (896 ಮಿ.ಮೀ.) ಮಳೆ ಬರುತ್ತದೆ.
  2. ಹಿಂದೂಮಹಾಸಾಗುದ ಕಡೆಯಂದ ಮೋಡಗಳು ಮಳೆಯನ್ನು ತರುತ್ತದೆ. ಆರಂಭದಲ್ಲಿ ಹೆಚ್ಚದ್ದು ನಂತರ  ಕಡಿಮೆಯಾಗಿ ಕೊನೆಯ ಹಂತದಲ್ಲಿ ಮತ್ತೆ ಹೆಚ್ಚಾಗುತ್ತದೆ.
  3. ಈ ಮೋಡಗಳು ನೈರುತ್ಯ ದಿಕ್ಕಿನಿಂದ ಬೀಸುತ್ತವೆ. ಹಾಗೂ ಹಾಗೂ 1 ರಿಂದ 6 ಕಿ.ಮೀ. ಎತ್ತರದವರೆಗೆ ಇರುತ್ತದೆ.
  4. ಈ ಮಳೆಯಿಂದ ಬೆಳೆಗೆ ಬಿತ್ತೆಯಿಂದ ಕಟಾವಿನ ತನಕ ಅನುಕೂವಾಗುತ್ತದೆ.

ಹಿಂಗಾರು ಮಳೆ ಗುಣಲಕ್ಷಣಗಳು

  1. ಅಕ್ಟೋಬರ್ ಎರಡನೇ ವಾರದಿಂದ ಪ್ರಾರಂಭವಾಗಿ ಡಿಸೆಂಬರ್ ಅಂತ್ಯದವರೆಗೆ ಇರುತ್ತದೆ.
  2. ಈ ಅವಧಿಯಲ್ಲಿ ರಾಜ್ಯದ ವಾರ್ಷಿಕ ಮಳೆಯ ಶೇ. 15.7 ಭಾಗ (190 ಮಿ.ಮೀ. ) ಮಳೆ ಬರುತ್ತದೆ.
  3. ಈಶನ್ಯ ಭಾರತದಿಂದ ಗಾಳಿ ಬೀಸುತ್ತದೆ. ಕೆಲವೊಮ್ಮೆ ಬಂಗಾಳ ಕೊಲ್ಲಿಯಿಂದ ಚಂಡ ಮಾರುತದಿಂದ ಕೂಡಿದ ಮಳೆಯನ್ನು ತರುತ್ತದೆ.
  4. ಮೋಡಗಲು ಈಶಾನ್ಯ ದಿಕ್ಕಿನ ಭೂಪ್ರದೇಶದಿಂದ ಸಮುದ್ರದ ಕಡೆಗೆ ಬೀಸಿ ಚಂಡಮಾರುತದಿಂದ ಮಳೇಯನ್ನು ತರುತ್ತವೆ.
  5. ರಾಜ್ಯ ಈಶಾನ್ಯ ಜಿಲ್ಲೆಗಳಿಗೆ ಈ ಮಳೆ ಅನುಕೂಲ.
  6. ಕೆಲವು ಜಿಲ್ಲೆಗಳಲ್ಲಿ ಹಿಂಗಾರು ಬೆಳೆಗೂ ಅನುಕೂಲ.

 

ಕೃಷಿ ಹವಾಮಾನ ಸಲಹಾ ವರದಿಯಿಂದಾಗುವ ಪ್ರಯೋಜನೆಗಳು

  1. ಮಳೆಯನ್ನಾಧರಿಸಿ ಕೃಷಿ ಕೆಲಸಗಳನ್ನು ಕಾಲಕ್ಕೆ ತಕ್ಕಂತೆ ಪ್ರಾರಂಭಿಸಲು ಸಲಹೆ.
  2. ತೇವಾಂಶದ ಆಧಾರದ ಮೇಲೆ ಬೆಳೆ ನಿರ್ಧರಿಸಲು ಸಲಹೆ.
  3. ಬೇಸಾಯದ ನಡುವೆ ಒಣ ಹವೆ ಮುಂದುವರೆದರೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸಲಹೆ.
  4. ಗೊಬ್ಬರ ಹಾಗೂ ಕ್ರಿಮಿನಾಶಕಗಳ ಸಿಂಪರಣೆಗೆ ಸೂಕ್ತ ದಿನ ಹಾಗೂ ಸಮಯದ ಸಲಹೆ.
  5. ಕೊಯಿಲು ಮತ್ತು ಸಂಸ್ಕರಣೆಯ ಅವಧಿಯಲ್ಲಿ ಬೆಳೆಗಳಿಗೆ ಮಳೆಯಿಂದಾಗು ಹಾನಿಯನ್ನು ತಡೆಯಲು ಸಲಹೆ.
  6. ವೆಚ್ಚ ಮಾಡುವ ಹಣ ಹವಾಮಾನದ ಪೈಪರಿತ್ಯದಿಂದ ಉಪಯೋಗವಾಗುಂದತೆ ಸಲಹೆ.

ರೋಗ ಮತ್ತು ಕೀಟಗಳ ಮೇಲೆ ಹವಾಮಾನದ ಪ್ರಭಾವ

ತೊಗರಿ : ತೊಗರಿ ಬೆಳೆಯಲ್ಲಿ ಹೂ ಮತ್ತು ಕಾಯಿ ಬಿಡುವ ಹಂತದಲ್ಲಿ ಸತತ ಒಂದು ಅಥವಾ ಎರಡು ವಾರ ಕಡಿಮೆ ಇಸಿಲು ಹಾಗೂ ಗಾಳಿಯಲ್ಲಿನ ಹೆಚ್ಚು ತೇವಾಂಶದಿಂದ ಕೀಟದ ( ಕಾಂಡ ಕೊರೆಯುವ ಹಾಗೂ ಕಾಯಿಕೊರಕ ಹುಳುವಿ) ತೀಕ್ಷ್ಣತೆ ಹೆಚ್ಚಾಗುತ್ತದೆ.

ರಾಗಿ : ರಾಗಿ ಬೆಳೆಯಲ್ಲಿ ತೆನೆ ಹಾಗೂ ಕಾಳುಕಟ್ಟವ ಹಂತದಲ್ಲಿ ಸತತ ಒಂದು ಅಥವಾ ಎರಡು ವಾರ ಮೋಡಕವಿದ ವಾತಾವರಣ ಹೆಚ್ಚಿದ್ದು ಗಾಳಿಯಲ್ಲಿ ತೇವಾಂಶ ಹೆಚ್ಚಾದಾಗ ಇಲಕು ರೋಗ ಹರಡುವ ಸಂಭವ ಹೆಚ್ಚು.

ನೆಲಗಡಲೆ : ನೆಲಗಡಲೆ ಬಿತ್ತನೆ ಮಾಡಿದ 6 ರಿಂದ 8 ನೇ ವಾರದಲ್ಲಿ, (ತಡವಾಗಿ ಬಿತ್ತಿದ ಬೆಳೆಯಲ್ಲಿ ) ಉಷ್ಣಾಂಶ ಏರಿಳಿತ ಮತ್ತು ಕಡಿಮೆ ಬಿಸಿಲಿನ ಅವಧಿಯಿಂದ ಎಲೆ ಚುಕ್ಕೆ ರೋಗ ಹರಡುವಿಕೆ ಸಂಭವ ಹೆಚ್ಚು. ಹಾಗೂ ಕಾಳು ಪಕ್ವ ಹಂತದಲ್ಲಿ ಮಣ್ಣಿನ ತೇವಾಂಶ ಕೊರತೆಯಿದ್ದಲ್ಲಿ ಕಾಂಡ ಸುಳಿಕೊಳೆರೋಗ ಮತ್ತು ಡೊರೈಲಸ್ ಇರುವೆಯಿಂದ ಕಾಯಿಗೆ ಹಾನಿಹೆಚ್ಚು..

ಮೂಲ :

ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 2/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate