ಕೊನೆ ಪಕ್ಷ ಬೆಳೆಗಳ ಬೆಳವಣಿಗೆಯ ಪ್ರಾರಂಭಿಕ ಹಂತದೊಲ್ಲಿ ಕಳೆಗಳ ಪೈಪೋಟಿಯನ್ನು ಕಮ್ಮಿ ಮಾಡಿದರೆ ನಂತರ ಬರುವ ಕಳೆಗಳನ್ನು ಆ ಬೆಳೆಯು ತಾನೆ ಹಿಮ್ಮೆಟ್ಟಿಸುತ್ತದೆ. ಈ ತತ್ವದ ಆಧಾರದ ಮೇಲೆ ವಿವಿಧ ಬೆಳೆಗಳಲ್ಲಿ ಯಾವ ಸಮಯದೊಳಗೆ ಕಳೆಗಳನ್ನು ನಿಯಂತ್ರಿಸಬೇಕು ಎಂಬುದನ್ನು ಕಂಡು ಹಿಡಿದಿದ್ದಾರೆ. ಈ ನಿರ್ಣಾಯಕ ಅವಧಿಯಲ್ಲಿ ಕಳೆ ನಿಯಂತ್ರಣ ಮಾಡದಿದ್ದರೆ ಇಳುವರಿಯಲ್ಲಿ ಗಣನೀಯವಾಗಿ ನಷ್ಟವಾಗುತ್ತದೆ. ಈ ಮಾಹಿತಿಯನ್ನು ಈ ಕೆಳಕಂಡ ಪಟ್ಟಿಯಲ್ಲಿ ಕೊಡಲಾಗಿದೆ. ಈ ಪಟ್ಟಿಯಲ್ಲಿ ತಿಳಿಸಿರುವಂತೆ ಕಳೆನಿಯಂತ್ರಣವನ್ನು ಬೆಳೆಗಳನ್ನು ಬಿತ್ತಿದ 15-40 ದಿವಸದೊಳಗೆ ನಿಯಂತ್ರಿಸುವುದು ಒಂದು ಒಳ್ಳೆಯ ಪದ್ಧತಿ. ಇಲ್ಲಾವಾದಲ್ಲಿ ಇಳುವರಿಯು ಕಮ್ಮಿಯಾಗುತ್ತದೆ.
ಕ್ರ.ಸಂ |
ಬೆಳೆಗಳು |
ನಿರ್ಣಾಯಕ ಅವಧಿ (ಬಿತ್ತಿದ ನಂತರ ದಿನಗಳಲ್ಲಿ) |
1 |
ಪುಣಜಿ ಭತ್ತ |
15-45 |
2 |
ನಾಟಿ ಭತ್ತ |
30-45 |
3 |
ಮುಸುಕಿನ ಜೋಳ |
15-45 |
4 |
ತೊಗರಿ |
15-60 |
5 |
ನೆಲಗಡಲೆ |
40-60 |
6 |
ಸೂರ್ಯಕಾಂತಿ |
30-45 |
7 |
ಆಲೂಗಡ್ಡೆ |
20-40 |
8 |
ಹತ್ತಿ |
15-60 |
9 |
ಹೂ ಕೋಸು |
30-45 |
10 |
ಎಲೆ ಕೋಸು |
30-45 |
11 |
ಟೊಮ್ಯಾಟೊ |
30-45 |
12 |
ಈರುಳ್ಳಿ |
30-45 |
ಪಾರ್ಥೇನಿಯಂ ಕಳೆಯು ಅಚ್ಚುಕಟ್ಟು ಪ್ರದೇಶದಲ್ಲಿ ಬಹುಬೇಗ ಹರಡುವುದರಿಂದ ಅವುಗಳು ಕಂಡ ತಕ್ಷಣವೇ ನಾಶಮಾಡಲು ಕ್ರಮ ತೆಗೆದುಕೊಳ್ಳಬೇಕು. ಈ ಕಾರ್ಯವನ್ನು ಆಗಾಗ ಮಾಡುತ್ತಲೇ ಇರಬೇಕಾಗುತ್ತದೆ.
ಮೂಲ :ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 2/15/2020