ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಬೆಳೆ ದೃಢೀಕರಣ ಪ್ರಮಾಣ ಪತ್ರ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬೆಳೆ ದೃಢೀಕರಣ ಪ್ರಮಾಣ ಪತ್ರ

ಬೆಳೆ ದೃಢೀಕರಣ ಪ್ರಮಾಣ ಪತ್ರದ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ

ಬೆಳೆ ಧೃಡೀಕರಣ ಪ್ರಮಾಣ ಪತ್ರ ತಂತ್ರಾಂಶ ಬಗ್ಗೆ

ಈ ತಂತ್ರಾಂಶವು ವೆಬ್ ಆಧಾರಿತ ತಂತ್ರಾಂಶವಾಗಿದ್ದು, ಕೆಳಗೆ ತಿಳಿಸಿರುವ ವೆಬ್ ವಿಳಾಸದ (ಯು ಅರ್ ಎಲ್) ಮುಖಾಂತರ ತಂತ್ರಾಂಶವನ್ನು ತೆರೆಯಬಹುದಾಗಿದೆ.

ವೆಬ್ ವಿಳಾಸದ (ಯು ಆರ್ ಎಲ್): ಲ್ಯಾಂಡ್ ರೆಕಾರ್ಡ್ಸ್.ಕರ್ನಾಟಕ

ತಂತ್ರಾಂಶದ ಬಳಕೆದಾರರು

  • ನಾಡಕಚೇರಿ ಆಪರೇಟರ್
  • ಉಪ ತಹಸೀಲ್ದಾರ್

ಬೆಳೆ ಧೃಡೀಕರಣ ಪತ್ರವನ್ನು ಸೃಷ್ಟಿಸುವ ಬಗ್ಗೆ

ಮೇಲೆ ತಿಳಿಸಿರುವ ವೆಬ್ ವಿಳಾಸದ ಮುಖಾಂತರ ಆಪರೇಟರನ್ನು ತನ್ನ  ಲಾಗಿನ್ ಬಳಸಿ ತಂತ್ರಾಂಶಕ್ಕೆ ಪ್ರವೇಶ ಮಾಡಿ ಅರ್ಜಿದಾರರಿಂದ ವಿನಂತಿಯನ್ನು ಸ್ವೀಕರಿಸಿ, ಅರ್ಜಿದಾರರಿಗೆ ಸ್ವೀಕೃತಿಯನ್ನು ನೀಡಬೇಕು. ಹಾಗು ವರದಿಯನ್ನು ಮುದ್ರಣ  ಮಾಡಿ ಸಂಬಂಧಪಟ್ಟ ಗ್ರಾಮಲೆಕ್ಕಧಿಕಾರಿಗೆ ಕಳುಹಿಸಬೇಕು.

ನಂತರ ಗ್ರಾಮಲೆಕ್ಕಾಧಿಕಾರಿಯು ಸ್ಥಳ ತನಿಖೆ ಮಾಡಿ ವರದಿಯಲ್ಲಿರುವ ಬೆಳೆಯನ್ನೇ ಬೆಳೆಯಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬೇರೆ ಬೆಳೆಯನ್ನು ಬೆಳೆದಿದ್ದರೆ ವರದಿಯಲ್ಲಿರುವ ಬೆಳೆಯನ್ನು ತಿದ್ದುಪಡಿ ಮಾಡಿ ವಾಸ್ತವಿಕ ಬೆಳೆಯನ್ನು ನಮೂದಿಸಬೇಕು. ಜೊತೆಗೆ ಸಾಗುವಳಿ ಪದ್ಧತಿ , ಭೂಮಿಯ ವರ್ಗ ಹಾಗೂ ವಿಸ್ತೀರ್ಣವನ್ನು ನಮೂದಿಸಿ ವರದಿಯ ಮೇಲೆ ಗ್ರಾಮಲೆಕ್ಕಧಿಕಾರಿಯು ಸಹಿಯನ್ನು ಮಾಡಿ ನಾಡಕಚೇರಿಯ ಉಪತಹಸಿಲ್ದಾರರಿಗೆ ಹಿಂತಿರುಗಿಸಬೇಕು.

ಉಪತಹಸಿಲ್ದಾರರು ತಂತ್ರಾಂಶವನ್ನು ತೆರೆದು ತಮ್ಮ ಲಾಗಿನ್ ಮುಖಾಂತರ ಪ್ರವೇಶ ಮಾಡಿ ಸಂಬಂಧಪಟ್ಟ ವಿನಂತಿಯನ್ನು ಆಯ್ಕೆ ಮಾಡಿ ಅನುಮೋದಿಸಬೇಕು. ಅನುಮೋದಿಸುವ ಮೊದಲು ಗ್ರಾಮಲೆಕ್ಕಧಿಕಾರಿಯು ನೀಡಿರುವ ವರದಿಯನ್ನು ಪರಿಶೀಲನೆ ಮಾಡಿ ಬೆಳೆ ಬದಲಾವಣೆ ಇದ್ದರೆ, ಈಗಾಗಲೇ ಆಪರೇಟರನ್ನು ನಮೂದಿಸಿರುವ ಬೆಳೆಯನ್ನು ಬದಲಿಸಬೇಕು. ಗ್ರಾಮಲೆಕ್ಕಧಿಕಾರಿಯು ನೀಡಿರುವ ವರದಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ಬೆಳೆಯನ್ನು ಬದಲಿಸುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಗ್ರಾಮಲೆಕಾಧಿಕಾರಿಯು ಬರೆದಿರುವ ಸಾಗುವಳಿ ಪದ್ಧತಿ, ಭೂಮಿಯ ವರ್ಗ ಹಾಗೂ ವಿಸ್ತೀರ್ಣವನ್ನು  ನಮೂದಿಸಿ ವರದಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ವಿನಂತಿಯನ್ನು ಅನುಮೋದಿಸಬೇಕು.

ಉಪತಹಸಿಲ್ದಾರರು ವಿನಂತಿಯನ್ನು ಅನುಮೋದಿಸಿದ ನಂತರ ಪ್ರಮಾಣಪತ್ರವು ಸೃಜನೆಯಾಗಿ ಆಪರೇಟರ್ ಲಾಗಿನ್ ಗೆ ಚಲಿಸುತ್ತದೆ. ಆಪರೇಟರನ್ನು ತನ್ನ ಲಾಗಿನ್ ಪ್ರವೇಶ ಮಾಡಿ ಅನುಮೋದಿಸಿದ ಬೆಳೆ ಧೃಡೀಕರಣ ಪ್ರಮಾಣ ಪತ್ರವನ್ನು ಆಯ್ಕೆ ಮಾಡಿ ಮುದ್ರಿಸಬಹುದು.

ಹೆಚ್ಚಿನ ಮಾಹಿತಿಗಾಗಿ: ಬೆಳೆ ದೃಢೀಕರಣ ಪ್ರಮಾಣ ಪತ್ರ

ಮೂಲ :ಲ್ಯಾಂಡ್ ರೆಕಾರ್ಡ್ಸ್.ಕರ್ನಾಟಕ

3.07142857143
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top