ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ಭತ್ತದ ಬೆಳೆಗೆ ರೋಗ ಹಾಗೂ ಕೀಟಬಾಧೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ವಿಜ್ಞಾನಿಗಳ ತಂಡ ಯಳಂದೂರು ತಾಲೂಕಿನ ಅಗರ, ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಿದ್ದಯ್ಯನಪುರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ.
ಭತ್ತದ ಬೆಳೆಗೆ ಬೆಂಕಿರೋಗ, ಕಂದು ಜಿಗಿ ಹುಳುವಿನ ಬಾಧೆ ಕಂಡುಬಂದಿದ್ದು ರೈತರು ಕೂಡಲೇ ರೋಗ ಹತೋಟಿ ಕ್ರಮ ಕೈಗೊಳ್ಳಲು ಸೂಚಿಸಿ ರೋಗದ ಲಕ್ಷಣ ಮತ್ತು ಹತೋಟಿ ಕ್ರಮಗಳ ವಿವರವನ್ನು ತಿಳಿಸಿದ್ದಾರೆ.
ಭತ್ತದ ಗರಿಗಳ ಮೇಲೆ ವಜ್ರದಾಕಾರದ ಕಂದು ಚುಕ್ಕೆಗಳು ಉಂಟಾಗಿ ಚುಕ್ಕೆಗಳ ಮಧ್ಯ ಭಾಗವು ಬೂದಿ ಬಣ್ಣ ಹೊಂದಿರುತ್ತದೆ. ತೆನೆಗಳ ಕುತ್ತಿಗೆಯ ಮೇಲೆ ಕಪ್ಪು ಮಚ್ಚೆ ಇದ್ದು ಕಾಳು ಜೊಳ್ಳಾಗುವುದು ಬೆಂಕಿರೋಗದ ಲಕ್ಷಣಗಳಾಗಿವೆ.
ಬೆಂಕಿ ರೋಗ ಕಂಡುಬಂದಲ್ಲಿ ನಾಟಿ ಮಾಡಿದ 2೦ ರಿಂದ 25 ದಿನಗಳ ನಂತರ ರೋಗ ಶೇ. 5ಕ್ಕಿಂತ ಹೆಚ್ಚು ಇದ್ದಲ್ಲಿ ಕಾರ್ಬೆಂಡಜಿಮ್ ಶಿಲೀಂದ್ರ ನಾಶಕವನ್ನು 1 ಲೀ. ನೀರಿಗೆ 1 ಗ್ರಾಂ.ನಂತೆ 15೦ ಲೀ. ದ್ರಾವಣವನ್ನು 1 ಎಕರೆಗೆ ಸಿಂಪಡಿಸಬೇಕು. 4೦ ರಿಂದ 45 ದಿನದ ಬೆಳೆಗೆ ರೋಗ ಬಾಧೆ ಕಂಡುಬಂದಲ್ಲಿ ಟ್ರೈಸೈಕ್ಲಜೋಲ್ ಶಿಲೀಂದ್ರ ನಾಶಕವನ್ನು 1೦ ಲೀ. ನೀರಿಗೆ 6ಗ್ರಾಂ. ನಂತೆ ಮಿಶ್ರಣ ಮಾಡಿದ 15೦ ಲೀ. ದ್ರಾವಣವನ್ನು 1 ಎಕರೆಗೆ ಸಿಂಪಡಿಸಬೇಕು. ಮೇಲುಗೊಬ್ಬರವಾಗಿ ಕೊಡುವ ಯೂರಿಯಾ ರಸಗೊಬ್ಬರನ್ನು ಮುಂದೂಡಬೇಕು.
ಕಂದು ಜಿಗಿ ಹುಳು ಬಾಧೆಯು ಗರಿಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ನಂತರ ತೆಂಡೆಗಳು ಸುಟ್ಟಂತೆ ಕಾಣುತ್ತದೆ. ಕಂದು ಜಿಗಿ ಹುಳು ಹತೋಟಿಗೆ 5೦ ಮಿ.ಲೀ. ಇಮಿಡಾಕ್ಲೊಪಿಡ್ ಅಥವಾ 2 ಮಿ.ಲೀ. ಮಾನೋಕ್ರೋಟೋಫಾಸ್ ಅಥವಾ ಥಯೋಮೆಥಾಕ್ಯಾಮ್ 2 ಗ್ರಾಂ ಕೀಟನಾಶಕವನ್ನು 1 ಲೀ. ನೀರಿಗೆ ಮಿಶ್ರಣ ಮಾಡಿ 1 ಎಕರೆಗೆ 15೦ ರಿಂದ 2೦೦ ಲೀಟರ್ ದ್ರಾವಣವನ್ನು ಭತ್ತದೆ ತೆಂಡೆಗಳ ಬುಡಭಾಗಕ್ಕೆ ಸಿಂಪಡಿಸಬೇಕು.
ಮೂಲ : ಬ್ಯಾಂಗಲೋರ್ ವೇವ್ಸ್
ಕೊನೆಯ ಮಾರ್ಪಾಟು : 7/25/2020
ರಾಷ್ಟ್ರೀಯ ವ್ಯವಸಾಯ ವಿಮಾ ಯೋಜನೆ ರಾಷ್ಟ್ರೀಯ ಕೃಷಿ ವಿ ಮಾ ...
ಬೆಳೆಗಳಲ್ಲಿ ರೋಗ ನಿರ್ವಹಣೆ ಅವಶ್ಯ
ಬೆಳೆ ಪ್ರಾತ್ಯಕ್ಷಿಕೆಗೆ ತಾಕುಗಳ ಆಯ್ಕೆ ಇದರ ಬಗ್ಗೆ
ಬೆಳೆ ನಾಶಪಡಿಸುವ ವನ್ಯಮೃಗಗಳ ನಿಗ್ರಹಕ್ಕೆ ರೈತನ ತಂತ್ರಗಳು