অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಜೊಲ್ಲಾ

ಜಾನುವಾರುಗಳಿಗೆ ಪೌಷ್ಟಿಕ ಆಹಾರ: ಅಜೊಲ್ಲಾ

ಅಜೊಲ್ಲ ಬಗ್ಗೆ

  • ಅಜೊಲ್ಲಾ ನೀರಿನಲ್ಲಿ ತೇಲಾಡುವ ರೆಕ್ಕೋಪಾದಿಯ ಎಲೆಗಳುಳ್ಳ ಒಂದು ಸಸ್ಯ ಪ್ರಬೇಧ. ಇದು ಪಾಚಿಯನ್ನು ಹೋಲುತ್ತದೆ.
  • ಸಾಮಾನ್ಯವಾಗಿ ಇದನ್ನು ಭತ್ತದ ಗದ್ದೆಗಳಲ್ಲಿ ಅಥವ ಆಳವಲ್ಲದ ನೀರಿನ ಹೊಂಡಗಳಲ್ಲಿಬೆಳೆಸುತ್ತಾರೆ.
  • ಬಹು ಬೇಗ ಬೆಳೆದು ಪಸರಿಸುತ್ತದೆ

ಅಜೊಲ್ಲಾ- –ಒಳ ನೋಟ

ಮೇವು/ಆಹಾರವಾಗಿ ಅಜೊಲ್ಲಾ

  • ಪ್ರೊಟೀನುಗಳು, ಜೀವನಾವಶ್ಯಕ ಅಮಿನೊ ಆಮ್ಲಗಳು, ಅನ್ನಾಂಗ(ವಿಟಮಿನ್) ಗಳು (ಎ, ಬಿ12, ಬೀಟಾ ಕೆರೋಟಿನ್), ಬೆಳವಣಿಗೆ ಪ್ರಚೋದಿಸುವ ಜೀವಸತ್ವಗಳು, ಲವಣಗಳಾದ ಕ್ಯಾಲ್ಶಿಯಂ, ರಂಜಕ, ಪೊಟ್ಯಾಷ್, ಕಬ್ಬಿಣ, ತಾಮ್ರ ಮತ್ತು ರಂಜಕಗಳಿಂದ ಸಮೃಧ್ಧವಾಗಿದೆ,
  • ಒಣ ಅಜೊಲ್ಲ ಶೇಕಡಾವಾರು 25-35 ರಷ್ಟು ಪ್ರೋಟೀನು, 10-15 ಲವಣಗಳು,7-10 ಅಮಿನೊ ಆಮ್ಲಗಳು, ಜೀವ ಚೈತನ್ಯಕಾರಕಗಳು ಮತ್ತು ಪಾಲಿಮರ್ ಗಳು ಸೇರಿವೆ.
  • ಹೆಚ್ಚಿನ ಪ್ರೋಟಿನು ಮತ್ತು ಕಡಿಮೆ ನಾರಿನಾಂಶದ ಪ್ರಯುಕ್ತ ಜಾನುವಾರುಗಳು ಅಜೊಲ್ಲಾವನ್ನು ಸುಲಭವಾಗಿ ಜೀರ್ಣಿಸಿ ರಕ್ತಗತ ಮಾಡಿಕೊಳ್ಳುತ್ತವೆ.
  • ಅಜೊಲ್ಲವನ್ನು ನೇರವಾಗಿ ಅಥವಾ ಹಿಂಡಿ ( ಸಮತೋಲನ ಪಶು ಆಹಾರ) ಜೊತೆಗೆ ಜಾನುವಾರುಗಳಿಗೆ ನೀಡಬಹುದು.
  • ಕೋಳಿ, ಕುರಿ, ಆಡು, ಹಂದಿ ಮತ್ತು ಮೊಲಗಳಿಗೂ ಅಜೊಲ್ಲವನ್ನು ತಿನ್ನಿಸಬಹುದು.

ಅಜೊಲ್ಲಾ ಉತ್ಪಾದನೆ

  • ಬೆಳೆಸಬೇಕಾದ ಭೂಮಿಯನ್ನು ಹದಗೊಳಿಸಿ ಕಳೆ ತೆಗೆದು ಸಮತಟ್ಟಾಗಿಸಬೇಕು.
  • ಇಟ್ಟಿಗೆಯನ್ನು ಅಡ್ಡವಾಗಿಟ್ಟು ಆಯತಾಕಾರದಲ್ಲಿ ಜೋಡಿಸಿಕೊಳ್ಳಬೇಕು
  • ಯು.ವಿ. ಕಿರಣಗಳಿಂದ ತೀಡಲ್ಪಟ್ಟ 2 ಮೀ x 2 ಮೀ ಅಳತೆಯ ಸಿಲ್ಪಾಲಿನ್ ಹಾಳೆಯನ್ನು ಸಮನಾಗಿ ಇಟ್ಟಿಗೆಗಳು ಹೊದಿಕೆಯಾಗುವಂತೆ ತಗ್ಗಾಗುವಂತೆ ಹಾಸಬೇಕು.
  • 10-15 ಕಿಲೊ ಸೋಸಿದ ಮಣ್ಣನ್ನು ಸಿಲ್ಪಾಲಿನ್ ಹಾಳೆ ಮೇಲೆ ಸಮನಾಗಿ ಹರಡಬೇಕು.
  • 2 ಕಿಲೊ ಹಸುವಿನ ಸಗಣಿ ಯನ್ನು 30 ಗ್ರಾಂ ಸುಪರ್ ಫಾಸ್ಫೇಟ್ ದೊಂದಿಗೆ 10 ಲೀ ನೀರಿನಲ್ಲಿ ಮಿಶ್ರಣ ಮಾಡಿದ ರಾಡಿಯನ್ನು ಹಾಳೆಯ ಮೇಲೆ ಹಾಕಿ. ನಂತರ ಹೆಚ್ಚಿನ ನೀರನ್ನು ಸುರಿದು ನೀರಿನ ಮಟ್ಟ 10 ಸೆಂ.ಮೀ ನಷ್ಟು ಆಗುವಂತೆ ನೋಡಿಕೊಳ್ಳಿ.
  • ಮಣ್ಣು ಹಾಗೂ ನೀರನ್ನುನಿಧಾನವಾಗಿ ಕದಡಿದ ಮೇಲೆ 0.5-1.0ಕಿಲೊ ದಷ್ಟು ಬೀಜಕ್ಕಾಗಿರುವ ತಾಯಿ ಅಜೊಲ್ಲಾ ವನ್ನು ನೀರಿನ ಮೇಲೆ ಹರಡಿ, ಅಜೊಲ್ಲಾ ಸಸಿಗಳನ್ನು ಮೇಲ್ಮುಖವಾಗಿ ನಿಲ್ಲಿಸಲು ಮತ್ತೆ ಸ್ವಲ್ಪನೀರನ್ನು ಸಿಂಪಡಿಸಿರಿ.
  • ಒಂದು ವಾರದೊಳಗಾಗಿ ಅಜೊಲ್ಲಾ ಸಸಿಗಳು ಬಹು ಸಂಖ್ಯೆಯಲ್ಲಿ ಬೆಳೆದು ದಪ್ಪ ಚಾಪೆಯಂತೆ ಇಡೀ ತಗ್ಗಿನಲ್ಲಿ ಹರಡಿಕೊಳ್ಳುತ್ತವೆ.
  • ಅಜೊಲ್ಲಾದ ನಿರೀಕ್ಷಿತ ಬೆಳವಣಿಗೆ ಗತಿ ಕಾಪಾಡಲು ಪ್ರತೀ ವಾರ 20 ಗ್ರಾಮ್ ಸುಪರ್ ಫಾಸ್ಫೇಟ್ ಮತ್ತು 1 ಕಿಲೊ ಹಸುವಿನ ಸೆಗಣಿ ನೀಡುತ್ತಿರಬೇಕು. ಇದರಿಂದ ದಿನಕ್ಕೆ 500 ಗ್ರಾಂ ಇಳುವರಿ ದೊರೆಯುತ್ತದೆ.
  • ಸೂಕ್ಷ್ಮ ಲವಣಗಳಾದ ಮೆಗ್ನೇಶಿಯಂ, ತಾಮ್ರ, ಗಂಧಕ, ಇತ್ಯಾಫ್ದಿಗಳ ಮಿಶ್ರಣವನ್ನು ವಾರದ ಅಂತರದಲ್ಲಿ ನೀಡುವುದರಿಂದ ಅಜೊಲ್ಲಾ ಸಸ್ಯದಲ್ಲಿನ ಲವಣಾಂಶಗಳ ಪ್ರಮಾಣ ಹೆಚ್ಚಿಸಬಹುದು.
  • ಪ್ರತೀ ತಿಂಗಳಿಗೊಮ್ಮೆ 5 ಕಿಲೊದಷ್ಟು ಮಣ್ಣನ್ನು ಹೊಸ ಮಣ್ಣಿನಿ0ದ ಬದಲಾಯಿಸುತ್ತಿರಬೇಕು. ಇದರಿಂದ ಸಾರಜನಕದ ಸಾಂಧ್ರತೆ ಹೆಚ್ಚುವುದನ್ನು ತಡೆಯಬಹುದು ಮತ್ತು ಸೂಕ್ಶ್ಮ ಪೋಷಕಾಂಶಗಳ ಕೊರತೆ ನಿವಾರಿಸಬಹುದು.
  • ಪ್ರತೀ 10 ದಿನಗಳಿಗೊಮ್ಮೆ ಶೆ 25-30 ರಷ್ಟು ನೀರನ್ನು ಸಹ ಬದಲಿಸುವುದರಿ0ದ  ಸಾರಜನಕದ ಸಾಂಧ್ರತೆ ನಿಯಂತ್ರಿಸಬಹುದು.
  • ಎಲ್ಲಾ ಹಾಸಲನ್ನು ಅಜೊಲ್ಲಾ ಸಹಿತ ಪ್ರತೀ 6 ತಿಂಗಳಿಗೊಮ್ಮೆ ಬದಲಿಸಬೇಕು.
  • ಕೀಟಗಳುಮತ್ತು ರೋಗಗಳು ಕಂಡು ಬಂದಾಗ ಹಳೆ ವ್ಯವಸ್ಥೆ ಬದಲಿಸಿ ಅಜೊಲ್ಲಾ ಸಹಿತ ಹೊಸ ಹಾಸಲನ್ನು ತಯಾರಿಸಿಕೊಳ್ಳಬೇಕು.

ಚನ್ನಾಗಿ ಬೆಳೆದ ಅಜೊಲ್ಲಾ

ಅಜೊಲ್ಲಾ ಉತ್ಪಾದನೆ ಗುಂಡಿ

  • ಗುಂಡಿಗೆ ಮರಳಿ ಅತಿ ಸಣ್ಣ ಸಸ್ಯಗಳನ್ನು ಸೇರಿಸಲು ಜಾಳಿಗೆಯನ್ನು ಉಪಯೋಗಿಸಿಸ್ ತೊಳೆಯುವುದು ಉಪಯುಕ್ತವಾಗಿದೆ.
  • ಉಷ್ಣಾಂಶವನ್ನು 25°ಸೆ. ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು.
  • ಬೆಳಕಿನ ಪ್ರಖರತೆಯನ್ನು ನಿಯಂತ್ರಿಸಲು ನೆರಳಿನ ಜಾಳಿಗೆ (ಶೇಡ್ ನೆಟ್) ಉಪಯೋಗಿಸಬಹುದು
  • ಅಜೊಲ್ಲಾ ಸಸ್ಯಗಳನ್ನು ದಿನಾಲು ಕೊಯ್ಲು ಮಾಡುವುದರಿಂದ ಗುಂಡಿಯಲ್ಲಿ ಅವುಗಳ ಸಾಂಧ್ರತೆ ನಿಯಂತ್ರಿಸಬಹುದು.

ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 7/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate