অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಮಗ್ರ ಕೀಟ ನಿರ್ವಹಣಾ ತಂತ್ರಗಳು

ಸಮಗ್ರ ಕೀಟ ನಿರ್ವಹಣಾ ತಂತ್ರಗಳು

ಬೆಂಡೆಕಾಯಿ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣಾ ತಂತ್ರ

ಹಲವಾರು ಬಗೆಯ ತರಕಾರಿಗಳಲ್ಲಿ ಬೆಂಡೆಕಾಯಿಯು ದೇಶದ ಎಲ್ಲಾ ಕಡೆಗಳಲ್ಲೂ ಸರ್ವೇ ಸಾಮಾನ್ಯವಾಗಿ ಬೆಳೆಯುವ ಬೆಳೆಯಾಗಿದೆ. ಈ ಬೆಳೆಗೆ ಸಾಮಾನ್ಯವಾಗಿ ಕಾಡುವ ತೊಂದರೆಯೆಂದರೆ ಕೀಟಗಳ ಹಾವಳಿ, ಹುಳುಗಳು, ಇತ್ಯಾದಿ. ಇವುಗಳಿಂದ ಅಪಾರವಾದ ಬೆಳೆಹಾನಿಯೂ ಆಗುತ್ತದೆ. ತನ್ನ ಮೃದುವಾದ ಮೇಲ್ ಮೈ, ಹೆಚ್ಚಿನ ತೇವಾಂಶವಿರುವಲ್ಲಿ ಬೆಳೆಯುವ ಗುಣಗಳಿಂದಾಗಿಯೇ ಬೆಂಡೆಕಾಯಿಯ ಬೆಳೆಯು ಕೀಟದ ಬಾಧೆಗೊಳಗಾಗುತ್ತದೆ. ಇದರಿಂದಾಗಿಯೇ 35-40% ರಷ್ಟು ನಷ್ಟವುಂಟಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಅತಿಯಾದ ಕೀಟನಾಶಕಗಳ ಬಳಕೆಯ ಪರಿಣಾಮಗಳು ಕೀಟಗಳ ಬಾಧೆಯನ್ನು ತಡೆಗಟ್ಟಲು ಬೆಂಡೆಕಾಯಿ ಬೆಳೆಗೆ ಕೀಟನಾಶಕಗಳನ್ನು ಅತಿಯಾಗಿ ಬಳಸುತ್ತಾರೆ.

  • ಸಣ್ಣ ಅವಧಿಯ ಅಂತರದಲ್ಲಿ ಕೊಯಿಲು ಮಾಡುವ ತರಕಾರಿಗಳು ಕೀಟನಾಶಕಗಳನ್ನು ಅಧಿಕ ಪ್ರಮಾಣದಲ್ಲಿ ತಮ್ಮೊಳಗೆ ಹಿಡಿದಿಟ್ಟಿರುತ್ತವೆ. ಇವು ಬಳಕೆದಾರರಿಗೆ ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡಬಹುದು.
  • ಅತ್ಯಧಿಕ ಕೀಟನಾಶಕಗಳ ಬಳಕೆಯು ನಿರೋಧಕತೆ, ಮರು ಆವರ್ತನೆ, ಪರಿಸರ ಮಾಲಿನ್ಯ ಹಾಗೂ ಉಪಯುಕ್ತ ಸಸ್ಯ ಹಾಗೂ ಪ್ರಾಣಿ ಕುಲದ ವಿನಾಶಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಡೆಕಾಯಿ

ಕೆಲವು ಪ್ರಮುಖ ಕೀಟಗಳು

ಎಲೆ ಜಿಗಿಹುಳ:

ನಿಂಫ್ ಹಾಗೂ ಪ್ರಬುದ್ಧ ಕೀಟಗಳು ತಿಳಿ ಹಳದಿ ಬಣ್ಣವನ್ನು ಹೊಂದಿದ್ದು ವಿಶಿಷ್ಟ ವಾಗಿ ಚಲಿಸುತ್ತವೆ. ಇದರ ಪರಿಣಾಮಕ್ಕೆ ಒಳಗಾದ ಎಲೆಗಳು ಹಳದಿ ಬಣ್ಣಕ್ಕೆ ತಿರುಗೆ ತಿರುಚಿಕೊಳ್ಳುತ್ತವೆ. ಅತಿಯಾದ ರೋಗಕ್ಕೆ ತುತ್ತಾದ ಎಲೆಗಳು ಇಟ್ಟಿಗೆ ಕೆಂಪು ಬಣ್ಣಕ್ಕೆ ತಿರುಗುವುದಲ್ಲದೆ ಪುಡಿಯಾಗುತ್ತವೆ.

ಎಲೆ ಜಿಗಿಹುಳ ಕಾಂಡ ಹಾಗೂ ಹಣ್ಣು ಕೊರಕ ಕ್ರಿಮಿಗಳು

ಬೆಳೆ ಇನ್ನೂ ಅಪ್ರಬುದ್ಧ ಸ್ಥಿತಿಯಲ್ಲಿರುವಾಗಲೇ, ಲಾರ್ವಾಗಳು ಮೃದುವಾದ ಕಾಂಡಾವನ್ನು ಕೊರೆದು ಕೆಳಭಾಗಕ್ಕೆ ತಲಪುತ್ತವೆ. ಪರಿಣಾಮವಾಗಿ ಕಾಂಡವು ಬಾಡುತ್ತದೆ. ಸಸ್ಯದ ಬೆಳೆಯುವ ತುದಿಗಳು ಸಾಯುತ್ತದೆ. ಲರ್ವಾಗಳು ಹಣ್ಣುಗಳ ಒಳಭಾಗವನ್ನು ಕೊರೆದು ಪ್ರವೇಶಿಸುವುದಲ್ಲದೆ ಅವು ಹಣ್ಣುಗಳ ಮಾರುಕಟ್ಟೆ ಮೌಲ್ಯ ಕುಸಿಯುವುದಕ್ಕೆ ಕಾರಣವಾಗುತ್ತವೆ.

ಕೆಂಪು ಜೇಡ ಹುಳ

ಈ ಕೀಟದ ಲಾರ್ವಾ ಹಾಗೂ ನಿಂಫ್ ಗಳು ಹಸಿರು-ಕೆಂಪು ಬಣ್ಣದ್ದಾಗಿರುತ್ತವೆ. ಪ್ರಬುದ್ಧ ಜೀವಿಗಳು ಕೆಂಪು-ಕಂದು ಬಣ್ಣದ್ದಾಗಿರುತ್ತವೆ. ಇವುಗಳು ಎಲೆಗಳ ತಳಭಾಗವನ್ನು ತಿನ್ನುವುದು ವಾಡಿಕೆ. ಪರಿಣಾಮವಾಗಿ ಎಲೆಗಳು ಆರಂಭದಲ್ಲಿ ತಿರುಚಿಕೊಂಡು ಅಂತಿಮವಾಗಿ ಒಣಗಿಹೋಗುತ್ತವೆ.

ಹಳದಿ ವೈನ್/ನರದ ಮೊಸಾಯಿಕ್ ರೋಗ

ಹಸಿರು ಅಂಗಾಂಶದ ಜಾಲದ ನಡುವೆ ಹಾಸು ಹೊಕ್ಕಾದ ಹಳದಿ ನರಗಳು ಈ ರೋಗದ ಮುಖ್ಯ ಲಕ್ಷಣ. ಬಿಳಿ ನುಸಿಯಿಂದ ಹರಡಲ್ಪಡುವ ಈ ರೋಗ ಆರ್ಥಿಕವಗಿ ನಷ್ಟವುಂಟು ಮಾಡುವ ಪ್ರಮುಖ ರೋಗವಾಗಿದೆ.

ಬೇರು ಗಂಟು ಹುಳ

ಸೂಕ್ಷ್ಮವಾದ, ಮಣ್ಣಿನಲ್ಲಿ ಹುಟ್ಟುವ ಉಪದ್ರವಕಾರೀ ಹುಳಗಳು. ಇವು ಬೇರಿನ ಸಮೂಹವನ್ನು ತಿಂದು ಹಾಕುವುದರಿಂದ ಬೇರಿನಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು. ಸಸ್ಯಗಳು ಕುಂಠಿತ ಬೆಳವಣಿಗೆಯನ್ನು ತೋರಿಸುತ್ತವೆ. ಜೊತೆಗೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

ಸಮಗ್ರ ಕೀಟ ನಿರ್ವಹಣಾ ತಂತ್ರಗಳು

  • ಮುಂಗಾರು ಬೆಳೆಯ ಕಾಲದಲ್ಲಿ, ಮಖ್ಮಲಿ, ತುಲ್ಸಿ, ಅನುಪಮ-1 ಹಾಗೂ ಸನ್-40 ಯಂತಹ ವೈ.ವಿ.ಎಮ್.ವಿ. ಯನ್ನು ತಡೆಯುವ ಮಿಶ್ರತಳಿಗಳನ್ನು ಬಿತ್ತನೆ ಮಾಡುವುದು.
  • ಕಾಂಡ ಹಾಗೂ ಹಣ್ಣು ಕೊರಕ ಕೀಟಗಳು ಹೊಲವನ್ನು ಪ್ರವೇಶಿಸದಂತೆ ತಡೆಯಲು ಜೋಳ/ ಸೋರ್ಘಮ್ ಅನ್ನು ಬದುಗಳಲ್ಲಿ ತಡೆಗಳಾಗಿ ಬೆಳೆಸುವುದು.
  • ಬಿಳಿ ನುಸಿಗಳ ನಿವಾರಣೆಗೆ ಹಳದಿ ಅಂಟು ಜಾಡನ್ನು ಮತ್ತು ಡೆಲ್ಟಾ ಬಲೆಯನ್ನು ಇರಿಸಿ.
  • ಬೇಟೆಗಾರ ಹಕ್ಕಿಗಳು ಹೊಲಕ್ಕೆ ಭೇಟಿ ಕೊಡಲು ಅವಕಾಶ ಕಲ್ಪಿಸುವಂತೆ ಎಕರೆಗೆ ಹತ್ತರಂತೆ ಹಕ್ಕಿಗಳಿಗೆ ತಂಗುದಾಣವನ್ನು ರಚಿಸಿ.
  • ಎಲೆ ಜಿಗಿಘುಳ, ಬಿಳಿ ನುಸಿ, ಮೈಟ್, ಆಫಿಡ್ ಗಳ ನಿವಾರಣೆಗೆ ಕೀಟನಾಶಕಗಳ ಸಿಂಪಡನೆಯ ಜೊತೆಗೆ ಎನ್.ಎಸ್.ಕೆ.ಇ. ಯನ್ನು (5%) ಸಹ ಎರಡರಿಂದ ಮೂರು ಸಲ ಸಿಂಪಡಿಸಿ. ಒಂದು ಸಸ್ಯಕ್ಕೆ ಐದು ಜಿಗಿಹುಳಕ್ಕಿಂತ ಹೆಚ್ಚಿದ್ದಲ್ಲಿ, ಇಮಿಡಕ್ಲಾಪ್ರಿಡ್ 17.8 ಎಸ್.ಎಲ್. ಅನ್ನು 150 ಮಿ.ಲೀ. / ಹೆ. ನಂತೆ ಸಿಂಪಡಿಸಿ. ಇದು ಇತರ ಹೀರು ಕೀಟಗಳನ್ನೂ ನಿಯಂತ್ರಿಸುತ್ತದೆ.
  • ಈರಿಯಾಸ್ ವೈಟೆಲ್ಲ ದ ಅಪ್ರಬುದ್ಧ ಕೀಟವು ಹೊರಬರುವುದನ್ನು ನಿಯಂತ್ರಿಸಲು ಪ್ರತಿ ಎಕರೆಗೆ ಎರಡರಂತೆ ಫೆರಮೋನ್ ಬಲೆಯನ್ನು ಹಾಯಿಸಿ. ಇದು ಹಳತಾದಾಗ (ಪ್ರತಿ 15- 20 ದಿನಗಳ ಅಂತರದಲ್ಲಿ) ಹೊಸತನ್ನು ಬಳಸಿ.
  • ಕಾಂಡ ಮತ್ತು ಹಣ್ಣು ಕೊರಕ ಕೀಟಗಳ ನಿವಾರಣೆಗೆ 4-5 ಸಲ, ವಾರದ ಅಂತರದಲ್ಲಿ, 1-1.5 ಲಕ್ಷ/ಹೆ ನಂತೆ, ಬಿತ್ತನೆ ಮಾಡಿದ 30-35 ದಿನದ ನಂತರ ಟ್ರೈಕೋಗ್ರಾಮಾ ಕಿಲೋನಿಸ್ ಅನ್ನು (ಮೊಟ್ಟೆ) ಬಿಡುಗಡೆ ಮಾಡಿ. ಕಾಂಡ ಮತ್ತು ಹಣ್ಣು ಕೊರಕ ಕೀಟಗಳ ಸಂಖ್ಯೆ ಇ.ಟಿಎಲ್. ಮಟ್ಟವನ್ನು ಮೀರಿದರೆ (5.3 % ಕ್ಕಿಂತ ಹೆಚ್ಚಿದ್ದರೆ), 25 ಇ.ಸಿ. ಸೈಪರ್ಮಿತ್ರಿನ್ ಅನ್ನು 200 ಗ್ರಾಂ ಎ.ಐ./ಹೆ ನಂತೆ ಸಿಂಪಡಿಸಿ.
  • ಕಾಲ ಕಾಲಕ್ಕೆ ವೈ.ವಿ.ಎಮ್.ವಿ. ಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸಿ
  • ಕಾಲ ಕಾಲಕ್ಕೆ ಕೊರಕ ಕೀಟಗಳ ಹಾವಳಿಗೆ ಒಳಗಾದ ಗಿಡಗಳನ್ನೂ / ಅಥವಾ ಅವುಗಳ ಭಾಗಗಳನ್ನೂ ನಾಶಮಾಡಿ.
  • ಅಗತ್ಯಕ್ಕೆ ತಕ್ಕಂತೆ ರಾಸಾಯನಿಕ ಕೀಟನಾಶಕಗಳನ್ನು ಬಳಸಿ. ಉದಾಹರಣೆಗೆ 17.8 ಎಸ್.ಎಲ್ ಇಮಿಡಕ್ಲಾಪ್ರಿಡ್ 150 ಮಿ.ಲೀ. / ಹೆ., 25 ಇ.ಸಿ. ಸೈಪರ್ಮಿತ್ರಿನ್ ಅನ್ನು 200 ಗ್ರಾಂ ಎ.ಐ./ಹೆ (0.005%), 0.05% ರಷ್ಟು 25 ಇ.ಸಿ. ಕ್ವಿನಾಲ್ಫೋಸ್ ಅಥವಾ ಪ್ರೋಪಾರ್ಗೈಟ್ ಇತ್ಯಾದಿಗಳು 57 ಇ.ಸಿ. 0.1 % ರ ಪ್ರಮಾಣದಲ್ಲಿ ಬಳಸುವುದರಿಂದ ಎಲೆ ಜಿಗಿ ಕೀಟ, ಆಫಿಡ್, ಬಿಳಿ ನುಸಿ, ಕೊರಕಗಳು, ಮತ್ತು ಮೈಟ್ ಗಳ ಉಪಠಳವನ್ನು ಹತೋಟಿಗೆ ತರಬಹುದು.

Natural enemies (Beneficial insects)

 

ಕೆಲವು ಸಲಹೆಗಳು

ಹೀಗೆ ಮಾಡಿ

ಹೀಗೆ ಮಾಡದಿರಿ

  • ಸರಿಯಾದ ಕಾಲದಲ್ಲಿ ಬಿತ್ತನೆ ಮಾಡುವುದು.
  • ಹೊಲದಲ್ಲಿ ಕ್ರಿಮಿಗಳನ್ನು ನಾಶಪಡಿಸುವುದು.
  • ಯಾವತ್ತೂ ಹೊಸದಾಗಿ ತಯಾರಿಸಿದ ಬೇವಿನ ತಿರುಳಿನ ಸಾರವನ್ನೇ (NSKE) ಬಳಸುವುದು.
  • ಅಗತ್ಯವಿದ್ದಾಗ ಮಾತ್ರ ಕೀಟನಾಶಕಗಳನ್ನು ಬಳಸುವುದು.
  • ಬೆಂಡೆಕಾಯಿಯನ್ನು ಬಳಕೆಯ ಮುಂಚೆ ಚೆನ್ನಾಗಿ ತೊಳೆದುಕೊಳ್ಳುವುದು.
  • ಸಲಹೆಮಾಡಿದ ಕೀಟನಾಶಕದ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಬಳಸಬೇಡಿ.
  • ಒಂದೇ ಕೀಟನಾಶಕವನ್ನು ನಿರಂತರವಾಗಿ ಬಳಸಬೇಡಿ.
  • ಕೀಟನಾಶಕಗಳ ಮಿಶ್ರಣವನ್ನು ಬಳಸಬೇಡಿ.
  • ಮೋನೋ ಕ್ರೋಟೋಫಾಸ್ ನಂತಹ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಕೀಟನಾಶಕಗಳನ್ನು ತರಕಾರಿ ಬೆಳೆಗೆ ಸಿಂಪಡಿಸಬೇಡಿ.
  • ಕೊಯಿಲು ಮಾಡುವ ಸ್ವಲ್ಪ ಮುಂಚಿತವಾಗಿ ಕೀಟನಾಶಕವನ್ನು ಸಿಂಪಡಿಸಬೇಡಿ.
  • ಕೀಟನಾಶಕಗಳನ್ನು ಸಿಂಪಡಿಸಿದ 3-4  ದಿನಗಳೊಳಗೆ ಉತ್ಪನ್ನಗಳನ್ನು ಸೇವಿಸಬೇಡಿ.

ಆಕರ: ರಾಷ್ಟ್ರೀಯ ಸಮಗ್ರ ಕೀಟ ನಿರ್ವಹಣಾ ತಂತ್ರ ಕೇಂದ್ರ (ICAR), ಪೂಸಾ ಕ್ಯಾಂಪಸ್, ನವ ದೆಹಲಿ-110 012 ಇದರ ವಿಸ್ತರಣಾ ಕೈಪಿಡಿ.

ಬದನೆ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣಾ ತಂತ್ರ

ಎಲ್ಲ ತರಕಾರಿ ಬೆಳೆಗಳಲ್ಲೂ ಬದನೆ ಸರ್ವೇ ಸಾಮಾನ್ಯವಾಗಿದೆ, ದೇಶದ ಎಲ್ಲಾ ಕಡೆಗಳಲ್ಲೂ ಬೆಳೆಯುತ್ತಾರೆ. ಈ ಬೆಳೆಗೆ ಪೀಡೆಯಾಗಿ ಕಾಡುತ್ತಿರುವುದು ಕೀಟ ಬಾಧೆ, ರೋಗಗಳು ಹಾಗೂ ಹುಳುಗಳ ಬಾಧೆ. ಇವುಗಳ ಪರಿಣಾಮವಾಗಿ ಕೆಲವೊಮ್ಮೆ ಅಧಿಕ ಪ್ರಮಾಣ ನಷ್ಟವೂ ಉಂಟಾಗುತ್ತದೆ. ತನ್ನ ಮೃದುವಾದ ಮೇಲ್ಮೈ, ಹೆಚ್ಚಿನ ತೇವಾಂಶವಿರುವಲ್ಲಿ ಬೆಳೆಯುವ ಗುಣಗಳಿಂದಾಗಿಯೇ ಬದನೆ ಬೆಳೆಯು ಕೀಟದ ಬಾಧೆಗೊಳಗಾಗುತ್ತದೆ. ಇದರಿಂದಾಗಿಯೇ 35-40% ರಷ್ಟು ನಷ್ಟವುಂಟಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಅತಿಯಾದ ಕೀಟನಾಶಕಗಳ ಬಳಕೆಯ ಪರಿಣಾಮಗಳು

ಕೀಟಗಳ ಬಾಧೆಯನ್ನು ತಡೆಗಟ್ಟಲು ಬದನೆ ಬೆಳೆಗೆ ಕೀಟನಾಶಕಗಳನ್ನು ಅತಿಯಾಗಿ ಬಳಸುತ್ತಾರೆ.

  • ಸಣ್ಣ ಅವಧಿಯ ಅಂತರದಲ್ಲಿ ಕೊಯಿಲು ಮಾಡುವ ತರಕಾರಿಗಳು ಕೀಟನಾಶಕಗಳನ್ನು ಅಧಿಕ ಪ್ರಮಾಣದಲ್ಲಿ ತಮ್ಮೊಳಗೆ ಹಿಡಿದಿಟ್ಟಿರುತ್ತವೆ. ಇವು ಬಳಕೆದಾರರಿಗೆ ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡಬಹುದು.
  • ಅತ್ಯಧಿಕ ಕೀಟನಾಶಕಗಳ ಬಳಕೆಯು ನಿರೋಧಕತೆ, ಮರು ಆವರ್ತನೆ, ಪರಿಸರ ಮಾಲಿನ್ಯ ಹಾಗೂ ಉಪಯುಕ್ತ ಸಸ್ಯ ಹಾಗೂ ಪ್ರಾಣಿ ಕುಲದ ವಿನಾಶಕ್ಕೆ ಎಡೆಮಾಡಿಕೊಟ್ಟಿದೆ.

ಕೆಲವು ಪ್ರಮುಖ ಕೀಟಗಳು

ಹದ್ದ ಜೀರುಂಡೆ

ಪ್ರೌಢ ಕೀಟಗಳು ತಿಳಿ ಕಂದು ಬಣ್ಣದವುಗಳಾಗಿದ್ದು, ಕಪ್ಪು ಬಣ್ಣದ ಮಚ್ಚೆಗಳಿಂದ ಕೂಡಿವೆ. ಎಳೆಯ ಕೀಟಗಳು ಹಳದಿ ಬಣ್ಣದವುಗಳಾಗಿರುತ್ತವೆ. ಮೊಟ್ಟೆಗಳು ಸಿಗಾರ್ ಆಕಾರದವುಗಳಾಗಿದ್ದು ಹಳದಿ ಬಣ್ಣ ಹೊಂದಿರುತ್ತವೆ ಜೊತೆಗೆ ಅವುಗಳು ಗುಂಪಾಗಿ ಇಡಲ್ಪಟ್ಟಿರುತ್ತವೆ. ಪ್ರೌಢ ಹಾಗೂ ಎಳೆಯ ಕೀಟಗಳು ಎಲೆಗಳನ್ನು ಬಾಚಿ, ಅವುಗಳ ಹಸಿರು ಭಾಗವನ್ನು ತಿಂದು ಎಲೆಗಳನ್ನು ಸಂಪೂರ್ಣವಾಗಿ ಎಲುಬಿನ ಹಂದರದ ರೂಪಕ್ಕೆ ತರುತ್ತವೆ.

ಅಫಿಡ್ ಗಳು

ಪ್ರೌಢ ಮತ್ತು ಎಳೆಯ ಕೀಟಗಳು ಎಲೆಯ ಸಾರವನ್ನು ಹೀರುತ್ತವೆ. ಪರಿಣಾಮವಾಗಿ ಸಸ್ಯಗಳು ಹಳದಿ ಬಣ್ಣಕ್ಕೆ ತಿರುಗುವುದಲ್ಲದೆ ತಮ್ಮ ಆಕಾರ ಕಳೆದುಕೊಂಡು ಅಂತಿಮವಾಗಿ ಒಣಗುತ್ತವೆ. ಅಫಿಡ್ ಗಳು ಜೇನನ್ನೂ ಸ್ರವಿಸುತ್ತವೆ. ಈ ಜೇನಿನ ಮೇಲೆ ಶಿಲೀಂದ್ರಗಳು ಬೆಳೆಯುವ ಕಾರಣ ಅವು ದ್ಯುತಿ ಸಂಷ್ಲೇಶಣಾ ಕ್ರಿಯೆಗೆ ಅಡ್ಡಿಯುಂಟು ಮಾಡುತ್ತವೆ.

ಕಾಂಡ ಹಾಗೂ ಹಣ್ಣು ಕೊರಕ:

ಮೊದಲ ಹಂತದಲ್ಲಿ ಕೀಟದ ಲರ್ವಾಗಳು (ಬಲಿತಿರದ ಹಂತದ ಕೀಟಗಳು), ಕಾಂಡದ ತುದಿಯನ್ನು ಕೊರೆಯುವುದರಿಂದ ಬೆಳೆಯುವ ಭಾಗ ಸತ್ತು ಹೋಗುತ್ತದೆ. ಈ ರೋಗದ ಲಕ್ಷಣವೆಂದರೆ ಬಾಡಿ, ನಲುಗಿದ ಕಾಂಡಗಳು. ನಂತರದ ಹಂತದಲ್ಲಿ ಈ ಮರಿಕೀಟಗಳು ಹಣ್ಣನ್ನು ಕೊರೆದು ಹಾಕುವುದರಿಂದ ಅವುಗಳು ತಿನ್ನಲು ಅಯೋಗ್ಯವಾಗಿಬಿಡುತ್ತವೆ.

ಕೆಂಪು ಜೇಡ ಹುಳ

ಈ ಕೀಟದ ಜೀವನ ಚಕ್ರದ ಮೂರೂ ಹಂತಗಳಲ್ಲಿ, ಅಂದರೆ ಲಾರ್ವಾ, ನಿಂಫ್, ಹಾಗೂ ಪ್ರಬುದ್ಧ ಹುಳಗಳು ಎಲೆಗಳ ತಳಭಾಗವನ್ನು ತಿನ್ನುವವು ವಾಡಿಕೆ. ಇವುಗಳಿಂದ ಪ್ರಭಾವಿತವಾದ ಎಲೆಗಳು ಆರಂಭದಲ್ಲಿ ತಿರುಚಿಕೊಂಡು ಅಂತಿಮವಾಗಿ ಒಣಗಿಹೋಗುತ್ತವೆ.

ಫೋಮೋಪ್ಸಿಸ್ ಬ್ಲೈಟ್ ಮತ್ತು ಹಣ್ಣಿನ ಕೊಳೆಯುವಿಕೆ

ಎಲೆಗಳ ಮೇಲೆ ರೋಗವು ಕಂದು ಬಣ್ಣದ ವೃತ್ತಾಕಾರದ ಚಿಹ್ನೆಗಳಂತೆ ಕಾಣುತ್ತದೆ. ನಂತರದ ಹಂತದಲ್ಲಿ ಹಣ್ಣುಗಳ ಮೇಲೆ ತಿಳಿ ಬಣ್ಣದ ತಗ್ಗಿನ ಗುರುತುಗಳು ಹುಟ್ಟಿಕೊಳ್ಳುತ್ತವೆ. ಇವು ನಂತರ ಬೆಳೆಯುತ್ತಾ ಹೋಗಿ ಇಡೀ ಹಣ್ಣನ್ನು ಆಕ್ರಮಿಸುತ್ತವೆ. ಪರಿಣಾಮವಾಗಿ ಹಣ್ಣಿನ ಒಳಭಾಗ ಕೊಳೆಯಲಾರಂಭಿಸುತ್ತದೆ.

ಸಣ್ಣ ಎಲೆ

ಈ ರೋಗದ ಮುಖ್ಯ ಲಕ್ಷಣವೇ ಸಣ್ಣದಾದ ಎಲೆಗಳು, ತೊಟ್ಟಿನ, ಹಾಗೂ ಗಂಟುಗಳ ನಡುವಿನ ಪ್ರದೇಶದ ಕುಂಠಿತ ಬೆಳವಣಿಗೆ, ಎಲೆಗಳು ಸಪೂರನಾಗುವುದು, ಮೃದುವಾಗುವುದು, ಹಳದಿಯಾಗುವುದು, ಇತ್ಯಾದಿ. ಸಸ್ಯವು ಪೊದೆಯಂತೆ ಕಾಣುವುದಲ್ಲದೆ ಹಣ್ಣುಗಳಾಗುವುದು ಅಪರೂಪ.

ಸ್ಕ್ಲೀರೋಟಿನಿಯಾ ಬ್ಲೈಟ್

ಮುಖ್ಯ ಕಾಂಡದ ಕಡೆಗೆ ಮೇಲಿನಿಂದ ಕೆಳಗೆ ಸಣ್ಣ ರೆಂಬೆಗಳು ಬಾಡುತ್ತವೆ. ಅತಿಯಾದ ರೋಗದ ಸಂದರ್ಭದಲ್ಲಿ ಶಿಲೀಂದ್ರದ ಬೆಳವಣಿಗೆಯನ್ನೂ ಕಾಣಬಹುದಾಗಿದೆ. ಅಂತಿಮವಾಗಿ ಸಂಪೂರ್ಣ ಸಸ್ಯವೇ ಬಾಡುತ್ತದೆ.

ಬೇರು ಗಂಟು ಹುಳ

ಈ ರೋಗದ ಮುಖ್ಯ ಲಕ್ಷಣವೆಂದರೆ ಬೇರಿನಲ್ಲಿ, ಬೇರಿನ ಸಮೂಹದಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು. ಸಸ್ಯಗಳು ಕುಂಠಿತ ಬೆಳವಣಿಗೆಯನ್ನು ತೋರಿಸುತ್ತವೆ. ಇದರ ಪರಿಣಾಮಕ್ಕೆ ಒಳಗಾದ ವ್ಯವಸಾಯದ ಭೂಮಿಯು ಅಸಮರ್ಪಕ ಬೆಳವಣಿಗೆಯಿರುವ ಸಸ್ಯಗಳಿಂದ ತುಂಬಿರುತ್ತವೆ.

ಸಮಗ್ರ ಕೀಟ ನಿರ್ವಹಣಾ ತಂತ್ರಗಳು

ಸಸ್ಯ ಕ್ಷೇತ್ರಗಳ ನಿರ್ಮಾಣ

  • ಹೆಚ್ಚಾಗಿ ನೀರು ನಿಲ್ಲುದನ್ನು ತಪ್ಪಿಸಲು ಸಸ್ಯ ಕ್ಷೇತ್ರಗಳನ್ನು ಯಾವಾಗಲೂ ನೆಲ ಮಟ್ಟದಿಂದ 10 ಸೆಂ. ಮೀ .ಎತ್ತರದಲ್ಲಿ ಬೆಳೆಸಿ.
  • ಜೂನ್ ತಿಂಗಳಲ್ಲಿ ಮೂರು ವಾರಗಳ ಕಾಲ 45 ಗೇಜಿನ (0.45 ಮಿ.ಮೀ.) ಪಾಲಿಥೀನ್ ಹಾಳೆಯಿಂದ ಸೋಲರೈಸ್ ಮಾಡಲು (ಸೂರ್ಯ ಕಿರಣವನ್ನು ಕಾಪಾಡಿಕೊಳ್ಳಲು) ಸಸ್ಯಗಳನ್ನು ಮುಚ್ಚಿ. ಇದರಿಂದ ಮಣ್ಣಿನಲ್ಲಿ ಹುಟ್ಟುವ ಕೀಟಗಳು, ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳು, ಹಾಗೂ ಹುಳಗಳ ಭಾದೆಯನ್ನು ಬಹು ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಮಣ್ಣಿನಲ್ಲಿ ಸರಿಯಾದ ತೇವಾಂಶವಿದೆ ಎನ್ನುವುದನ್ನು ಸೋಲರೈಸ್ ಮಾಡುವ ಮುಂಚೆ ಖಚಿತ ಪಡಿಸಿಕೊಳ್ಳಬೇಕು.
  • 3 ಕೆ.ಜಿ. ಎಫ್ ವೈ. ಎಮ್. ಜೊತೆಗೆ 250 ಗ್ರಾಂ. ಟ್ರೈಕೋಡರ್ಮಾ ವಿರಿಡಿಯನ್ನು ಮಿಶ್ರ ಮಾಡಿ ಏಳು ದಿನಗಳ ಕಾಲ ಬೆಳೆಯಲು ಬಿಡಿ. ನಂತರ 3 ಚದರ ಮೀ. ನ ಮಣ್ಣಿನ ಪಾತಿಯಲ್ಲಿ ಮಿಶ್ರ ಮಾಡಿ.
  • ಜನಪ್ರಿಯ ಮಿಶ್ರತಳಿಗಳಾದ ಎಫ್-321 ಗಳನ್ನು ಈ ಪಾತಿಯಲ್ಲಿ ಜುಲಾಯಿ ತಿಂಗಳ ಮೊದಲನೇ ವಾರದಲ್ಲಿ ಬಿತ್ತನೆ ಮಾಡಿ. ಬಿತ್ತನೆಗೆ ಮೊದಲು ಮಣ್ಣಿನ ಪಾತಿಗೆ ಮತ್ತೆ ಟ್ರೈಕೋಡರ್ಮಾ ವಿರಿಡಿಯನ್ನು ಪ್ರತಿ ಕಿ.ಗ್ರಾಮ ಗೆ 4 ಗ್ರಾಮ್. ನಂತೆ ಮಿಶ್ರ ಮಾಡಿ ಕಾಲ ಕಾಲಕ್ಕೆ ಕಳೆ ತೆಗೆದು ರೋಗಕ್ಕೆ ತುತ್ತಾಗಿರುವ ಸಸಿಗಳನ್ನು ಪಾತಿಯಿಂದ ಕಿತ್ತು ಸ್ವಚ್ಛಗೊಳಿಸಬೇಕು.

ಮುಖ್ಯ ಬೆಳೆ

  • ಬೇಟೆಗಾರ ಹಕ್ಕಿಗಳು ಹೊಲಕ್ಕೆ ಭೇಟಿ ಕೊಡಲು ಅವಕಾಶ ಕಲ್ಪಿಸುವಂತೆ ಎಕರೆಗೆ ಹತ್ತರಂತೆ ಹಕ್ಕಿಗಳಿಗೆ ತಂಗುದಾಣವನ್ನು ರಚಿಸಿ.
  • ಮಿಡತೆ, ಜಿಗಿಹುಳು, ಆಫಿಡ್ ಗಳ ಹಾವಳಿ ತಪ್ಪಿಸಲು ಡೆಲ್ಟಾ ಮತ್ತು ಹಳದಿ ಅಂಟು ಜಾಲಗಳನ್ನು ಎಕರೆಗೆ 2-3 ರಂತೆ ರಚಿಸಿ.
  • ಹೀರುವ ಕೀಟಗಳ ಕಾಟವನ್ನು ಕಡಿಮೆ ಮಾಡಲು ಶೇ. 5 ರಷ್ಟು ಬೇವಿನ ಬೀಜದ ತಿರುಳಿನ ಸಾರ (NSKE) ವನ್ನು ಎರಡರಿಂದ ಮೂರು ಬಾರಿ ಸಿಂಪಡಿಸಿ.
  • ಬೇವಿನ ಬೀಜದ ತಿರುಳಿನ ಸಾರದ ಸಿಂಪಡನೆಯು ಕೊರಕಗಳ ಪೀಡೆಯನ್ನೂ ಸಾಕಷ್ಟು ಮಟ್ಟಿಗೆ ನಿವಾರಿಸುತ್ತದೆ. ಬೇವಿನ ಎಣ್ಣೆ (2%) ಯ ಹಚ್ಚುವಿಕೆಯೂ ಕೊರಕಗಳ ಹಾವಳಿಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಎಲೆ ಜಿಗಿ ಹುಳುಗಳ ಕಾಟ ಇ.ಟಿ. ಎಲ್. ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಮಾತ್ರ ಇಮಿಡಕ್ಲಾಪ್ರಿಡ್ 17.8 ಎಸ್.ಎಲ್ ಅನ್ನು ಒಂದು ಹೆಕ್ಟೇರಿಗೆ 150 ಮಿ.ಲೀ. ಪ್ರಮಾಣದಲ್ಲಿ ಬಳಸಿ..
  • ಲ್ಯೂಸಿನೋಡ್ಸ್ ಒರ್ಬೋನಾಲಿಸ್ ಎನ್ನುವ ಕಾಂಡ ಮತ್ತು ಹಣ್ಣು ಕೊರಕ ಕೀಟದ ಉಪಟಳವನ್ನು ಕಡಿಮೆ ಮಾಡಲು ಎಕ್ರೆಗೆ ಐದರಂತೆ ಫೆರಮೋನ್ ಬಲೆಗಳನ್ನು ರಚಿಸಬೇಕು. ಪ್ರತಿ 15-20 ದಿನಗಳಿಗೊಮ್ಮೆ ಹಳೆಯ ಬಲೆಯನ್ನು ಹೊಸ ಬಲೆಗೆ ಬದಲಾಯಿಸಿ.
  • ಕಾಂಡ ಕೊರಕ ಹಾಗೂ ಹಣ್ಣು ಕೊರಕ ಕೀಟಗಳ ಬಾಧೆಗೆ, ಟಿ. ಬ್ರಸಿಲೆನ್ಸಿಸ್ ನ ಮೊಟ್ಟೆಗಳನ್ನು ಪ್ರತಿ ಹೆಕ್ಟೇರಿಗೆ 1 – 1.5 ಲಕ್ಷದಂತೆ ಒಂದು ವಾರದ ಅಂತರದಲ್ಲಿ 4-5 ಬಾರಿ ಬಿಡುಗಡೆ ಮಾಡಿ.
  • ಕೊರಕಗಳ ಹಾಗೂ ಹುಳಗಳ ಬಾಧೆಯನ್ನು ತಡೆಯಲು, ಸಸ್ಯಗಳ ಸಾಲುಗಳಿಗೆ 25 ಹಾಗೂ 60 ಡಿ.ಎ. ಟಿ ಯಲ್ಲಿ ಪ್ರತಿ ಹೆಕ್ಟೇರಿಗೆ 250 ಕೆ.ಜಿ ಯಂತೆ ಬೇವಿನ ಬಿಲ್ಲೆಗಳನ್ನು (ಎರಡು ಬಾರಿ) ಮಣ್ಣಿಗೆ ಸೇರಿಸಿ. ಆದರೆ ವಾತಾವರಣದ ಉಷ್ಣತೆ 300 ಸೆಂ.ಗಿಂತ ಹೆಚ್ಚಿದ್ದರೆ ಮತ್ತು ಜೋರಾದ ಗಾಳಿ ಬೀಸುತ್ತಿರುವ ಸಮಯದಲ್ಲಿ ಬೇವಿನ ಬಿಲ್ಲೆಗಳನ್ನು ಹಾಕಬೇಡಿ.
  • ಸ್ವಚ್ಛ ಬೇಸಾಯ, ಅಂದರೆ ರೋಗ ಪೀಡಿತ ಕಾಂಡಗಳನ್ನು, ಹಣ್ಣುಗಳನ್ನು ತೋಟದಿಂದ ಹೆಕ್ಕಿ ದೂರವಿಡುವುದು, ಇತ್ಯಾದಿ ಕ್ರಮಗಳು ಕಾಂಡ ಕೊರಕಗಳ ನಿರ್ವಹಣೆ, ಹಾಗೂ ಫೊಮೋಸಿಸ್ ರೋಗವನ್ನು ಹತೋಟಿಯಲ್ಲಿಟ್ಟುಕೊಳ್ಳಲು ನೆರವಾಗುತ್ತದೆ.
  • ಕೊರಕಗಳ ಹಾವಳಿ ಇ.ಟಿ ಎಲ್. ಮಟ್ಟವನ್ನು (5% ) ದಾಟಿದರೆ, ಸೈಪರ್ಮೆಥ್ರಿನ್ ಅನ್ನು 25 ಇ.ಸಿ. @ 200 ಗ್ರಾಂ. ಎ.ಐ./ ಹೆ (0.005%) ಅಥವಾ 50 ಡಬ್ಲ್ಯೂ. ಪಿ. ಕಾರ್ಬಾರಿಲ್ 3 ಗ್ರಾಂ. /ಲೀ. ನೀರಿನಲ್ಲಿ ಅಥವಾ ಎಂಡೋಸಲ್ಫಾನ್ ಅನ್ನು 35 ಇ.ಸಿ. @ 0.07% ಯಂತೆ ಬಳಸಿ.
  • ನಿರಂತರವಾಗಿ ಬದನೆ ಬೆಳೆಯನ್ನು ಮುಂದುವರಿಸಿದರೆ ಸಹ ಕಾಂಡ ಕೊರಕಗಳ ಪೀಡೆ ಹೆಚ್ಚುತ್ತಾ ಹೋಗುತ್ತದೆ. ಆದುದರಿಂದ ಸೊಲನೇಸಿ ಕುಟುಂಬದ ಬೆಳೆಯನ್ನು ಇತರ ಜಾತಿಯ ಬೆಳೆಯ ಜೊತೆ ಆವರ್ತನೆ ಮಾಡುತ್ತಿರಬೇಕು.
  • ಹದ್ದ ಜೀರುಂಡೆಯ ಮೊಟ್ಟೆ, ಲಾರ್ವಾ ಹಾಗೂ ಪ್ರೌಢ ಹುಳುಗಳನ್ನು ಆಗಾಗ ಸಂಗ್ರಹಿಸಿ ನಾಶ ಮಾಡಬೇಕು.
  • ಕಾಲ ಕಾಲಕ್ಕೆ ಸಣ್ಣ ಎಲೆ ರೋಗದಿಂದ ತೊಂದರೆಗೊಳಗಾದ ಸಸ್ಯಗಳನ್ನು ಕಿತ್ತು ನಾಶ ಮಾಡಬೇಕು.
  • ಹಸಿರು ಗೊಬ್ಬರ, ಪಾಲಿಥೀನ್ ನಿಂದ ಮುಚ್ಚುವುದು, ಬ್ಲೀಚಿಂಗ್ ಪುಡಿಯನ್ನು ಮಣ್ಣಿಗೆ ಸೇರಿಸುವುದು, ಇತ್ಯಾದಿ ಕ್ರಮಗಳು ಬ್ಯಾಕ್ಟೀರಿಯಾ ವಿಲ್ಟ್ ರೋಗದ ಆವರ್ತನೆಯನ್ನು ಕಡಿಮೆ ಮಾಡುತ್ತದೆ.

ಕೆಲವು ಸಲಹೆಗಳು

ಹೀಗೆ ಮಾಡಿ

ಹೀಗೆ ಮಾಡದಿರಿ

  • ಸರಿಯಾದ ಕಾಲದಲ್ಲಿ ಬಿತ್ತನೆ ಮಾಡುವುದು.
  • ಹೊಲದಲ್ಲಿ ಕ್ರಿಮಿಗಳನ್ನು ನಾಶಪಡಿಸುವುದು.
  • ಯಾವತ್ತೂ ಹೊಸದಾಗಿ ತಯಾರಿಸಿದ ಬೇವಿನ ತಿರುಳಿನ ಸಾರವನ್ನೇ (NSKE) ಬಳಸುವುದು.
  • ಅಗತ್ಯವಿದ್ದಾಗ ಮಾತ್ರ ಕೀಟನಾಶಕಗಳನ್ನು ಬಳಸುವುದು.
  • ಬೆಂಡೆಕಾಯಿಯನ್ನು ಬಳಕೆಯ ಮುಂಚೆ ಚೆನ್ನಾಗಿ ತೊಳೆದುಕೊಳ್ಳುವುದು.
  • ಸಲಹೆಮಾಡಿದ ಕೀಟನಾಶಕದ ಪ್ರಮಾಣಕ್ಕಿಂತ ಹೆಚ್ಚು ಬಳಸಬೇಡಿ.
  • ಒಂದೇ ಕೀಟನಾಶಕವನ್ನು ನಿರಂತರವಾಗಿ ಬಳಸಬೇಡಿ.
  • ಕೀಟನಾಶಕಗಳ ಮಿಶ್ರಣವನ್ನು ಬಳಸಬೇಡಿ.
  • ಮೋನೋ ಕ್ರೋಟೋಫಾಸ್ ನಂತಹ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಕೀಟನಾಶಕಗಳನ್ನು ತರಕಾರಿ ಬೆಳೆಗೆ ಸಿಂಪಡಿಸಬೇಡಿ.
  • ಕೊಯಿಲು ಮಾಡುವ ಸ್ವಲ್ಪ ಮುಂಚಿತವಾಗಿ ಕೀಟನಾಶಕವನ್ನು ಸಿಂಪಡಿಸಬೇಡಿ.
  • ಕೀಟನಾಶಕಗಳನ್ನು ಸಿಂಪಡಿಸಿದ 3-4  ದಿನಗಳೊಳಗೆ ಉತ್ಪನ್ನಗಳನ್ನು ಸೇವಿಸಬೇಡಿ.

ಸಂಬಂಧಿಸಿದ ಮೂಲಗಳು: ರಾಷ್ಟ್ರೀಯ ಸಮಗ್ರ ಕೀಟ ನಿರ್ವಹಣಾ ತಂತ್ರ ಕೇಂದ್ರ (ICAR), ಪೂಸಾ ಕ್ಯಾಂಪಸ್,ನವ ದೆಹಲಿ-110 012

ಸಾವಯವ ಹತ್ತಿಯ ಬೆಳೆಯಲ್ಲಿ ಕೀಟಗಳ ನಿರ್ವಹಣಾ ಕ್ರಮಗಳು

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate