ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಸೂಕ್ತ ಬೆಳೆ ಯೋಜನೆಗಳು
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸೂಕ್ತ ಬೆಳೆ ಯೋಜನೆಗಳು

ಬೆಳೆಗಳ ಬಿತ್ತನೆಯ ಹಾಗೂ ಬಿತ್ತನೆಯ ನಂತರದ ಸಮಯದಲ್ಲಿ ಸಂಭವಿಸುವ ಯಾವುದೇ ಅಸಾಮಾನ್ಯ, ಅಪ್ರಸನ್ನ ಹಾಗೂ ಆಕಸ್ಮಿಕ ಹವಾಮಾನ ವೈಪರಿತ್ಯಗಳಿಂದ ಸಂಭವಿಸುವ ತೊಂದರೆಗಳನ್ನು ತಪ್ಪಿಸಲು ಸಿದ್ದಪಡಿಸಿದ ಯೋಜನೆ.

ಪರ್ಯಾಯ (ಅನಿಶ್ಚಿತ) ಬೆಳೆಯೋಜನೆ ಎಂದರೇನು

 

ಬೆಳೆಗಳ ಬಿತ್ತನೆಯ ಹಾಗೂ ಬಿತ್ತನೆಯ ನಂತರದ ಸಮಯದಲ್ಲಿ ಸಂಭವಿಸುವ ಯಾವುದೇ ಅಸಾಮಾನ್ಯ, ಅಪ್ರಸನ್ನ ಹಾಗೂ ಆಕಸ್ಮಿಕ ಹವಾಮಾನ ವೈಪರಿತ್ಯಗಳಿಂದ ಸಂಭವಿಸುವ ತೊಂದರೆಗಳನ್ನು ತಪ್ಪಿಸಲು ಸಿದ್ದಪಡಿಸಿದ ಯೋಜನೆ.

ಉದ್ದೇಶ

ಆಕಸ್ಮಿಕವಾಗಿ ಸಂಭವಿಸುವ ಹವಾಮಾನ ವೈಪರಿತ್ಯಗಳಿಂದ ಉಂಟಾಗುವ ನಷ್ಟವನ್ನು ಸೂಕ್ತವಾದ ತಳಿಗಳು, ಕೃಷಿ ಪದ್ಧತಿ ಮತ್ತು ಸಮಗ್ರ ರೋಗ ನಿರ್ವಹಣ ಪದ್ಧತಿಗಳ ಆಯ್ಕೆ ಮೂಲಕ ಕಡಿಮೆ ಮಾಡಬಹುದು.

ಪರ್ಯಾಯ ಬೆಳೆ ಯೋಜನೆ ಸಂದರ್ಭಗಳು

ಅ)  ಮುಂಚಿತವಾಗಿ ಪ್ರಾರಂಭವಾಗುವ ಮುಂಗಾರು : ಕೆಲವು ಸಂದರ್ಭಗಳಲ್ಲಿ ನೈರುತ್ಯ ಮುಂಗಾರು ತಡವಾಗಿ ಪ್ರಾರಂಭವಾಗುತ್ತದೆ. ಆ ಮಳೆಗಾ¯ ಬಿತ್ತನೆಯ ಸಮಯ ಮೀರಿದ್ದು ಕೆಲ ತಳಿಗಳನ್ನು ಬಿತ್ತನೆ ಮಾಡಲಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಮಧ್ಯಮಾವಧಿ ಅಥವಾ ಅಲ್ಪಾವಧಿ ತಳಿಗಳನ್ನು ಬಿತ್ತನೆಗೆ ಉಪಯೋಗಿಸುವುದು.

ಬೆಳವಣಿಗೆಯ ಹಂತದಲ್ಲಿ ಬರುವ ಇತರೆ ಸಮಸ್ಯೆಗಳು

ಅ) ಮುಂಗಾರು ಪ್ರಾರಂಭದ ನಂತರ ಮಧ್ಯಭಾಗದಲ್ಲಿ ದೀರ್ಘ ಒಣ/ಬರಗಾಲ ಸಂಭವಿಸುವುದು : ಬೆಳೆಗಳಿಗೆ ನೀರಿನ   ಕೊರತೆ ಉಂಟಾಗಿ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಆ) ಮುಂಗಾರು ಅವಧಿಗಿಂತ ಮುಂಚಿತವಾಗಿ ಮುಗಿಯುವುದು : ನಿಗಧಿತ ಅವಧಿಗಿಂತ ಮುಂಚೆ ಮುಂಗಾರು ನಿಂತು ಹೋದರೆ ಬೆಳೆಯಲ್ಲಿ ಕಾಳು ಸರಿಯಾಗಿ ಕಟ್ಟುವುದಿಲ್ಲ. ಮತ್ತು ಬಲಿಯುವುದಿಲ್ಲ ಇದರಿಂದ ಗಣನೀಯವಾಗಿ ಇಳುವರಿ ಕಡಿಮೆಯಾಗುತ್ತದೆ.

ಇ) ಮುಂಗಾರು ಮಳೆ ಮುಂದುವರಿಯುವ ಸಂದರ್ಭ : ಮುಂದುವರಿದ ಮುಂಗಾರುವಿನಿಂದಾಗಿ ಕೊಯ್ಲಿಗೆ ಬಂದ ಬೆಳೆಗಳು ಸರಿಯಾದ ಸಮಯಕ್ಕೆ ಕಟಾವು ಮಾಡಲಾಗುವುದಿಲ್ಲ. ಹಾಗೂ ಕಟಾವಾದ ಬೆಳೆಗಳು ಕೂಡ ಮಳೆಯಿಂದ ಹಾನಿಗೊಳಗಾಗುತ್ತವೆ. ಇದರಿಂದಾಗಿ ಹೆಚ್ಚಿನ ನಷ್ಟ ಸಂಭವಿಸುತ್ತದೆ.

 

ಈ) ಅತಿವೃಷ್ಟಿ/ಅನಾವೃಷ್ಟಿ ಸಂಭವಿಸಿದಾಗ : ಬೆಳೆಯ ವಿವಿಧ ಹಂತದಲ್ಲಿ ಅತಿಯಾದ ಮಳೆ ಅಥವಾ ಮಳೆಯ ಪ್ರಭಾವದಿಂದ ಬೆಳೆಗಳ ಬೆಳವಣಿಗೆ, ಇಳುವರಿ ಹಾಗೂ ಕೃಷಿಗೆ ಪೂರಕವಾದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

ಪರ್ಯಾಯ ಬೆಳೆ ಯೋಜನೆಯ ಅವಶ್ಯಕತೆ

ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕೃಷಿ ಹವಾಮಾನ ವಿಭಾಗವು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸೂಕ್ತವಾದ ಪರ್ಯಾಯ (ಅನಿಶ್ಚಿತ) ಬೆಳೆಯೋಜನೆಯನ್ನು ಸಿದ್ದಪಡಿಸಿದೆ. ಈ ಯೋಜನೆಗಳು ಕೆಳಕಂಡ ಮಾಹಿತಿಗಳನ್ನು ಒಳಗೊಂಡಿರುತ್ತದೆ.

 • ಮುಂಗಾರು ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾದಾಗ (ಎರಡು/ನಾಲ್ಕು/ಆರು/ಎಂಟುವಾರ) ಬಿತ್ತನೆಗೆ ಆಯ್ಕೆಮಾಡಿಕೊಳ್ಳಬೇಕಾದ ತಳಿಗಳು, ಅನುಸರಿಸಬೇಕಾದ ಕೃಷಿಪದ್ಧತಿಗಳು, ರೋಗ/ಕೀಟನಿಯಂತ್ರಣ ಕ್ರಮಗಳು.
 • ಮುಂಗಾರು ಪ್ರಾರಂಭವಾಗಿ ಮದ್ಯಭಾಗದಲ್ಲಿ ಒಣಹವೆ ಮುಂದುವರಿದಾಗ ಅನುಸರಿಸಬೇಕಾದ ಕ್ರಮಗಳು
 • ವಾಡಿಕೆಗಿಂತ ಮುಂಚಿತವಾಗಿ ಮಳೆ ಆರಂಭವಾದಲ್ಲಿ ಬಿತ್ತನೆಗೆ ಆಯ್ಕೆಮಾಡಿಕೊಳ್ಳಬೇಕಾದ ಬೆಳೆ, ತಳಿಗಳು,   ಅನುಸರಿಸಬೇಕಾದ ಕೃಷಿ ಪದ್ಧತಿಗಳನ್ನು ಹೊಂದಿರುತ್ತದೆ.

ಹವಾಮಾನ ವೈಪರಿತ್ಯವನ್ನು ಸಮರ್ಪಕವಾಗಿ ಎದುರಿಸಲು ಪರ್ಯಾಯ ಬೆಳೆಯೋಜನೆಯ ಅಂಶಗಳು:

 • ಹವಾಮಾನ ವೈಪರಿತ್ಯದಿಂದಾಗಿ ಬೆಳೆಗಳ ಇಳುವರಿ ಮೇಲಾಗುವ ಪರಿಣಾಮವನ್ನು ಕಡಿಮೆಗೊಳಿಸಬಹುದು.
 • ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದಾಗ ಹಾಗೂ ನೀರಾವರಿ ಪ್ರದೇಶದಲ್ಲಿ ನೀರಿನ ವ್ಯತ್ಯಯ ಉಂಟಾದಾಗ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬಹುದು.
 • ಬದಲಾಗುತ್ತಿರುವ ಹವಾಮಾನಕ್ಕೆ ತಕ್ಕಂತೆ ಕೃಷಿಗೆ ಪೂರಕವಾದ ಚಟುವಟಿಕೆಗಳಾದ ಹೈನುಗಾರಿಕೆ, ಮೀನುಗಾರಿಕೆ, ಕೋಳಿಸಾಕಾಣಿಕೆಗಳಲ್ಲಿ ಮುಂಜಾಗ್ರತೆ ಕ್ರಮಗಳು ಹಾಗೂ ರೋಗಗಳು/ಕಾಯಿಲೆಗಳಿಗೆ ಸೂಕ್ತ ನಿಯಂತ್ರಣಾ ಕ್ರಮಗಳ ಬಗ್ಗೆ ಮಾಹಿತಿ ದೊರೆಯುತ್ತವೆ.
 • ಮಣ್ಣಿನಲ್ಲಿ ಲಭ್ಯವಿರುವ ತೇವಾಂಶಕ್ಕೆ ತಕ್ಕಂತೆ ಬೆಳೆಯಬಹುದಾದ ಬೆಳೆಗಳ ಕಾಲಸೂಚಿ.
 • ಇದಲ್ಲದೆ ರೈತರಿಗೆ ಉಪಯುಕ್ತ ಮಾಹಿತಿಯಾದ, ಪ್ರತಿ ಜಿಲ್ಲೆಯ ಸಾಮಾನ್ಯ ಮಳೆಯ ಪ್ರಮಾಣ, ಮಣ್ಣಿನ ವಿಧಗಳು, ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆ ಹಾಗೂ ಇತರೆ ಭೌಗೋಳಿಕ ವಿವರಗಳನ್ನು ಒಳಗೊಂಡಿರುತ್ತದೆ.
 • ಹವಾಮಾನ ವೈಪರೀತ್ಯದಿಂದಾಗಿ ಸಂಭವಿಸಬಹುದಾದ ರೋಗ ಮತ್ತು ಕೀಟಬಾಧೆಯನ್ನು ಪತ್ತೆಹಚ್ಚಿ, ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವುದು
 • ಬರಗಾಲ ಸಂಭವಿಸುವ ಮುನ್ಸೂಚನೆ ಇದ್ದಾಗ, ಬೆಳೆಗಳನ್ನು ವಿವಿಧ ಹಂತದಲ್ಲಿ ಕಟಾವು ಮಾಡಿ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವುದು.
 • ರೈತರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದು.

ಮಾಹಿತಿ ದೊರಕುವ ಸ್ಥಳ

 • ರಾಜ್ಯದ ಎಲ್ಲಾ ಕೃಷಿ ತೋಟಗಾರಿಕೆ, ಹೈನುಗಾರಿಕೆ ವಿಶ್ವವಿದ್ಯಾನಿಲಯಗಳು.
 • ಹತ್ತಿರದ ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಕೃಷಿ, ತೋಟಗಾರಿಕೆ ಇಲಾಖೆಗಳು.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ. ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

2.95555555556
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top