ಕೈಯಿಂದ ಅಥವಾ ಯಾಂತ್ರದ ಶಕ್ತಿಯನ್ನು ಬಳಸಿ ಕಳೆಗಳನ್ನು ಕಿತ್ತುಹಾಕುವುದು. ಈ ಪದ್ಧತಿಯೂ ಸಹ ರಾಸಾಯನಿಕ ಪದ್ಧತಿಗೆ ಬದಲಿ ಆಗುತ್ತದೆ. ಅಲ್ಲದೆ ಪರಿಸರ ಮಾಲಿನ್ಯವಿರುವುದಿಲ್ಲ. ಈ ಪದ್ಧತಿಯಲ್ಲಿ ಕೆಳಕಂಡ ಕ್ರಮಗಳನ್ನು ಅನುಸರಿಸಿ ಕಳೆಗಳನ್ನು ಹತೋಟಿ ಮಾಡಬಹುದು.
ಉತ್ತಮ ಬೇಸಾಯ ಮತ್ತು ಯಾಂತ್ರಿಕ ಪದ್ಧತಿಗಳು ಸಾಮಾನ್ಯವಾಗಿ ರಾಸಾಯನಿಕ ಪದ್ಧತಿಗೆ ಪರ್ಯಾಯ ಅಥವಾ ಬದಲಿ ಆಗುತ್ತವೆ. ಆ ಕಾರಣ ರಾಸಾಯನಿಕ ಪದ್ಧತಿಗಳನ್ನು ಅಳವಡಿಸಬೇಕಾಗಿಲ್ಲ. ಅಲ್ಲದೆ ಈ ಬೇಸಾಯ ಮತ್ತು ಯಾಂತ್ರಿಕ ಪದ್ಧತಿಗಳನ್ನು ಅನುಸರಿಸಿ ಕಳೆಗಳನ್ನು ಹತೋಟಿಮಾಡುವುದರಿಂದ ಪರಿಸರ ಮಾಲಿನ್ಯವೂ ಆಗುವುದಿಲ್ಲ.
ರಾಸಾಯನಿಕ ಬಳಕೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಇತ್ತೀಚಿನ ದಿನಗಳಲ್ಲಿ ಬದಲಿ ಪದ್ಧತಿಗಳ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಕಳೆ ನಿಯಂತ್ರಣದಲ್ಲಿ ಜೈವಿಕ ಪದ್ಧತಿ ಇನ್ನೂ ಅಷ್ಟು ಹೆಚ್ಚಿನ ಬಳಕೆಯಲ್ಲಿಲ್ಲ. ಆದರೆ ಇತ್ತೀಚೆಗೆ ನೀರಿನಲ್ಲಿ ಬೆಳೆಯುವ ವಾಟರ್-ಹಯಸಿಂತ್ ಮತ್ತು ವಾಟರ್-ಫರ್ನ್ ಕಳೆಗಳನ್ನು ಮತ್ತು ಪಾರ್ಥೇನಿಯಂ ಕಳೆಗಳನ್ನು ನಿರ್ಮೂಲನೆ ಮಾಡಲು ಕೆಲವು ಕೀಟಗಳನ್ನು ಆಮದು ಮಾಡಿಕೊಂಡು ಪ್ರಯೋಗ ಮಾಡಲಾಗಿದೆ,.
ಮೂಲ :ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 2/15/2020
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ಲಿಂಗಣ್ಣ ಗೌಡರವರ ತೋಟ, ಹಾವೇರಿ
ರಾಸಾಯನಿಕ ಗೊಬ್ಬರಗಳ ಪರಿಚಯ
ರೆನುಕರವರ ತೋಟ, ನೆಲಮಂಗಲ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯ...