ಮಣ್ಣು ಕೊಚ್ಚಣೆಯ ಕಾರಣಗಳು : • ಮುಖ್ಯವಾಗಿ ನೀರು ಮತ್ತು ಗಾಳಿ • ತಗ್ಗು ದಿಣ್ಣೆಗಳಿಂದ ಕೂಡಿದ ಭೂಮು • ಹೆಚ್ಚುತ್ತಿರುವ ಬೇಸಾಯದ ಒತ್ತಡ. ಅನುಚಿತ/ಅವೈಜ್ಞಾನಿಕ ಬೇಸಾಯ ಪದ್ಧತಿ. • ವಿನಾಶವಾಗುತ್ತಿರುವ ಸಸ್ಯ, ಹುಲ್ಲಿನ ಕವಚ • ಏರುಪೇರು ಮತ್ತು ಅನಿಶ್ಚಿತತೆಯಿಂದ ಕೂಡಿದ ಮಳೆ ಮಣ್ಣು ಕೊಚ್ಚಣೆಯ ಪರಿಣಾಮಗಳು : • ಭೂ ಸವಕಳಿ • ನೀರು ಮತ್ತು ಸಸ್ಯ ಪೋಷಕಾಂಶಗಳ ನಷ್ಟ • ಬೆಳೆ ಉತ್ಪಾದಕತೆ ಕುಂಠಿತ • ಹಳ್ಳ, ಕೆರೆ, ಕುಂಟೆ, ಅಣೆಕಟ್ಟುಗಳು, ಬಂದರುಗಳಲ್ಲಿ ಹೂಳು ತುಂಬುವಿಕೆ, ನಂತರ ಅವುಗಳ ನಿರುಪಯುಕ್ತತೆ+ ಭೂ ಉಪಚಾರಗಳು ಅ) ವ್ಯವಸಾಯ ಯೋಗ್ಯವಲ್ಲದ ಜಮೀನಿನ ಉಪಚಾರಗಳು: ಸಮಪಾತಳಿ ಕಂದಕ • ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಸಮಪಾತಳಿ ರೇಖೆಯ ಮೇಲೆ • ಇಳಿಜಾರಿಗನುಗುಣವಾಗಿ ನಿಗದಿತ ಅಂತರದಲ್ಲಿ 0.45 ಮೀ ಆಳ, 0.6 ಮೀ ಅಗಲ, ಮತ್ತು ಗರಿಷ್ಠ 15 ಮೀ, ಉದ್ಧದ ಕಂದಕ. • ಶೇ 5 ಭೂ ಇಳಿಜಾರಿಗೆ 10 ಮೀ, ಶೇ 5-10 ಭೂ ಇಳಿಜಾರಿನವರೆಗೆ 7.5 ಮೀ. ಮತ್ತು ಶೇ. 10-20 ರವರೆಗೆ ಭೂ ಇಳಿಜಾರಿಗೆ 5 ಮೀ ಅಂತರದಲ್ಲಿ ಕಂದಕ. • ತೆಗೆದ ಮಣ್ಣನ್ನು ಕಂದಕದ ಕೆಳಭಾಗಕ್ಕೆ 0.3 ಮೀ ಅಂತರ ಬಿಟ್ಟು ಹಾಕುವುದು. • ಕಂದಕಗಳಲ್ಲಿ ಸೂಕ್ತ ಅರಣ್ಯ/ಖುಷ್ಕಿ ತೋಟಗಾರಿಕೆ ಸಸ್ಯಗಳನ್ನು ನೆಡುವುದು. • ವಾರಡಿ ಕಂದಕ: • ವಾರ್ಷಿಕ ಸರಾಸರಿ 750 ಮಿ.ಮೀ ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ವಾರಡಿ ರೇಖೆಯ ಮೇಲೆ ಇಳಿಜಾರಿಗೆ ಅನುಗುಣವಾಗಿ ನಿಗದಿತ ಅಂತರದಲ್ಲಿ ಕಂದಕ ನಿರ್ಮಾಣ. • ಶೇ 5 ಭೂ ಇಳಿಜಾರಿಗೆ 10 ಮೀ, ಶೇ 5-10 ಭೂ ಇಳಿಜಾರಿನವರೆಗೆ 7.5 ಮೀ, ಮತ್ತು ಶೇ 10-20 ರವರೆಗೆ ಭೂ ಇಳಿಜಾರಿಗೆ 5 ಮೀ ಅಂತರದಲ್ಲಿ ಕಂದಕ. • ತೆಗೆದ ಮಣ್ಣನ್ನು ಕಂದಕದ ಕೆಳಭಾಗಕ್ಕೆ 0.3 ಮೀ ಅಂತರ ಬಿಟ್ಟು ಹಾಕುವುದು. ಪರ್ಯಾಯ ಸಮಪಾತಳಿ ಕಂದಕ: • ಭೂಮಿಯಲ್ಲಿ ಭೂ ಏರಿಳಿತ ಹೆಚ್ಚು ಇದ್ದಾಗ ನಿರ್ಮಾಣ. • ಎರಡು ಕಂದಕಗಳ ನಡುವಿನ ಅಂತರ ಕೆಳಗಿನ ಕಂದಕದ ಎರಡು ಪಟ್ಟು. • ಶೇ 5 ಭೂ ಇಳಿಜಾರಿಗೆ 10 ಮೀ, ಶೇ 15-0 ಭೂ ಇಳಿಜಾರಿನವರೆಗೆ 7.5 ಮೀ ಮತ್ತು ಶೇ 10-20 ರವರೆಗೆ ಭೂ ಇಳಿಜಾರಿಗೆ 5 ಮೀ ಅಂತರದಲ್ಲಿ ಕಂದಕ. • ತೆಗೆದ ಮಣ್ಣನ್ನು ಕಂದಕದ ಕೆಳಭಾಗಕ್ಕೆ 0.3 ಮೀ ಅಂತರ ಬಿಟ್ಟು ಹಾಕುವುದು. ತಿರುವು ಗಾಲುವೆ • ವ್ಯವಸಾಯ ಯೋಗ್ಯವಲ್ಲದ ಜಮೀನಿನಿಂದ ವ್ಯವಸಾಯ ಯೋಗ್ಯ ಜಮೀನಿಗೆ ಬರುವ ನೀರನ್ನು ನಿಯಂತ್ರಣ ಮಾಡಲು ನಿರ್ಮಾಣ. • ಹರಿದು ಬರುವ ನೀರನ್ನು ಕೊರಕಲು/ಹಳ್ಳಕ್ಕೆ ತಿರುಗಿಸಲಾಗುವುದು. • ಕಂದಕದ ಗಾತ್ರ ಮೇಲಿನಿಂದ ಹರಿದು ಬರುವ ನೀರಿನ ಪ್ರಮಾಣವನ್ನು ಅನುಸರಿಸಿರುತ್ತದೆ