ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ತಜ್ಞ ವ್ಯವಸ್ಥೆಗಳು / ಸಾಗುವಳಿ ಜಮೀನಿನ ಉಪಚಾರ ಕ್ರಮಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಾಗುವಳಿ ಜಮೀನಿನ ಉಪಚಾರ ಕ್ರಮಗಳು

ಸಾಗುವಳಿ ಜಮೀನಿನ ಉಪಚಾರ ಕ್ರಮಗಳು ಇದರ ಬಗ್ಗೆ

ಅ) ಬೇಸಾಯ ಕ್ರಮಗಳು: ಮಳೆಯನೀರನ್ನು ಬಿದ್ದ ಸ್ಥಳದಲ್ಲಿ ಇಂಗಿಸಲು

•             ಮಾಗಿ ಉಳುಮೆ

•             ಅಂತರ ಬದು ಪ್ರದೇಶದ ನಿರ್ವಹಣೆ

•             ಪ್ರತಿ 10 ಅಡಿಗೊಂದು ದೋಣಿ ಸಾಲು ತೆಗೆದು ನೀರು ಇಂಗುವಂತೆ ಮಾಡುವುದು

•             ಕೆಂಪು ಮಣ್ಣಿನಲ್ಲಿ ಹೆಪ್ಪುಗಟ್ಟುವಿಕೆ ತಡೆಯಲು ಆಗಾಗ್ಗೆ ಅಂತರ ಬೇಸಾಯ, ಸಣ್ಣ ಸಾಲು ತೆಗೆಯುವುದು

•             ಅಂತರ ಬೆಳೆ, ದಿಣ್ಣೆ ಸಾಲುಗಳ(ಖiಜges & ಜಿuಡಿಡಿoತಿs) ನಿರ್ಮಾಣ

•             ಸಮಪಾತಳಿ/ಇಳಿಜಾರಿಗೆ ಅಡ್ಡಲಾಗಿ ಉಳುಮೆ, ಬಿತ್ತನೆ ಬೇಸಾಯ

ಆ) ಯಾಂತ್ರಿಕ ಕ್ರಮಗಳು:

ಸಮಪಾತಳಿ ಬದು: ಮಣ್ಣಿನ ಸವಕಳಿ ನಿಯಂತ್ರಿಸಲು ತೇವಾಂಶ ಹಿಡಿದಿಡಲು ಸಮಪಾತಳಿ ರೇಖೆ ಮೇಲೆ ರಚಿಸಲಾದ ಮಣ್ಣಿನ ಬದು

ಮಳೆ: ವಾರ್ಷಿಕ 750 ಮಿ.ಮೀ. ಗಿಂತ ಹೆಚ್ಚು, ಇಳಿಜಾರು: ಶೇ.6 ಕ್ಕಿಂತ ಕಡಿಮೆ,

ಮಣ್ಣು: ಕೆಂಪು, ಜಂಬಿಟ್ಟಿಗೆ, ಮೆಕ್ಕಲು, ಕಡಿಮೆ ಆಳದ ಕಪ್ಪು ಬದುವಿನ ಛೇದ: 0.5 ರಿಂದ 1.0 ಚ.ಮೀ.

ಕಂದಕದೊಂದಿಗೆ ಬದು:

•             ಹೆಚ್ಚು ಆಳವಿರುವ ಮಣ್ಣಿನಲ್ಲಿ 5 ಮೀ. ಉದ್ದ, 1 ಮೀ ಅಗಲ, 0.6 ಮೀ ಆಳದ ಅಳತೆಯ್ಳುಳ ಕಂದಕಗಳನ್ನು ತೆಗೆದು ಅದರ ಮಣ್ಣಿನಿಂದ ಕಂದಕ ಮತ್ತು ಬದುವಿನ ಮಧ್ಯೆ 0.6 ಮೀ. ಬರ್ಮ್ ಬಿಟ್ಟು ಬದುವನ್ನು ನಿರ್ಮಿಸಲಾಗುವುದು.

•             ಪ್ರತಿಶತ ಇಳುಕಲಿಗೆ ಅನುಗುಣವಾಗಿ ಸಣ್ಣ ಹಿಡುವಳಿಗಳನ್ನು ಗಮನಿಸಿ ರೈತನ ಜೊತೆ ಹೊಂದಾಣಿಕೆ ಮಾಡಿಕೊಂಡು ಬದು ನಿರ್ಮಿಸುವುದು.

•             ಬದುವಿನ ಉದ್ದಕ್ಕೂ ಮೇಲ್ಭಾಗದಲ್ಲಿತೇವಾಂಶ ಹೆಚ್ಚಿಸಲು ಸಮಪಾತಾಳಿ ಬದು ನಿರ್ಮಿಸಿ. ಹೆಚ್ಚುವರಿ ಮಳೆಯ ನೀರನ್ನು ಹೊರ ಹಾಕಲು 0.30 ಮೀ ಎತ್ತಿಸಿ ಕೋಡಿಯನ್ನು ಕಟ್ಟುವುದು.

•             ಬದು ನಿರ್ಮಿಸಲು ಮಣ್ಣು ತೆಗೆಯುವಾಗ ಬದುವಿನಿಂದ ಗುಂಡಿಗೆ ಕನಿಷ್ಟ 0.3 ಮೀ ಬರ್ಮ ಬಿಡುವುದು.

ಬೋಲ್ಡರ್ ಬದು:

ಗುಂಡು ಕಲ್ಲುಗಳು ಯಥಚ್ಚವಾಗಿ ಲಭ್ಯವಿರುವ ಸ್ಥಳಗಳಲ್ಲಿ ಸಮಪಾತಾಳಿಯ ಮೇಲೆ ಮಣ್ಣಿನ ಬದುವಿಗೆ ಬದಲಾಗಿ ಗುಂಡು ಕಲ್ಲಿನ ಬದುಗಳನ್ನು ನಿರ್ಮಿಸಬಹುದು.

ವಾರಡಿ ಬದು(ಗ್ರೇಡೆಡ್ ಬಂಡ್):

ಅಧಿಕ ಮಳೆ ಬೀಳುವ ಪ್ರದೇಶದಲ್ಲಿ(750 ಮಿ.ಮಿ ಹೆಚ್ಚು) ಹೆಚ್ಚುವರಿ ಮಳೆ ನೀರನ್ನು ಸಾಗುವಳಿ ಭೂಮಿಯಿಂದ ನೀರು ದಾರಿಯ ಮೂಲಕ ಹೊರಹಾಕಲು ಬದು ನಿರ್ಮಿಸುವುದು.

ಸಮಪಾತಳಿ ಬದು ಪಟ್ಟಿ:

ಕಡಿಮೆ ಮಳೆ/ಇಳಿಜಾರಿ/ಇಂಗುವಿಕೆ ಪ್ರದೇಶದಲ್ಲಿ ಹೆಚ್ಚು ನೀರು ಇಂಗಲು ನಿರ್ಮಿಸುವುದು. ಎರಡು ಪಟ್ಟಿಗಳ ನಡುವೆ ಸಣ್ಣ ಗಾತ್ರದ ಬದುಗಳನ್ನು ನಿರ್ಮಿಸಬಹುದು.

ನೀರು ದಾರಿಗಳು:

•             ಕೃಷಿ ಜಮೀನಿನ ಹೆಚ್ಚುವರಿ ನೀರನ್ನು ಸುರಕ್ಷಿತವಾಗಿ ಹಳ್ಳ, ನಾಲಾಕ್ಕೆ ತಲುಪಿಸಲು ನಿರ್ಮಿಸುವ ಕಾಲುವೆ.

•             ನೀರು ದಾರಿ ಉದ್ದಕ್ಕೂ 1.00 ಮೀ ಎತ್ತರಾಂತರದಲ್ಲಿ ಲಭ್ಯವಿರುವ ಸ್ಥಳಕ್ಕನುಗುಣವಾಗಿ 1.00 ಮೀ ಅಥವಾ 1.5 ಮೀ ಉದ್ದ, ಅಗಲ, ಆಳದ ಗುಂಡಿಗಳನ್ನು ತೆಗೆಯಬೇಕು. ಇವು ವೇಗ ತಡೆಗಳಾಗಿ ಹಾಗೂ ಹೂಳನ್ನು ಹಿಡಿದಿಡುವ ಗುಂಡಿಗಳಾಗಿ ಕೆಲಸ ನಿರ್ವಹಿಸುತ್ತದೆ.

•             ಸಡಿಲ ಮಣ್ಣಿನಲ್ಲಿ ವೇಗ ತಡೆಗಳಾಗಿ ಸಸ್ಯ ಮೂಲದ ತಡೆಗಳನ್ನು ನಿರ್ಮಿಸಬೇಕು.

•             ನೀರಿನ ಕ್ಷೇತ್ರ ಹೆಚ್ಚಾದಾಗ ನೀರು ಬೀಳುವ ಕಡೆ ಸೌಮ್ಯ ಇಳಿಜಾರು ಕೊಟ್ಟು, ಕಲ್ಲಿನ/ಹುಲ್ಲಿನ ಹೆಪ್ಪಿನ ಹೊದಿಕೆ ನಿರ್ಮಿಸುವುದು.

2.91891891892
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top