ಕುಟುಕು ಕಣವಂತ (ಸಿಯಲೆಂಟರೇಟ) ವಂಶಕ್ಕೆ ಸೇರಿದ ಕಡಲ ಜೀವಿ. ಕೊಡೆ ಅಥವಾ ಸಾಸರ್ ಆಕಾರದ ಅಂಬಲಿಯಂತೆ ಕಾಣುವ ರಚನೆಯಿದೆ. ದ್ವಿಕುಡಿ ಪದರ ಜೀವಿ. ಒಳಕುಡಿ ಪದರ ಮತ್ತು ಹೊರಕುಡಿ ಪದರಗಳ ನಡುವೆ ಕೋಶರಹಿತ ಲೋಳೆಯಂಥ ಮೀಸೋಗ್ಲಿಯ ಇದೆ. ಕೊಡೆಯು ಉಬ್ಬಿದ ಮೇಲ್ಭಾಗವನ್ನು ಮತ್ತು ಕುಹರಿ ಕೆಳಭಾಗವನ್ನು ಹೊಂದಿದೆ. ಇವನ್ನು ಎಕ್ಸ್ ಅಂಬ್ರೆಲಾರ್ ಮತ್ತು ಸಬ್ ಅಂಬ್ರೆಲಾರ್ ಎಂದು ಗುರುತಿಸಬಹುದು. ಗಾತ್ರದಲ್ಲಿ ಸಾಮಾನ್ಯವಾಗಿ 3 ರಿಂದ 12 ಅಂಗುಲ ಅಗಲ ಇರುತ್ತದೆ. 2' ಗಳಿಗಿಂತ ಹೆಚ್ಚಿನ ವ್ಯಾಸವುಳ್ಳ ಅರಿಲಿಯಾಗಳು ಕಂಡು ಬಂದಿವೆ. ಅಂಬಲಿ ಮೀನು ಪಾರದರ್ಶಕ ತಿಳಿ ನೀಲಿ ವರ್ಣದ್ದು.
ಕೊಡೆ ಮೇಲ್ಭಾಗದಲ್ಲಿ ನಾಲ್ಕು ಕೆಂಪು ಮಿಶ್ರಿತ ಕುದುರೆ ಲಾಳ ಆಕಾರದ ಪ್ರಜನನಾಂಗಗಳಿವೆ. ಕೊಡೆಯ ಅಂಚು ಕುಳಿಗಳಿಂದ ಸರಿ ಸಮನಾಗಿ ಎಂಟು ಭಾಗಗಳಾಗಿವೆ. ಪ್ರತಿ ಕುಳಿಯಲ್ಲಿ ರೊಫಾಲಿಯ ಅಥವಾ ಟೆಂಟಕ್ಯುಲೋಸಿಸ್ ಜ್ಞಾನೇಂದ್ರಿಯ ಇದೆ. ಕೊಡೆಯ ಅಂಚು ಕುಬ್ಜವಾದ ಕರಬಳ್ಳಿಗಳನ್ನು ಹೊಂದಿದೆ. ಕೊಡೆಯ ಕೆಳಭಾಗದಲ್ಲಿ ಚಚ್ಚೌಕವಾದ ಬಾಯಿ ಇದೆ. ನಾಲ್ಕು ಮೂಲೆಗಳಿಂದ ಉದ್ದವಾದ ನಾಲ್ಕು ಬಾಹುಗಳು ಹೊರಚಾಚಿವೆ. ಈ ಬಾಹುಗಳ ಒಳಭಾಗದಲ್ಲಿ ಕಾಲುವೆ ಇದ್ದು ಅದರ ಇಕ್ಕೆಲಗಳಲ್ಲಿ ಹೇರಳ ವಾದ ಕುಟುಕುಕಣವಂತಗಳುಳ್ಳ ಕರ ಬಳ್ಳಿಗಳಿವೆ. ಅರಿಲಿಯ ಏಕ ಲಿಂಗಿ ಗಳು.
ಗಂಡು ಹೆಣ್ಣುಗಳು ಬಾಹ್ಯ ರಚನೆಯಲ್ಲಿ ಒಂದೇ ತೆರನಾಗಿವೆ. ಜಠರ ಕುಳಿಗಳಲ್ಲಿ ಪ್ರಜನ ನಾಂಗಗಳಿವೆ. ಒಳಕುಡಿ ಪದರದಿಂದ ಪ್ರಜನನಾಂಗಗಳು ರೂಪು ಗೊಳ್ಳುತ್ತವೆ. ಪ್ರಜನನ ಜೀವಕಣಗಳು ಪಕ್ವವಾದಾಗ ಜಠರದಿಂದ ಹೊರಬೀಳುತ್ತವೆ. ಹೆಣ್ಣಿನ ಜಠರ ಪರಿಚಲನಾ ಅವಕಾಶದಲ್ಲಿ ನಿಶೇಚನ ನಡೆಯುತ್ತದೆ. ಯುಗ್ಮಕದಿಂದ ಸ್ವತ್ರಂತ್ರ ಜೀವಿ ಶಿಲಕಾ ಪ್ಲಾನುಲ ಹೊರಬೀಳುತ್ತದೆ. ಪ್ಲಾನುಲ ಪಾಲಿಪ್ ರೂಪ ತಳೆಯು ವುದು. ಇದರಿಂದ ಸ್ವತಂತ್ರವಾಗಿ ಈಜುವ ಎಫೈರಾ ಡಿಂಭಗಳಾಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ ಅಂಬಲಿಮೀನಿನ ಜೀವನ ಚರಿತ್ರೆಯಲ್ಲಿ ಸ್ವಂತಂತ್ರವಾಗಿ ಈಜುವ ಮೇಡ್ಯುಸ ರೂಪಿ, ಸ್ಥಾಯಿ ರೂಪದ ಪಾಲಿಪ್ನ್ನು ಮತ್ತು ಪಾಲಿಪ್ ರೂಪ ವೆಲೂಡ್ಯಸ್ ರೂಪಿಯಾಗಿ ಮಾರ್ಪಾಡಾಗುವುದನ್ನು ಪರ್ಯಾಯ ಸಂತಾನೋತ್ಪತ್ತಿ ಎನ್ನುತ್ತಾರೆ.
ಮೂಲ : ವಿಕಿಪೀಡಿಯ
ಕೊನೆಯ ಮಾರ್ಪಾಟು : 7/24/2020