ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಮಣ್ಣು ಮತ್ತು ಜಲ ಸಂರಕ್ಷಣೆ / ಚಟುವಟಿಕೆಯ ರೂಪ ರೇಷೆಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಚಟುವಟಿಕೆಯ ರೂಪ ರೇಷೆಗಳು

ಮೀನುಗಾರಿಕೆಗೆ ಸೂಕ್ತವಾದ ಜಲ ಸಂಗ್ರಹಣಾ ವಿನ್ಯಾಸಗಳಾದ ಕೃಷಿ ಹೊಂಡ, ನಾಲಾ ಬದು, ತಡೆ ಅಣೆ, ಮತ್ತು ಸಣ್ಣ ಕೆರೆಗಳಲ್ಲಿ ಅವುಗಳಲ್ಲಿನ ನೀರು ನಿಲ್ಲುವ ಸಾಮಥ್ರ್ಯ, ನೀರು ನಿಲ್ಲುವ ಅವಧಿ, ಮಣ್ಣಿನ ಗುಣ ಮತ್ತು ರೈತರ/ಸ್ವಸಹಾಯ ಗುಂಪಿಗೆ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಇರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಜಲವಿನ್ಯಾಸಗಳನ್ನು ಗುರುತಿಸುವುದು

•             ಮೀನುಗಾರಿಕೆಗೆ ಸೂಕ್ತವಾದ ಜಲ ಸಂಗ್ರಹಣಾ ವಿನ್ಯಾಸಗಳಾದ ಕೃಷಿ ಹೊಂಡ, ನಾಲಾ ಬದು, ತಡೆ ಅಣೆ, ಮತ್ತು ಸಣ್ಣ ಕೆರೆಗಳಲ್ಲಿ ಅವುಗಳಲ್ಲಿನ ನೀರು ನಿಲ್ಲುವ ಸಾಮಥ್ರ್ಯ, ನೀರು ನಿಲ್ಲುವ ಅವಧಿ, ಮಣ್ಣಿನ ಗುಣ ಮತ್ತು ರೈತರ/ಸ್ವಸಹಾಯ ಗುಂಪಿಗೆ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಇರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಜಲವಿನ್ಯಾಸಗಳನ್ನು ಗುರುತಿಸುವುದು.

•             ರೈತರಿಗೆ ಮೀನು ಮರಿ ಬಿತ್ತುವ ಮುನ್ನ, ಮೀನು ಮರಿ ಬಿತ್ತನೆ ಸಮಯದಲ್ಲಿ ಮತ್ತು ಬಿತ್ತನೆ ನಂತರದ ಮೀನು ಕೃಷಿ ನಿರ್ವಹಣೆ ಕುರಿತು ಮಾಹಿತಿ ನೀಡುವುದು (ತರಬೇತಿ ಕಾರ್ಯಕ್ರಮ).

•             ಮೀನು ಮರಿ ಬಿತ್ತನೆ ಸಂಖ್ಯೆ (ಸಾಂದ್ರತೆ) ಮತ್ತು ಕಾರ್ಯ ನಿರ್ವಹಣೆಯ ಬೇಡಿಕೆಗಳನ್ನು ಪ್ರತಿ ಜಲ ವಿನ್ಯಾಸಕ್ಕನುಗುಣವಾಗಿ ನಿರ್ಧರಿಸುವುದು.

•             ಜಲ ಸಂಗ್ರಹಣಾ ಕೃಷಿ ವಿನ್ಯಾಸಗಳಿಗನುಗುಣವಾಗಿ ನಿರ್ಧರಿಸಿದ ನಂತರ ತಳಿ ಬಿತ್ತನೆ ಮೀನು ಮರಿಗಳನ್ನು ಹತ್ತಿರದ ಮೀನು ಮರಿ ಉತ್ಪಾದನಾ/ಪಾಲನಾ ಕೇಂದ್ರದಿಂದ ಪಡೆದು ಬಿತ್ತನೆ ಮಾಡುವುದು.

•             ಸೂಚನೆ : ಮೀನುಗಳ ಬೆಳವಣಿಗೆ ಮತ್ತು ಬದುಕುಳಿಯುವಿಕೆ ಹೆಚ್ಚಿಸಲು ರೈತರು ಬಹು ಮುಖ್ಯವಾಗಿ ಮೀನು ಮರಿ ಬಿತ್ತನೆಗೆ ಮುನ್ನ ಮತ್ತು ಮೀನು ಮರಿ ಬಿತ್ತನೆ ನಂತರದ ಕಾರ್ಯಚಟುವಟಿಕೆಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.

•             ಮೀನಿನ ಬೆಳವಣಿಗೆಯನ್ನು ಪರೀಕ್ಷಿಸಲು ಆಗಿಂದಾಗ್ಗೆ ನೀರಿನ ಗುಣಮಟ್ಟ ಮತ್ತು ಪ್ರಾಯೋಗಿಕವಾಗಿ ಬಲೆಯನ್ನು ಉಪಯೋಗಿಸಿ ಮೀನನ್ನು ಹಿಡಿದು ಪರಿಶೀಲಿಸಬೇಕಾಗುತ್ತದೆ.

•             ಮೀನಿನ ಬೆಳವಣಿಗೆ ಮತ್ತು ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ, ಮೀನು ಹಿಡುವಳಿ ಮಾಡುವುದು

ಅನುಷ್ಠಾನ ಮಾರ್ಗಸೂಚಿ:

ಮೀನುಗಾರಿಕೆ ಅಭಿವೃದ್ಧಿಯನ್ನು ವಿವಿಧ ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಈ ಕೆಳಗೆ ತಿಳಿಸಿರುವ ಚಟುವಟಿಕೆಗಳ ಮೂಲಕ ಅನುಷ್ಠಾನಗೊಳಿಸಲಾಗುವುದು.

ತರಬೇತಿ: ಜಲ ವಿನ್ಯಾಸಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಆಸಕ್ತಿ ಇರುವ ರೈತರಿಗೆ ಮೀನು ಪಾಲನೆಯ ಬಗ್ಗೆ ಒಂದು ದಿನದ ತರಬೇತಿಯನ್ನು ನೀಡಲಾಗುವುದು.

•             ತರಬೇತಿಯಲ್ಲಿ ಬಿತ್ತನೆಗೆ ಮೊದಲು ಕೊಳಗಳ ತಯಾರಿ, ಪಾಲನೆ, ಯೋಗ್ಯ ತಳಿ ಮೀನುಗಳು, ಮೀನು ಮರಿ ಬಿತ್ತನೆ, ಕೃತಕ ಆಹಾರ ನೀಡುವಿಕೆ ಹಾಗೂ ಫಲವತ್ತತೆಯನ್ನು ಕಾಪಾಡಲು ಸಾವಯವ ಗೊಬ್ಬರ ನೀಡುವುದರ ಬಗ್ಗೆ ತಿಳುವಳಿಕೆ ನೀಡಲಾಗುವುದು.

•             ಇದಲ್ಲದೆ ಗ್ರಾಮದ ಕೆರೆಗಳಲ್ಲಿ ಮೀನು ಪಾಲನೆಯನ್ನು ಕೈಗೊಳ್ಳಲು ಅರ್ಹ ಫಲಾನುಭವಿಗಳನ್ನು (ಸ್ವಸಹಾಯ ಗುಂಪಿನ ಸದಸ್ಯರು/ವೈಯಕ್ತಿಕ ಫಲಾನುಭವಿಗಳು) ಆಯ್ಕೆ ಮಾಡಿ 3-4 ದಿನಗಳ ತರಬೇತಿಯನ್ನು ನೀಡಲಾಗುವುದು.

•             ಫಲಾನುಭವಿಗಳ ಆಯ್ಕೆಯನ್ನು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅನುಷ್ಠಾನಾಧಿಕಾರಿಗಳು ನಿರ್ವಹಿಸುವುದು.

•             ಕೃಷಿ ಹೊಂಡ/ನಾಲಾಬದು ಮುಂತಾದ ಜಲ ವಿನ್ಯಾಸಗಳಲ್ಲಿ ಮೀನು ಪಾಲನೆ ಬಗ್ಗೆ ಒಂದು ದಿನದ ತರಬೇತಿಯನ್ನು ರೈತರ ಸಂಖ್ಯೆಯನ್ನು ಆಧರಿಸಿ ಸ್ಥಳೀಯವಾಗಿ ಹಮ್ಮಿಕೊಳ್ಳಬಹುದಾಗಿದೆ ಮತ್ತು ಸ್ವ ಸಹಾಯ ಗುಂಪಿನ ಸದಸ್ಯರಿಗೆ 3-4 ದಿನಗಳ ತರಬೇತಿಯನ್ನು ಸಮೀಪದ ಮೀನುಗಾರಿಕೆ ಇಲಾಖೆಯ/ಮೀನು ಕೃಷಿಕರ ಅಭಿವೃದ್ಧಿ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳುವುದು.

•             ವಿವಿಧ ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಮೀನುಸಾಕಾಣಿಕೆ:

2.98230088496
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top