ಕರ್ನಾಟಕ ರಾಜ್ಯವು ಮೂರು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡವನ್ನು ಒಳಗೊಂಡು 1956 ರಲ್ಲಿ ಕಡಲ ತೀರವನ್ನು ಹೊಂದಿದ ರಾಜ್ಯಗಳಲ್ಲಿ ಒಂದಾಯಿತು. 1957ರಲ್ಲಿ ರಾಜ್ಯದಲ್ಲಿ ಸ್ವತಂತ್ರ ಮೀನುಗಾರಿಕೆ ಇಲಾಖೆಯನ್ನು ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ ಸ್ಥಾಪಿಸಲಾಯಿತು. ಅಂದಿನಿಂದ ಇಲಾಖೆಯು ಮೀನುಗಾರಿಕೆ ಹಾಗೂ ಮೀನುಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಳನಾಡು ಮತ್ತು ಕರಾವಳಿ ವಲಯಗಳಲ್ಲಿ ಅನುಷ್ಠನಗೊಳಿಸುವ ಮೂಲಕ ಸತತ ಪ್ರಯತ್ನ ಮಾಡುತ್ತಿದೆ. ಕರ್ನಾಟಕ ರಾಜ್ಯವು ಕರಾವಳಿ, ಹಿನ್ನೀರು ಹಾಗೂ ಒಳನಾಡು ಮೀನುಗಾರಿಕೆ ಸಂಪನ್ಮೂಲಗಳನ್ನು ಹೊಂದಿದ್ದು, ಮೀನುಗಾರಿಕೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ರಾಜ್ಯದಲ್ಲಿ 3399 ದೊಡ್ಡ ಕೆರೆಗಳು, 22624 ಸಣ್ಣ ಕೆÉರೆಗಳು ಹಾಗೂ 82 ಜಲಾಶಯಗಳಿದ್ದು, ಒಟ್ಟು 5.65 ಲಕ್ಷ ಹೆಕ್ಟೇರ್ ಜಲವಿಸ್ತೀರ್ಣದ ಒಳನಾಡು ಸಂಪನ್ಮೂಲ ಹೊಂದಿದೆ. ಮೂರು ಕರಾವಳಿ ಜಿಲ್ಲೆಗಳು 27,000 ಚ.ಕಿ.ಮೀ. ವಿಸ್ತೀರ್ಣದ ವಿಶಾಲವಾದ ಸಾಗರ ಭೂಖಂಡ ಪ್ರದೇಶವುಳ್ಳ 320 ಕಿ.ಮೀ. ಉದ್ದದ ಕರಾವಳಿ ತೀರ ಪ್ರದೇಶವನ್ನು ಹೊಂದಿದ್ದು, ಕಡಲ ಮೀನುಗಾರಿಕೆಗೆ ಅವಕಾಶ ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:ನಿರ್ವಹಣಾ ಮುಂಗಡ ಪತ್ರ
ಕೊನೆಯ ಮಾರ್ಪಾಟು : 6/5/2020
ಗೋ ಅನಿಲವನ್ನು ಆಹಾರ ತಯಾರಿ ಮತ್ತು ದೀಪ ಉರಿಸಲು ಬಳಸುತ್ತಿರ...
ಒಡಂಬಡಿಕೆ ಒಪ್ಪಂದದ ಪತ್ರ
ಅರ್ಜಿದಾರರ ಪ್ರಮಾಣ ಪತ್ರ