ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪರಿಚಯ

ಮೀನುಗಾರಿಕೆ; ಜಲಾನಯನ ಪ್ರದೇಶಗಳ ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಯ ಮಾದರಿಗಳು ಮತ್ತು ಅನುಷ್ಠಾನ ವಿಧಾನ

ಮೀನು ಪಾಲನೆಯು ಪೌಷ್ಟಿಕ ಆಹಾರ ಉತ್ಪಾದನೆ ಹಾಗೂ ನೀರು ಸಂಗ್ರಹ ವಿನ್ಯಾಸಗಳ ಸದ್ಭಳಕೆಯ ಚಟುವಟಿಕೆಯಾಗಿರುತ್ತದೆ.

ಜಲವಿನ್ಯಾಸಗಳಲ್ಲಿ ಮೀನುಪಾಲನೆ :

ಜಲಾನಯನ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ಭೂ, ಜಲ ಅಭಿವೃದ್ಧಿ ಮತ್ತು ಸುಸ್ಥಿರತೆಯನ್ನು ಕಾಪಾಡಲು ಕೈಗೊಳ್ಳಲಾದ ಚಟುವಟಿಕೆಗಳಿಂದ ಕೃಷಿ ಹೊಂಡ, ನಾಲಾ ಬದು, ಚೆಕ್ ಡ್ಯಾಮ್, ಗೋಕಟ್ಟೆ ಮುಂತಾದ ಜಲ ಸಂಪನ್ಮೂಲಗಳು ನಿರ್ಮಿತವಾಗಿರುತ್ತವೆ. ಇದಲ್ಲದೆ ಈ ಪ್ರದೇಶಗಳಲ್ಲಿ ಈ ಮೊದಲೇ ಗ್ರಾಮದ ವಿವಿಧ ಉದ್ದೇಶಗಳಿಗೆ ನಿರ್ಮಿಸಿದ ಹಲವಾರು ಸಣ್ಣ ಕೆರೆಗಳು, ಕಲ್ಯಾಣಿ, ನೀರಿನ ಆಸರೆಗಳು ಇರುತ್ತವೆ. ಈ ಎಲ್ಲಾ ಜಲ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿಪಡಿಸಿ (ನವೀಕರಿಸಿ) ಇವುಗಳ ನೀರು ಶೇಖರಣಾ ಸಾಮಥ್ರ್ಯವನ್ನು ಹೆಚ್ಚಿಸುವುದರಿಂದ ಅಂತರ್ ಜಲ ಮಟ್ಟ ಹೆಚ್ಚುವಲ್ಲಿ ಸಹಕಾರಿಯಾಗುವುದು.

ಈ ಸಂಪನ್ಮೂಲಗಳಲ್ಲಿ 6 ತಿಂಗಳುಗಳಿಗೂ ಹೆಚ್ಚು ಕಾಲ ನೀರು ನಿಲ್ಲುವ ವಿನ್ಯಾಸಗಳು ಮೀನು ಪಾಲನೆಗೆ ಯೋಗ್ಯವಾಗಿದ್ದು, ಇವುಗಳಲ್ಲಿ ಮೀನು ಪಾಲನೆಯನ್ನು ಕೈಗೊಳ್ಳುವುದರಿಂದ ಕೃಷಿಯ ಜೊತೆಗೆ ಜಲ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಪ್ರೋಟೀನ್‍ಯುಕ್ತ ಆಹಾರ ಉತ್ಪಾದನೆಯೊಂದಿಗೆ ರೈತರಿಗೆ ಸ್ವಲ್ಪ ಮಟ್ಟಿನ ಆದಾಯವನ್ನು ಸಹ ತರುವಲ್ಲಿ ಸಹಕಾರಿಯಾಗುವುದು. ಈ ಯೋಜನೆಯಲ್ಲಿ ರೈತರಿಗೆ ಮೀನು ಪಾಲನೆಯ ಬಗ್ಗೆ ಜಾಗೃತಿ / ಅರಿವು ಮೂಡಿ ಇತರೆ ಸೂಕ್ತ ಜಲ ಸಂಪನ್ಮೂಲಗಳಲ್ಲಿಯೂ ಸಹ ಮೀನು ಪಾಲನೆಯನ್ನು ರೂಢಿಸಿಕೊಳ್ಳಲು ಸಹಕಾರಿಯಾಗುವುದು.

ಸಣ್ಣ ಕೆರೆಗಳಲ್ಲಿ ಮೀನು ಪಾಲನೆ

ಗ್ರಾಮಗಳಲ್ಲಿರುವ ಸಮೂಹ ಮಾಲೀಕತ್ವ ಹೊಂದಿರುವ ಸಣ್ಣ ಕೆರೆಗಳನ್ನು ಬಹು ಹಿಂದೆ ನಿರ್ಮಿಸಿದ್ದು, ಹೆಚ್ಚಿನ ಕೆರೆಗಳು ಬಹಳ ವರ್ಷಗಳವರೆಗೆ ನಿರ್ವಹಣೆ ಇಲ್ಲದೆ ಹೂಳು ತುಂಬಿ ಅವುಗಳ ನೀರು ಶೇಖರಣಾ ಸಾಮಥ್ರ್ಯ ಕಡಿಮೆಯಾಗಿರುವುದಲ್ಲದೆ, ಕೆಲವುಗಳಲ್ಲಿ ನೀರಿನ ಕಳೆಗಳು ಬೆಳೆದು ಅನುಪಯುಕ್ತವಾಗಿವೆ. ಸ್ಥಳೀಯ ಸರ್ಕಾರಗಳು (ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ) ಅಸ್ಥಿತ್ವಕ್ಕೆ ಬಂದ ನಂತರ 40 ಹೆಕ್ಟೇರ್‍ವರೆಗಿನ ಅಚ್ಚಕಟ್ಟುಳ್ಳ ಕೆರೆಗಳ ಹಕ್ಕನ್ನು ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಿದ ನಂತರ ಬಹಳಷ್ಟು ಸಣ್ಣ ಕೆರೆಗಳಲ್ಲಿ ಮೀನು ಅಭಿವೃದ್ಧಿ ಕೈಗೊಂಡಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ, ಅರ್ಹ ಫಲಾನುಭವಿಗಳಿಗೆ ಕೆರೆಯನ್ನು ಗುತ್ತಿಗೆಗೆ ನೀಡಿ ಮೀನು ಕೃಷಿಕರ ಅಭಿವೃದ್ಧಿ ಸಂಸ್ಥೆಗಳಿಗೆ ತರಬೇತಿಗೆ ಕಳುಹಿಸದೆ ಇರುವುದು.

ಆದ್ದರಿಂದ ಈ ರೀತಿ ಮೀನುಗಾರಿಕೆ ಅಭಿವೃದ್ಧಿ ಕೈಗೊಳ್ಳದೇ ಇರುವ ಸಣ್ಣ ಕೆರೆಗಳಲ್ಲಿ ಮೀನುಪಾಲನೆಯನ್ನು ಸ್ವಸಹಾಯ ಗುಂಪುಗಳ ಅಥವಾ ಅರ್ಹ ವೈಯಕ್ತಿಕ ಫಲಾನುಭವಿಗಳ ಮುಖಾಂತರ ಕೈಗೊಳ್ಳಲು ಸಾಧ್ಯವಿದೆ. ಇದರಿಂದ ಜಲಾನಯನ ಪ್ರದೇಶಗಳಲ್ಲಿ ಭೂರಹಿತ ಕಾರ್ಮಿಕರಿಗೆ ಉಪ ಕಸುಬು ದೊರೆಯುವುದಲ್ಲದೆ ಸ್ಥಳೀಯವಾಗಿ ಪೌಷ್ಟಿಕ ಆಹಾರ ಉತ್ಪಾದನೆಗೆ ಸಹ ಸಹಕಾರಿಯಾಗುವುದು.

3.01886792453
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top