ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಇ-ಮೊಕದ್ದಮೆ ಹೂಡಿಕೆ
ಭಾರತದ ಸರ್ವೋಚ್ಚ ನ್ಯಾಯಾಲಯ ಸಹ ಇ-ಆಡಳಿತದ ಹಾದಿಯಲ್ಲಿದೆ ಮತ್ತು ಅದರ ಸೇವೆಗಳನ್ನು ಭಾರತದ ಪ್ರಜೆಗಳ ಮನೆ ಬಾಗಿಲಿನಲ್ಲಿ ನೀಡುತ್ತದೆ. ಇದರ ಸಂಬಂಧವಾಗಿ, ಆಕ್ಟೋಬರ್, 2, 2006ರಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಇ-ಮೊಕದ್ದಮೆ ಹೂಡಿಕೆ ಸೌಲಭ್ಯವನ್ನು ಆರಂಭಿಸಿತು.ಇದು ಅಂತರ್ಜಾಲದ ಮೂಲಕ ಮನೆಯಿಂದ ಯಾವುದೇ ಮೊಕದ್ದಮೆಯನ್ನು ಹೂಡುವ ಒಂದು ಸರಳ ವಿಧಾನ. ಇ- ಮೊಕದ್ದಮೆ ಹೂಡಿಕೆಗೆ ನ್ಯಾಯವಾದಿಯ ಸಹಾಯದ ಅವಶ್ಯಕತೆ ಇಲ್ಲ. ಈ ಸೇವೆಯನ್ನು ಜನ ಸಾಮಾನ್ಯರು, ಹಾಗೆಯೇ ನೋಂದಾಯಿತ ನ್ಯಾಯವಾದಿಗಳು ಸಹ ಉಪಯೋಗಿಸಿ ಕೊಳ್ಳಲು ಸಾಧ್ಯ. ಈ ಸೇವೆಯನ್ನು ಪಡೆಯಲು ಬಯಸುವ ಯಾವುದೇ ವ್ಯಕ್ತಿ ಇ-ಮೊಕದ್ದಮೆಗೆ ಲಾಗ್ ಅನ್ ಆಗಬಹುದು ಮತ್ತು ಬಳಕೆದಾರನಾಗಿ ದಾಖಲಾಗಬಹುದು.
ದಾಖಲಾಗುವ ಪ್ರಕ್ರಿಯೆಗೆ ದಯವಿಟ್ಟು ಈ ಕ್ರಮಗಳನ್ನು ಅನುಸರಿಸಿ
- ಸರ್ವೋಚ್ಚ ನ್ಯಾಯಾಲಯದ ಇ- ಮೊಕದ್ದಮೆ ಹೂಡಿಕೆಯ ಮೊದಲ ಬಾರಿಯ ಬಳಕೆದಾರ, ಆತ/ಆಕೆ 'ಸೈನ್ ಅಪ್' ಅಯ್ಕೆಯ ಮೂಲಕ ನೋಂದಣಿ ಮಾಡಿಕೊಳ್ಳ ಬೇಕು.
- ಇ ಮೊಕದ್ದಮೆ ಹೂಡಿಕೆ ಮೂಲಕ 'ಅಡ್ವೊಕೇಟ್-ಆನ್-ರೆಕಾರ್ಡ್' (ದಾಖಲೆಯಲ್ಲಿರುವ ವಕೀಲ) ಮತ್ತು 'ಪೆಟೆಶನರ್-ಇನ್-ಪರ್ಸನ್' (ಫಿರ್ಯಾದಿ) ಮಾತ್ರ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಸಲ್ಲಿಸಲು ಸಾಧ್ಯ.
- ನೀವು 'ಅಡ್ವೊಕೇಟ್-ಆನ್-ರೆಕಾರ್ಡ್' ಆಗಿದ್ದರೆ ನ್ಯಾಯವಾದಿ ಆಯ್ಕೆಯನ್ನು , ಅಥವಾ ನೀವು 'ಪೆಟೆಶನರ್-ಇನ್-ಪರ್ಸನ್' ಆಗಿದ್ದರೆ 'ಇನ್-ಪರ್ಸನ್' ಆಯ್ಕೆ ಮಾಡಿಕೊಳ್ಳಿ.
- ಮೊದಲ ಬಾರಿಗೆ ದಾಖಲಾಗಲು ವೈಯಕ್ತಿಕ ವಿವರಗಳಾದ ವಿಳಾಸ,, ಸಂಪರ್ಕ ವಿವರಗಳು, ಇ-ಮೇಲ್ ವಿಳಾಸ ಇತ್ಯಾದಿಗಳು, ಕಡ್ಡಾಯವಾಗಿ, ನಮೂದಿಸಬೇಕು.
- 'ಅಡ್ವೊಕೇಟ್-ಆನ್-ರೆಕಾರ್ಡ್' ಗೆ ಆತ/ಆಕೆಯ ಕೋಡ್ ('ಅಡ್ವೊಕೇಟ್-ಆನ್-ರೆಕಾರ್ಡ್' ಕೋಡ್) ಲಾಗ್ಇನ್-ಐಡಿ ಯಾಗಿರುತ್ತಿದೆ, ಹಾಗೆ 'ಇನ್-ಪರ್ಸನ್' ಆತ/ಆಕೆಯ ಲಾಗ್ಇನ್-ಐಡಿಯನ್ನು ಸೈನ್ ಅಪ್ ಅಯ್ಕೆಯ ಮೂಲಕ ಸೃಷ್ಟಿಸಿ ಕೊಳ್ಳಬೇಕು. ನಂತರ ಪಾಸ್ವರ್ಡ್ ಅನ್ನು ನಮೂದಿಸ ಬೇಕು, ಲಾಗ್ಇನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಕಡ್ಡಾಯ ಅಗತ್ಯಗಳನ್ನು ಸರಿಯಾಗಿ ಸಲ್ಲಿಸದ ನಂತರ ಸೃಷ್ಟಿಸಲಾಗುತ್ತದೆ.
- ಯಶಸ್ವಿ ಲಾಗ್ಇನ್ನ ನಂತರ 'ಡಿಸ್ಕ್ಲೈಮರ್ ಸ್ಕ್ರೀನ್' ಪರದೆಯ ಮೇಲೆ ಕಾಣಿಸಿ ಕೊಳ್ಳುತ್ತದೆ.
- ಡಿಸ್ಕ್ಲೈಮರ್ ಮೇಲೆ 'ಐ ಅಗ್ರಿ' ಬಟನ್ ಅನ್ನು ಕ್ಲಿಕ್ ಮಾಡಿದಾಗ ಬಳಕೆದಾರನನ್ನು ಮುಂದುವರಿಯಲು ಅನುಮತಿಸುತ್ತದೆ, ಹಾಗೆ 'ಐ ಡಿಕ್ಲೈನ್' ಬಟನ್ ಲಾಗ್ ಇನ್ ಪರದೆಗೆ ಹಿಂದೆ ಕಳುಹಿಸುತ್ತದೆ.
- ಯಶಸ್ವಿ ಲಾಗ್ಇನ್ನ ನಂತರ , ಬಳಕೆದಾರ ವಿದ್ಯುನ್ಮಾನ ಮಾಧ್ಯಮದ ಮೂಲಕ ಮೊಕದ್ದಮೆಯನ್ನು ಹೂಡಲು ಸಾಧ್ಯ.
- 'ಹೊಸ ಮೊಕದ್ದಮೆ' ಆಯ್ಕೆ, ಬಳಕೆದಾರನಿಗೆ ಒಂದು ಹೊಸ ಮೊಕದ್ದಮೆಯನ್ನು ಹೂಡಲು ಅನುಮತಿಸುತ್ತದೆ.
- ನ್ಯಾಯಾಲಯದ ಶುಲ್ಕ ಪಾವತಿಯ ಆಯ್ಕೆಯನ್ನು ಕೋರದಿದ್ದ ಪಕ್ಷದಲ್ಲಿ, 'ಮಾಡಿಫೈ' ಆಯ್ಕೆಯು ಬಳಕೆದಾರನಿಗೆ ಈಗಾಗಲೇ ಹೂಡಿದ ವ್ಯಾಜ್ಯವನ್ನು ಬದಲಾವಣೆ ಮಾಡಲು ಅವಕಾಶಿಸುತ್ತದೆ.
- ಸರ್ವೋಚ್ಚ ನ್ಯಾಯಾಲಯ ಇ-ಹೂಡಿಕೆಯ ಮೊಕದ್ದಮೆಗಳ ಜೊತೆಗೆ ಸೇರಿರುವ ನ್ಯೂನತೆಗಳನ್ನು ನ್ಯಾಯವಾದಿ/ಅರ್ಜಿದಾರನಿಗೆ ಇ-ಮೇಲ್ ಮಾಡಲಾಗುತ್ತದೆ
- ಹೆಲ್ಪ್' ಆಯ್ಕೆ ಲಭ್ಯವಿದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/20/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.