ಹೌದು, ಕೇವಲ ಅನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಯಾವುದೆ ಕೈಬರಹ ಹಾಗೂ ಮುದ್ರಿತ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಈಗ ಹೊಸ ಪಡಿತರ ಚೀಟಿ ಪಡೆಯಲು ONLINE ಮೂಲಕವೇ ಅರ್ಜಿ ಸಲ್ಲಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕಡ್ಡಾಯವಾಗಿ ಆಯಾ ಗ್ರಾಮಪಂಚಾಯಿತಿ ಕಛೇರಿಗಳಲ್ಲಿ ಲಭ್ಯವಿರುವ ಗಣಕೀಕರಣ ಕೇಂದ್ರದ ಮೂಲಕವೇ ಅರ್ಜಿ ಸಲ್ಲಿಸಬಹುದು.ನಗರ ಹಾಗೂ ಪಟ್ಟಣ ಪ್ರದೇಶದವರು ಖಾಸಗಿ ಕಂಪ್ಯೂಟರ್ ವ್ಯವಸ್ಥೆ ಮೂಲಕ Online ಸಲ್ಲಿಸಬಹುದು ಇಲ್ಲವೇಆಯಾ ಪ್ರದೇಶದ ತಾಲ್ಲೂಕು ಕಛೇರಿ, ಆಹಾರ ಸಹಾಯಕ ನಿರ್ದೇಶಕರ ಕಛೇರಿ ಅಥವಾ ಉಪನಿರ್ದೇಶಕರ ಕಛೇರಿಗಳಲ್ಲಿ Online ಮೂಲಕವೇ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಬಳಿ ಈ ಕೆಳಕಂಡ ದಾಖಲೆಗಳು ಹಾಗೂ ಮಾಹಿತಿಯನ್ನು ಇಟ್ಟುಕೊಂಡಲ್ಲಿ ಮಾತ್ರ ನೀವು ಅರ್ಜಿಯನ್ನು Onlineನಲ್ಲಿ ಭರ್ತಿ ಮಾಡಿ/ಮಾಡಿಸಿ ಸಲ್ಲಿಸಲು ಸುಲಭವಾಗುತ್ತದೆ. (ಆದರೆ ಅರ್ಜಿ ಸಲ್ಲಿಸುವಾಗ ಕಛೇರಿಯಲ್ಲಿ ಯಾವುದೇ ದಾಖಲೆಗಳ ಪ್ರತಿಗಳನ್ನು ನೀಡುವ ಅಗತ್ಯವಿಲ್ಲ.) ಎ) ಗ್ರಾಮಾಂತರ ಪ್ರದೇಶದವರು:
1. ನಿಮ್ಮ ಗ್ರಾಮಪಂಚಾಯಿತಿಯ ಹೆಸರು .
2. ನೀವು ಈಗ ವಾಸಿಸುವ ಮನೆ ವಿಳಾಸ.
3. ಮನೆಯ ಆಸ್ತಿ ಸಂಖ್ಯೆ ವಿವರ.
4. ಮನೆಗೆ ವಿದ್ಯುತ್ ಸಂಪರ್ಕವಿರುವವರು ಕಡ್ಡಾಯವಾಗಿ ವಿದ್ಯುತ್ ಬಿಲ್ಲಿನ ಪ್ರತಿ.
5. ಕುಟುಂಬದ ಎಲ್ಲಾ ಸದಸ್ಯರ ಹೆಸರು ಸದಸ್ಯರು ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.
6. ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.
7. ನಿಮ್ಮ ಕುಟುಂಬಕ್ಕಿರುವ ಅಡುಗೆ ಅನಿಲದ ಸರಬರಾಜಿನ ಇತ್ತಿಚಿನ ಬಿಲ್/ರಶೀದಿ.
ಬಿ) ನಗರ/ಪಟ್ಟಣ ಪ್ರದೇಶದವರು:
1. ನೀವು ವಾಸವಿರುವ ನಗರಸಭೆ/ಪುರಸಭೆ/ನಗರ ಪಾಲಿಕೆಯ ವಾರ್ಡ್ ಸಂಖ್ಯೆ
2. ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶ (ಬಿ.ಬಿ.ಎಂ.ಪಿ ಪ್ರದೇಶ) ದವರಾಗಿದ್ದಲ್ಲಿ ನೀವು ಆಹಾರ ಇಲಾಖೆಯ ಯಾವ ವಲಯ ವ್ಯಾಪ್ತಿಯಲ್ಲಿದ್ದೀರಿ ಎಂಬ ಬಗ್ಗೆ ಮಾಹಿತಿ (ಇದನ್ನು ಸುಲಭವಾಗಿ ತಿಳಿಯಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯವರನ್ನು ಸಂಪರ್ಕಿಸಿ, ಇಲ್ಲವೇ ನಿಮ್ಮ ನೆರೆಹೊರೆಯವರಲ್ಲಿ ಈಗಾಗಲೇ ಲಭ್ಯವಿರುವ ಪಡಿತರ ಚೀಟಿಯನ್ನು ನೋಡಿ ತಿಳಿಯಿರಿ).
3. ನಿಮ್ಮ ಮನೆಯ ವಿದ್ಯುತ್ ಬಿಲ್., (ವಿದ್ಯುತ್ ಸಂಪರ್ಕವಿಲ್ಲದವರು ವಿದ್ಯುತ್ ಸಂಪರ್ಕವಿಲ್ಲವೆಂದು ಅರ್ಜಿಯಲ್ಲಿ ಘೋಷಿಸಬೇಕು.)
4. ನಿಮ್ಮ ನಿವಾಸದ ಪೂರ್ಣ ವಿಳಾಸ, (ಕಡ್ಡಾಯವಾಗಿ ಅಂಚೆಪಿನ್ ಕೋಡ್ನೊಂುದಿಗೆ). ಸ್ವಂತ ಮನೆಯಾಗಿದ್ದಲ್ಲಿ ಮನೆಯ ಆಸ್ತಿ ಸಂಖ್ಯೆ ವಿವರ, ನಿಮ್ಮ ಮನೆ ವಿಳಾಸ ಹುಡುಕಲು ಸುಲಭವಾಗುವ ಹತ್ತಿರದ ಸ್ಥಳದ ಗುರುತು
5. ಕುಟುಂಬದ ಸದಸ್ಯ ಹೆಸರು ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.
6. ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.
7. ನಿಮ್ಮ ಸಂಪರ್ಕದ ಮೊಬೈಲ್ ನಂಬರ್ (ಕಡ್ಡಾಯ), ಸ್ವಂತ ಮೊಬೈಲ್ ಇಲ್ಲದಿದ್ದರೂ ನಿಮ್ಮನ್ನು ಸಂಪರ್ಕಿಸಬಹುದಾದ ಯಾವುದರರೂ ಮೊಬೈಲ್ ಸಂಖ್ಯೆಯನ್ನು ನೀಡುವುದು.
8. ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರಿರುವ ಪೂರ್ಣ ವಿಳಾಸ.
9. ನಿಮ್ಮ ಕುಟುಂಬದ ಅಡುಗೆ ಅನಿಲ ಸಂಪರ್ಕದ ವಿವರ/ಇತ್ತೀಚಿನ ಎಲ್.ಪಿ.ಜಿ. ಬಿಲ್ ಪ್ರತಿ. (ವಿ.ಸೂ: ಮೇಲೆ ಪಟ್ಟಿ ಮಾಡಿರುವ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿದ್ದರೆ ಮಾತ್ರ ನೀವು ಆನ್ ಲೈನ್ ಮೂಲಕ ಅರ್ಜಿಸಲ್ಲಿಸುವ ಕೆಲಸ ಯಾವುದೇ ತಪ್ಪಿಲ್ಲದೇ ಮಾಡಬಹುದು. ಈ ದಾಖಲೆಗಳನ್ನು ಕಛೇರಿಗೆ ಸಲ್ಲಿಸುವ ಅಗತ್ಯವಿಲ್ಲ.ಆದರೆನಿಮ್ಮ ಸ್ಥಳ ತನಿಖೆಗೆ ಬಂದಾಗ ಇವುಗಳನ್ನು ಹಾಜರಪಡಿಸುವುದು ಕಡ್ಡಾಯ).
ಹೌದು. ನಿಮ್ಮ ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್.ಆರ್.ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ. ವಿದ್ಯುತ್ ಸಂಪರ್ಕ ನಿಮ್ಮ ಕುಟುಂಬದ ಯಾರೇ ಸದಸ್ಯರ ಹೆಸರಿನಲ್ಲಿರಲು ಅಥವಾ ನಿಮ್ಮ ಮನೆ ಮಾಲೀಕರ ಹೆಸರಿನಲ್ಲಿರಲಿ, ಅದೇ ಆರ್.ಆರ್.ನಂಬರ್ ನೀಡುವುದು ಕಡ್ಡಾಯ. ತಮ್ಮ ಮನೆಗೆ ವಿದ್ಯುತ್ ಇಲ್ಲದವರು ತಮಗೆ ವಿದ್ಯುತ್ ಸಂಪರ್ಕ ಇಲ್ಲ / ತಮ್ಮ ಮನೆಗೆ ಅಧಿಕೃತ ವಿದ್ಯುತ್ ಮೀಟರ್ ಇಲ್ಲ / ತಮ್ಮದು ಭಾಗ್ಯಜ್ಯೋತಿ ´ ಸಂಪರ್ಕ /ತಮ್ಮದು ಗ್ರೂಪ್ ಕ್ವಾರ್ಟರ್ಸ್ ಆಗಿದ್ದು ಎಲ್ಲರಿಗೂ ಸಾಮನ್ಯ ಮೀಟರ್ ಇದೆ., ಹೀಗೆ ನಿಮ್ಮ ಮನೆಯ ವಿದ್ಯುತ್ ವ್ಯವಸ್ಥೆ ಬಗ್ಗೆ ಸ್ಪಷ್ಟವಾಗಿ ಘೋಷಿಸಬೇಕು.
ಹೌದು. ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಗ್ರಾಮಪಂಚಾಯಿತಿ ನೀಡಿರುವ ಆಸ್ತಿ ತೆರಿಗೆ ನಂಬರನ್ನು ನೀಡಬೇಕು. ನಿಮ್ಮ ಮನೆಗೆ ಆಸ್ತಿ ತೆರಿಗೆ ನಂಬರ್ ಇಲ್ಲದಿದ್ದರೆ ನಿಮ್ಮ ಮನೆಯಿರುವ ಜಾಗದ ಸರ್ವೇ ನಂಬರನ್ನು ಕಡ್ಡಾಯವಾಗಿ ನೀಡಬೇಕು. ಇದು ನಿಮಗೆ ಗೊತ್ತಿಲ್ಲದಿದ್ದಲ್ಲಿ ನಿಮ್ಮ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರಿಂದ/ಗ್ರಾಮಲೆಕ್ಕಿಗರಿಂದ ಪಡೆಯಿರಿ. ನಗರ/ಪಟ್ಟಣ ಪ್ರದೇಶದವರೂ ತಮ್ಮ ನಿವಾಸದ ಆಸ್ತಿ ತೆರಿಗೆ ನಂಬರ್ ಲಬ್ಯವಿದ್ದರೆ ನೀಡಬೇಕು. ಆದರೆ ನಗರ/ಪಟ್ಟಣ ಪ್ರದೇಶದವರು ತಮ್ಮ ಮನೆ ವಿದ್ಯುತ್ ಆರ್.ಆರ್. ವಿವರ ನೀಡುವುದು ಮಾತ್ರ ಕಡ್ಡಾಯ. ತಮ್ಮ ಮನೆಗೆ ವಿದ್ಯುತ್ ಇಲ್ಲದವರು ತಮಗೆ ವಿದ್ಯುತ್ ಸಂಪರ್ಕ ಇಲ್ಲ/ತಮ್ಮ ಮನೆಗೆ ಅಧಿಕೃತ ವಿದ್ಯುತ್ ಮೀಟರ್ಇ್ಲ್ಲ/ತಮ್ಮದು ಭಾಗ್ಯಜ್ಯೋತಿ ´ ಸಂಪರ್ಕ/ತಮ್ಮದು ಗ್ರೂಪ್ ಕ್ವಾರ್ಟರ್ಸ್ ಆಗಿದ್ದು ಪ್ರತ್ಯೇಕ ಮೀಟರ್ ಇಲ್ಲ ಎಂದು ನಿಮ್ಮ ಮನೆಯ ವಿದ್ಯುತ್ ವ್ಯವಸ್ಥೆ ಬಗ್ಗೆ ಸ್ಪಷ್ಟವಾಗಿ ಘೋಷಿಸಬೇಕು.
ಹೌದು. ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ನಚಲ್ಲಿ ಮೊದಲನೆಯ ಪುಟದಲ್ಲಿ ನೀವು ನಿಮ್ಮ ಆರ್.ಆರ್.ನಂಬರನ್ನು ಆನ್ ಲೈನ್ ಮೂಲಕ ಭರ್ತಿ ಮಾಡಿದ ಕೂಡಲೇ, ಅದೆ ಆರ್.ಆರ್. ವಿದ್ಯುತ್ ಸೌಲಭ್ಯ ಹೊಂದಿರುವುದಾಗಿ ಈಗಾಗಲೇ ಮಾಹಿತಿ ಸಲ್ಲಿಸಿರುವವರ ಪಡಿತರ ಚೀಟಿಗಳೆಲ್ಲವೂ ಕಂಪ್ಯೂಟರ್ ಪುಟದಲ್ಲಿ ಪಟ್ಟಿಯಾಗುತ್ತವೆ. ಆಗ ಅವು ಯಾರಿಗೆ ಸೇರಿದ ಪಡಿತರ ಚೀಟಿಗಳೆಂದು ನೀವು ತಿಳಿಸಬೇಕು. ಅಂದರೆ ಆ ಪಡಿತರ ಚೀಟಿ ಅಲ್ಲೇ ವಾಸವಿರುವ ಮನೆ ಮಾಲೀಕರ ಕುಟುಂಬದ್ದು ಆಗಿರಬಹುದು ಅಥವಾ ಬಾಡಿಗೆಗೆ ಅಲ್ಲೇ ವಾಸವಿರುವ ಬೇರೆ ಕುಟುಂಬದ್ದು ಇರಬಹುದು, ಅಥವಾ ಅಲ್ಲೇ ವಾಸವಿರುವ ಅರ್ಜಿದಾರರ ಸಂಬಂಧಿಕರ ಇನ್ನೊಂದು ಪ್ರತ್ಯೇಕ ಕುಟುಂಬವಿರಬಹುದು. ಇಲ್ಲವೇ ಅಲ್ಲಿರುವ ಒಂದಕ್ಕಿಂತ ಹೆಚ್ಚು ಮನೆಗಳಿಗೆ ಒಂದೇ ವಿದ್ಯುತ್ ಆರ್.ಆರ್.ನಂಬರಿನ ಸಂಪರ್ಕವಿರಬಹುದು . ಇದಲ್ಲದೇ ಅಂತಹ ಪಡಿತರ ಚೀಟಿ ಇರುವ ಯಾವುದೇ ಕಟುಂಬವೂ ಅಲ್ಲಿ ಇಲ್ಲದಿರುಬಹುದು. ಈ ರೀತಿ ಅರ್ಜಿದಾರರು ನಿಜವಾದ ತಮ್ಮನಿಲುವನ್ನು ನೀಡಬೇಕು. ಈ ಮಾಹಿತಿ ನೀಡಿದ ನಂತರವೇ ಅರ್ಜಿದಾರರು ಹೊಸ ಅರ್ಜಿ ಸಲ್ಲಿಸಲು ಅರ್ಹರಾಗಿತ್ತಾರೆ.
ಹೌದು, ಸಲ್ಲಿಸಬಹುದು, ಆದರೆ ನೀವು ನಿಮ್ಮ ಮೂಲ ಕುಟುಂಬದ ಪೋಷಕರು ಈಗ ವಾಸಿಸುತ್ತಿರುವ ಪೂರ್ಣ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು. ಹಾಗೂ ನೀವು ಮೂಲ ಕುಟುಂಬದಿಂದ ಬೇರೆಯಾಗಿದ್ದು, ಆ ಪಡಿತರ ಚೀಟಿಯಿಂದ ನಿಮ್ಮ ಹೆಸರನ್ನು ಬೇರ್ಪಡಿಸಿರುವ Deletion Certificate (ವರ್ಜಿತ ಪ್ರಮಾಣ ಪತ್ರ) ವಿವರವನ್ನು ಒದಗಿಸಬೇಕು.
ಸಲ್ಲಿಸಬಹುದು, ಆದರೆ ನಿಮ್ಮ ಈ ಹಿಂದೆ ಇದ್ದ ಪಡಿತರ ಚೀಟಿಯನ್ನು ಅಧ್ಯರ್ಪಣ ಮಾಡಿರುವ ಬಗ್ಗೆ Surrender Certificate (ಅಧ್ಯರ್ಪಣ ಪ್ರಮಾಣ ಪತ್ರ) ವಿವರ ಒದಗಿಸಬೇಕು.
ಹೌದು, ನೀವು ಮತ್ತು ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಉದ್ಯೋಗ ಮತ್ತು ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ವರಮಾನವನ್ನು ಕಡ್ಡಾಯವಾಗಿ ಘೋಷಣೆ ಮಾಡಬೇಕು.
ಹೌದು, ಸಲ್ಲಿಸಿ, ಆದರೆ ನೀವು ಪಾವತಿಸುತ್ತಿರುವ ಮಾಸಿಕ ಬಾಡಿಗೆಯನ್ನು ಅರ್ಜಿ ಸಲ್ಲಿಸುವಾಗ ಭರ್ತಿ ಮಾಡುವುದನ್ನು ಮರೆಯಬಾರದು.
ಹೌದು. ನಿಮ್ಮ ಬಳಿ ಈಗಾಗಲೇ ಆಧಾರ್ ಕಾರ್ಡ್ ನಂಬರಿದ್ದರೆ ಕಡ್ಡಾಯವಾಗಿ ಅದನ್ನು ಸಹ ಅರ್ಜಿ ಸಲ್ಲಿಸುವಾಗ ನೀಡಿ.
ಹೌದು, ನಿಮ್ಮ ಮನೆಯ ಆಸ್ತಿ ತೆರಿಗೆ ನಂಬರನ್ನು ನೀಡಿದರೆ ಬೇರೆ ಯಾರೂ ನಿಮ್ಮ ಅರಿವಿಲ್ಲದೆ ನಿಮ್ಮ ಮನೆಯ ವಿಳಾಸದಲ್ಲಿ ಇನ್ನೊಂದು ಪಡಿತರ ಚೀಟಿ ಪಡೆಯುವುದನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಾಗುವುದು.
ಹೌದು, ನೀವು ಅರ್ಜಿಯಲ್ಲಿ ನೀಡುವ ಎಲ್ಲಾ ವಿವರಗಳ ಬಗ್ಗೆ ನಿಮ್ಮಲ್ಲಿರುವ ಮೂಲ ದಾಖಲೆಗಳನ್ನು ಆಹಾರ ನಿರೀಕ್ಷಕರು ನಿಮ್ಮ ಅರ್ಜಿ ಪರಿಶೀಲನೆ ಪ್ರಯುಕ್ತ ಸ್ಥಳ ತನಿಖೆಗಾಗಿ ಬಂದಾಗ ಕಡ್ಡಾಯವಾಗಿ ಪರಿಶೀಲನೆಗೆ ಹಾಜರುಪಡಿಸಬೇಕು.
ಹೌದು, ನಿಮ್ಮ ಮತ್ತು ಎಲ್ಲಾ ಕುಟುಂಬ ಸದಸ್ಯರ ಹುಟ್ಟಿದ ದಿನಾಂಕವನ್ನು ಕಡ್ಡಾಯವಾಗಿ ಭರ್ತಿ ಮಾಡಿ. ಒಂದು ವೇಳೆ ನಿಜವಾದ ದಿನಾಂಕ ಗೊತ್ತಿಲ್ಲದಿದ್ದರೆ, ಹುಟ್ಟಿದ ವರ್ಷವನ್ನು ಭರ್ತಿ ಮಾಡುವುದಂತೂ ಕಡ್ಡಾಯ.
ಹೌದು, ಅರ್ಜಿಯಲ್ಲಿ ನೀವು ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದರೆ ನೀವೇ ಅರ್ಜಿಯಲ್ಲಿ ಸ್ವತ: ಘೋಷಿಸಿರುವಂತೆ ಸರ್ಕಾರದ ಆದೇಶ ಸಂಖ್ಯೆ ಎಫ್.ಎಫ್.ಡಿ/32/ಇ.ಒ.ಎಂ.77, ದಿನಾಂಕ 30/09/1977, Karnataka (Prevention of Unauthorised Possession of Ration Card) Order 1977 ಹಾಗೂ ಭಾರತ ದಂಡ ಸಂಹಿತೆ ಅಡಿಯಲ್ಲಿ ಶಿಕ್ಷಾರ್ಹರಾಗುತ್ತೀರಿ. ಎಚ್ಚರವಹಿಸಿ.
ಕೊನೆಯ ಮಾರ್ಪಾಟು : 2/15/2020