ವಿಶಿಷ್ಟ ಗುರುತು ಸಂಖ್ಯೆ ಪರಿಯೋಜನೆಯನ್ನು ಮೊದಲಬಾರಿಗೆ ಯೋಜನಾ ಆಯೋಗವು ರೂಪಿಸಿತು. ಈ ಮೂಲಕ ದೇಶದ ಪ್ರತಿ ನಿವಾಸಿಗಳಿಗೆ ಗುರುತನ್ನು ನೀಡಲು ಬಳಸಲು ಆಲೋಚಿಸಿತು. ಕಲ್ಯಾಣ ಸೇವೆಗಳ ಸಮರ್ಥ ಪೂರೈಕೆಗೆ ಇದರ ಅಗತ್ಯವನ್ನು ಮನಗೊಂಡಿತು. ಸರ್ಕಾರದ ವಿವಿಧ ಕಾರ್ಯಕ್ರಮಗಳ ಮೇಲೆ ನಿಗಾ ಇಡಲು ಇದನ್ನು ರೂಪಿಸಬೇಕೆಂದು ಕೊಂಡಿತು.
- ವಿಶಿಷ್ಟ ಗುರುತು ವಿಷಯದ ಬಗ್ಗೆ ೨೦೦೬ರಲ್ಲಿ ಮೊದಲ ಚರ್ಚೆ ನಡೆಯಿತು. “ಬಡತನ ರೇಖೆಯ ಕೆಳಗಿರುವ ಕುಟುಂಬದವರಿಗೆ ವಿಶಿಷ್ಟ ಗುರುತು” – ಈ ಪರಿಯೋಜನೆಗೆ ಮಾರ್ಚ್ - ೨೦೦೬ರಲ್ಲಿ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ, ಮಾಹಿತಿ ತಂತ್ರಜ್ಞಾನ ಇಲಾಖೆಯು ಆಡಳಿತಾತ್ಮಕ ಮಂಜೂರಾತಿ ನೀಡಿತು. ಇದನ್ನು ೧೨ ತಿಂಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ [ಎನ್ಐಸಿ] ವಹಿಸಲಾಯಿತು. ಆನಂತರ, ಒಂದು ಪ್ರಕ್ರಿಯಾ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಗೆ, ಸುಧಾರಣೆ, ಬದಲಾವಣೆ, ಡೇಟಾಗಳನ್ನು ಡೇಟಾಬೇಸ್ನಲ್ಲಿ ಸೇರಿಸುವುದು ಮತ್ತು ತೆಗೆದುಹಾಕುವುದು – ಇಂತಹ ಕಾರ್ಯಗಳ ಬಗ್ಗೆ ಸಲಹೆ ನೀಡುವಂತೆ ಹೇಳಲಾಯಿತು. ಜುಲೈ ೩, ೨೦೦೬ ರಲ್ಲಿ ಈ ಪರಿಯೋಜನೆಯನ್ನು ಸ್ಥಾಪಿಸಲಾಯಿತು. ಇದನ್ನು ಯೋಜನಾ ಆಯೋಗದ ಪ್ರಧಾನ ಸಲಹಾಕಾರರಾದ ಡಾ. ಅರವಿಂದ್ ವೀರಮಣಿ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು.
- ಎ ಸ್ಟ್ರಾಟಿಜಿಕ್ ವಿಷನ್ ಆನ್ ದಿ ಯುಐಡಿಎಐ ಪ್ರಾಜೆಕ್ಟ್” ಅನ್ನು ತಯಾರಿಸಲಾಯಿತು. ಮತ್ತು ಇದನ್ನು ಈ ಸಮಿತಿಗೆ ಮೆಸರ್ಸ್ ವಿಪ್ರೊ ಲಿಮಿಟೆಡ್ ಅವರು ಸಲ್ಲಿಸಿದರು. [ಯುಐಡಿಎಐ ಪೈಲೆಟ್ ಪ್ರಾಜೆಕ್ಟ್‌ನ ವಿನ್ಯಾಸ ಹಂತ ಮತ್ತು ಕಾರ್ಯಕ್ರಮ ನಿರ್ವಹಣಾ ಹಂತದ ಕನ್ಸಲ್‌ಟೆಂಟ್ ಆಗಿದ್ದರು]. ಇದು ಯುಐಡಿಎಐನ ಚುನಾವಣಾ ಡೇಟಾಬೇಸ್‌ಗೆ ಹತ್ತಿರದ ಲಿಂಕೇಜ್ ಅನ್ನು ಮನಗಾಣಿದ್ದರು. ಯುಐಡಿಎಐ ಪ್ರಾಧಿಕಾರವನ್ನು ಒಂದು ಕಾರ್ಯಕಾರಿ ಆದೇಶದ ಮೂಲಕ ಯೋಜನಾ ಆಯೋಗದ ಅಡಿಯಲ್ಲಿ ರಚಿಸುವ ಅವಶ್ಯಕತೆಗೆ ಒಪ್ಪಿಗೆ ಸೂಚಿಸಿತು. ಅಲ್ಲದೆ ಪ್ರಾಧಿಕಾರಕ್ಕೆ ತನ್ನದೇ ಆದ ಸ್ವರೂಪವನ್ನು ಇಲಾಖೆಯ ಗುರುತನ್ನು ನೀಡಲು, ಇದನ್ನು ೧೨ನೇ ಯೋಜನೆಯ ಧ್ಯೇಯೋದ್ದೇಶದ ಅಡಿ ಸೇರಿಸಲು ಒಪ್ಪಿಗೆ ನೀಡಲಾಯಿತು. ಈ ಪ್ರಕ್ರಿಯಾ ಸಮಿತಿಯ ಏಳನೇ ಸಭೆಯು ಆಗಸ್ಟ್ ೩೦, ೨೦೦೭ ರಂದು ನಡೆಯಿತು. ಯೋಜನಾ ಆಯೋಗಕ್ಕೆ ಒಂದು ವಿವರವಾದ ವರದಿ ನೀಡಿ “ಇನ್ ಪ್ರಿನ್ಸಿಪಲ್” ಸಂಪನ್ಮೂಲ ಮಾದರಿಯನ್ನು ಅದರಲ್ಲಿ ಸೇರಿಸಲಾಯಿತು.
- ಇದೇ ಸಮಯದಲ್ಲಿ, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಅವರು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ ರಚನೆಯಲ್ಲಿ ತೊಡಗಿದ್ದರು. ಜೊತೆಗೆ ಭಾರತದ ನಾಗರಿಕರಿಗೆ ಬಹು – ಉದ್ದೇಶದ ರಾಷ್ಟ್ರೀಯ ಗುರುತು ಕಾರ್ಡುಗಳ ನೀಡಿಕೆಯಲ್ಲಿ ತೊಡಗಿದ್ದರು.
- ಆದ್ದರಿಂದ, ಪ್ರಧಾನಮಂತ್ರಿಯವರ ಒಪ್ಪಿಗೆಯ ಮೇರೆಗೆ ಒಂದು ಅಧಿಕಾರಯುತವಾದ ಸಚಿವರ ತಂಡವನ್ನು ರಚಿಸಲು ನಿರ್ಧರಿಸಲಾಯಿತು. ಇದು ಎರಡು ಯೋಜನೆಗಳು – ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್, ೧೯೫೫ರ ಸಿಟಿಜೆನ್‌ಶಿಪ್ ಕಾಯ್ದೆಯಡಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ವಿಶಿಷ್ಟ ಗುರುತು ಸಂಖ್ಯೆಯ ಪರಿಯೋಜನೆಗಳನ್ನು ಒಂದುಗೂಡಿಸಲು ನಿರ್ಧರಿಸಲಾಯಿತು. ಸಚಿವರ ತಂಡಕ್ಕೆ ಪರಿಯೋಜನೆಯನ್ನು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಮುಕ್ತಾಯಗೊಳಿಸಲು ಒಂದು ಮೆಥಡಾಲಜಿಯ(ವಿಧಾನ) ಕುರಿತಾಗಿ ಚಿಂತಿಸಲು ಸೂಚಿಸಲಾಯಿತು. ನಿರ್ದಿಷ್ಟ ಮೈಲಿಗಲ್ಲುಗಳನ್ನು ಹೊಂದುವಂತೆಯೂ ಹೇಳಲಾಯಿತು. ಈ ತಂಡವನ್ನು ಡಿಸೆಂಬರ್ ೪, ೨೦೦೬ ರಂದು ರಚಿಸಲಾಯಿತು.
- ಸಚಿವರ ತಂಡದ ಮೊದಲ ಸಭೆಯು ನವೆಂಬರ್ ೨೭, ೨೦೦೭ ರಂದು ನಡೆಯಿತು. ಇದು ಗುರುತು ಆಧರಿಸಿದ ನಿವಾಸಿಗಳ ಡೇಟಾಬೇಸ್ ಅನ್ನು ರಚಿಸಲು ನಿರ್ಧರಿಸಲಾಯಿತು. ಈ ಡೇಟಾಬೇಸ್ ಅನ್ನು ವೈಯಕ್ತಿಕ ಡೇಟಾ ಅಥವಾ ಈಗಿರುವ ಡೇಟಾ ಆಧರಿತ [ಮತದಾರರ ಆಧಾರಿತ] ವಾಗಿರಲಿ, ಅದನ್ನು ಗುರುತಿಸುವ ಮತ್ತು ಅದನ್ನು ನಿರ್ದಿಷ್ಟ ಪಡಿಸುವ ಸಾಂಸ್ಥಿಕ ರಚನೆಯು ಅಗತ್ಯವಿರುತ್ತದೆ. ಅಲ್ಲದೆ ಈ ರಚನೆಯು ಈ ಡೇಟಾಬೇಸ್ ಅನ್ನು “ಒಪ್ಪಿ” ಕೊಳ್ಳಬೇಕಾಗುತ್ತದೆ. ಜೊತೆಗೆ ರಚನೆಯ ನಂತರದ ಅಪ್‌ಡೇಟಿಂಗ್ ಹಾಗೂ ನಿರ್ವಹಣಾ ಕಾರ್ಯಕ್ಕೂ ಜವಾಬ್ದಾರವಾಗಿರುತ್ತದೆ.
- ಸಚಿವರ ತಂಡದ ದ್ವಿತೀಯ ಸಭೆಯು ಜನವರಿ ೨೮, ೨೦೦೮ರಲ್ಲಿ ನಡೆಯಿತು. ಇದರಲ್ಲಿ ಎನ್‌ಪಿಆರ್ ಮತ್ತು ಯುಐಡಿಎಐನ ಕಾರ್ಯತಂತ್ರವನ್ನು ಒಂದುಗೂಡಿಸಲು ನಿರ್ಧರಿಸಲಾಯಿತು. ಬದಲಾಗಿ ಪ್ರಾಧಿಕಾರವನ್ನು ಯೋಜನಾ ಆಯೋಗದ ಅಡಿಯಲ್ಲಿ ಸ್ಥಾಪಿಸುವ ಪ್ರಸ್ತಾವನೆಯನ್ನು ಒಪ್ಪಲಾಯಿತು.
- ಸಚಿವರ ತಂಡದ ಮೂರನೇ ಸಭೆಯು ಆಗಸ್ಟ್ ೭, ೨೦೦೮ರಂದು ನಡೆಯಿತು. ಯೋಜನಾ ಆಯೋಗವು ಈ ತಂಡದ ಮುಂದೆ ಪ್ರಾಧಿಕಾರದ ಸ್ಥಾಪನೆಗಾಗಿ ವಿವರವಾದ ಪ್ರಸ್ತಾವನೆಯನ್ನು ಇರಿಸಿತು. ಸದಸ್ಯರು ಕೇಳಿದ ಕೆಲವು ಪ್ರಶ್ನೆಗಳು ಗಂಭೀರ ಸ್ವರೂಪದ್ದಾಗಿದ್ದು ಅದನ್ನು ಸಮಿತಿಯ ಅಧಿಕಾರದ ಮಟ್ಟದಲ್ಲಿ ಪರಿಶೀಲಿಸಬೇಕೆಂದು ಹೇಳಿತು. [ಅನೆಕ್ಷರ್‌ನಲ್ಲಿ ಸಭೆಯ ನಡೆವಳಿಕೆ ವರದಿ ಇದೆ] ಸಭೆಯು ವಿಷಯವನ್ನು ಕಾರ್ಯದರ್ಶಿಯವರ ಒಂದು ಸಮಿತಿಗೆ ಒಪ್ಪಿಸಿತು. ಈ ಸಮಿತಿಯು ವಿಷಯವನ್ನು ಪರಿಶೀಲಿಸಿ ಅಂತಿಮ ನಿರ್ಣಯಕ್ಕಾಗಿ ಸಚಿವರ ತಂಡಕ್ಕೆ ಶಿಫಾರಸುಗಳನ್ನು ಸಲ್ಲಿಸಲು ನಿರ್ಧರಿಸಿತು.
- ಕಾರ್ಯದರ್ಶಿಗಳ ಸಮಿತಿಯ ಶಿಫಾರಸುಗಳ ನಂತರ, ಸಚಿವರ ತಂಡದ ೪ನೇ ಸಭೆ ನಡೆಯಿತು. ನವೆಂಬರ್ ೪, ೨೦೦೮ ರಂದು ಶಿಫಾರಸುಗಳನ್ನು ತಂಡಕ್ಕೆ ಸಲ್ಲಿಸಲಾಯಿತು. ಕಾರ್ಯದರ್ಶಿ ಸಮಿತಿಯ ಶಿಫಾರಸು ಮತ್ತು ನಿರ್ಧಾರಗಳನ್ನು ಇಜಿಓಎಂ ತೆಗೆದುಕೊಳ್ಳಲಾಗಿದೆ.ಅವು ಕೆಳಗಿನಂತಿವೆ : • ಮೊದಲ ಹಂತದಲ್ಲಿ ಯುಐಡಿಎಐಯನ್ನು ಒಂದು ಕಾರ್ಯಕಾರಿ ಪ್ರಾಧಿಕಾರವನ್ನಾಗಿ ಘೋಷಿಸಬೇಕು. ಆನಂತರ ಸೂಕ್ತ ಕಾಲದಲ್ಲಿ ಇದನ್ನು ಶಾಸನಬದ್ಧ ಪ್ರಾಧಿಕಾರವನ್ನಾಗಿ ಘೋಷಿಸಿ ಅಧಿಕಾರ ನೀಡಬಹುದು.
- ಮತದಾರ ಪಟ್ಟಿ / ಎಪಿಕ್ ಯಾದಿಯ ಮಾಹಿತಿ ಆಧರಿಸಿ ಯುಐಡಿಎಐ ತನ್ನ ಚಟುವಟಿಕೆಯನ್ನು ಆರಂಭಿಸಬಹುದು. ಇದು ಪ್ರಾಥಮಿಕ ಹಂತದ ಡೇಟಾಬೇಸ್ ಆಗಿರುತ್ತದೆ. ಪ್ರಾಧಿಕಾರವು ಜೊತೆಯಲ್ಲಿಯೇ ಹೆಚ್ಚಿನ ಸೂಚನೆಗಳನ್ನು ಏಜೆನ್ಸಿಗೆ ನೀಡಿ ಅದು, ಉತ್ತಮ ದರ್ಜೆಯ ಡೇಟಾಬೇಸ್‌ಗಳನ್ನು ಸೃಷ್ಟಿಸಬಹುದು. • ಡೇಟಾಬೇಸ್ ರಚಿಸಲು ಯುಐಡಿಐಎ ತನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತದೆ.
- ಐದು ವರ್ಷಗಳ ಕಾಲ ಪ್ರಾಧಿಕಾರವು ಯೋಜನಾ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಆನಂತರ ಅದು ಎಲ್ಲಿರಬೇಕೆಂಬುದನ್ನು ಸರ್ಕಾರವು ನಿರ್ಧರಿಸುತ್ತದೆ.
- ಪ್ರಾಧಿಕಾರದ ರಚನೆಯನ್ನು ೧೦ ಜನರ ಒಂದು ಮುಖ್ಯ ತಂಡದ ಸ್ವರೂಪದಲ್ಲಿ ಕೇಂದ್ರೀಯ ಮಟ್ಟದಲ್ಲಿ ರಚಿಸಲಾಗುತ್ತದೆ. ಸಂಪೂರ್ಣ ಸಾಂಸ್ಥಿಕ ರಚನೆಯ ಸ್ವರೂಪವನ್ನು, ಅದರ ವಿವರವನ್ನು ಯೋಜನಾ ಆಯೋಗವು ಪ್ರತ್ಯೇಕವಾಗಿ ಸಲ್ಲಿಸುತ್ತದೆ. ಉಳಿದ ಸಿಬ್ಬಂದಿ ಮತ್ತು ಸಾಂಸ್ಥಿಕ ರಚನೆಯನ್ನು ಸಂಪುಟ ಕಾರ್ಯದರ್ಶಿಯವರ ಅನುಮೋದನೆಗಾಗಿ ಮತ್ತು ಔಪಚಾರಿಕ ಒಪ್ಪಿಗೆಗಾಗಿ, ವೆಚ್ಚ ಇಲಾಖೆ / ಸಿಸಿಇಎಗಳ ಮೂಲಕ ಸಲ್ಲಿಸಲಾಗುತ್ತದೆ. • ಎಫ್] ರಾಜ್ಯಮಟ್ಟದ ಯುಐಡಿಎಐ ಪ್ರಾಧಿಕಾರಗಳ ರಚನೆಗಾಗಿ ಪ್ರಾಧಿಕಾರದ ಕೇಂದ್ರೀಯ ತಂಡದಂತೆ ಮೂವರು ಸದಸ್ಯರ ತಂಡವನ್ನು ಜತೆಜತೆಗೇ ರಚಿಸಲಾಗುತ್ತದೆ. • ಅಧಿಕೃತ ಬಳಕೆದಾರರ ಉಪಯೋಗಕ್ಕಾಗಿ ಪ್ರಾಧಿಕಾರವು ಸೌಲಭ್ಯ ಒದಗಿಸುವ ನಿಗದಿತ ದಿನಾಂಕ ಡಿಸೆಂಬರ್ ೨೦೦೯ ಆಗಿರುತ್ತದೆ.
- ಎಚ್] ಸಂಪೂರ್ಣ ಸಾಂಸ್ಥಿಕ ರಚನೆಗಾಗಿ ಒಪ್ಪಿಗೆಯನ್ನು ಪಡೆಯುವ ಮುನ್ನ ಸಿಬ್ಬಂದಿಯ ಅಂಶವನ್ನು ಡಿಓಇ / ಸಿಸಿಇಎಗಳ ಮೂಲಕ ಪ್ರಸ್ತುತದ ಪ್ರಕ್ರಿಯೆಯಂತೆ ನಡೆಸಲಾಗುತ್ತದೆ. ಸಂಪುಟ ಕಾರ್ಯದರ್ಶಿಯವರು ಒಂದು ಸಭೆ ನಡೆಸಿ, ವಿವರವಾದ ಸಾಂಸ್ಥಿಕ ರಚನೆಯನ್ನೂ, ಸಿಬ್ಬಂದಿ ಮತ್ತಿತರ ಅವಶ್ಯಕತೆಗಳನ್ನು ಅಂತಿಮಗೊಳಿಸಬೇಕು. • ಆನಂತರ, ಜನವರಿ ೨೨, ೨೦೦೯ ರಲ್ಲಿ ಸಂಪುಟ ಕಾರ್ಯದರ್ಶಿಯವರು ಸಚಿವರ ತಂಡದ ತೀರ್ಮಾನಗಳ ಅನ್ವಯ. ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಕಾರವಾಗಿ ಆಡಳಿತದ ಸ್ವರೂಪವನ್ನು ಶಿಫಾರಸು ಮಾಡಿದರು. ಅದೆಂದರೆ :
- ಪ್ರಾಧಿಕಾರ ರಚನೆಯ ಘೋಷಣೆಯನ್ನು ತಕ್ಷಣ ಹೊರಡಿಸತಕ್ಕದ್ದು. • ಒಂದು ಉನ್ನತಮಟ್ಟ ಸಲಹಾ ಮಂಡಳಿಯು ರಚನೆಯಾಗಬೇಕು. ಇದಕ್ಕೆ ಯೋಜನಾ ಆಯೋಗದ ಉಪಾಧ್ಯಕ್ಷರು ಮುಖ್ಯಸ್ಥರಾಗಿರಬೇಕು. ಇದು ನಿಗಾ ಮತ್ತು ಪರಿಶೀಲನಾ ಮಂಡಳಿಯಾಗಿರುತ್ತದೆ. ಈ ಮಂಡಳಿಯು ಪ್ರಾಧಿಕಾರದ ಕಾರ್ಯಗಳ ಮೇಲುಸ್ತುವಾರಿ ನಡೆಸಬೇಕು.
- ಯೋಜನಾ ಆಯೋಗದ ಒಬ್ಬ ಸದಸ್ಯರು, ಅಥವಾ ಕಾರ್ಯದರ್ಶಿಯವರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ನೀಡಲಾದ ಕೆಲಸದ ಪರಿಶೀಲನೆ ನಡೆಸಬೇಕು.
- ಒಂದು ಪ್ರಮುಖ ತಂಡವನ್ನು ರಚಿಸಬೇಕು.
- ೧.೨ : ನವೆಂಬರ್ ೪, ೨೦೦೮ ರಲ್ಲಿ ನಡೆದ ಉನ್ನತ ಅಧಿಕಾರದ ಸಚಿವರ ಸಭೆಯ ೪ನೇ ಸಭೆಯಲ್ಲಿ ಯುಐಡಿಎಐ ಅನ್ನು ರಚಿಸಲಾಯಿತು. ಜನವರಿ ೨೮, ೨೦೦೯ ರಂದು ಯೋಜನಾ ಆಯೋಗವು ಈ ಸಂಬಂಧದ ಸುತ್ತೋಲೆಯನ್ನು ಹೊರಡಿಸಿತು. ಮೊದಲ ಹಂತವಾಗಿ ೧೧೫ ಜನ ಅಧಿಕಾರಿಗಳ ಪ್ರಮುಖ ತಂಡವನ್ನುಳ್ಳ ಅಟ್ಯಾಚ್ಡ್ ಕಚೇರಿಯಾಗಿ ಆರಂಭವಾಯಿತು. ಘೋಷಣೆಯಲ್ಲಿ ಪ್ರಾಧಿಕಾರದ ಪಾತ್ರ ಹಾಗೂ ಜವಾಬ್ದಾರಿಯನ್ನು ಹೇಳಲಾಯಿತು. ಪ್ರಾಧಿಕಾರಕ್ಕೆ ಯುಐಡಿಎಐ ಯೋಜನೆಯನ್ನು ಜಾರಿಗೊಳಿಸಲು ಬೇಕಾದ ನೀತಿ ಮತ್ತು ಯೋಜನೆಗಳನ್ನು ಅನುಷ್ಠಾನ ವಿಧಾನವನ್ನು ತಿಳಿಸಲಾಯಿತು. ತನ್ನದೇ ಆದ ಡಾಟಾಬೇಸ್ ಹೊಂದಲು, ಅಪ್‌ಡೇಟ್ ಮಾಡಲು ನಿರ್ವಹಿಸಲು, ಪ್ರಾಧಿಕಾರವು ಜವಾಬ್ದಾರವಾಗಿರುತ್ತದೆ.
ಪ್ರಧಾನಮಂತ್ರಿಯವರ ಮಂಡಳಿ
ಯುಐಡಿಎಐ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಧಾನಮಂತ್ರಿಯವರ ಮಂಡಳಿಯು ಜುಲೈ ೨, ೨೦೦೯ರಲ್ಲಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನಂದನ್ ನಿಲೇಕಣಿ ಅವರನ್ನು ನೇಮಿಸಿತು. ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ, ಮೊದಲ ಹಂತವಾಗಿ ಐದು ವರ್ಷಗಳ ಅವಧಿಗೆ ನೇಮಿಸಲಾಯಿತು. ಜುಲೈ ೨೩, ೨೦೦೯ ರಲ್ಲಿ ಪ್ರಾಧಿಕಾರದ ಅಧ್ಯಕ್ಷರಾಗಿ ಶ್ರೀ ನಿಲೇಕಣಿ ಅವರು ಅಧಿಕಾರ ವಹಿಸಿಕೊಂಡರು. ಜುಲೈ ೩೦, ೨೦೦೯ ರಂದು ಯುಐಡಿಎಐ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಧಾನಮಂತ್ರಿಯವರ ಮಂಡಳಿಯನ್ನು ಸ್ಥಾಪಿಸಲಾಯಿತು. ಮಂಡಳಿಯು ಯುಐಡಿಎಐಗೆ ಕಾರ್ಯಕ್ರಮ, ವಿಧಾನ ಮತ್ತು ಅನುಷ್ಠಾನದ ವಿಷಯದಲ್ಲಿ ವಿವಿಧ ಸಚಿವಾಲಯ / ಇಲಾಖೆಗಳ ನಡುವೆ ಸಮನ್ವಯಕ್ಕೆ ಸಲಹೆ ನೀಡುತ್ತದೆ. ಮಂಡಳಿಯು ತ್ರೈಮಾಸಿಕ ಸಭೆ ನಡೆಸುತ್ತದೆ. ಮೊದಲ ಅಂತಹ ಸಭೆಯು ೨೦೦೯ರ ಆಗಸ್ಟ್ ೧೨ರಂದು ನಡೆಯಿತು. ಪ್ರಧಾನಮಂತ್ರಿಯವರ ಮಂಡಳಿಯ ಮುಖ್ಯ ತೀರ್ಮಾನಗಳು :
- ಶಾಸನಾತ್ಮಕ ಚೌಕಟ್ಟಿನ ಅವಶ್ಯಕತೆ
- ಕಾರ್ಯತಂತ್ರದ ಒಟ್ಟಾರೆ ಅನುಮೋದನೆ
- ಪಾಲುದಾರರಿಗೆ ಬಜೆಟ್‌ನ ಬೆಂಬಲ
- ಜೈವಿಕ ಮತ್ತು ಜನಸಂಖ್ಯಾತ್ಮಕ ಗುಣಮಟ್ಟದ ನಿರ್ಧಾರ
- ಪ್ರಾಧಿಕಾರದ ರಚನೆಯ ವಿಷಯಗಳು
- ನೌಕರರಿಗೆ ಸಂಬಂಧಿಸಿದ ಸಮಸ್ಯೆ ಮತ್ತು ವಿಷಯಗಳು
- ಅಧಿಕಾರಿಗಳ ಆಯ್ಕೆ, ನೇಮಕ ಮತ್ತು ವಾಪಾಸು ಕಳುಹಿಸುವಿಕೆ
- ಸರ್ಕಾರಿ ವಸತಿ ಸೌಲಭ್ಯ
- ಹುದ್ದೆಗಳ ವರ್ಗೀಕರಣ
- ಮಾರುಕಟ್ಟೆಯಿಂದ ವೃತ್ತಿಪರರ ನೇಮಕ
- ಪಿಐಓಗಳ ಜಾಗತಿಕ ಸಲಹಾ ಮಂಡಳಿ
- ಜಾಗತಿಕ ಮಟ್ಟದಲ್ಲಿ ಕೊಳ್ಳುವಿಕೆ
ಸಂಪುಟ ಸಮಿತಿ
ಭಾರತ ಸರ್ಕಾರವು ಯುಐಡಿಎಐಗೆ ಸಂಬಂಧಿಸಿದ ಪ್ರಾಧಿಕಾರದ ಕುರಿತಾದ ಸಂಪುಟ ಸಮಿತಿ ರಚಿಸುವ ಆದೇಶವನ್ನು ಅಕ್ಟೋಬರ್ ೨೨, ೨೦೦೯ ರಂದು ಹೊರಡಿಸಿತು. ಇದನ್ನು ಗೌರವಾನ್ವಿತ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಸಮಿತಿಯಲ್ಲಿ ಹಣಕಾಸು ಸಚಿವರು, ಕೃಷಿ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗೃಹ, ವಿದೇಶಾಂಗ ವ್ಯವಹಾರ, ಕಾನೂನು ಮತ್ತು ನ್ಯಾಯ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ, ಕಾರ್ಮಿಕ ಮತ್ತು ಉದ್ಯೋಗ, ಮಾನವ ಸಂಪನ್ಮೂಲ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ಯ, ವಸತಿ ಮತ್ತು ನಗರ ಬಡತನ ನಿರ್ಮೂಲನೆ, ಪ್ರವಾಸೋದ್ಯಮ ಸಚಿವರು ಇರುತ್ತಾರೆ. ಯೋಜನಾ ಆಯೋಗದ ಉಪಾಧ್ಯಕ್ಷರು ಮತ್ತು ಯುಐಡಿಎಐ ಪ್ರಾಧಿಕಾರದ ಅಧ್ಯಕ್ಷರು ವಿಶೇಷ ಆಹ್ವಾನಿತರಾಗಿರುತ್ತಾರೆ. ಗೌರವಾನ್ವಿತ ಪ್ರಧಾನಮಂತ್ರಿಯವರ ನೇತೃತ್ವದ ಸಮಿತಿಯ ಕಾರ್ಯಗಳ ಈ ಕೆಳಗಿನಂತಿವೆ :
ಪ್ರಾಧಿಕಾರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು, ಅದರ ಸಾಂಸ್ಥಿಕ ರಚನೆ, ಯೋಜನೆಗಳು, ನೀತಿಗಳು, ಕಾರ್ಯಕ್ರಮಗಳು, ಕಾರ್ಯ ಯೋಜನೆಗಳು, ಹಣಕಾಸು, ಕಾರ್ಯ ರೀತಿ ಹಾಗೂ ಗುರಿಸಾಧನೆಗಳೂ ಇದರಲ್ಲಿ ಸೇರಿವೆ.
ಆದೇಶಗಳು ಮತ್ತು ಧ್ಯೇಯಗಳು
ವಿಶಿಷ್ಟ ಗುರುತು ವಿಷಯದ ಬಗ್ಗೆ ೨೦೦೬ರಲ್ಲಿ ಮೊದಲ ಚರ್ಚೆ ನಡೆಯಿತು. “ಬಡತನ ರೇಖೆಯ ಕೆಳಗಿರುವ ಕುಟುಂಬದವರಿಗೆ ವಿಶಿಷ್ಟ
ಆಧಾರ್
ತು” – ಈ ಪರಿಯೋಜನೆಗೆ ಮಾರ್ಚ್ - ೨೦೦೬ರಲ್ಲಿ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ, ಮಾಹಿತಿ ತಂತ್ರಜ್ಞಾನ ಇಲಾಖೆಯು ಆಡಳಿತಾತ್ಮಕ ಮಂಜೂರಾತಿ ನೀಡಿತು. ಇದನ್ನು ೧೨ ತಿಂಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ [ಎನ್ಐಸಿ] ವಹಿಸಲಾಯಿತು. ಆನಂತರ, ಒಂದು ಪ್ರಕ್ರಿಯಾ ಸಮಿತಿಯನ್ನು ರಚಿಸಲಾಯಿತು.
ಈ ಸಮಿತಿಗೆ, ಸುಧಾರಣೆ, ಬದಲಾವಣೆ, ಡೇಟಾಗಳನ್ನು ಡೇಟಾಬೇಸ್ನಲ್ಲಿ ಸೇರಿಸುವುದು ಮತ್ತು ತೆಗೆದುಹಾಕುವುದು – ಇಂತಹ ಕಾರ್ಯಗಳ ಬಗ್ಗೆ ಸಲಹೆ ನೀಡುವಂತೆ ಹೇಳಲಾಯಿತು. ಜುಲೈ ೩, ೨೦೦೬ ರಲ್ಲಿ ಈ ಪರಿಯೋಜನೆಯನ್ನು ಸ್ಥಾಪಿಸಲಾಯಿತು. ಇದನ್ನು ಯೋಜನಾ ಆಯೋಗದ ಪ್ರಧಾನ ಸಲಹಾಕಾರರಾದ ಡಾ. ಅರವಿಂದ್ ವೀರಮಣಿ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು. ಪ್ರಾಧಿಕಾರವು ಯೋಜನಾ ಆಯೋಗದ ಅಡಿಯಲ್ಲಿ ಒಂದು ಅಟ್ಯಾಚ್ಡ್ ಕಚೇರಿಯಾಗಿ ರಚಿತವಾಗಿದೆ. ಭಾರತದ ನಿವಾಸಿಗಳು ವಿಶಿಷ್ಟ ಗುರುತು ಸಂಖ್ಯೆ ನೀಡುವ ಉದ್ದೇಶವನ್ನು ಹೊಂದಿ ಅದಕ್ಕಾಗಿ ಸಾಂಸ್ಥಿಕ, ತಾಂತ್ರಿಕ ಮತ್ತು ಕಾನೂನಿನ ಮೂಲಸೌಕರ್ಯಗಳನ್ನು ಸೃಷ್ಟಿಸಿ, ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ. ಜೂನ್ ೨೫, ೨೦೦೯ ರಂದು ಶ್ರೀ ನಂದನ್ ನಿಲೇಕಣಿ ಅವರನ್ನು ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿ ಅವರಿಗೆ ಕೇಂದ್ರ ಸಂಪುಟ ಸಚಿವರ ಸ್ಥಾನಮಾನವನ್ನು ನೀಡಲಾಗಿದೆ. ಶ್ರೀ ರಾಮ್ ಸೇವಕ್ ಶರ್ಮಾ ಅವರನ್ನು ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ದೂರದೃಷ್ಟಿ ವಿಶಿಷ್ಟವಾದ ಗುರುತಿನ ಚೀಟಿ ನೀಡಿಕೆ ಮೂಲಕ ಭಾರತದ ನಿವಾಸಿಗಳನ್ನು ಸಶಕ್ತಗೊಳಿಸುವುದು ಮತ್ತು ಯಾವುದೇ ವೇಳೆ ಮತ್ತು ಸ್ಥಳದಲ್ಲಿ ಅಧಿಕೃತಕರಣ ವೇದಿಕೆಯಾಗುವುದು.
ಮುಖ್ಯ/ಪ್ರಮುಖ ಮೌಲ್ಯಗಳು
- ನಮಗೆ ಸಮಗ್ರತೆಯಲ್ಲಿ ನಂಬಿಕೆಯಿದೆ, ನಾವು ಬದ್ಧರಾಗಿದ್ದೇವೆ.
- ಎಲ್ಲರನ್ನು ಒಳಗೊಂಡ ದೇಶ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ
- ನಾವು ಸಹಯೋಗದ ಅನುಸರಣೆಯನ್ನು ಪ್ರೋತ್ಸಾಹಿಸುತ್ತೇವೆ ಮತ್ತು ನಮ್ಮ ಸಹಭಾಗಿಗಳನ್ನು ಗೌರವಿಸುತ್ತೇವೆ
- ನಿವಾಸಿಗಳಿಗೆ ಮತ್ತು ಸೇವಾ ನೀಡಿಕೆದಾರರಿಗೆ ಅತ್ಯುತ್ತಮ ಸೇವೆ ಒದಗಿಸುವತ್ತ ಶ್ರಮಿಸುತ್ತೇವೆ.
- ಸತತ ಕಲಿಕೆ ಮತ್ತು ಗುಣಮಟ್ಟ ಸುಧಾರಣೆ ಬಗ್ಗೆ ಯಾವಾಗಲೂ ಆದ್ಯತೆ ನೀಡುತ್ತೇವೆ
- ಹೊಸ ಆವಿಷ್ಕಾರಗಳ ಬಗ್ಗೆ ನಮಗೆ ನಂಬಿಕೆ ಇದೆ ಮತ್ತು ನಮ್ಮ ಭಾಗಿದಾರರಿಗೆ ಅವಿಷ್ಕಾರಗಳಿಗಾಗಿ ವೇದಿಕೆ ಒದಗಿಸುತ್ತೇವೆ
- ಪಾರದರ್ಶಕ ಮುಕ್ತ ಸಂಘಟನೆಗಳಲ್ಲಿ ನಮಗೆ ನಂಬಿಕೆ ಇದೆ ದೀಕ್ಷಾದಳದ ಘೋಷಣೆಗಳು
- ದೇಶದ 100 ಕೋಟಿಗೂ ಹೆಚ್ಚಿನ ನಿವಾಸಿಗಳಿಗೆ 2015ರ ವೇಳೆಗೆ ಅಚ್ಚುಕಟ್ಟು ಕಾಲಮಿತಿಯಲ್ಲಿ ಶಿಸ್ತಿನ ಗುಣಮಟ್ಟ ಪಾಲನೆಯೊಂದಿಗೆ ಆಧಾರ್ ಸಂಖ್ಯೆಗಳನ್ನು ನೀಡುವುದು.
- ನಿವಾಸಿಗಳಿಗೆ ತಮ್ಮ ಡಿಜಿಟಲ್ ಗುರುತು ಚೀಟಿಯನ್ನು ಅಧಿಕೃತಕರಣ ಗೊಳಿಸಲು ಅನುಕೂಲವಾಗುವಂತೆ ಸಹಭಾಗಿಗಳಿಗೆ ಮೂಲ ಸೌಲಭ್ಯ ಒದಗಿಸಲು ಸಹಯೋಗ ನೀಡುವುದು
- ನಿವಾಸಿಗಳಿಗೆ ಆಧಾರ್ ಸೇವೆ ಪರಿಣಾಮಕಾರಿಯಾಗಿ, ದಕ್ಷವಾಗಿ ಎಲ್ಲರಿಗೂ ಸಮನಾಗಿ ದೊರಕುವಂತೆ ಸಹಭಾಗಿಗಳು ಮತ್ತು ಸೇವಾ ನೀಡಿಕೆದಾರರೊಂದಿಗೆ ಸಹಕರಿಸುವುದು.
- ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಆಧಾರ್ ಆಧರಿತ ಅನ್ವಯಿಕಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಿ ಹಾಗೂ ಖಾಸಗಿ ಏಜೆನ್ಸಿಗಳಿಗೆ ವೇದಿಕೆ ಒದಗಿಸುವುದು
- ಲಭ್ಯತೆ, ಪ್ರಮಾಣದ ಸೌಲಭ್ಯ ಖಾತರಿಪಡಿಸುವುದು ಮತ್ತು ತಂತ್ರಜ್ಞಾನ ಮೂಲ ಸೌಕರ್ಯ ಖಾತರಿಪಡಿಸುವುದು. • ಯುಐಡಿಎಐ ನ ದೂರದೃಷ್ಟಿ ಮತ್ತು ಮೌಲ್ಯಗಳನ್ನು ಕಾರ್ಯಗತಗೊಳಿಸಲು ಸುಸ್ಥಿರವಾದ ಸಂಘಟನೆ ನಿರ್ಮಿಸುವುದು
- ವಿವಿಧ ಕ್ಷೇತ್ರಗಳ ಜಾಗತಿಕ ತಜ್ಞರನ್ನು ಯುಐಡಿಎಐ ಸಂಘಟನೆಗೆ ಸಹಯೋಗದ ಮೌಲಿಕ ದೃಷ್ಠಿ ನೀಡುವಲ್ಲಿ ಆಕರ್ಷಿಸುವಂತೆ ಮಾಡುವುದು
ಯು ಬಿ ಸಿ ಸಿ
ಈ ಕೆಳಗಿನ ಎರಡು ಯೋಜನೆಗಳನ್ನು ಪರಿಶೀಲಿಸುವುದಕ್ಕಾಗಿ ಪ್ರಧಾನ ಮಂತ್ರಿಯವರ
ಅನುಮೋದನೆಯೊಂದಿಗೆ ಮಂತ್ರಿಗಳ ಅಧಿಕಾರಯುಕ್ತ ಗುಂಪೊಂದನ್ನು ರಚಿಸಲಾಯಿತು:
- ಪೌರತ್ವ ಅಧಿನಿಯಮ, 1955ರ ಅಡಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ವಹಿ ಹಾಗು
- ಮಾಹಿತಿ ತಂತ್ರಜ್ಞಾನ ಇಲಾಖೆಯ ವಿಶಿಷ್ಟ ಗುರುತು ಸಂಖ್ಯೆ ಯೋಜನೆ
ಮಂತ್ರಿಗಳ ಅಧಿಕಾರಯುಕ್ತ ಗುಂಪನ್ನು 04 ಡಿಸೆಂಬರ್ 2೦೦6ರಂದು ರಚಿಸಲಾಯಿತು. ಯೋಜನೆಯನ್ನು ತ್ವರಿತವಾಗಿ ಹಾಗು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವುದಕ್ಕಾಗಿ ಹಾಗು ಇವುಗಳ ಮೇಲೆ ಒಂದು ಅಂತಿಮ ಅಭಿಪ್ರಾಯವನ್ನು ತಳೆಯುವುದಕ್ಕಾಗಿ ಅಗತ್ಯವಿರುವ ವಿಧಾನ ಮತ್ತು ನಿರ್ದಿಷ್ಟ ಮಹತ್ವಪೂರ್ಣ ಘಟ್ಟಗಳನ್ನು ನಿರ್ಧಾರಣೆ ಮಾಡುವ ಅಧಿಕಾರವನ್ನು ಅದಕ್ಕೆ ನೀಡಲಾಯಿತು.
- ಮಂತ್ರಿಗಳ ಅಧಿಕಾರಯುಕ್ತ ಗುಂಪಿನ ಮೊದಲ ಸಭೆಯು 27 ನವೆಂಬರ್ 2೦೦7ರಂದು ನಡೆಯಿತು, ಆ ಸಭೆಯಲ್ಲಿ, ಗುರುತು ಸಂಬಂಧಿತ ನಿವಾಸಿ ಮೂಲಸಂಚಯವನ್ನು ಅಭಿವೃದ್ಧಿಪಡಿಸುವ ಅಗತ್ಯತೆಯನ್ನು ಗುರುತಿಸಲಾಯಿತು. ಇದು, ಮೂಲಸಂಚಯವು ವೈಯಕ್ತಿಕ ವ್ಯಕ್ತಿಯಿಂದಲೇ ಪ್ರಸ್ತುತ ಮಾಡಲಾದಂತಹ ಮೂಲಮಾಹಿತಿಯ ಸಂಗ್ರಹದ ಅಥವಾ ಮತದಾರರ ಪಟ್ಟಿಯಂತಹ ಈಗಾಗಲೇ ಇದ್ದಂತಹ ಮೂಲಮಾಹಿತಿಯ ಆಧಾರದ ಮೇರೆಗೆ ಇದ್ದಿತೋ ಎಂಬುದರ ಬಗ್ಗೆ ಗಮನಕೊಡದೇ, ದತ್ತಸಂಚಯದ “ಸ್ವಾಮ್ಯತೆಯನ್ನು ಹೊಂದುವ” ಹಾಗು ಅದರ ನಿರ್ವಹಣೆಗೆ ಮತ್ತು ಮುಂದುವರಿಸಿಕೊಂಡು ಹೋಗುವ ಆಧಾರದ ಮೇರೆಗೆ ಅದನ್ನು ಇಂದಿನದಿನದನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ಗುರುತಿಸುವ ಹಾಗು ಸ್ಥಾಪಿಸುವ ಒಂದು ನಿರ್ಣಾಯಕ ಹಾಗು ಕಡ್ಡಾಯರೂಪಕ ಅಗತ್ಯತೆ ಇದೆ.
- ಮಂತ್ರಿಗಳ ಅಧಿಕಾರಯುಕ್ತ ಗುಂಪಿನ ಎರಡನೆಯ ಸಭೆಯು 28 ಜನವರಿ 2೦೦8ರಂದು ನಡೆಯಿತು, ರಾಷ್ಟ್ರೀಯ ಜನಸಂಖ್ಯಾ ವಹಿ ಮತ್ತು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ ಕಾರ್ಯಚಟುವಟಿಕೆಗಳನ್ನು ತಾರ್ಕಣೆಗೊಳಿಸುವುದಕ್ಕಾಗಿ ಕಾರ್ಯನೀತಿಯ ಬಗ್ಗೆ ನಿಶ್ಚಯಿಸಿತು. ಇನ್ನಿತರವುಗಳ ಜೊತೆಯಲ್ಲಿ, ಯೋಜನಾ ಆಯೋಗದ ಅಡಿಯಲ್ಲಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ ಸ್ಥಾಪನೆಯ ಪ್ರಸ್ತಾವನೆಗೆ ಅನುಮೋದನೆಯನ್ನು ನೀಡಿತು.
- ಮಂತ್ರಿಗಳ ಅಧಿಕಾರಯುಕ್ತ ಗುಂಪಿನ ಎರಡನೆಯ ಸಭೆಯು 07 ಅಗಸ್ಟ್ 2೦೦8ರಂದು ನಡೆಯಿತು, ಮಂತ್ರಿಗಳ ಅಧಿಕಾರಯುಕ್ತ ಗುಂಪಿನ ಸಭೆಯ ಮುಂದೆ ಯೋಜನಾ ಆಯೋಗವು, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ ಸ್ಥಾಪನೆಯ ಬಗ್ಗೆ ಒಂದು ಸವಿವರ ಪ್ರಸ್ತಾವನೆಯನ್ನು ಮಂಡಿಸಿತು. ಯುಐಡಿಎಐಗೆ ಸಂಬಂಧಿಸಿದಂತೆ ಸದಸ್ಯರು ಎತ್ತಿದ ಕೆಲವು ಅಂಶಗಳನ್ನು (ಮಂತ್ರಿಗಳ ಅಧಿಕಾರಯುಕ್ತ ಗುಂಪಿನ ಸಭೆಯ ನಡಾವಳಿಗಳ ಅನುಬಂಧ) ಅಧಿಕಾರಿಗಳ ಮಟ್ಟದ ಸಮಿತಿಯು ಪರಿಶೀಲಿಸುವ ಅಗತ್ಯವಿದೆ ಎಂಬುದಾಗಿ ಸಭೆಯು ನಿಶ್ಚಯಿಸಿತು. ಅದು ವಿಷಯವನ್ನು ಪರಿಶೀಲಿಸುವುದಕ್ಕಾಗಿ ಹಾಗು ಅದರ ಶಿಫಾರಸುಗಳನ್ನು ಒಂದು ಅಂತಿಮ ನಿರ್ಧಾರಕ್ಕೆ ಅನುವು ಮಾಡುವುದಕ್ಕಾಗಿ ಮಂತ್ರಿಗಳ ಅಧಿಕಾರಯುಕ್ತ ಗುಂಪಿಗೆ ನೀಡುವಂತೆ ತಿಳಿಸಿ ಕಾರ್ಯದರ್ಶಿಗಳ ಒಂದು ಸಮಿತಿಗೆ ವಹಿಸಿತು.
- ಕಾರ್ಯದರ್ಶಿಗಳ ಸಮಿತಿಯ ಶಿಫಾರಸುಗಳ ನಂತರ, ಮಂತ್ರಿಗಳ ಅಧಿಕಾರಯುಕ್ತ ಗುಂಪಿನ ನಾಲ್ಕನೆಯ ಸಭೆಯು 04 ಅಗಸ್ಟ್ 2೦೦8ರಂದು ನಡೆಯಿತು, ಕಾರ್ಯದರ್ಶಿಗಳ ಸಮಿತಿಯ ಶಿಫಾರಸುಗಳನ್ನು ಮಂತ್ರಿಗಳ ಅಧಿಕಾರಯುಕ್ತ ಗುಂಪಿಗೆ ನೀಡಲಾಯಿತು.
ಈ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳು
- ಪ್ರಾರಂಭಿಕವಾಗಿ, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವನ್ನು (ಯುಐಡಿಎಐ) ಒಂದು ಕಾರ್ಯಾಂಗ ಪ್ರಾಧಿಕಾರವನ್ನಾಗಿ ಅಧಿಸೂಚಿಸಬಹುದು ಹಾಗು ಅದನ್ನು ಒಂದು ಶಾಸನಬದ್ಧ ಪ್ರಾಧಿಕಾರವನ್ನಾಗಿ ಮಾಡುವುದನ್ನು ತದನಂತರ ಒಂದು ಸೂಕ್ತ ಸಮಯದಲ್ಲಿ ಪರಿಗಣಿಸಬಹುದು
- ಯುಐಡಿಎಐ ತನ್ನ ಕಾರ್ಯಚಟುವಟಿಕೆಗಳನ್ನು, ಮತದಾರ ಪಟ್ಟಿಯಿಂದ/ ಇಪಿಐಸಿ ಮೂಲಮಾಹಿತಿಯಿಂದ ಪ್ರಾರಂಭಿಕ ದತ್ತಸಂಚಯವನ್ನು ಸೃಷ್ಟಿಸುವುದಕ್ಕೆ ಮಾತ್ರ ಸೀಮಿತಗೊಳಿಸಬೇಕು. ಅದಾಗ್ಯೂ, ದತ್ತಸಂಚಯಗಳನ್ನು ಸೃಷ್ಟಿಸುವ ಕಾರ್ಯವನ್ನು ಕೈಗೊಳ್ಳುವ ಸಂಸ್ಥೆಗಳು ಮೂಲಮಾಹಿತಿಯ ಅಂಶಗಳು ಪ್ರಮಾಣಕ್ಕೆ ಅನುಸಾರವಾಗಿ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಯುಐಡಿಎಐ ನಿರ್ದೇಶನಗಳನ್ನು ನೀಡಬಹುದು.
- ದತ್ತಸಂಚಯವನ್ನು ಯಾವ ರೀತಿ ನಿರ್ಮಿಸಬೇಕು ಎಂಬುದರ ಬಗ್ಗೆ ಯುಐಡಿಎಐ ತನ್ನ ಸ್ವಂತ ನಿರ್ಣಯವನ್ನು ತೆಗೆದುಕೊಳ್ಳುತ್ತದೆ
- ಯುಐಡಿಎಐ ಅನ್ನು ಐದು ವರ್ಷಗಳವರೆಗೆ ಯೋಜನಾ ಆಯೋಗದಲ್ಲಿ ಇರಿಸಲಾಗುವುದು ಹಾಗು ತದನಂತರ ಸರ್ಕಾರದ ಒಳಗೇ ಯುಐಡಿಎಐ ಅನ್ನು ಎಲ್ಲಿ ನೆಲೆಗೊಳಿಸುವುದು ಎಂಬುದರ ಬಗ್ಗೆ ಅಭಿಪ್ರಾಯವನ್ನು ಪಡೆಯಲಾಗುವುದು.
- ಕೆಂದ್ರ ಮಟ್ಟದಲ್ಲಿ 10 ಅಧಿಕಾರಿಗಳ ಒಂದು ಪ್ರಮುಖ ತಂಡದೊಂದಿಗೆ ಯುಐಡಿಎಐನ ಸ್ಥಾಪನೆ ಹಾಗು ಡಿಒಇ/ಸಿಸಿಇಎ ಮೂಲಕ ಸಾಮಾನ್ಯ ಕಾರ್ಯವಿಧಾನದ ಅಡಿಯಲ್ಲಿ ಅನುಮೋದನೆಯನ್ನು ಪಡೆಯುವ ಮೊದಲು, ಸಂಪೂರ್ಣ ರಚನಾ ವ್ಯವಸ್ಥೆ, ಉಳಿದ ಸಿಬ್ಬಂದಿ, ಹಾಗು ಯುಐಡಿಎಐನ ಸಾಂಸ್ಥಿಕ ರಚನೆಯ ಬಗ್ಗೆ ಒಂದು ಸವಿವರ ಪ್ರಸ್ತಾವನೆಯನ್ನು ಸಚಿವ ಸಂಪುಟದ ಕಾರ್ಯದರ್ಶಿಯವರ ಪರಿಗಣನೆಗಾಗಿ, ಅವರಿಗೆ ಪ್ರತ್ಯೇಕವಾಗಿ ಸಲ್ಲಿಸುವಂತೆ ಯೋಜನಾ ಆಯೋಗಕ್ಕೆ ನಿರ್ದೆಶಿಸಲಾಯಿತು.
- ಕೇಂದ್ರ ಯುಐಡಿಎಐನ ಜೊತೆಯಲ್ಲಿಯೇ ಮೂವರು ಅಧಿಕಾರಿಗಳ ಪ್ರಮುಖ ತಂಡದೊಂದಿಗೆ ರಾಜ್ಯ ಯುಐಡಿಎಐನ ರಚನೆಗೆ ಅನುಮೋದನೆ
- ಅಧಿಕಾರಯುತ ಬಳಕೆದಾರರ ಪ್ರಾರಂಭಿಕ ತಂಡಗಳಿಗೆ ಬಳಕೆಗೆ ಯುಐಡಿಎಐ ಲಭ್ಯವಿರುವಂತೆ ಮಾಡಲು ಡಿಸೆಂಬರ್ 2009ನ್ನು ಗುರಿಯಾಗಿಸಿಕೊಂಡಿರುವ ದಿನಾಂಕವನ್ನಾಗಿ ನೀಡಲಾಯಿತು.
- ಪ್ರಸ್ತುತ ಇರುವ ಕಾರ್ಯವಿಧಾನದ ಪ್ರಕಾರ, ಡಿಒಇ/ಸಿಸಿಇಎ ಮೂಲಕ ಸಂಪೂರ್ಣ ಸಾಂಸ್ಥಿಕ ರಚನೆ ಮತ್ತು ಸಿಬ್ಬಂದಿಯ ಸಂಪೂರ್ಣ ಭಾಗಕ್ಕೆ ಅನುಮೋದನೆಯನ್ನು ಪಡೆಯುವ ಮೊದಲು, ಸವಿವರ ಸಾಂಸ್ಥಿಕ ರಚನೆ ಮತ್ತು ಸಿಬ್ಬಂದಿ ಮತ್ತು ಇತರೆ ಅಗತ್ಯತೆಗಳನ್ನು ಅಂತಿಮ ರೂಪಕ್ಕೆ ತರುವುದಕ್ಕಾಗಿ, ಸಚಿವ ಸಂಪುಟದ ಕಾರ್ಯದರ್ಶಿಯವರು ಒಂದು ಸಭೆಯನ್ನು ಕರೆಯಬೇಕು.
ಯುಐಡಿಎಐನ ಆಡಳಿತ ರಚನಾ ವ್ಯವಸ್ಥೆಯ ಬಗ್ಗೆ ಮಂತ್ರಿಗಳ ಅಧಿಕಾರಯುಕ್ತ ಗುಂಪಿನ ಪ್ರಸ್ತಾವನೆಗಳು ತದನಂತರ, ಮಂತ್ರಿಗಳ ಅಧಿಕಾರಯುಕ್ತ ಗುಂಪಿನ ನಿರ್ಣಯಗಳ ಅನುಸಾರದಂತೆ ಆಡಳಿತ ರಚನಾ ವ್ಯವಸ್ಥೆಯ ಬಗ್ಗೆ ಮಾಹಿತಿ ತಂತ್ರಜ್ಞಾನ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು 22 ಜನವರಿ 2009ರಂದು ಸಚಿವ ಸಂಪುಟದ ಕಾರ್ಯದರ್ಶಿಯವರು ಪರಿಗಣಿಸಿದರು ಹಾಗು ಯುಐಡಿಎಐನ ವ್ಯವಸ್ಥಾಪನೆಯ ಬಗ್ಗೆ ಅಧಿಸೂಚನೆಯನ್ನು ತತ್ ಕ್ಷಣ ನೀಡತಕ್ಕದ್ದು ಎಂಬುದಾಗಿ ಶಿಫಾರಸು ಮಾಡಿದರು.
- ಪ್ರಾಧಿಕಾರದ ಕಾರ್ಯಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವುದಕ್ಕಾಗಿ ಯೋಜನಾ ಆಯೋಗದ ಉಪಾಧ್ಯಕ್ಷರ ನೇತೃತ್ವದಲ್ಲಿ ಒಂದು ಉನ್ನತ ಮಟ್ಟದ ಸಲಹಾ, ಮೇಲ್ವಿಚಾರಣಾ ಹಾಗು ಸಮೀಕ್ಷಾ ಸಮಿತಿಯನ್ನು ರಚಿಸಲಾಯಿತು.
- ಮುಖ್ಯ ಯುಐಡಿಎಐ ಆಯುಕ್ತರಿಗೆ ಪ್ರಸ್ತಾಪಿಸಲಾಗಿರುವ ಕಾರ್ಯಗಳನ್ನು ನೋಡಿಕೊಳ್ಳುವ ಕೆಲಸವನ್ನು ಯೋಜನಾ ಆಯೋಗದ ಓರ್ವ ಸದಸ್ಯರಿಗೆ ಅಥವಾ ಯೋಜನಾ ಆಯೋಗದ ಕಾರ್ಯದರ್ಶಿಯವರಿಗೆ ವಹಿಸಬಹುದು.
- ಪ್ರಮುಖ ತಂಡವನ್ನು ಸ್ಥಾಪಿಸಬೇಕು / ಕಾರ್ಯೋನ್ಮಖಗೊಳಿಸಬೇಕು ಮಂತ್ರಿಗಳ ಅಧಿಕಾರಯುಕ್ತ ಗುಂಪಿನ 04 ನವಂಬರ್ 2008ರಂದು ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದ ಅನುಸಾರ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು 115 ಅಧಿಕಾರಿಗಳ ಪ್ರಾರಂಭಿಕ ಪ್ರಮುಖ ತಂಡದ ಜೊತೆ 28 ಜನವರಿ 2009ರಂದು ಯೋಜನಾ ಆಯೋಗದ ಆಶ್ರಯದ ಅಡಿಯಲ್ಲಿ ಹೊಂದಿಕೊಂಡಂತಿರುವ ಕಚೇರಿಯ ರೀತಿಯಲ್ಲಿ ರಚಿಸಲ್ಪಟ್ಟಿತು ಹಾಗು ಅಧಿಸೂಚನೆಗೊಂಡಿತು. ಯುಐಡಿಎಐನ ಪಾತ್ರ ಹಾಗು ಜವಾಬ್ದಾರಿಗಳನ್ನು ಈ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾಗಿದೆ.
ಯುಐಡಿಎಐ ಯೋಜನೆಯನ್ನು ಅನುಷ್ಟಾನಗೊಳಿಸುವುದಕ್ಕಾಗಿ ಯೋಜನೆ ಮತ್ತು ಕಾರ್ಯನೀತಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಯುಐಡಿಎಐಗೆ ನೀಡಲಾಯಿತು ಹಾಗು ಯುಐಡಿಎಐ ತನ್ನದೇ ಆದಂತಹ ದತ್ತಸಂಚಯದ ಸ್ವಾಮ್ಯವನ್ನು ಹೊಂದಿರಬೇಕು ಮತ್ತು ಅದನ್ನು ಕಾರ್ಯಾಚರಣೆಗೊಳಿಸಬೇಕು ಹಾಗು ಅಲ್ಲದೇ, ಅದನ್ನು ಮುಂದುವರಿದುಕೊಂಡು ಹೋಗುವ ಆಧಾರದ ಮೇರೆಗೆ ಇಂದಿನದಿನದನ್ನಾಗಿ ಮಾಡುವಲ್ಲಿ ಮತ್ತು ನಿರ್ವಹಿಸುವಲ್ಲಿ ಅದು ಜವಾಬ್ದಾರಿಯುತವಾಗಿದೆ.
ಸಂಘಟನೆಯ ವಿವರಗಳು
ಪ್ರಾಧಿಕಾರವನ್ನು ಯೋಜನಾ ಆಯೋಗದ ಅಟ್ಯಾಚ್ಡ್ ಕಚೇರಿಯಾಗಿ ಒಂದು ಘೋಷಣಾ ಪತ್ರದ ಮೂಲಕ ೨೮ – ೧ – ೨೦೦೯ ರಲ್ಲಿ ೧೧೫ ಅಧಿಕಾರಿಗಳ ಮತ್ತು ಸಿಬ್ಬಂದಿ ಮೂಲ
ಪ್ರಾಧಿಕಾರವನ್ನು ಯೋಜನಾ ಆಯೋಗದ ಅಟ್ಯಾಚ್ಡ್ ಕಚೇರಿಯಾಗಿ ಒಂದು ಘೋಷಣಾ ಪತ್ರದ ಮೂಲಕ ೨೮ – ೧ – ೨೦೦೯ ರಲ್ಲಿ ೧೧೫ ಅಧಿಕಾರಿಗಳ ಮತ್ತು ಸಿಬ್ಬಂದಿ ಮೂಲ ತಂಡದೊಂದಿಗೆ ಪ್ರಾರಂಭಿಸಲಾಯಿತು. ಈ ನೋಟಿಫಿಕೇಶನ್ ಪ್ರಕಾರವಾಗಿ ಕೇಂದ್ರ ಕಚೇರಿಯಲ್ಲಿ, ಒಬ್ಬ ಮಹಾ ನಿರ್ದೇಶಕರು, ಒಬ್ಬ ಉಪ ಮಹಾ ನಿರ್ದೇಶಕರು, ಒಬ್ಬರು ಸಹಾಯಕ ನಿರ್ದೇಶಕರನ್ನು ನೇಮಿಸಲಾಯಿತು. ೩೫ ವಿಶಿಷ್ಟ ಗುರುತು ಕಮಿಷನರುಗಳನ್ನು ಪ್ರತಿ ರಾಜ್ಯದಲ್ಲಿ ನೇಮಿಸಲಾಯಿತು. ಆನಂತರ, ಬೆಂಗಳೂರು, ಚಂಡೀಗಢ, ದೆಹಲಿ, ಹೈದರಾಬಾದ್, ಗುವಾಹಟಿ, ಲಖನೌ, ಮುಂಬೈ ಹಾಗೂ ರಾಂಚಿಗಳಲ್ಲಿ ಸ್ಪಷ್ಟ ಸರಹದ್ದುಗಳೊಂದಿಗೆ ಪ್ರಾದೇಶಿಕ ಕಚೇರಿಗಳನ್ನು ಆರಂಭಿಸಲಾಯಿತು. ಬೆಂಗಳೂರಿನಲ್ಲಿ ಒಂದು ತಂತ್ರಜ್ಞಾನ ಕೇಂದ್ರವನ್ನು ತೆರೆಯಲಾಯಿತು. ೨೬೮ ಹೆಚ್ಚುವರಿ ಹುದ್ದೆಗಳನ್ನು ಸೆಪ್ಟೆಂಬರ್ ೨೦೦೯ರಲ್ಲಿ ಆರಂಭಿಸಲಾಯಿತು. ಪ್ರಸ್ತುತ ಪ್ರಾಧಿಕಾರದಲ್ಲಿ ೩೮೩ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ.
ಕೇಂದ್ರ ಕಚೇರಿಯ ಸಾಂಸ್ಥಿಕ ರೂಪ :
ಪ್ರಾಧಿಕಾರದ ಕೇಂದ್ರ ಕಚೇರಿ ದೆಹಲಿಯಲ್ಲಿದೆ. ಶ್ರೀ ನಂದನ್ ನಿಲೇಕಣಿ ಅವರು ಅದರ ಅಧ್ಯಕ್ಷರಾಗಿದ್ದಾರೆ. ಶ್ರೀ ವಿಜಯ್ .ಎಸ್. ಮದನ್ ಅದರ ಮಹಾ ನಿರ್ದೇಶಕರಾಗಿದ್ದಾರೆ ಹಾಗೂ ಕಾರ್ಯಗುರಿಯ ನಿರ್ದೇಶಕರೂ ಆಗಿದ್ದಾರೆ. ಮಹಾ ನಿರ್ದೇಶಕ ಅವರಿಗೆ ಸಹಾಯ ಮಾಡಲು ಏಳು ಜನ ಉಪ ಮಹಾ ನಿರ್ದೇಶಕರು ಇದ್ದಾರೆ. ಇವರ ಜಂಟಿ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳಾಗಿರುತ್ತಾರೆ. ಅವರು ವಿವಿಧ ವಿಭಾಗಗಳ ಮುಖ್ಯಸ್ಥರಾಗಿರುತ್ತಾರೆ. ಒಬ್ಬರು ಉಪ ಮಹಾ ನಿರ್ದೇಶಕರು ಹಣಕಾಸು ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಉಪ ಮಹಾ ನಿರ್ದೇಶಕರುಗಳ ಸಹಾಯಕ್ಕಾಗಿ ೨೧ ಜನ ಸಹಾಯಕ ಮಹಾ ನಿರ್ದೇಶಕರು, ೧೫ ಉಪ ನಿರ್ದೇಶಕರು, ೧೫ ಸೆಕ್ಷನ್ ಅಧಿಕಾರಿಗಳು ಹಾಗೂ ೧೫ ಸಹಾಯಕರು ಇರುತ್ತಾರೆ. ಕೇಂದ್ರ ಕಚೇರಿಯಲ್ಲಿ ಒಟ್ಟು ೧೪೬ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. ಇವರಲ್ಲಿ ಲೆಕ್ಕಪತ್ರ ಮತ್ತು ಮಾಹಿತಿ ತಂತ್ರಜ್ಞಾನದ ಸಿಬ್ಬಂದಿಯೂ ಸೇರಿದ್ದಾರೆ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯುಕ್ತ [ಡೆಪ್ಯುಟೇಷನ್] ಆಧಾರದ ಮೇಲೆ ನೇಮಿಸಲಾಗಿದೆ. ಇವರನ್ನು ಸೆಂಟ್ರಲ್ ಸ್ಟಾಫಿಂಗ್ ಸ್ಕೀಂ ಅಥವಾ ದ್ವಿಪಕ್ಷೀಯ ಆಧಾರದ ಮೇಲೆ ನಿಯಮಿಸಲಾಗಿದೆ. ಸದ್ಯಕ್ಕೆ ೮೫ ಜನ ಇದ್ದಾರೆ. ಉಳಿದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಸಮಾಜದ ಬಡ ಮತ್ತು ಅಲಕ್ಷಿತ ವರ್ಗಗಳಿಗೆ ಆಧಾರ್ ಲಭ್ಯವಾಗಬೇಕೆಂಬುದೇ ವಿಶಿಷ್ಟ ಗುರುತು ಪ್ರಾಧಿಕಾರದ ಕಾರ್ಯ. ಬೀದಿ ಬದಿಯ ಮಕ್ಕಳು / ಅನಾಥ ಮಕ್ಕಳು, ವಿಧವೆಯರು ಮತ್ತಿತರ ಸೌಲಭ್ಯವಂಚಿತ ಮಹಿಳೆಯರು, ಅಲೆಮಾರಿ ಕೆಲಸಗಾರರು, ವಸತಿ ರಹಿತರು, ಹಿರಿಯ ನಾಗರೀಕರು, ಅಲೆಮಾರಿ ಜನಾಂಗಗಳು, ಗುಡ್ಡಗಾಡು ಜನರು ಮತ್ತು ವಿಕಲಚೇತನರು ಈ ವರ್ಗದಲ್ಲಿದ್ದಾರೆ. ಈ ಜವಾಬ್ದಾರಿಯು ಪೂರೈಕೆಗಾಗಿ ಪ್ರಾಧಿಕಾರವು ಈ ಸೂಕ್ಷ್ಮ ಗುಂಪುಗಳನ್ನು ಪ್ರತಿನಿಧಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಜೊತೆಗೆ ಸಮಾಲೋಚನೆ ನಡೆಸುವುದನ್ನು ಮುಂದುವರಿಸುತ್ತದೆ.
- ಪ್ರಾಧಿಕಾರದ ಸಮಾಲೋಚನೆಯ ಟೇಕವೇಸ್ ಸಮಾಲೋಚನೆಯಲ್ಲಿ ಏಪ್ರಿಲ್ ಮೊದಲಿನ ಸಮಾಲೋಚನೆಗಳು
- ವಸತಿರಹಿತರ ಅಡ್ವೊಕೇಟ್ಗಳು, ದೆಹಲಿಯ ಇಂಡೋ-ಗ್ಲೋಬಲ್ ಸಾಮಾಜಿಕ ಸೇವಾ ಸೊಸೈಟಿ. [೬ ಅಕ್ಟೋಬರ್ ೨೦೦೯]
- ಇತಿಹಾಸಕಾರರು, ಸಮಾಜ ವಿಜ್ಞಾನಿಗಳು, ಸರ್ಕಾರೇತರ ಸಂಸ್ಥೆಗಳ ನಾಯಕರು, ಮಾಜಿ ಆಡಳಿತಗಾರರು – ಸಿಮ್ಲಾದ ಭಾರತೀಯ ಮುಂದುವರಿದ ಅಧ್ಯಯನ ಸಂಸ್ಥೆಗೆ ಆಹ್ವಾನಿತರಾದವರು. [ಅಕ್ಟೋಬರ್ ೩೦, ೩೧ – ೨೦೦೯]
- ಸೇವಾ, ಅಹಮದಾಬಾದ್ [ಡಿಸೆಂಬರ್ ೧೨, ೨೦೦೯]
- ಗುವಾಹಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಮೂಹ ([ಫೆಬ್ರವರಿ ೧೫, ೨೦೧೦]
- ಬೋಡೋಲ್ಯಾಂಡ್ ಟೆರಿಟೋರಿಯಲ್ ಮಂಡಳಿ, ಕೊಕ್ರಾಜಾರ್, ಬಿಟಿಸಿ ಅಸ್ಸಾಂ [ಫೆಬ್ರವರಿ ೧೭, ೨೦೧೦]
- ಸಿಎಸ್ಒ, ಮಹಾರಾಷ್ಟ್ರ, ಇಕೊನೆಟ್, ಎಫ್ರಾಂ ಮತ್ತು ಎನ್ಸಿಎಎಸ್ ಪುಣೆ ಸಂಘಟಿಸಿದ್ದು [ಮಾರ್ಚ್ ೨, ೨೦೧೦] ಪ್ರಾಧಿಕಾರ ಮತ್ತು ಸಿಎಸ್ಒ ಸಮಾಲೋಚನೆಯ ಸಭಾ ನಡೆವಳಿಕೆಗಳು ಪ್ರಾಧಿಕಾರ ಮತ್ತು ಸಿಎಸ್ಒ ಸಮಾಲೋಚನೆಯ ಸಭಾ ನಡೆವಳಿಕೆ ವರದಿ ಈ ಕೆಳಗಿದೆ :
- ನವದೆಹಲಿಯಲ್ಲಿ ಮೇ ೬, ೨೦೧೦ ರಂದು ನಡೆದ ರಾಷ್ಟ್ರೀಯ ಎನ್ಜಿಒ ನಾಯಕರು, ಮಾನವಹಕ್ಕು / ನಾಗರಿಕ ಹಕ್ಕು ಗುಂಪುಗಳು, ನ್ಯಾಯವಾದಿಗಳು, ಮುಕ್ತ ತಂತ್ರಜ್ಞಾನ ಅಡ್ವೋಕೇಟರುಗಳ ಸಭೆಯ ನಡೆವಳಿಕೆ ವರದಿ.
ಸಂಬಂಧ ಪಟ್ಟವರ ಜೊತೆಗಿನ ಸಮಾಲೋಚನೆ
ಸಭೆಗಳು
ಬಡವರ ಕುರಿತಾಗಿ ಆಧಾರ್ ನೀಡುತ್ತಿರುವ ವಿಶೇಷ ಗಮನವನ್ನು ಆಧರಿಸಿ ಪ್ರಾಧಿಕಾರವು ನಾಗರಿಕ ಸಮಾಜ ಸಂಸ್ಥೆಗಳ ಜೊತೆಗೆ ಸಭೆಗಳನ್ನು ಏರ್ಪಡಿಸುತ್ತದೆ. ಸರ್ಕಾರಿ ಇಲಾಖೆಗಳ ಜೊತೆಗೂ ದೇಶದ ವಿವಿಧ ಭಾಗಗಳಲ್ಲಿ ಸಭೆಗಳನ್ನು ಏರ್ಪಡಿಸುತ್ತಿದೆ. ವಿಶೇಷವಾಗಿ ಅಲಕ್ಷಿತ ಸಮುದಾಯಗಳ ಬಗ್ಗೆ ಮಾತನಾಡುವವರ ಜೊತೆ ಈ ಸಭೆಗಳು ನಡೆಯುತ್ತಿವೆ.
- ಸಚಿವ ಖಾತೆ ಮತ್ತು ರಿಜಿಸ್ಟ್ರಾರ್ ನಡುವೆ ನಡೆದ ಸಭೆಗಳು
- ತೈಲ ಸಚಿವ ಖಾತೆ – ೨೯-೭-೨೦೦೯
- ಕಾರ್ಮಿಕ ಸಚಿವ ಖಾತೆ – ೨೯ ಜುಲೈ ೨೦೦೯
- ವಿದೇಶಾಂಗ ವ್ಯವಹಾರ ಸಚಿವ ಖಾತೆ – ೩೦ ಜುಲೈ ೨೦೦೯
- ಆದಾಯ ತೆರಿಗೆ ಇಲಾಖೆ – ೩೦ ಜುಲೈ ೨೦೦೯
- ಯೋಜನಾ ಆಯೋಗ – ಆಗಸ್ಟ್ ೨೦೦೯
- ೧೩ನೇ ಹಣಕಾಸು ಆಯೋಗ – ಆಗಸ್ಟ್ ೨೦೦೯
- ಮುಖ್ಯ ಮಾಹಿತಿ ಆಯುಕ್ತರು – ೧೮ ಆಗಸ್ಟ್ ೨೦೦೯
- ಮುಖ್ಯ ಜಾಗೃತ ಆಯುಕ್ತರು – ೧೯ ಆಗಸ್ಟ್ ೨೦೦೯
- ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜೊತೆಗಿನ ಪಾಲುದಾರಿಕೆ ಆರಂಭ – ೨೦ ಆಗಸ್ಟ್ ೨೦೦೯
- ಮೇಘಾಲಯ ಸರ್ಕಾರ – ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳು – ೨೬ ಆಗಸ್ಟ್ ೨೦೦೯
- ಕರ್ನಾಟಕ ಸರ್ಕಾರ – ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳು – ೨೬ ಆಗಸ್ಟ್ ೨೦೦೯
- ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಏಜೆನ್ಸಿ – ೩೧ ಆಗಸ್ಟ್ ೨೦೦೯
- ದೆಹಲಿ ಸರ್ಕಾರ – ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳು – ೨ ಸೆಪ್ಟೆಂಬರ್ ೨೦೦೯
- ಎಲ್ಐಸಿ –೪ ಸೆಪ್ಟೆಂಬರ್ ೨೦೦೯
- ಸಾರ್ವಜನಿಕ ಆರೋಗ್ಯ ಮತ್ತು ಪ್ರಾಧಿಕಾರದ ಸಮಾಲೋಚನಾ ಕಾರ್ಯಾಗಾರ – ೮ ಸೆಪ್ಟೆಂಬರ್ ೨೦೦೯
- ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ - ೯ ಸೆಪ್ಟೆಂಬರ್ ೨೦೦೯
- ಆರ್ಥಿಕ ತಜ್ಞರ ಜೊತೆ ಸಮಾಲೋಚನೆ – ೧೦ ಸೆಪ್ಟೆಂಬರ್ ೨೦೦೯
- ಮುಖ್ಯ ಲೆಕ್ಕಪತ್ರ ಜನರಲ್ - ೨೩ ಸೆಪ್ಟೆಂಬರ್ ೨೦೦೯
- ನಾಸ್ಕಾಂ – ೨೪ ಸೆಪ್ಟೆಂಬರ್ ೨೦೦೯
- ಕೇರಳ ಸರ್ಕಾರ – ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳು – ೨೦ ಸೆಪ್ಟೆಂಬರ್ ೨೦೦೯
- ತಮಿಳುನಾಡು ಸರ್ಕಾರ – ೩೦ ಸೆಪ್ಟೆಂಬರ್ ೨೦೦೯
- ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ – ೫ ಅಕ್ಟೋಬರ್ ೨೦೦೯
- ರಾಜಸ್ತಾನ್ ಸರ್ಕಾರ – ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳು – ೬ ಅಕ್ಟೋಬರ್ ೨೦೦೯
- ಉತ್ತರಾಖಂಡ್ ಸರ್ಕಾರ – ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳು –೮, ೧೦ ಅಕ್ಟೋಬರ್ ೨೦೦೯
- ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ, ಮುಸ್ಸೋರಿ – ೯ ಅಕ್ಟೋಬರ್ ೨೦೦೯
- ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ – ೧೨ ಅಕ್ಟೋಬರ್ ೨೦೦೯
- ಪಿಡಿಎಸ್ - ಪ್ರಾಧಿಕಾರದ ಕಾರ್ಯಾಗಾರ – ೧೩ ಅಕ್ಟೋಬರ್ ೨೦೦೯
- ಅಂತಾರಾಷ್ಟ್ರೀಯ ಡೋನರ್ಸ್ ಸಮ್ಮೇಳನ – ೧೪ ಅಕ್ಟೋಬರ್ ೨೦೦೯
- ಸಮ್ಮೇಳನ – ಹಣಕಾಸು ಒಳಗೊಳ್ಳುವಿಕೆ – ಎನ್ಆರ್ಇಜಿಎ ಹಾಗೂ ಯುಐಡಿಎಐ – ೧೫ ಅಕ್ಟೋಬರ್ ೨೦೦೯
- ಗೋವಾ ಸರ್ಕಾರ – ೧೬ ಅಕ್ಟೋಬರ್ ೨೦೦೯
- ಆಂಧ್ರ ಪ್ರದೇಶ ಸರ್ಕಾರ – ೨೧ ಅಕ್ಟೋಬರ್ ೨೦೦೯
- ಐಡಿಬಿಆರ್ಟಿ – ೨೧ ಅಕ್ಟೋಬರ್ ೨೦೦೯
- ಮೈಕ್ರೋ ಹಣಕಾಸು ಕ್ಷೇತ್ರ ಭೇಟಿ – ೨೨ ಅಕ್ಟೋಬರ್ ೨೦೦೯
- ಎಸ್ವಿಪಿ ರಾಷ್ಟ್ರೀಯ ಪೊಲೀಸ್ ಅಕಾಡೆಮಿ, ಹೈದರಾಬಾದ್ - ೨೨ ಅಕ್ಟೋಬರ್ ೨೦೦೯
- ಐಐಎಎಸ್ ಸಮ್ಮೇಳನ , ಸಿಮ್ಮಾ – ೩೦ ಅಕ್ಟೋಬರ್ ೨೦೦೯
- ಹಿಮಾಚಲ ಪ್ರದೇಶ ಸರ್ಕಾರ – ೩೧ ಅಕ್ಟೋಬರ್ ೨೦೦೯
- ಮಧ್ಯ ಪ್ರದೇಶ ಸರ್ಕಾರ – ೪ ಅಕ್ಟೋಬರ್ ೨೦೦೯
- ಅಂತಾರಾಷ್ಟ್ರೀಯ ಅನುಭವಗಳ ಕುರಿತಾದ ವಿಶ್ವ ಬ್ಯಾಂಕ್ ಸಮ್ಮೇಳನ – ೧೦, ೧೧ ನವೆಂಬರ್ ೨೦೦೯
- ಮೈಕ್ರೋಹಣಕಾಸು ಸಂಸ್ಥೆಗಳು – ೧೨ ನವೆಂಬರ್ ೨೦೦೯
- ವೆಂಚರ್ ಕ್ಯಾಪಿಟಲಿಸ್ಟ್ಸ್ - ೧೩ ನವೆಂಬರ್ ೨೦೦೯
- ಉತ್ತರ ಪ್ರದೇಶ ಸರ್ಕಾರ – ೧೬ ನವೆಂಬರ್ ೨೦೦೯
- ಬಿಹಾರ ಸರ್ಕಾರ – ೧೭ ನವೆಂಬರ್ ೨೦೦೯
- ಮಣಿಪುರದ ಮುಖ್ಯಮಂತ್ರಿ – ೨೪ ನವೆಂಬರ್ ೨೦೦೯
- ಮಹಾರಾಷ್ಟ್ರ ಸರ್ಕಾರ – ೨೭ ನವೆಂಬರ್ ೨೦೦೯
- ಫಾರ್ವರ್ಡ್ಸ್ ಮಾರ್ಕೆಟ್ ಕಮಿಷನ್ - ೨೭ ನವೆಂಬರ್ ೨೦೦೯
- ಮಹಾರಾಷ್ಟ್ರ ಮುಖ್ಯಮಂತ್ರಿ – ೩೦ ನವೆಂಬರ್ ೨೦೦೯
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ – ೩೦ ನವೆಂಬರ್ ೨೦೦೯
- ವಿಶಿಷ್ಟ ಗುರುತಿಗೆ ಜೋಡಿಸಲಾದ ಕಿರುಪಾವತಿಗಳ ಮಾದರಿಯನ್ನು ಯೋಜನಾ ಆಯೋಗಕ್ಕೆ ಪ್ರಸ್ತುತಪಡಿಸಿದ್ದು – ೪ ಡಿಸೆಂಬರ್ ೨೦೦೯
- ಗುಜರಾತ್ ಸರ್ಕಾರ – ಮುಖ್ಯಮಂತ್ರಿ ಮತ್ತು ಅಧಿಕಾರಿಗಳು – ೮ ಡಿಸೆಂಬರ್ ೨೦೦೯
- ಐಐಎಂ ಅಹಮದಾಬಾದ್ನಲ್ಲಿ ಚರ್ಚೆ – ೮ ಡಿಸೆಂಬರ್ ೨೦೦೯
- ಆರ್ಬಿಐ ಮತ್ತು ಐಬಿಎ – ಆಧಾರ್ ಆಧಾರಿತ ಕಿರುಪಾವತಿಗಳು ೧೧ ಡಿಸೆಂಬರ್ ೨೦೦೯
- ವಿತ್ತ ಸಚಿವಾಲಯ – ಆರ್ಬಿಐ ಮತ್ತು ಐಬಿಎ, ಆಧಾರ್ ಆಧಾರಿತ ಕಿರುಪಾವತಿಗಳು – ೧೫ ಡಿಸೆಂಬರ್ ೨೦೦೯
- ಪಾರ್ಲಿಮೆಂಟರಿ ಅಧ್ಯಯನ ಮತ್ತು ತರಬೇತಿ ಬ್ಯುರೋನಲ್ಲಿನ ಗೌರವಾನ್ವಿತ ಸಂಸತ್ ಸದಸ್ಯರಿಗೆ ಯುಐಡಿಎಐ ಪರಿಯೋಜನೆ ಬಗ್ಗೆ ಪ್ರಸ್ತುತಿ – ೧೬ ಡಿಸೆಂಬರ್ ೨೦೦೯
- ಪಂಜಾಬ್ ಸರ್ಕಾರ – ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳು – ೧೭ ಡಿಸೆಂಬರ್ ೨೦೦೯
- ಹರಿಯಾಣ ಸರ್ಕಾರ - ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳು – ೧೭ ಡಿಸೆಂಬರ್ ೨೦೦೯
- ಕರ್ನಾಟಕ ಸರ್ಕಾರ – ಮುಖ್ಯ ಕಾರ್ಯದರ್ಶಿ – ೧೮ ಡಿಸೆಂಬರ್ ೨೦೦೯
- ಕರ್ನಾಟಕ ಸರ್ಕಾರ – ಮುಖ್ಯಮಂತ್ರಿ – ೧೯ ಡಿಸೆಂಬರ್ ೨೦೦೯
- ಇಂಡಿಯನ್ ಬ್ಯಾಂಕ್ಸ್ ಸಂಘಟನೆ ಮತ್ತು ದೂರಸಂಪರ್ಕ ಕಂಪನಿಗಳ ಜೊತೆ ಸಮಾಲೋಚನೆ. ಆಧಾರ್ ಆಧಾರಿತ ಮೈಕ್ರೊ ಎಟಿಎಂ ವಿನ್ಯಾಸ – ೬ ಜನವರಿ ೨೦೧೦
- ನಾಸ್ಕಾಂನ ಕಾರ್ಯಕಾರಿ ಸಮಿತಿ ಸದಸ್ಯರು – ೭ ಜನವರಿ ೨೦೧೦
- ಒರಿಸ್ಸಾ ಸರ್ಕಾರ – ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳು – ೧೩ ಜನವರಿ ೨೦೧೦
- ಛತ್ತೀಸ್ಗಢ ಸರ್ಕಾರ – ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳು – ೨೦ ಜನವರಿ ೨೦೧೦
- ತೖಲೋತ್ಪನ್ನಗಳ ಬೆಲೆನೀತಿ ಕುರಿತಾದ ಡಾ. ಕಿರೀಟ್ ಪಾರಿಖ್ ಸಮಿತಿಗೆ ಯುಐಡಿಎಐ ಪರಿಯೋಜನೆಯು ಪ್ರಸ್ತುತಿ – ೨೧ ಜನವರಿ ೨೦೧೦
- ಎಲ್ಐಸಿ ಅಧ್ಯಕ್ಷರು, ಮುಂಬೈ – ೨೮ ಜನವರಿ ೨೦೧೦
- ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿ – ೩ ಫೆಬ್ರವರಿ ೨೦೧೦
- ಗುವಾಹಟಿಯ ಈಶಾನ್ಯ ಪ್ರದೇಶ ಮಂಡಳಿಯ ಮುಖ್ಯಮಂತ್ರಿಗಳು – ೮ ಫೆಬ್ರವರಿ ೨೦೧೦
- ಮುಂಬೈನ ನಾಸ್ಕಾಂ ಕಾರ್ಯಕಾರಿ ಮಂಡಳಿ – ೧೧ ಫೆಬ್ರವರಿ ೨೦೧೦
- ಸಿಸ್ಕೋ– ೧೬ ಫೆಬ್ರವರಿ ೨೦೧೦
- ಜಮ್ಮು ಮತ್ತು ಕಾಶ್ಮೀರ ಸರ್ಕಾರ – ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳು – ೧೯ ಫೆಬ್ರವರಿ ೨೦೧೦
- ಜಾರ್ಖಂಡ್ ಸರ್ಕಾರ - ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳು – 24 ಫೆಬ್ರವರಿ ೨೦೧೦ ಸಿಎಸ್ಒ ನಾಯಕರ ಜತೆ ಸಭೆ
ಪ್ರಮಥೇಶ್ ಅಂಬಸ್ತಾ, ಎಸ್ಪಿಎಸ್
- ಆನಂದ್ ಷಾ, ಇಂಡಿಕಾರ್ಪ್ಸ್
- ಗಗನ್ ಸೇತಿ, ಜನವಿಕಾಸ್, ಸಿಎಸ್ಜೆ
- ಸುನೀಲ್ ಹಂಡಾ, ಎಡಿಆರ್ / ಏಕಲವ್ಯ
- ರಾಜು ಜೋಷಿ, ಸಾಥ್
- ಹರಿ ಮೆನನ್ / ಟಿ. ಉಷಾ, ಗೇಟ್ಸ್ ಫೌಂಡೇಷನ್
- ಹರ್ಷ್ ಜೇಟ್ಲಿ, ವಾಣಿ
- ಯೋಗೇಶ್ ಕಾಳೆ, ಸಿಎಚ್ಎಫ್ / ಮಷಲ್
- ಶೀಲಾ ಪಟೇಲ್, ಎಸ್ಪಿಎಆರ್ಸಿ
- ದೇವಿಕಾ ಮಹಾದೇವನ್, ಮೊಬೖಲ್ ಕ್ರಚಸ್
- ಡಾ. ಮಹೇಂದ್ರ, ಯುಎನ್ಎಸ್ಇ
- ಡಾ. ಸುದರ್ಶನ್, ವಿಜಿಕೆಕೆ
- ನಿಖಿಲ್ ಡೇ / ಶಂಕರ್ ಸಿಂಗ್, ಎಂಕೆಎಸ್ಎಸ್
- ರಾಜೀವ್ ಖಂಡೇಲ್ವಾಲ್, ಆಜೀವಿಕಾ ಬ್ಯುರೋ
- ರೇನಾನಾ ಜಾಬ್ವಾಲಾ, ಸೇವಾ
- ಡಾ. ಸುನೀಲ್ ಕೌಲ್, ದಿ ಆಂಟ್
- ಅಮಿತಾ ಜೋಸೆಫ್, ಬಿಸಿಎಫ್ •
- ಇಂದು ಪ್ರಕಾಶ್ ಸಿಂಗ್, ಐಜಿಎಸ್ಎಸ್
- ಎಸ್ಕೆ ದ್ವಿವೇದಿ, ಗ್ರಾಮೀಣಾಭಿವೃದ್ಧಿ ಸೇವೆಗಳು
- ಜಾಕ್ವೆಲಿನ್ ಗೋನ್ಸಾಲ್ವೆಸ್, ಅಲೆಮಾನ್, ಯೂನಿಸೆಫ್
- ಶಿರೀನ್ ವಾರ್ಕಿ, ಯೂನಿಸೆಫ್
- ಬೀನಾ .ಕೆ, ಯೂನಿಸೆಫ್
- ಅಂಜರ್ ಆಲಂ, ಅಖಿಲ ಭಾರತೀಯ ಗ್ರಾಮೀಣ ವಿಕಾಸ ಪರಿಷತ್
- ಸಂಜಯ್ ಪಾಂಡೆ, ಒಡಿಆರ್ ಕೊಲಾಬೋರೇಟಿವ್
- ಅನಂತ್ ಷಾ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್'
- ತಾರಕೇಶ್ವರ ಸಿಂಗ್, ಸಾರಥಿ • ಅಶೋಕ್ ಕಲಭಾಗ್, ವಿಜ್ಞಾನ್ ಆಶ್ರಮ
- ಧನು ರಾಯ್, ಹಾಜರ್ಡ್ಸ್ ಸೆಂಟರ್ • ಪರಮಜಿತ್ ಕೌರ್, ಆಶ್ರಯ್ ಅಧಿಕಾರ್ ಅಭಿಯಾನ್
- ಫಾದರ್ ಅಂತೋಣಿ, ಡಾನ್ ಬಾಸ್ಕೊ
ಆಶಾಲಯಂ
ಯುಐಡಿಎಐ ಭಾಗವಹಿಸಿದ ಸಭೆಗಳು
ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಆಧಾರ್ನ ನ್ಯಾಯಿಕ ಮುಗ್ಗಲುಗಳು ಕುರಿತಾದ ಕಾರ್ಯಾಗಾರರ [ಅಕಾಡೆಮಿಕ್ ತಜ್ಞರು, ನಾಗರಿಕ ಸಮಾಜ, ನ್ಯಾಯವಾದಿಗಳು, ವಿದ್ಯಾರ್ಥಿಗಳು ಇತ್ಯಾದಿ ಪ್ರತಿನಿಧಿಗಳಿದ್ದರು] – ೨೩ ನವೆಂಬರ್ ೨೦೦೯ ಎಂಓಯುಗಳು ಜೊತೆಗೂಡಿದೆ. ಅಲ್ಲದೆ ಈ ಅಲಕ್ಷಿತ ಸಮುದಾಯಗಳನ್ನು ಒಳಗೊಳ್ಳಲು, ಸರ್ಕಾರದ ವಿವಿಧ ಯೋಜನೆಗಳನ್ನು ವಿನ್ಯಾಸಗೊಳಿಸಲು, ಬ್ಯಾಂಕಿಂಗ್ ಮತ್ತಿತರ ಹಣಕಾಸು ಸೇವೆ ಒದಗಿಸಲು ಪ್ರಾಧಿಕಾರವು ಕಾರ್ಯತಂತ್ರ ಹಾಕಿಕೊಂಡಿದೆ. ಅಲೆಮಾರಿ ಕೆಲಸಗಾರ ಗುಂಪುಗಳ ಒಕ್ಕೂಟದ ಜೊತೆಗೆ ಪ್ರಾಧಿಕಾರವು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ ಮುಂಬೈ, ೨೦ ಜುಲೈ ೨೦೧೦ : ಪ್ರಾಧಿಕಾರವು ಅಲೆಮಾರಿ ಕೆಲಸಗಾರರ ಸವಕ್ಷತಾ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಜೊತೆಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಒಕ್ಕೂಟದಲ್ಲಿ ೨೦ ನಾಗರೀಕ ಸಮಾಜ ಸಂಸ್ಥೆಗಳಿವೆ. ಇವು ಅಲೆಮಾರಿ ಕೆಲಸಗಾರ ಗುಂಪುಗಳ ಮತ್ತು ಸಮುದಾಯಗಳು ಸೇರಿವೆ. ಈ ಒಕ್ಕೂಟವು ಪ್ರಾಧಿಕಾರದ ಜೊತೆಗೂಡಿ ಈ ಸಮುದಾಯಗಳಿಗೆ ಆಧಾರ್ ನೋಂದಣಿಗೆ ಸಹಾಯ ಮಾಡುತ್ತದೆ. ಆಧಾರ್ ೧೨ ಅಂಕಿಗಳ ವಿಶಿಷ್ಟ ಗುರುತು. ಈ ಎಂಓಯು ಅನ್ನು ಪ್ರಾಧಿಕಾರದ ಉಪ ಮಹಾನಿರ್ದೇಶಕರಾದ ಶ್ರೀ ಎನ್.ಕೆ. ಸಿನ್ಹಾ ಮತ್ತು ಉದಯಪುರದ ಆಜೀವಿಕ್ ಬ್ಯುರೋದ ಶ್ರೀ ರಾಜೀವ್ ಖಂಡೇಲ್ವಾಲ್ ಅವರು ಸಹಿ ಹಾಕಿದ್ದಾರೆ. ಅವರು ಒಕ್ಕೂಟದ ಅಧಿಕೃತ ಸಹಿದಾರರೂ ಆಗಿದ್ದಾರೆ. ಶ್ರೀ ಸಿನ್ಹಾ ಅವರು ಹೇಳಿದಂತೆ –"ಈ ಎಂಓಯು ಮೂಲಕ ಪ್ರಾಧಿಕಾರವು ಅಲಕ್ಷಿತ ವರ್ಗಗಳನ್ನು ತಲುಪುವ ಪ್ರಯತ್ನ ಮಾಡಿದೆ. ಜತೆಗೆ ನಾಗರಿಕ ಸಮಾಜದ ಸಂಸ್ಥೆಗಳು ಅವು ಬಡ ಮತ್ತು ಅಲಕ್ಷಿತ ವರ್ಗಗಳನ್ನು ಪ್ರತಿನಿಧಿಸುತ್ತವೆ." ಈ ಒಕ್ಕೂಟವು ಭಾರತದ ಅಲೆಮಾರಿ ಕೆಲಸಗಾರರು ಇರುವ ಸ್ಥಳಗಳಲ್ಲಿ ಮತ್ತು ಈ ಕೆಲಸಗಾರರು ಅಧಿಕವಾಗಿ ಇರುವ ಮುಖ್ಯ ಪ್ರದೆಶಗಳಲ್ಲಿ ಕಾರ್ಯನಿರತವಾಗಿದೆ. ಈ ಜನವರ್ಗಗಳಿಗೆ ಆಧಾರ್ ಸಂಖ್ಯೆಯನ್ನು ಒದಗಿಸುವುದರಿಂದ ಅವರಿಗೆ ಸಾರ್ವತ್ರಿಕವಾದ ಸಾಕ್ಷಿ ದೊರಕಿದಂತಾಗುತ್ತದೆ.
ಜೊತೆಗೆ ಆ ವರ್ಗಗಳು ತಮಗೆ ಉತ್ತಮ ಸೇವೆ ನೀಡುವಂತೆ ಒತ್ತಡ ತರಬಹುದು. ಭಾರತದಲ್ಲಿರುವ ಸುಮಾರು ೧೦೦ ದಶಲಕ್ಷ ಅಲೆಮಾರಿ ಕೆಲಸಗಾರರಿಗೆ ಇದು ಸುರಕ್ಷೆ ಹಾಗೂ ಭದ್ರತೆ ಒದಗಿಸುತ್ತದೆ. ಇದು ಬರಲಿರುವ ಕಾಲದಲ್ಲಿ ಈ ಜನಸಂಖ್ಯೆಗಳಿಗೆ ಬಹು ಅಧಿಕವಾದ ಪ್ರಾಮುಖ್ಯತೆ ದೊರಕಿದಂತಾಗುತ್ತದೆ. ಬಹಳ ಸೇವೆಗಳನ್ನು ಪಡೆಯಲು ಇದು ಸಹಾಯಕವಾಗುತ್ತದೆ. ಬ್ಯಾಂಕಿಂಗ್ ಮತ್ತು ಸರ್ಕಾರಿ ಕಾರ್ಯಕ್ರಮಗಳಿಂದ ಸಾಮಾಜಿಕ ಭದ್ರತೆ ಪಡೆಯಲು ಸಾಧ್ಯವಾಗುತ್ತದೆ. ಒಕ್ಕೂಟದ ಪರವಾಗಿ, ಶ್ರೀ ಖಂಡೇಲ್ವಾಲ್ ಅವರು ಮಾತನಾಡಿ, ಪ್ರಾಧಿಕಾರದ ಪ್ರಯತ್ನಗಳು ಈ ಅಲೆಮಾರಿ ಕೆಲಸಗಾರರ ಸಮುದಾಯಗಳಿಗೆ ವರದಾನವಾಗಿದೆ ಎಂದು ಹೇಳಿದರು. ಈ ಪಾಲುದಾರಿಕೆಯ ಮೂಲಕ ನಾವು ಪ್ರಾಧಿಕಾರದ ಜವಾಬ್ದಾರಿಯು ಪೂರ್ಣವಾಗಲು ನಾವು ಶ್ರಮಿಸೋಣ ಎಂದು ಹೇಳಿದರು. ಜಾಗೃತಿ ಮತ್ತು ಸಂವಹನ ಕಾರ್ಯತಂತ್ರ ಸಲಹಾ ಮಂಡಳಿ ಜಾಗೃತಿ ಮತ್ತು ಸಂವಹನದ ಪ್ರಾಮುಖ್ಯತೆಯನ್ನು ಪ್ರಾಧಿಕಾರವು ಗುರುತಿಸಿದೆ. ಪ್ರಾಧಿಕಾರದ ಈ ಪರಿಯೋಜನೆಯ ಯಶಸ್ಸಿಗೆ ಇದು ಮುಖ್ಯ. ಇದಕ್ಕಾಗಿ ಜಾಗೃತಿ ಮತ್ತು ಸಂವಹನ ಕಾರ್ಯತಂತ್ರ ಸಲಹಾ ಮಂಡಳಿಯೊಂದನ್ನು ರಚಿಸಲಾಗಿದೆ. (ಎಸಿಎಸ್ಎಸಿ). ಪ್ರಾಧಿಕಾರದ ಉದ್ದೇಶಗಳ ಸಾಫಲ್ಯಕ್ಕೆ ಸೂಕ್ತ ಜಾಗೃತಿ ಮತ್ತು ಸಂವಹನ ಕಾರ್ಯತಂತ್ರಗಳನ್ನು ಶಿಫಾರಸ್ಸು ಮಾಡುವ ಹೊಣೆಗಾರಿಕೆಯನ್ನು ಈ ಮಂಡಳಿಗೆ ವಹಿಸಲಾಗಿದೆ. ಮಂಡಳಿಯ ರಚನೆ ಮತ್ತು ಅದರ ಹೊಣೆಗಾರಿಕೆಯ ಆದೇಶವನ್ನು ಇಲ್ಲಿ ನೋಡಬಹುದು.
ಜಾಗೃತಿ ಮತ್ತು ಸಂವಹನ ಕಾರ್ಯತಂತ್ರ ಸಲಹಾ ಮಂಡಳಿಯ ಆದೇಶ. ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯತಂತ್ರ ದಾಖಲಾತಿ ಕಾರ್ಯತಂತ್ರದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯತಂತ್ರ (ಐಇಸಿ) ಬಹುಮುಖ್ಯವಾದುದು. ಇದರ ಮೂಲ ಉದ್ದೇಶ ಆಧಾರ್ ಬಳಸಿ ಅನುಕೂಲತೆಗಳನ್ನು ಪಡೆಯುವ ವಿವಿಧ ವಿಧಗಳು ಮತ್ತದರ ಬಳಕೆಯ ಕುರಿತು ನಿವಾಸಿಗಳು ಮತ್ತು ಆಧಾರ್ನ ಪಾಲುದಾರರಲ್ಲಿ ಜಾಗೃತಿಯನ್ನು ತರುವುದೇ ಈ ಐಇಸಿಯ ಉದ್ದೇಶ. ರಿಜಿಸ್ಟ್ರಾರ್ಗಳು ಹಾಗೂ ಪ್ರಾಧಿಕಾರವು ಸರ್ಕಾರ ಹಾಗೂ ಮತ್ತಿತರ ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ತಿಳಿಸುವ ಮಾಹಿತಿಯನ್ನು ತಲುಪಿಸಲು ಸಕಲ ಪ್ರಯತ್ನ ಮಾಡುತ್ತವೆ. ನಿವಾಸಿಗಳಿಗೆ ಆಧಾರ್ನ ಸಂದೇಶವನ್ನು ತಲುಪಿಸಲು ವಿವಿಧ ರೀತಿಯ ಸಂವಹನಾ ವಾಹಿನಿಗಳನ್ನು ಸಮಗ್ರವಾಗಿ ಬಳಸಲಾಗುತ್ತದೆ. ಇವು ಕೆಳಗಿನಂತಿವೆ :
ಬ್ರಾಡ್ಕಾಸ್ಟ್ ಮತ್ತು ಟೆಲಿಕಾಸ್ಟ್ : ಟೆಲಿವಿಷನ್, ರೇಡಿಯೋ, ಮುದ್ರಣ, ಇಂಟರ್ನೆಟ್
ಮಾಹಿತಿ : ಸುದ್ದಿ ಮತ್ತು ಪ್ರಕಟಣೆಗಳು • ಹೊರ ಪ್ರಚಾರ : ಪೋಸ್ಟರ್ಗಳು, ಕರಪತ್ರಗಳು, ಗೋಡೆ ಬರಹ, ಬ್ಯಾನರ್ಗಳು, ಹೋರ್ಡಿಂಗ್ಗಳು • ಮನರಂಜನೆ : ಸಿನೆಮಾ, ಕ್ರೀಡೆ, ಎಂಡಾರ್ಸ್ಮೆಂಟ್ಗಳು • ವ್ಯಕ್ತಿಯಿಂದ - ವ್ಯಕ್ತಿಗೆ : ಧ್ವನಿ, ವಿಡಿಯೋ, ದೂರಸಂಪರ್ಕ • ಸಹಾಯಕ ಮೂಲ ಸೌಕರ್ಯ : ರಿಜಿಸ್ಟ್ರಾರ್ ಮತ್ತು ದಾಖಲಾತಿ ಏಜೆನ್ಸಿ ಮೂಲಸೌಕರ್ಯ ಪ್ರಾಧಿಕಾರವು ನಿರ್ಮಾಣ ಹಾಗೂ ಜಾರಿಯ ವಿವಿಧ ಹಂತಗಳಲ್ಲಿ ಅಗತ್ಯವಾದ ಹಣಕಾಸನ್ನು ನೀಡುತ್ತದೆ. ಆಧಾರ್ ಬ್ರಾಂಡ್ಗೆ ನೇರವಾಗಿ ಸಂಬಂಧಿಸಿದ ಎಲ್ಲಾ ಅಗತ್ಯ ವಸ್ತುಗಳನ್ನು ಪೂರೈಸುತ್ತದೆ. ರಿಜಿಸ್ಟ್ರಾರ್ಗೆ ಅಗತ್ಯವಾದ ಸಂವಹನ ವಸ್ತುಗಳಿಗೆ ಸಂಬಂಧಿಸಿದ, ಆಧಾರ್ ಬ್ರಾಂಡ್ಗೆ ಸೇರಿದ ಎಲ್ಲ ವಸ್ತುಗಳನ್ನು ಪ್ರಾಧಿಕಾರವು ಒದಗಿಸುತ್ತದೆ. ಹಾಗಿದ್ದರೂ, ರಿಜಿಸ್ಟ್ರಾರ್ಗಳು ತಮಗೆ ಸಂಬಂಧಿಸಿದ ಮಾಹಿತಿಯನ್ನು ತಲುಪಿಸಲು ಅಗತ್ಯವಾದ ಹೆಚ್ಚುವರಿ ವಸ್ತುಗಳನ್ನು ತಾವೇ ಸಿದ್ಧಪಡಿಸಿಕೊಳ್ಳಬೇಕು. ಪ್ರಾಧಿಕಾರದ ಒಂದು ಸಂಪೂರ್ಣ ತಂಡ ಮತ್ತು ಇದರ ಜತೆಗೆ ಜಾಹೀರಾತು ಮತ್ತು ಸಾವರ್ಜನಿಕ ಸಂಪರ್ಕದ ಏಜೆನ್ಸಿ ಐಇಸಿ ಕಾರ್ಯತಂತ್ರದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸುತ್ತದೆ. ಕಾರ್ಯಕ್ರಮ ಸಮಾರಂಭಗಳು ಜಾಗೃತಿಮತ್ತುಸಂವಹನಕಾರ್ಯತಂತ್ರಸಲಹಾಮಂಡಳಿವರದಿಪ್ರಸ್ತುತಿ ಜೂನ್೧೫, ೨೦೧೦ರಂದುಜಾಗೃತಿಮತ್ತುಸಂವಹನಕಾರ್ಯತಂತ್ರಸಲಹಾಮಂಡಳಿವರದಿ
ಆಧಾರ್ – ಒಂದುಬಿಲಿಯನ್
ಜನರತ್ತಸಂವಹನ``ವನ್ನು ಪ್ರಾಧಿಕಾರದ ಅಧ್ಯಕ್ಷ ಶ್ರೀನಂದನ್ನಿಲೇಕಣಿ ಮತ್ತು ಪ್ರಾಧಿಕಾರದ ಮಹಾನಿರ್ದೇಶಕ ಶ್ರೀರಾಮ್ಸೇವಕ್ಶರ್ಮಾ ಅವರಿಗೆ ಪ್ರಸ್ತುತಿಪಡಿಸಲಾಯಿತು. ಮಂಡಳಿ (ಎಸಿಎಸ್ಎಸಿ) ಯನ್ನು ಪ್ರಾಧಿಕಾರದ ಜಾಗೃತಿ ಮತ್ತು ಸಂವಹನ ಕಾರ್ಯತಂತ್ರ ರೂಪಿಸುವುದಕ್ಕೋಸ್ಕರ ನೇಮಿಸಲಾಯಿತು. ಸಮಗ್ರವರದಿಗಾಗಿ ಶ್ರೀನಿಲೇಕಣಿ ಅವರು ಸಮಿತಿಗೆ ವಂದನೆಸಲ್ಲಿಸಿದರು. ಅವರುಮಾತನಾಡಿ, ಇದು ಪ್ರಯಾಣದ ಆರಂಭಮಾತ್ರಆಗಿದೆ. ಭವಿಷ್ಯದಲ್ಲಿ ರಾಷ್ಟ್ರಕ್ಕೆ ಆಧಾರ್ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಲು ಬಹಳಷ್ಟು ಕೆಲಸಮಾಡಬೇಕಾಗಿದೆ ಎಂದು ಹೇಳಿದರು.
ಅವರು ಆಧಾರ್ಹೇಗೆ ನಿಜವಾಗಿಯೂ ಕ್ರಾಂತಿಕಾರಿಯಾಗಿದೆ ಎಂದು ಹೇಳಿದರು. ಇದು ವ್ಯಕ್ತಿಗೆ ಮೊಬಿಲಿಟಿಯನ್ನು ನೀಡುತ್ತದೆ ಎಂದು ತಿಳಿಸಿದರು. ಸಾರ್ವತ್ರಿಕವಾಗಿ ಗುರುತು ಹೆಚ್ಚುವ ವಿಧಾನವನ್ನು ಪ್ರಾಧಿಕಾರವು ಗ್ಯಾರಂಟಿಯಾಗಿ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಿದರು.
ಮಂಡಳಿಯ ಅಧ್ಯಕ್ಷರಾದ ಶ್ರೀಕಿರಣ್ಖಲಾಪ್ ಅವರು ಮಾತನಾಡಿ, ಸರಿಯಾದ ವಾಹಿನಿಗಳ ಮೂಲಕ ಸಂವಹನ ನಡೆಸಬೇಕಾದ ಅವಶ್ಯಕತೆಯನ್ನು ತಿಳಿಸಿದರು. ಸಾಂಪ್ರದಾಯಿಕ ಮಾಧ್ಯಮಗಳ ಮೇಲೆ ಅತಿಅವಲಂಬನೆ ಬೇಕಾಗಿಲ್ಲ ಎಂದೂ ಹೇಳಿದರು.
ಭಾರತದಂತಹ ಸಿರಿವಂತ ಬಾಯಿಮಾತಿನ ಪರಂಪರೆಯ ಸಂದರ್ಭದಲ್ಲಿ ಇದನ್ನು ನೋಡಬೇಕೆಂದು ತಿಳಿಸಿದರು.ಭಾರತದಲ್ಲಿ ವ್ಯಕ್ತಿಗತ ಸಂವಹನಮಾಧ್ಯಮವಾದ ``ಬಾಯಿಂದಬಾಯಿಗೆ`` ಮಾಧ್ಯಮವು ಬಹಳದೃಢವಾದುದಾಗಿದೆ ಎಂದು ಹೇಳಿದರು.ಮಂಡಳಿಯ ಸದಸ್ಯರಾದ ಶ್ರೀಡಿ.ಕೆ. ಬೋಸ್ ಅವರು ಉಪಗ್ರಹ ಟೆಲಿವಿಷನ್ನಿಂದಾಗಿ ನಡವಳಿಕೆಯಲ್ಲಿ ಬದಲಾವಣೆಗಳು ಬಂದಿವೆ ಎಂದು ತಿಳಿಸಿದರು.
ಜನರು ಮಾಹಿತಿ ಸ್ವೀಕರಿಸುವ ಮತ್ತು ಅದನ್ನುಅರ್ಥೈಸಿಕೊಳ್ಳುವ ವಿಧಾನದಲ್ಲಿ ಬದಲಾವಣೆಯಾಗಿದೆ ಎಂದುಹೇಳಿದರು. ಶ್ರೀಆರ್. ಎಸ್. ಶರ್ಮಅವರುಮಾತನಾಡಿ,ಸಮಿತಿಯು೯೦ ದಿನಗಳ ನಿಗದಿತ ಅವಧಿಯಲ್ಲಿ ವರದಿಯನ್ನು ಸಿದ್ಧಪಡಿಸಿ ಸಲ್ಲಿಸದ್ದನ್ನು ಪ್ರಶಂಸಿಸಿದರು. ಪೂರೈಕೆಯ ಫಲಗಳ ಬಗ್ಗೆ ಅತಿಯಾದ ಭರವಸೆಗಳನ್ನು ನೀಡಿ, ತಪ್ಪು ಮಾಹಿತಿ ನೀಡುವ ವಿಷಯದ ಬಗ್ಗೆ ಚರ್ಚೆನಡೆದಿದೆ.
ಸಮಾಜದ ದುರ್ಬಲವರ್ಗಗಳಿಗೆ ತಮ್ಮ ಗುರುತನ್ನು ಪ್ರಕಟಪಡಿಸಲು ಅವಕಾಶ ನೀಡಿರುವುದು ಮೌಲ್ಯಯುತ ಸೇವೆ ಎಂದು ತಿಳಿಸಿದರು.
ಮೂಲ :ಯು ಐ ಡಿ ಎ ಐ