অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಇತಿಹಾಸ

ವಾರ್ತಾ ಇಲಾಖೆಯು ಸರಕಾರದ ಆಶೋತ್ತರಗಳನ್ನು ಜನರಿಗೆ ತಲುಪಿಸುವ ಸರ್ಕಾರಿ ವ್ಯವಸ್ಥೆಯಲ್ಲಿರುವ ಮುಖ್ಯ ಇಲಾಖೆ. ಸರ್ಕಾರ ರೂಪಿಸಿರುವ ಈ ವ್ಯವಸ್ಥೆಯಲ್ಲಿ ವಾರ್ತಾ ಇಲಾಖೆಯ ಪಾತ್ರ ಬಹುಮುಖ್ಯ. ಇಲಾಖೆಯ ಪಾತ್ರವೂ ಅಷ್ಟೇ ಸ್ಪಷ್ಟ. ಸರ್ಕಾರದ ವಿವಿಧs ಯೋಜನೆ, ಕಾರ್ಯಕ್ರಮ, ಸಾಧನೆ ಮತ್ತು ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ತಲುಪಿಸುವುದೇ ವಾರ್ತಾ ಇಲಾಖೆಯ ಪ್ರಧಾನ ಕಾರ್ಯ. ಇಲಾಖೆಯು ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳು ಮತ್ತು ವಿವಿಧ ಯೋಜನೆಗಳ ಬಗ್ಗೆ ಸಮೂಹ ಮಾಧ್ಯಮಗಳ ನೆರವಿನಿಂದ ಸರ್ಕಾರದ ಪರವಾಗಿ ಅವುಗಳಿಗೆ ಪ್ರಚಾರ ನೀಡುತ್ತದೆ. ಕೆಲವೊಂದು ವೇಳೆ ನೇರವಾಗಿ ತನ್ನದೇ ಆದ ವಿವಿಧ ಮಾದ್ಯಮಗಳನ್ನು ಬಳಸಿಕೊಂಡು ಆ ಮೂಲಕವೂ ಜನರನ್ನು ತಲುಪುತ್ತದೆ. ಮಾಹಿತಿ ವರ್ಗಾವಣೆ ಮತ್ತು ಪ್ರಚಾರ ನೀಡುವುದು ಇಲಾಖೆಯ ಪ್ರಮುಖ ಕರ್ತವ್ಯ.  ಜೊತೆಗೆ ಸಮೂಹ  ಮಾದ್ಯಮಗಳು ಮತ್ತು ಅದರ ಪ್ರತಿನಿಧಿಗಳಿಗೆ ಕಲ್ಯಾಣ, ಸವಲತ್ತು ಮತ್ತು ಸೇವೆಗಳನ್ನು ನೀಡುತ್ತದೆ.  ಇವೆಲ್ಲದರ ಜೊತೆಗೆ ಜನರ ಕುಂದು-ಕೊರತೆ, ಸಲಹೆಗಳನ್ನು ಸರ್ಕಾರಕ್ಕೆ ತಲುಪಿಸುವಲ್ಲಿಯೂ ನೆರವಾಗುತ್ತಿದೆ.

ಹಿನ್ನೆಲೆ

ವಾರ್ತಾ ಇಲಾಖೆ ಆರು ದಶಕಗಳ ಸುಧೀರ್ಘ ಇತಿಹಾಸ ಹೊಂದಿದೆ. ವಾರ್ತಾ ಇಲಾಖೆಯು ೧೯೪೯ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಅಂದಿನ ಮೈಸೂರು ಸರ್ಕಾರದಲ್ಲಿ ಪ್ರಚಾರ ಇಲಾಖೆ ಹೆಸರಿನಲ್ಲಿ ಆರಂಭವಾಗಿತ್ತು. ೧೯೫೬ರಲ್ಲಿ ಗೃಹ ಇಲಾಖೆಯ ಅಡಿಯಲ್ಲಿ ಮುಖ್ಯ ಮಂತ್ರಿಗಳ ಸಚಿವಾಲಯದೂಂದಿಗೆ ಜೋಡಣೆಗೊಂಡಿತು. ಪ್ರಧಾನ ವಾರ್ತಾ ಅಧಿಕಾರಿ ಮತ್ತು ಓರ್ವ ಛಾಯಾಗ್ರಾಹಕ ಹಾಗೂ ಬೆರೆಳೆಣಿಕೆಯ ಸಿಬ್ಬಂದಿಯೊಂದಿಗೆ ಅಠಾರ ಕಚೇರಿಯಲ್ಲಿ (ಇಂದಿನ ಹೈಕೋರ್ಟ ಕಟ್ಟಡದಲ್ಲಿ) ಕಾರ್ಯಾರಂಭ ಮಾಡಿತು. ಮುಖ್ಯಮಂತ್ರಿಯವರ ಕಚೇರಿಯ ಅವಶ್ಯಕತೆಗೆ ಅನುಗುಣವಾಗಿ ಪತ್ರಿಕಾ ಪ್ರಕಟಣೆಗಳ ಬಿಡುಗಡೆ ಮತ್ತು ಇತರೆ ಪ್ರಚಾರ ಕಾರ್ಯಗಳನ್ನು ನಿರ್ವಹಿಸುವ ಜವಾಬ್ಧಾರಿ ನಿರ್ವಹಿಸಲಾಗುತ್ತಿತ್ತು .

೧೯೬೧ರಲ್ಲಿ ಪ್ರಧಾನ ವಾರ್ತಾ ಅಧಿಕಾರಿ ಹುದ್ದೆಯನ್ನು ಮೇಲ್ದರ್ಜೆಗೇರಿಸಲಾಯಿತು. ಅಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಎಂದು ಪರಿವರ್ತನೆಯಾದ ಇಲಾಖೆಗೆ ನಿರ್ದೇಶಕರೇ ಮುಖ್ಯಸ್ಥರು. ಜೊತೆಗೆ, ಮತ್ತಷ್ಟು ಸಿಬ್ಬಂದಿಯು ಈ ಅವಧಿಯಲ್ಲಿ ಸೇರ್ಪಡೆಗೊಂಡಿದ್ದರು. ಕೆಲವೇ ವರ್ಷಗಳ ಅವಧಿಯಲ್ಲಿ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯಾಗಿ ಮತ್ತೊಮ್ಮೆ ಬದಲಾವಣೆಯಾಗಿತ್ತು. ಆಯ್ದ ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ಆರಂಭಿಸಲಾಯಿತು.  ರಾಜ್ಯಗಳ ಏಕೀಕರಣಗೊಂಡ ಅವಧಿಯಲ್ಲಿ ಮುಂಬೈ-ಕರ್ನಾಟಕ ಮತ್ತು ಹೈದರಾಬಾದ್-ಕರ್ನಾಟಕದ ಕೆಲವು ಭಾಗಗಳು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದವು. ಈ ಭಾಗಗಳಲ್ಲೂ ಇಲಾಖೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಾಯಿತು.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದ ಹಿನ್ನೆಲೆಯಲ್ಲಿ ೧೯೭೪ ರಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ವಾರ್ತಾ ಇಲಾಖೆಯಿಂದ ಪ್ರತ್ಯೇಕಿಸಲಾಯಿತು.  ವಾರ್ತಾ ಮತ್ತು ಪ್ರಚಾರ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ೨೦೦೦ ರಲ್ಲಿ ವಾರ್ತಾ ಇಲಾಖೆ ಎಂದು ಮರುನಾಮಕರಣವಾಗಿ ಇಂದು ಇದೇ ಹೆಸರಿನಿಂದ ರಾಜ್ಯಾದಾದ್ಯಂತ ಚಿರಪರಿಚಿತವಾಗಿದೆ.

ಅಠಾರ ಕಚೇರಿಯಲ್ಲಿ ಆರಂಭಗೊಂಡ ವಾರ್ತಾ ಇಲಾಖೆಯು, ಕೆಲ ಕಾಲ ವಿಧಾನ ಸೌಧದಲ್ಲಿ ನೆಲೆ ನಿಂತಿತ್ತು.  ಆ ಬಳಿಕ ಬೆಂಗಳೂರಿ ಹೈಗ್ರೌಂಡ್ಸ್ ಬಳಿ ಇರುವ ಬಾಲಬ್ರೂಯಿಗೆ ಸ್ಥಳಾಂತರಗೊಂಡಿತ್ತು. ನಂತರ ಇನ್‌ಫೆಂಟ್ರಿ ರಸ್ತೆಗೆ ಸ್ಥಳಾಂತರಗೊಂಡಿತ್ತು. ಇಲ್ಲಿಂದ ಅಲ್ಪ ಕಾಲಾವಧಿಗೆ ಶಿವಾಜಿನಗರದಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿತ್ತು. ಈಗ ಭಗವಾನ್ ಮಹಾವೀರ್ ರಸ್ತೆಯಲ್ಲಿ(ಇನಫೆಂಟ್ರಿ ರಸ್ತೆ) ಹಳೆ ಕಟ್ಟಡವಿದ್ದ ಸ್ಥಳದಲ್ಲೇ ನೂತನ ಕಟ್ಟಡ ತಲೆಎತ್ತಿದೆ.

ಅಧಿಕಾರಿಗಳ ವಿವರ

ಕ್ರ.ಸಂ. ಹೆಸರು ಮತ್ತು ಪದನಾಮದೂ (ಕಛೇರಿ)ದೂ (ಮನೆ)
ಆಂತರಿಕಮೊಬೈಲ್ ಸಂ
1ಡಾ. ನಾಗಾoಬಿಕ  ದೇವಿ ಎನ್ ಐ.ಎ.ಎಸ್
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
9343310623
2ಎನ್.ಆರ್.ವಿಶುಕುಮಾರ್, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಂ. ೧೭, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ (ಇನ್‍ಫೆಂಟ್ರಿ ರಸ್ತೆ), ಬೆಂಗಳೂರು – ೫೬೦ ೦೦೧220280012351347480019900095332
3ಎಂ.ರವಿಕುಮಾರ್, ಜಂಟಿ ನಿರ್ದೇಶಕರು, ಕ್ಷೇತ್ರ ಪ್ರಚಾರ220280262685083080269480690756
4ಆರ್. ಕೆ. ಶಿವರಾಮ್, ಜಂಟಿ ನಿರ್ದೇಶಕರು, ಆಡಳಿತ ಮತ್ತು ಚಲನಚಿತ್ರ220280082572016280089845924555
5ಎನ್. ಭೃಂಗೀಶ್, ಜಂಟಿ ನಿರ್ದೇಶಕರು, ಪ್ರಕಟಣೆ ಮತ್ತು ಸು.ಮ.ಪ220280102545216480109844311649
6ಡಾ. ಬಿ.ಆರ್.ಮಮತಾ, ಜಂಟಿ ನಿರ್ದೇಶಕರು, ವಾಣಿಜ್ಯ ಪ್ರಚಾರ2202800680069980082368
7ಪಿ.ಎನ್.ಗುರುಮೂರ್ತಿ, ಉಪನಿರ್ದೇಶಕರು, ವಾಣಿಜ್ಯ ಪ್ರಚಾರ
220280212571766280219449648355
8ಕೆ.ಗೋಪಾಲಗೌಡ, ಉಪನಿರ್ದೇಶಕರು, ಪ್ರಕಟಣೆ220280122339760880129480033937
9ಎಸ್.ವಿ. ಲಕ್ಷ್ಮೀನಾರಾಯಣ, ಉಪನಿರ್ದೇಶಕರು, ಕ್ಷೇತ್ರ ಪ್ರಚಾರ220280432328500780439901354871
10ಹೆಚ್.ಬಿ. ದಿನೇಶ್, ಉಪನಿರ್ದೇಶಕರು, ಆಡಳಿತ2202801480149844120745
11ಡಿ.ಪಿ.ಮುರಳೀಧರ, ಉಪನಿರ್ದೇಶಕರು, ವಾರ್ತೆ220280322245323380329844873889
12ಟಿ.ಸಿ.ಜಗದಾಂಬ, ಹಿ.ಸ.ನಿ., ಮಾರ್ಚ್ ಆಫ್ ಕರ್ನಾಟಕ2202804680469945302924
13ವೈ. ಚಂದ್ರಣ್ಣ, ಹಿ.ಸ.ನಿ., ಜನಪದ (ಹೆ.ಪ್ರ)2202804480449481191175
14ಜಿ. ಚಂದ್ರಕಾಂತ್, ಹಿ.ಸ.ನಿ. (ಸ್ವಪ್ರ) ಸು.ಮ.ಪ2202802780279341760554
15ಬಸವರಾಜು, ಛಾಯಾ ಮತ್ತು ಚಲನಚಿತ್ರ ಅಧಿಕಾರಿ2202805380539448648889
16ಕೆ. ಹೆಚ್. ಚಂದ್ರಪ್ಪ, ಆಡಳಿತಾಧಿಕಾರಿಗಳು2202801580159980307286
17ಎಂ. ಅಶ್ವತ್ಥನಾರಾಯಣ, ಲೆಕ್ಕಪತ್ರ ಅಧಿಕಾರಿ2202806680669448926961
18ಎಸ್.ಎಂ. ವಕ್ಕರ್, ಸಹಾಯಕ ಆಡಳಿತಾಧಿಕಾರಿಗಳು (ಆ)2202801980199480253529
19ಎ.ಸಿ.ತಿಪ್ಪೇಸ್ವಾಮಿ, ಸಹಾಯಕ ಆಡಳಿತಾಧಿಕಾರಿಗಳು (ವಾಪ್ರ)2202802280229880475063
20ಎಂ. ಸಹನ, ಸ.ನಿ.(ಸುಮಪ) (ಅ.ಕ)2202803480349449245980
21ಪಲ್ಲವಿ ಹೊನ್ನಾಪುರ, ಸ.ನಿ.(ಸು.ಮ.ಪ)2202803780379980219035
22ಸಿ.ಆರ್.ನವೀನ್, ಸ. ನಿ. (ಕ್ಷೇತ್ರ ಪ್ರಚಾರ ಶಾಖೆ)2202807880789448058775
23ಸಿ. ರೂಪ, ಸ. ನಿ. ಜನಪದ2202804980499901699807
24ಟಿ.ಸಿ.ಮಂಜುನಾಥಬಾಬು, ಸ.ನಿ., ಸು.ಮ.ಪ
220280348034
25ಬಸವರಾಜ ಆರ್. ಬುಳ್ಳ, ಸ.ನಿ. (ಆಡಿಯೋ ವಿಜುಯಲ್)2202802980299449151319
26ಎಂ.ಸಿ.ಪರಪ್ಪ, ತಾಂ. ಅಧಿಕಾರಿ (ಚಲನಚಿತ್ರ)2202803080309972188447
27ವೈ.ಸಿ ಸಂಪತ್ ಕುಮಾರ್, ಮುಖ್ಯ ವರದಿಗಾರರು2202800280029448536962
28ಜಿ.ಎಸ್. ಫಣಿಭೂಷಣ್, ಮುಖ್ಯ ವರದಿಗಾರರು2202801180119880994496
29ಬಿ.ವಿ.ಚೇತನ್ ಕುಮಾರ್, ಸಹಾಯಕ ನಿರ್ಮಾಪಕರು (ಸಂ.&ನಾ)9448088450
30ಕೇಂದ್ರ ಕಛೇರಿಯ ಫ್ಯಾಕ್ಸ್22863794
31ಸುದ್ದಿ ಮತ್ತು ಪತ್ರಿಕಾ ಶಾಖೆ ಕೇಂದ್ರ ಕಛೇರಿ, ಫ್ಯಾಕ್ಸ್22028041
32ಐ.ಟಿ. ಹಬ್ ಶಾಖೆ22865797

ಜಿಲ್ಲಾ ಮಟ್ಟದ ಅಧಿಕಾರಿಗಳ ವಿವರ

ಕ್ರ.ಸಂ. ಹೆಸರುದೂ (ಕಛೇರಿ)ದೂ (ಮನೆ)ಆಂತರಿಕಮೊಬೈಲ್ ಸಂ
1ಎ.ಆರ್.ಪ್ರಕಾಶ್, ಉಪನಿರ್ದೇಶಕರು, ಮೈಸೂರು0821/242325125619379448489195
2ಪುಟ್ಟರಾಜು, ಉಪನಿರ್ದೇಶಕರು, ಬೆಂಗಳೂರು (ನಗರ)2202805880589449003244
3ಬಸವರಾಜ ಎಂ. ಕಂಬಿ, ಉಪನಿರ್ದೇಶಕರು, ಬೆಳಗಾವಿ0831/24203440831/24002889448266946
4ಬಸವರಾಜ ಎಂ. ಕಂಬಿ, ಉಪನಿರ್ದೇಶಕರು, ಗುಲ್ಬರ್ಗ (ಹೆ.ಪ್ರ)08472/2231339448266946
5ಆರ್. ಸರಸ್ವತಿ, ಉಪನಿರ್ದೇಶಕರು ಬೆಂ. ಗ್ರಾಮಾಂತರ2202806280629448661079
6ಟಿ.ಕನುಮಪ್ಪ, ಹಿ.ಸ.ನಿ ರಾಯಚೂರು08532/2260509480343592
7ಸಿ.ಎಂ. ರಂಗಾರೆಡ್ಡಿ, ಹಿ.ಸ. ನಿ. ಕೋಲಾರ08152/2220779449648196
8ಸಿ.ಪಿ.ಮಾಯಾಚಾರಿ, ಹಿ.ಸ.ನಿ, ರಾ.ಸ.ಕೇಂ. ಹುಬ್ಬಳ್ಳಿ0836/23626369945688113
9ಶಫಿಸಾದುದ್ದೀನ್, ಸ. ನಿ. ಕಾರವಾರ08382/2263449845687542
10ವಿನೋದ್ ಚಂದ್ರ, ಹಿ.ಸ.ನಿ. (ಹೆ.ಪ್ರ) ಹಾಸನ08172/2682089448267068
11ಕೆ. ರೋಹಿಣಿ, ಸ. ನಿ. ಉಡುಪಿ0820/25248079448953394
12ಹೆಚ್. ಶ್ರೀನಿವಾಸ್, ಸ. ನಿ, ಬಳ್ಳಾರಿ08392/2751989880081691
13ಮಮತ.ಎಂ.ಆರ್, ಸ.ನಿ. ತುಮಕೂರು0816/22785098970503492
14ಹಮೀದ್ ಖಾನ್, ಹಿ.ಸ.ನಿ, (ಹೆ.ಪ್ರ) ರಾಮನಗರ272734059980810681
15ಕೆ. ಪಿ. ಪುಟ್ಟಸ್ವಾಮಯ್ಯ, ಸ.ನಿ. ಬೆಂ.ಗ್ರಾ (ಪತ್ರಿಕಾ ಕೊಠಡಿ (ಅ.ಕ)222587919448783252
16ಹೆಚ್.ಜಿ. ರವಿರಾಜ್, ಸ. ನಿ. ಬೀದರ್08482/2253708050793904
17ಬಿ.ಎ. ಖಾದರ್ ಷಾ, ಸ. ನಿ. ಮಂಗಳೂರು0824/24242549886068357
18ಎನ್. ಎಸ್. ಮಹೇಶ್, ಸ. ನಿ. ಚಾಮರಾಜನಗರ08226/2247319343838183
19ಗಿರೀಶ್ ಎಲ್.ಪಿ. ಉಪನಿರ್ದೇಶಕರು.(ಹೆ.ಪ್ರ) ಕೆ.ಐ.ಸಿ. ನವದೆಹಲಿ0112/410226309968652139
20ಹಿಮಂತರಾಜು.ಜಿ., ಸ.ನಿ, ಶಿಕಾರಿಪುರ/ಶಿವಮೊಗ್ಗ

08187/222355

08182/278638

9449322102
21ರಾಜು. ಆರ್. ಸ. ನಿ. ಮಂಡ್ಯ08232/22415308232/2201539743532663
22ಕವನ. ಕೆ.ಎನ್. ಸ. ನಿ. ಚಿಕ್ಕಬಳ್ಳಾಪುರ08156/2754449844855371
23ಎಂ. ಜುಂಜಣ್ಣ., ಸ.ನಿ.ಹಾವೇರಿ08375/2330929845761944
24ಎಸ್.ಡಿ.ನದಾಪ್, ವಾರ್ತಾ ಸಹಾಯಕ, ಸ.ನಿ (ಹೆ.ಪ್ರ), ಯಾದಗಿರಿ08473/253722
25ಮಂಜುನಾಥ ಸುಳ್ಳೋಳ್ಳಿ, ವಾರ್ತಾ ಸಹಾಯಕ, ಸ. ನಿ.(ಹೆ.ಪ್ರ) ಬಾಗಲಕೋಟೆ08354/2353429632511437
26ಬಿ.ಆರ್. ರಂಗನಾಥ, ವಾರ್ತಾ ಸಹಾಯಕ, ಸ.ನಿ.(ಹೆಪ್ರ) ಬಿಜಾಪುರ08352/2501509448300048
27ತುಕಾರಾಮ್ ಬಿವಿ, ವಾರ್ತಾ ಸಹಾಯಕ, ಸ. ನಿ. ಕೊಪ್ಪಳ
08539/22060708539/2311109986912507
28ಚಿನ್ನಸ್ವಾಮಿ, ವಾರ್ತಾ ಸಹಾಯಕ ಸ. ನಿ. (ಹೆ.ಪ್ರ) ಮಡಿಕೇರಿ08272/2284499945045327
29ವಿ.ವಿ. ನವಲೆ, ವಾರ್ತಾ ಸಹಾಯಕ, ಸ. ನಿ., (ಗದಗ ಹೆ.ಪ್ರ)08372/239452
239668
30ಧನಂಜಯಪ್ಪ ಬಿ, ಸ. ನಿ. ಚಿತ್ರದುರ್ಗ08194/2224549449071677
31ಹಿಮಂತರಾಜು.ಜಿ., ಸ.ನಿ,(ಹೆ.ಪ್ರ)ಶಿವಮೊಗ್ಗ

08182/278638

9449322102
32ಎಸ್ ಮಹೇಶ್ವರಯ್ಯ, ಹಿ.ಸ.ನಿ.(ಹೆ.ಪ್ರ) ದಾವಣಗೆರೆ08192/2548929449071677
33ಸಿ.ಪಿ. ಮಾಯಾಚಾರಿ, ಹಿ.ಸ.ನಿ(ಸ್ವ.ಪ್ರ) ಧಾರವಾಡ (ಹೆ.ಪ್ರ)0836/24474699945688113

ಕ್ಷೇತ್ರ ಪ್ರಚಾರ ಶಾಖೆ

ಶಾಖೆಯ ಕಾರ್ಯಚಟುವಟಿಕೆಗಳು

 • ವಾರ್ತಾ ಇಲಾಖೆಯ ಕ್ಷೇತ್ರ ಪ್ರಚಾರ ಶಾಖೆಯು ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸುವ ಹತ್ತು ಹಲವು ಅಭಿವೃದ್ಧಿ ಯೋಜನೆಗಳ ಮಾಹಿತಿ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಜನಜಾಗೃತಿಗೊಳಿಸುವ ಕಾರ್ಯವನ್ನು ಗ್ರಾಮೀಣ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 • ಪ್ರತಿ ಜಿಲ್ಲಾ ಕಚೇರಿಗಳಲ್ಲಿ ಕ್ಷೇತ್ರ ಪ್ರಚಾರ ಘಟಕಗಳಿರುತ್ತವೆ. ಕ್ಷೆತ್ರ ಪ್ರಚಾರ ಕಾರ್ಯಗಳು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಚಾರಿ ವಸ್ತುಪ್ರದರ್ಶನ ವಾಹನಗಳನ್ನು ಜಿಲ್ಲಾ ಅಧೀನ ಕಚೆರಿಗಳಿಗೆ ಒದಗಿಸಲಾಗಿದೆ. ಈ ವಾಹನಗಳಿಗೆ ದೃಶ್ಯ ಹಾಗೂ ಶ್ರವಣ ಉಪಕರಣಗಳನ್ನು ಒದಗಿಸಲಾಗಿದೆ. ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವನ್ನುಂಟು ಮಾಡುವಂತ ಪ್ರದರ್ಶನ ಫಲಕಗಳನ್ನು ಸಿದ್ಧಪಡಿಸಿ ವಾಹನಗಳಿಗೆ ಅಳವಡಿಸಲಾಗಿದೆ. ಈ ವಾಹನಗಳು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ಕ್ಷೆತ್ರ ಪ್ರಚಾರ ಕಾರ್ಯಗಳಲ್ಲಿ ತೊಡಗಿರುತ್ತವೆ.
 • ಈ ವಾಹನದ ಮುಖೇಣ, ಸರ್ಕಾರದ ಸಾಧನೆ, ಯೋಜನಾ ಕಾರ್ಯಕ್ರಮಗಳು ಸಾಮಾಜಿಕ ಅರಿವನ್ನುಂಟು ಮಾಡುವಂತ ಸಾಕ್ಷ ಚಿತ್ರ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಇದರೊಂದಿಗೆ ಕ್ಷೇತ್ರ ಪ್ರಚಾರ ಕಾರ್ಯಕ್ರಮಗಳನ್ನು ಜನರಲ್ಲಿ ಪರಿಣಾಮಕಾರಿಯಾಗಿ ಬಿಂಬಿಸುವ ಸಲುವಾಗಿ ಪ್ರತಿ ಜಿಲ್ಲೆಯಲ್ಲಿ ಬೀದಿ ನಾಟಕಗಳು ಹಾಗೂ ಆಯಾ ಜಿಲ್ಲೆಯಲ್ಲಿ ಪ್ರಸಿದ್ಧಿ ಹಾಗೂ ಪ್ರಚಲಿತವಾಗಿರುವ ಕಲಾ ಪ್ರಾಕಾರಗಳನ್ನು ಉದಾಹರಣೆಗೆ : ತೊಗಲುಗೊಂಬೆಯಾಟ, ಯಕ್ಷಗಾನ, ಮ್ಯಾಜಿಕ್ ಷೋ ಇತ್ಯಾದಿ, ಪ್ರದರ್ಶಿಸಲಾಗುತ್ತದೆ.
 • ವಸ್ತುಪ್ರದರ್ಶನ :- ಕಾಲ ಕಾಲಕ್ಕೆ ಸರ್ಕಾರ ರೂಪಿಸುವ ಅಭಿವೃದ್ಧಿ ಯೋಜನೆಗಳು ಹಾಗೂ ಸಾಮಾಜಿಕ ವಿಷಯಾಧಾರಿತ ಫಲಕಗಳನ್ನು ಸಿದ್ದಪಡಿಸಿ ರಾಜ್ಯದಲ್ಲಿ ನಡೆಯುವ ಪ್ರಮುಖ ಉತ್ಸವ, ಜಾತ್ರೆಗಳು, ಮೈಸೂರು ದಸರಾ, ಹಂಪಿ ಉತ್ಸವ, ಸಾಹಿತ್ಯ ಸಮ್ಮೇಳನ, ಕೃಷಿ ಮೇಳ, ತೋಟಗಾರಿಕಾ ಮೇಳ ಕಾರ್ಯಕ್ರಮಗಳಲ್ಲಿ ವಸ್ತುಪ್ರದರ್ಶನ ಏರ್ಪಡಿಸುವುದರ ಮೂಲಕ ಜನರಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
 • ಲೇಸರ್ ಪ್ರದರ್ಶನ : ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳ ಕುರಿತು ಜನಸಾಮಾನ್ಯರಲ್ಲಿ ಅರಿವನ್ನುಂಟು ಮಾಡಲು ಆಧುನಿಕ ತಂತ್ರಜ್ಞಾನದ ಲೇಸರ್ ಪ್ರದರ್ಶನವನ್ನು ರಾಜ್ಯದಲ್ಲಿ ನಡೆಯುವ ಪ್ರಮುಖ ಜಿಲ್ಲಾ ಉತ್ಸವ, ಜಾತ್ರೆಗಳಲ್ಲಿ ಏರ್ಪಡಿಸುವುದರ ಮೂಲಕ ಜನರಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
 • ಮಲ್ಟಿಸ್ಕ್ರೋಲಿಂಗ್ ಡಿಸ್‌ಪ್ಲೇ ಯಂತ್ರ : ಸರ್ಕಾರದ ಪ್ರಮುಖ ಯೋಜನೆಗಳ ವಿಷಯಗಳನ್ನು ಪ್ರಚಲಿತವಾಗಿ ಹೆಚ್ಚು ಪರಿಣಾಮ ಬೀರುವಂತಹ ವಿದ್ಯುತ್‌ಚಾಲಿತ ಮಲ್ಟಿಸ್ಕ್ರೋಲಿಂಗ್ ಡಿಸ್‌ಪ್ಲೇ ಯಂತ್ರ ಗಳಲ್ಲಿ ಅಳವಡಿಸಿ, ರಾಜ್ಯದ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ, ಜಿಲ್ಲಾ ತಾಲ್ಲೂಕು ಕಚೇರಿ ಆವರಣ ಹಾಗೂ ಇಲಾಖೆಯ ಕೆಲವು ಅಧೀನ ಕಛೇರಿಗಳಲ್ಲಿ ಸ್ಥಾಪಿಸಿ ಸರ್ಕಾರದ ಅಭಿವೃದ್ಧಿಪರ ಯೋಜನೆಗಳ ಮಾಹಿತಿಯನ್ನು ಜನತೆಗೆ ತಲುಪಿಸಲಾಗುತ್ತಿದೆ. ಹಾಗೂ ರೋಲಪ್ ಸ್ಟ್ಯಾಂಡೀಸ್‌ಗಳನ್ನು ಸಿದ್ಧಪಡಿಸಿ ಅಧೀನ ಕಚೇರಿಗಳಿಗೆ ವಸ್ತುಪ್ರದರ್ಶನ ಏರ್ಪಡಿಸಲು ಒದಗಿಸುವ ಮೂಲಕ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ.
 • ಸ್ತಬ್ದಚಿತ್ರ : ಪ್ರತಿ ವರ್ಷ ಜನವರಿ ಮಾಹೆಯಲ್ಲಿ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ರಾಜ್ಯದ ಪರವಾಗಿ, ಕಲೆ, ಸಾಹಿತ್ಯ, ಸಂಸ್ಕೃತಿ, ವಾಸ್ತುಶಿಲ್ಪ ಹಾಗೂ ಸರ್ಕಾರದ ಯೋಜನೆ ಮತ್ತು ಸಾಮಾಜಿಕ ಸಂದೇಶ ಸಾರುವ ವಿಷಯಾಧಾರಿತ ಸ್ತಬ್ದಚಿತ್ರ ಸಿದ್ದಪಡಿಸಿ ಭಾಗವಹಿಸುವ ಮೂಲಕ ನಾಡಿನ ಪಾರಂಪರೆಯನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸಲಾಗುತ್ತಿದೆ. ೨೦೦೫ ರಲ್ಲಿ ಇಲಾಖೆ ಸಿದ್ಧಪಡಿಸಿದ ಬಾಹುಬಲಿ ಮಹಾಮಸ್ತಕಾಭಿಷೇಕ ಸ್ತಬ್ದಚಿತ್ರಕ್ಕೆ ಪ್ರಥಮ ಬಹುಮಾನ, ೨೦೦೮ ರಲ್ಲಿ ಸಿದ್ಧಪಡಿಸಿದ ಹೊಯ್ಸಳ ವಾಸ್ತುಶಿಲ್ಪ ಸ್ತಬ್ದಚಿತ್ರಕ್ಕೆ ಹಾಗೂ ೨೦೧೧ ರಲ್ಲಿ ಸಿದ್ಧಪಡಿಸಿದ ಬಿದರಿ ಕಲೆ ವಿಷಯಾಧಾರಿತ ಸ್ತಬ್ದಚಿತ್ರಕ್ಕೆ ದ್ವಿತೀಯ ಬಹುಮಾನ ಹಾಗೂ ೨೦೧೨ ರಲ್ಲಿ ಭೂತಾರಾಧನೆ ವಿಷಯಾಧಾರಿತ ಸ್ತಬ್ದಚಿತ್ರಕ್ಕೆ ತೃತೀಯ ಬಹುಮಾನ ಸಂದಿದೆ. ೨೦೦೫ ರಿಂದ ೨೦೧೪ ರವರೆಗೆ ಇಲಾಖೆಯ ಸ್ತಬ್ದಚಿತ್ರ ಪೆರೇಡ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತದೆ.

ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆಯುವ ವಿಜಯದಶಮಿ ಮೆರವಣಿಗೆಯಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಹಾಗೂ ಸರ್ಕಾರದ ಪ್ರಮುಖ ಯೋಜನೆ ಮತ್ತು ಸಾಮಾಜಿಕ ಸಂದೇಶ ಸಾರುವ ವಿಷಯಾಧಾರಿತ ಸ್ತಬ್ದಚಿತ್ರ ಸಿದ್ದಪಡಿಸಿ ಭಾಗವಹಿಸಲಾಗುತ್ತಾ ಬಂದಿದ್ದು, ೨೦೧೩ ರಲ್ಲಿ ಇಲಾಖೆ ಸಿದ್ಧಪಡಿಸಿದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ – ಕ್ಷೀರಭಾಗ್ಯ ವಿಷಯಾಧಾರಿತ ಸ್ತಬ್ದಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಅದೇರೀತಿ ನವೆಂಬರ್ ಮಾಹೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿಯೂ ಸಹ ಕನ್ನಡ ಸಾರಸ್ವತ ಲೋಕಕ್ಕೆ ಸಂಬಂಧಪಟ್ಟಂತೆ ಸ್ತಬ್ದಚಿತ್ರ ಸಿದ್ಧಪಡಿಸಿ ಪಾಲ್ಗೊಳ್ಳಲಾಗುತ್ತಿದೆ.

 • ಅಗತ್ಯ ಸಂದರ್ಭಗಳಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸುವುದು.
 • ವಿಶೇಷ ಪ್ರಚಾರಾಂದೋಲನ : ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿರುವ ಹತ್ತು ಹಲವು ಅಭಿವೃದ್ಧಿ ಯೋಜನೆಗಳು ಸಾಧಿಸಿರುವ ಪ್ರಗತಿ ಹಾಗೂ ಯೋಜನೆಗಳ ಬಗ್ಗೆ ಗ್ರಾಮೀಣ ಪ್ರದೇಶಗಳ ಜನರಲ್ಲಿ ಅರಿವನ್ನುಂಟು ಮಾಡಲು ಐದು ವಿಭಾಗೀಯ ಕಚೇರಿಗಳ ಮೂಲಕ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹತ್ತು ದಿನಗಳ ಕಾಲ ನಡೆಯುವ ಬಹುಮಾಧ್ಯಮ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಆಯ್ಕೆಮಾಡಿಕೊಂಡ ತಾಲ್ಲೂಕಿನ ಸುಮಾರು ೨೦೦ ಗ್ರಾಮಗಳಲ್ಲಿ ವ್ಯಾಪಕ ಪ್ರಚಾರಕೈಗೊಳ್ಳಲಾಗುವುದು.
 • ನಮ್ಮ ಬಾನುಲಿ : ಸಮುದಾಯದ ಆಮೂಲಾಗ್ರ ಅಭಿವೃದ್ಧಿಯಲ್ಲಿ ಸಮುದಾಯ ರೇಡಿಯೋ ಕೇಂದ್ರಗಳ ಪಾತ್ರ ಮಹತ್ತರ. ಈ ಅಂಶವನ್ನು ಆಧರಿಸಿ ಇಲಾಖೆಯು ರಾಜ್ಯದಲ್ಲಿ ಸಮುದಾಯ ರೇಡಿಯೋ ಕೇಂದ್ರಗಳನ್ನು ಉತ್ತೇಜಿಸಲು ಸಮುದಾಯ ರೇಡಿಯೋ ಕೇಂದ್ರ ಆರಂಭಿಸುವ ಸರ್ಕಾರೇತರ ಸಂಘ-ಸಂಸ್ಥೆಗಳು/ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಹಾಯ ನೀಡುವ ನಮ್ಮ ಬಾನುಲಿ ಯೋಜನೆ ಹಮ್ಮಿಕೊಂಡಿದೆ.
ಮೂಲ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ


  © 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
  English to Hindi Transliterate