ಕರ್ನಾಟಕ ಮಾಹಿತಿ ಆಯೋಗ
ಮಾಹಿತಿ ಹಕ್ಕು ಕಾಯಿದೆ ೨೦೦೫ ರ ಕುರಿತು ಇಲ್ಲಿ ತಿಳಿಸಲಾಗಿದೆ. ಇದು ಭಾರತದ ಸಂಸತ್ತಿನ ಒಂದು ಕಾಯಿದೆಯಾಗಿದೆ.
ಮಾಹಿತಿಗಾಗಿ ಹಕ್ಕು ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣದ ಅಡಿಯಲ್ಲಿ ಹೊಂದಲ್ಪಟ್ಟಿರುವ ಅಥವಾ ನಿಯಂತ್ರಣದಲ್ಲಿರುವ ಮಾಹಿತಿಗೆ ಸುಲಭಗಮ್ಯತೆಯನ್ನು ಒದಗಿಸುತ್ತದೆ ಹಾಗು ಇದು ಕಾಮಗಾರಿಯನ್ನು, ದಾಖಲಾತಿಗಳನ್ನು, ದಾಖಲೆಗಳನ್ನು ಪರಿಶೀಲಿಸಲು, ಟಿಪ್ಪಣಿಗಳನ್ನು ತೆಗೆದುಕೊಳ್ಳಲು, ದಸ್ತಾವೇಜುಗಳು /ದಾಖಲೆಗಳು ಹಾಗು ಸಾಮಗ್ರಿಗಳ ಪ್ರಮಾಣೀಕೃತ ಮಾದರಿಗಳನ್ನು ಹಾಗು ವಿದ್ಯುನ್ಮಾನ ನಮೂನೆಯಲ್ಲಿ ಸಂಗ್ರಹಿಸಿದಲಾಗಿರುವ ಮಾಹಿತಿಯನ್ನು ಪದೆಯುವುದನ್ನೂ ಒಳಗೊಂಡಿದೆ.