অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ಮಾಹಿತಿ ಆಯೋಗ

ಕರ್ನಾಟಕ ಮಾಹಿತಿ ಆಯೋಗ

  • ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.-
  • (1) ಈ ಅಧಿನಿಯಮವನ್ನು ಮಾಹಿತಿ ಹಕ್ಕು ಅಧಿನಿಯಮ, 2005 ಎಂದು ಕರೆಯತಕ್ಕದ್ದು.
  • (2) ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ವ್ಯಾಪ್ತವಾಗತಕ್ಕದ್ದು.
  • (3) ಈ ಅಧಿನಿಯಮದ 4ನೇ ಪ್ರಕರಣದ  (
  • 1)ನೇ ಉಪ ಪ್ರಕರಣ, 5ನೇ ಪ್ರಕರಣದ (1) ಮತ್ತು (2)ನೇ ಉಪ ಪ್ರಕರಣಗಳು, 12, 13, 15, 16, 24, 27 ಮತ್ತು 28ನೇ ಪ್ರಕರಣಗಳ ಉಪಬಂಧಗಳು ಕೂಡಲೇ ಜಾರಿಗೆ ಬರತಕ್ಕದ್ದು ಮತ್ತು ಉಳಿದ ಉಪಬಂಧಗಳು ಇದನ್ನು ಅಧಿನಿಯಮಿತಿಗೊಳಿಸಿದ ಒಂದುನೂರ ಇಪ್ಪತ್ತನೇ ದಿನದಿಂದ ಜಾರಿಗೆ ಬರತಕ್ಕದ್ದು. 2. ಪರಿಭಾಷೆಗಳು.- ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,- (ಎ) ``ಸಮುಚಿತ ಸರ್ಕಾರ'' ಎಂದರೆ ಸರ್ಕಾರೀ ಪ್ರಾಧಿಕಾರಕ್ಕೆ ಸಂಬಂzಫÀಟ್ಟಂತೆ, ಕೇಂದ್ರ ಸರ್ಕಾರದಿಂದ ಅಥವಾ ಕರ್ನಾಟಕ ಮಾಹಿತಿ ಆಯೋಗ - ವಾರ್ಷಿಕ ವರದಿ 2005-06

ಕೇಂದ್ರಾಡಳಿತ ಪ್ರದೇಶದ ಆಡಳಿತದಿಂದ ಸ್ಥಾಪಿತವಾದ, ರಚಿತವಾದ, ಅದರ ಒಡೆತನಕ್ಕೆ, ನಿಯಂತ್ರಣಕ್ಕೆ ಒಳಪಟ್ಟ ಅಥವಾ ಕೇಂದ್ರ ಸರ್ಕಾರವು ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತವು ನೇರವಾಗಿ ಅಥವಾ ಪರೋಕ್ಷವಾಗಿ,- (i) ಕೇಂದ್ರ ಸರ್ಕಾರ, ಒದಗಿಸಿರುವ ನಿಧಿಗಳಿಂದ ಗಣನೀಯ ಆರ್ಥಿಕ ನೆರವು ಪಡೆದ ಸಾರ್ವಜನಿಕ ಪ್ರಾಧಿಕಾರದ ಸಂದರ್ಭದಲ್ಲಿ, ಕೇಂದ್ರ ಸರ್ಕಾರ; (ii) ರಾಜ್ಯ ಸರ್ಕಾರ ಒದಗಿಸಿರುವ ನಿಧಿಗಳಿಂದ ಗಣನೀಯ ಆರ್ಥಿಕ ನೆರವು ಪಡೆದಿರುವ ಸಾರ್ವಜನಿಕ ಪ್ರಾಧಿಕಾರದ ಸಂದರ್ಭದಲ್ಲಿ, ರಾಜ್ಯ ಸರ್ಕಾರ; (ಬಿ) ``ಕೇಂದ್ರ ಮಾಹಿತಿ ಆಯೋಗ'' ಎಂದರೆ 12ನೇ ಪ್ರಕರಣದ (1)ನೇ ಉಪ ಪ್ರಕರಣದ ಅಡಿಯಲ್ಲಿ ರಚಿತವಾದ ಕೇಂದ್ರ ಮಾಹಿತಿ ಆಯೋಗ; (ಸಿ) ``ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ'' ಎಂದg, 5ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ಹಾಗೆ ಹೆಸರಿಸಲಾದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಇದು (2)ನೇ ಉಪಪ್ರಕರಣದ ಅಡಿಯಲ್ಲಿ ಹೆಸರಿಸಲಾದ ಕೇಂದ್ರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಒಳಗೊಳ್ಳುತ್ತದೆ;

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಕರ್ನಾಟಕ ಮಾಹಿತಿ ಆಯೋಗ

ಮೂಲ : ಕರ್ನಾಟಕ ಮಾಹಿತಿ ಆಯೋಗ

ಕೊನೆಯ ಮಾರ್ಪಾಟು : 7/13/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate