অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅರ್ಜಿ

ಅರ್ಜಿಯನ್ನು ಹೇಗೆ ಬರೆಯುವುದು?

ಉತ್ತರ: ಮಾಹಿತಿಗಾಗಿ ಹಕ್ಕು ಅರ್ಜಿಯನ್ನು ಹಾಕುವಾಗ, ಪ್ರಶ್ನೆಯನ್ನು ರೂಪಿಸುವುದು ಅತಿ ಮುಖ್ಯ. ಒಂದು ಚಿಕ್ಕ ಭಿನ್ನಭಿಪ್ರಾಯ ಅಥವಾ ಅಸ್ಪಷ್ಟ ಪ್ರಶ್ನೆಗಳು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ಕೆಳಗಿನ ಗೊತ್ತುವಳಿಗಳನ್ನು ಅನುಸರಿಸಿ:

  • ಅರ್ಜಿಯನ್ನು ಬರೆಯಲು ಬಿಳಿಯ ಹಾಳೆಯನ್ನು ಉಪಯೋಗಿಸಿ. ನೋಟ್ ಶೀಟ್ ಅಥವಾ ಕೋರ್ಟ್ ಸ್ಟಾಂಪ್ ಪೇಪರ್ ಬಳಸುವ ಅಗತ್ಯವಿಲ್ಲ.
  • ವಿಷಯವನ್ನು ಕೈ ಬರಹದಲ್ಲಿ ಬರೆಯ ಬಹುದು ಅಥವಾ ಟೈಪ್ ಮಾಡಬಹುದು. ವಿಷಯವನ್ನು ಟೈಪ್ ಮಾಡಲೇ ಬೇಕಾದ ಕಡ್ಡಾಯವಿಲ್ಲ.
  • ಅರ್ಜಿಯು ಸ್ಪಷ್ಟವಾಗಿದೆ ಮತ್ತು ಸುಲಭವಾಗಿ ಓದಲು ಸಾಧ್ಯ ಎಂಬುದನ್ನು ಖಚಿತ ಪಡಿಸಿ ಕೊಳ್ಳಿ
  • ಮಾಹಿತಿಯನ್ನು ಕೇಳುವಾಗ ಅರ್ಜಿಯಲ್ಲಿ ಪುಟಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ
  • ಒಂದು ಅರ್ಜಿಯಲ್ಲಿ ಕೇಳಬಹುದಾದ ಪ್ರಶ್ನೆಗಳ ಸಂಖ್ಯೆಗೆ ನಿರ್ಬಂಧವಿಲ್ಲ. ಆದರೆ ಒಂದು ಅರ್ಜಿಯಲ್ಲಿ ಮಿತವಾದ ಪ್ರಶ್ನೆಗಳನ್ನು ಕೇಳುವುದು ಮತ್ತು ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳುವುದು ಸೂಕ್ತ.
  • ಒಬ್ಬರು ಅವನಿಗೆ/ಅವಳಿಗೆ ಇಷ್ಟವಾದಷ್ಟು ಸಣ್ಣ ಪ್ರಶ್ನೆಗಳನ್ನು ಕೇಳಬಹುದು. ಆದರೆ ಒಂದೇ ಬಾರಿಗೆ ದೊಡ್ಡ ಮಾಹಿತಿಯನ್ನು ಕೇಳಬೇಡಿ.
  • ಅರ್ಜಿಯಲ್ಲಿ ಯಾವಾಗಲೂ ನಿಮ್ಮ ಹೆಸರು ಬರೆಯಿರಿ ಮತ್ತು ನಿಮ್ಮ ಸಹಿ ಹಾಕಿ, ನಿಮ್ಮ ' ಕೆಲಸ/ಸ್ಥಾನ'ವನ್ನು ನಮೂದಿಸುವ ಅವಶ್ಯಕತೆ ಇಲ್ಲ, ಎಲ್ಲಾ ಪ್ರಜೆಗೂ ಮಾಹಿತಿಯ ಹಕ್ಕಿದೆ.
  • 'ಏಕೆ' ಎಂದು ಪ್ರಾರಂಭ ವಾಗುವ ನೇರ ಪ್ರಶ್ನೆಯನ್ನು ಕೇಳಬೇಡಿ, ಅದು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಅನ್ವಯಿಸುವುದಲಿಲ್ಲ ವಾದುದರಿಂದ ನಿರಾಕರಣೆಗೆ ಯೋಗ್ಯವಾಗುತ್ತದೆ ಉದಾಹರಣೆಗೆ, 'ನೀವು ಏಕೆ ಬಿಲ್ ಮಂಜೂರು ಮಾಡಲು ವಿಫಲರಾಗಿರುವಿರಿ?', ಈ ಪ್ರಶ್ನೆಯು ತಿರಸ್ಕರಿಸಲು ಅರ್ಹ.

ಕಲಂ 4(1)(d) ಅಡಿಯಲ್ಲಿ, "ಆಡಳಿತದ" ಅಥವಾ "ಭಾಗಶಃ ನ್ಯಾಯಿಕ" ತೀರ್ಪಿನ ಹಿಂದಿನ ಕಾರಣಗಳನ್ನು ಕೇಳಿ, ವಿಶೇಷವಾಗಿ ನೀವು ಒಬ್ಬ "ಭಾದಿತ ವ್ಯಕ್ತಿ" ಆಗಿದ್ದರೆ

  • ಕೋರಿದ ಮಾಹಿತಿಯು ಭಾರಿ ಪ್ರಮಾಣದಲ್ಲಿದರೆ, ವೆಚ್ಚವನ್ನು ಉಳಿಸಲು CDಯ ರೂಪದಲ್ಲಿ ಕೇಳುವುದು ಉತ್ತಮ.
  • ಮಾಹಿತಿಯನ್ನು ಕೇಳಲು ನೀವು ಕಾರಣವನ್ನು ಬರೆಯುವ ಅವಶ್ಯಕತೆ ಇಲ್ಲ, ಇದನ್ನು ನೆನಪಿಡಿ
  • ಹಣ ಪಾವತಿದ ವಿವರಗಳನ್ನು ನಮೂದಿಸಿ, ಉದಾಹರಣೆಗೆ BC/DD/IPO ಸಂಖ್ಯೆ, ಬ್ಯಾಂಕ್/ಅಂಚೆ ಕಚೇರಿ. ದಿನಾಂಕ, ಹಣದ ರಸೀದಿಯ ವಿವರಗಳು ಇತ್ಯಾದಿಗಳನ್ನು ನಿಮ್ಮ ಅರ್ಜಿಯ ಕೊನೆಯಲ್ಲಿ ನಮೂದಿಸಿ.

ಅರ್ಜಿಯನ್ನು ಯಾರಿಗೆ ಸಂಬೋಧಿಸ ಬೇಕು?

ಉತ್ತರ:

  • ನೀವು ಅರ್ಜಿ ಸಲ್ಲಿಸ ಬೇಕಾಗಿರುವ, ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿವರಗಳು, ಹೆಸರು, ವಿಳಾಸ ಇತ್ಯಾದಿಗಳನ್ನು ಬರೆಯಿರಿ.
  • ನೀವು ನಿಮ್ಮ ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಗುರುತಿಸುವಲ್ಲಿ ತೊಂದರೆಯಾದರೆ, ನೀವು ನಿಮ್ಮ ಮಾಹಿತಿಗಾಗಿ ಹಕ್ಕು ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ, C/o ವಿಭಾಗದ ಮುಖ್ಯಸ್ಥರಿಗೆ ಸಂಬೋಧಿಸ ಬಹುದು ಮತ್ತು ಅದನ್ನು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರಕ್ಕೆ ಅಗತ್ಯವಾದ ಅರ್ಜಿಯ ಶುಲ್ಕದೊಂದಿಗೆ ಕಳುಹಿಸಿ
  • ವಿಭಾಗದ ಮುಖ್ಯಸ್ಥರು ನಿಮ್ಮ ಅರ್ಜಿಯನ್ನು ಸಂಬಂಧ ಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ರವಾನಿಸಬೇಕು.
  • ನಿಮ್ಮ ಅರ್ಜಿಯಲ್ಲಿ ನಿರ್ದಿಷ್ಟವಾದ ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರನ್ನು ನಮೂದಿಸ ಬೇಡಿ, ಅವರು ವರ್ಗಾವಣೆಯಾಗಬಹುದಾದ ಅಥವಾ ಹೊಸ ವ್ಯಕ್ತಿ ಆ ಸ್ಥಾನಕ್ಕೆ ಬರುವ ಸಂಭವವಿರುತ್ತದೆ.
ಮೂಲ : ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 7/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate