ದೂರು ದಾಖಲಿಸಲು ನಿಗದಿತ ನಮೂನೆ ಇದೆಯೇ & ದೂರಿನಲ್ಲಿ ಏನೆಲ್ಲವನ್ನು ಕೇಳಲು ಸಾಧ್ಯ? ಕೇಂದ್ರ ಮಾಹಿತಿ ಆಯೊಗ ಮತ್ತು ಕೆಲವು ರಾಜ್ಯ ಮಾಹಿತಿ ಆಯೋಗಗಳು ಕನಿಷ್ಟ ಮಾಹಿತಿ ಅಥವಾ ದಾಖಲೆಗಳನ್ನು ನಿಗದಿ ಪಡಿಸಿವೆ, ಅವುಗಳನ್ನು ದೂರಿನ ಜೊತೆ ಸಲ್ಲಿಸ ಬೇಕು. ಕೆಲವು ರಾಜ್ಯ ಮಾಹಿತಿ ಆಯೋಗಗಳು ದೂರು ಸಲ್ಲಿಸಲು ನಿಗದಿತ ನಮೂನೆಯನ್ನು ಸೂಚಿಸಿವೆ. ಈ ಕಾಯಿದೆ ಅಡಿಯಲ್ಲಿ ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಗೆ/ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಶಿಕ್ಷೆ ನೀಡಲು ಸಹ ಕೋರಬಹುದು ಮತ್ತು ಸರಿಯಾದ ಸಮಯದಲ್ಲಿ ಮಾಹಿತಿ ಕೊಡದ ಕಾರಣಕ್ಕಾಗಿ ಪರಿಹಾರವನ್ನು ಸಹ ಕೇಳ ಬಹುದು. ಮಾಹಿತಿಯು ಜೀವನ ಮತ್ತು ಸ್ವಾತಂತ್ರಕ್ಕೆ ಅನ್ವಯಿಸಿದ್ದಲ್ಲಿ, ದೂರಿನ ಮೇಲೆ ಅವಶ್ಯಕವಾಗಿ "ಜೀವನ & ಸ್ವಾತಂತ್ರ್ಯ-ತುರ್ತು" ಎಂದು ನಿರ್ದಿಷ್ಟವಾಗಿ ಬರೆಯಬೇಕು, ಆಗ ಹೆಚ್ಚು ವಿಳಂಬವಾಗದಂತೆ ಅದರ ಇತ್ಯರ್ಥ್ಯಕ್ಕೆ ಅದ್ಯತೆಯನ್ನು ನೀಡಲು ಸಮ್ಮತಿಸಲಾಗುತ್ತದೆ. ರಾಜ್ಯ ಮಾಹಿತಿ ಆಯೋಗದೊಂದಿಗೆ ಲಭ್ಯವಿದ್ದರೆ ಇ-ಮೇಲ್ ಮೂಲಕ ಅನುಪಾಲನೆ ( ಫಾಲೋ ಅಪ್‌ನ್ನು) ಮಾಡಲು ಸೂಚಿಸಲಾಗಿದೆ. ಮೂಲ :ಪೋರ್ಟಲ್ ತಂಡ