অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಮಾನ್ಯ ಪ್ರಶ್ನೆಗಳು

ಈ ಕಾಯಿದೆ ಯಾವಾಗ ಜಾರಿಗೆ ಬಂತು?

ಈ ಕಾಯಿದೆ ಆಕ್ಟೊಬರ್ 12, 2005ರಂದು ಜಾರಿಗೆ ಬಂತು (ಜೂನ್ 15, 2005, ಈ ಕಾಯಿದೆಯು ಅಧಿನಿಯಮಗೊಂಡು 120ನೆ ದಿನ ). ಕೆಲವುSoನಿಬಂಧನೆಗಳು ತಕ್ಷಣವೇ ಜಾರಿಗೆ ಬಂದಿವೆ, ಅವುಗಳೆಂದರೆ ಸಾರ್ವಜನಿಕ ಪ್ರಾಧಿಕಾರಗಳ ಕರ್ತವ್ಯಗಳು [S.4(1)], ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನೇಮಕಾತಿ [S.5(1) ಮತ್ತು 5(2)], ಕೇಂದ್ರ ಮಾಹಿತಿ ಆಯೋಗದ ಸಂವಿಧಾನ (S.12 ಮತ್ತು 13), ರಾಜ್ಯ ಮಾಹಿತಿ ಆಯೋಗದ ಸಂವಿಧಾನ (S.15 ಮತ್ತು 16), ಗುಪ್ತ ಮತ್ತು ರಕ್ಷಣಾ ಸಂಸ್ಥೆಗಳಿಗೆ ಕಾಯಿದೆಯ ಅನ್ವಸದಿರುವಿಕೆ (S.24) ಮತ್ತು ಕಾಯಿದೆಯ ನಿಂಬಂಧನೆಗಳನ್ನು ಜಾರಿಗೊಳಸಲು ಕಾನೂನುಗಳನ್ನು ರಚಿಸುವ ಅಧಿಕಾರ (S.27 ಮತ್ತು 28).

ಯಾರು ಈ ಕಾಯಿದೆಗೆ ಒಳಪಡುತ್ತಾರೆ?

ಈ ಕಾಯಿದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತು ಪಡಿಸಿ ಇಡಿ ದೇಶಕ್ಕೆ ಅನ್ವಯಿಸುತ್ತದೆ. [S.(12)]

ಮಾಹಿತಿ ಎಂದರೆ ಏನು?

ಮಾಹಿತಿ ಎಂದರೆ ಯಾವುದೇ ಸ್ವರೂಪದಲ್ಲಿರುವ ಯಾವುದೇ ವಿಷಯವಾಗಿದೆ. ಮಾಹಿತಿಯು ದಾಖಲೆಗಳು, ಕಡತಗಳು, ಇ-ಮೇಲ್‌ಗಳು, ಮೆಮೊಗಳು, ಅಭಿಪ್ರಾಯಗಳು, ಸೂಚನೆಗಳು, ಪತ್ರಿಕಾ ಪ್ರಕಟನೆಗಳು, ಅದೇಶಗಳು, ಲಾಗ್ ಬುಕ್‌ಗಳು ಒಪ್ಪಂದಗಳು, ವರದಿಗಳು, ಪತ್ರಿಕೆಗಳು, ನಮೂನೆಗಳು, ಮಾದರಿಗಳು, ಯಾವುದೇ ವಿದ್ಯುನ್ಮಾನ ರೂಪದಲ್ಲಿ ಹಿಡಿದಿಟ್ಟ ದತ್ತಾಂಶ ವಿಷಯಗಳನ್ನು ಒಳಗೊಳ್ಳುತ್ತದೆ ಮತ್ತು ಆ ಸಮಯದಲ್ಲಿ ಜಾರಿಯಲ್ಲಿರುವ ಬೇರೆ ಯಾವುದೇ ಕಾನೂನಿನ ಅಡಿಯಲ್ಲಿ ಒಂದು ಸಾರ್ವಜನಿಕ ಪ್ರಾಧಿಕಾರದಿಂದ ಪ್ರವೇಶಾಧಿಕಾರ ಹೊಂದಿದ ಯಾವುದೇ ಖಾಸಗಿ ಸಂಸ್ಥೆಗೆ ಸಂಬಂಧಿಸಿದ ಮಾಹಿತಿಯು ಸೇರುತ್ತದೆ, ಆದರೆ ಅದು (ಕಡತದಲ್ಲಿನ ಅಭಿಪ್ರಾಯ) ಗಳನ್ನು ಒಳಗೊಳ್ಳುವುದ್ದಿಲ್ಲ. [S.2 (f)].

ಮಾಹಿತಿಯ ಹಕ್ಕು ಎಂದರೆ ಏನು?

ಇದು ಕೆಳಗಿನ ಹಕ್ಕುಗಳನ್ನು ಒಳಗೊಂಡಿದೆ-

  1. ಕೆಲಸಗಳು, ದಾಖಲೆಗಳು, ಕಡತಗಳನ್ನು ಪರಿಶೀಲಿಸುವುದು.
  2. ದಾಖಲೆಗಳ ಅಥವಾ ಕಡತಗಳ ಟಿಪ್ಪಣಿಗಳು, ಉದ್ದರಣೆಗಳು, ಪ್ರಮಾಣೀಕರಿಸಿದ ಪ್ರತಿಗಳನ್ನು ತೆಗೆದುಕೊಳ್ಳುವುದು.
  3. ವಿಷಯಗಳ ಪ್ರಮಾಣೀಕರಿಸಿದ ನಮೂನೆಗಳನ್ನು ತೆಗೆದು ಕೊಳ್ಳುವುದು.
  4. ಪ್ರಿಂಟ್ ಔಟ್, ಡಿಸ್ಕೆಟ್‌ಗಳು, ಫ್ಲಾಪಿಗಳು, ಟೇಪ್‌ಗಳು, ವಿಡಿಯೋ ಕ್ಯಾಸೆಟ್‌ಗಳ ರೂಪದಲ್ಲಿ ಅಥವಾ ಯಾವುದೇ ಇತರೆ ಎಲೆಕ್ಟ್ರಾನಿಕ್ ಮಾರ್ಗದಲ್ಲಿ ಅಥವಾ ಪ್ರಿಂಟ್ ಔಟ್‌ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುವುದು.[S.2(j)]

ಮೂಲ  : ಮಾಹಿತಿ ಹಕ್ಕು ಕಾಯಿದೆ(http://www.righttoinformation.gov.in/)

ಕೊನೆಯ ಮಾರ್ಪಾಟು : 12/14/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate