অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

೨ ನೇ ಮೇಲ್ಮನಮಿ ಅರ್ಜಿ

೨ ನೇ ಮೇಲ್ಮನಮಿ ಅರ್ಜಿ

ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ 2ನೇ ಮೇಲ್ಮನಮಿ ಅರ್ಜಿಯನ್ನು ಸಲ್ಲಿಸಲು ಸೂಚನೆಗಳು

  1. 2ನೇ ಮೇಲ್ಮನಮಿ ಅರ್ಜಿಯನ್ನು ಯಾವಾಗ ಸಲ್ಲಿಸುವುದು:
    • ನೀವು ಪ್ರಥಮ ಮೇಲ್ಮನವಿ ಅಧಿಕಾರಿಯ ತೀರ್ಪಿನಿಂದ ತೃಪ್ತಿಕರವಾಗಿರದಿದ್ದಲ್ಲಿ
    • ಸಾರ್ವಜನಿಕ ಪ್ರಾಧಿಕಾರವು ಪೂರೈಸಿದ ಮಾಹಿತಿಯು ಅಪೂರ್ಣ, ತಪ್ಪು ಅಭಿಪ್ರಾಯವನ್ನುಂಟುಮಾಡುತ್ತದೆ ಅಥವಾ ತಪ್ಪು
    • ಎಂದು ನೀವು ಭಾವಿಸಿದಲ್ಲಿ
    • ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ಮತ್ತು/ಅಥವಾ ಪ್ರಥಮ ಮೇಲ್ಮನವಿ ಪ್ರಾಧಿಕಾರವು (AA) ಮಾಹಿತಿಯನ್ನು ಒದಗಿಸಲು ಕೋರಿದ ನಿಮ್ಮ ಅರ್ಜಿಯನ್ನು ತಿರಸ್ಕರಿಸಿದರೆ
    • ಮೇಲ್ಮನವಿ ಪ್ರಾಧಿಕಾರವು ನಿಗದಿ ಪಡಿಸಿದ ಕಾಲಾವಧಿಯ ಒಳಗೆ ತೀರ್ಪನ್ನು ನೀಡದಿದ್ದಲ್ಲಿ
    • ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅರ್ಜಿಯನ್ನು ಸ್ವೀಕರಿಸಲು ಅಥವಾ ರಾಜ್ಯ/ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅಥವಾ ರಾಜ್ಯ/ಕೇಂದ್ರ ಮಾಹಿತಿ ಆಯೋಗಕ್ಕೆ ವರ್ಗಾಯಿಸಲು ನಿರಾಕರಿಸಿದರೆ
    • ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ ಪಡೆದ ಅರ್ಜಿ ಶುಲ್ಕವು ದುಬಾರಿ ಎಂದು ನೀವು ಭಾವಿಸಿದರೆ.
  2. 2ನೇ ಮೇಲ್ಮನಮಿ ಅರ್ಜಿಯನ್ನು ಎಲ್ಲಿ ಸಲ್ಲಿಸುವುದು:
    • ರಾಜ್ಯ ಮಾಹಿತಿ ಆಯೋಗದಲ್ಲಿ (SIC) (ವಿಷಯವು ರಾಜ್ಯದ ಸಾರ್ವಜನಿಕ ಪ್ರಾಧಿಕಾರಕ್ಕೆ ಸಂಬಂಧಿಸಿದರೆ)
    • ಕೇಂದ್ರ ಮಾಹಿತಿ ಆಯೋಗದಲ್ಲಿ (CIC) (ವಿಷಯವು ಕೇಂದ್ರದ ಸಾರ್ವಜನಿಕ ಪ್ರಾಧಿಕಾರಕ್ಕೆ ಸಂಬಂಧಿಸಿದರೆ)
  3. 2ನೇ ಮೇಲ್ಮನಮಿಗೆ ಕಾಲ ಪರಿಮಿತಿ
    • ವಿಧಿಸಿದ ಸಮಯದ ಮುಕ್ತಾಯದ ದಿನಾಂಕ ಅಥವಾ ಪ್ರಥಮ ಮೇಲ್ಮನವಿ ಪ್ರಾಧಿಕಾರದೊಂದಿಗೆ ಸಂಪರ್ಕಿಸಿದ (ತೀರ್ಪು ಅಥವಾ ಬೇಡಿಕೆಯ ನಿರಾಕರಣೆ) ದಿನದಿಂದ 90 ದಿನಗಳ ಒಳಗೆ
    • ಮೇಲ್ಮನವಿದಾರನನ್ನು ಮೇಲ್ಮನವಿ ಮೊಕದ್ದಮೆ ದಾಖಲು ಮಾಡುವುದರಿಂದ ತಡೆಯಲಾಗಿದೆ ಎಂಬುದು ರಾಜ್ಯ/ಕೇಂದ್ರ ಮಾಹಿತಿ ಆಯೋಗಕ್ಕೆ ಖಾತ್ರಿಯಾದರೆ, ಮೇಲ್ಮನವಿಯನ್ನು 90 ದಿವಸಗಳ ನಂತರ ಸಹ ಒಪ್ಪಿಕೊಳ್ಳಬಹುದು.
  4. 2ನೇ ಮೇಲ್ಮನಮಿಗೆ ಅರ್ಜಿಯ ಕರಡನ್ನು ಸಿದ್ಧಗೊಳಿಸುವುದು:
    • ಬಿಳಿಯ ಹಾಳೆಯ ಮೇಲೆ ಅರ್ಜಿಯ ಕರಡನ್ನು ಬರೆಯಿರಿ
    • ಅರ್ಜಿಯು ಕೈ ಬರಹದಲ್ಲಿ ಅಥವಾ ಟೈಪ್ ಮಾಡಿರಬೇಕು
    • ಅರ್ಜಿಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಸಲ್ಲಿಸ ಬೇಕು (ಕೇಂದ್ರ ಮಾಹಿತಿ ಆಯೋಗಕ್ಕೆ) ಅಥವಾ ಯಾವುದೇ ರಾಜ್ಯ ಭಾಷೆಗಳಲ್ಲಿರಬೇಕು (ರಾಜ್ಯ ಮಾಹಿತಿ ಆಯೋಗಕ್ಕೆ)
  5. ಅರ್ಜಿಯನ್ನು ಸಿದ್ಧಗೊಳಿಸುವುದು:
    • ನಿಗದಿ ಪಡಿಸಿದ ವಿಧಾನದಲ್ಲಿ ಸ್ಪಷ್ಟವಾಗಿ ಅಗತ್ಯವಾದ ಮಾಹಿತಿಗಳನ್ನು ಒದಗಿಸಿ
    • ಲಗತ್ತಿಸಿದ ಇತರೆ ಎಲ್ಲಾ ದಾಖಲೆ ಪತ್ರಗಳನ್ನು ಸೂಚಿಸಲು ಪುಟ ಸಂಖ್ಯೆಯೊಂದಿಗೆ ಒಂದು ವಿಷಯ ಸೂಚಿ ಪುಟವನ್ನು ಮಾಡಿ
    • ಎಲ್ಲಾ ದಾಖಲೆಗಳ ಐದು ಕಾಪಿಗಳನ್ನು ತಯಾರು ಮಾಡಿ (2ನೆ ಮೇಲ್ಮನವಿ ಅರ್ಜಿ, ಮಾಹಿತಿಗಾಗಿ ಕೋರಿಕೆ, 1ನೇ ಮೇಲ್ಮನವಿ ಅರ್ಜಿ, ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಪಾವತಿಸಿದ ಶುಲ್ಕದ ಪುರಾವೆ ಇತ್ಯಾದಿ) ಮತ್ತು ಅದನ್ನು ಸ್ವಯಂ ಪ್ರಮಾಣೀಕರಿಸಿ. ನಿಮಗಾಗಿ ಒಂದು ಹೆಚ್ಚಿನ ಪ್ರತಿಯನ್ನು ಮಾಡಿ ಕೊಳ್ಳಬೇಕು.
  6. ಅರ್ಜಿಯನ್ನು ಹೇಗೆ ಕಳುಹಿಸುವುದು:
    • ಅರ್ಜಿಯ ಐದು (5) ಪ್ರತಿಗಳನ್ನು ನೊಂದಾಯಿತ ಅಂಚೆಯಲ್ಲಿ ಮಾತ್ರ ಕಳುಹಿಸಬೇಕು.
    • ಹಾಗೆಯೇ, ಅರ್ಜಿಯ ಜೊತೆ ಸ್ವೀಕೃತಿ ಪತ್ರವನ್ನು ಲಗತ್ತಿಸಿ.
  7. ಕೇಂದ್ರ ಮಾಹಿತಿ ಆಯೋಗಕ್ಕೆ, ಅರ್ಜಿಯನ್ನು ಅನ್ಲೈನ್ನಲ್ಲಿ ಸಲ್ಲಿಸಲು ಸಾಧ್ಯ.
  8. ಮಾಹಿತಿಯ ಪೂರೈಕೆಗೆ ಕಾಲಾವಧಿ:
    • ಸಹಜ ಪರಿಸ್ಥಿತಿಯಲ್ಲಿ ತೀರ್ಪನ್ನು 30 ದಿನಗಳ ಒಳಗೆ ನೀಡಬೇಕು, ಆದರೆ ವಿಶೇಷ ಪರಿಸ್ಥಿತಿಯಲ್ಲಿ 45 ದಿನಗಳ ಕಾಲ ಪರಿಮಿತಿ ಇರುತ್ತದೆ.
    • ಪ್ರಥಮ ಮೇಲ್ಮನವಿ ಪ್ರಾಧಿಕಾರದಿಂದ (FAA) ಅರ್ಜಿ ಸ್ವೀಕೃತವಾದ ದಿನಾಂಕದಿಂದ ದಿನಾಂಕದಿಂದ ತೀರ್ಪಿನ ಕಾಲಾವಧಿಯನ್ನು ಪರಿಗಣಿಸಲಾಗುತ್ತದೆ.
  9. ರಾಜ್ಯ/ಕೇಂದ್ರ ಮಾಹಿತಿ ಆಯೋಗದ ತೀರ್ಪು ಎರಡು ಕಕ್ಷಿದಾರಿಗೂ ಅನ್ವಯಿಸುತ್ತದೆ. ಆದರೆ ಅನ್ಯಾಯಕ್ಕೊಳಗಾಗದ ಸಾರ್ವಜನಿಕ ಪ್ರಾಧಿಕಾರವು ಉಚ್ಛ ನ್ಯಾಯಾಲಯದಲ್ಲಿ ರಾಜ್ಯ ಮಾಹಿತಿ ಆಯೋಗ/ಕೇಂದ್ರ ಮಾಹಿತಿ ಆಯೋಗದ ತೀರ್ಪಿನ ವಿರುದ್ದ ಮನವಿ ಸಲ್ಲಿಸಲು ಸಾಧ್ಯ.

೨ ನೇ ಮೇಲ್ಮನಮಿ ಅರ್ಜಿ

ಮೂಲ :ಪೋರ್ಟಲ್   ತಂಡ

ಕೊನೆಯ ಮಾರ್ಪಾಟು : 3/11/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate