অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಖಜಾನೆ-II

2001-02ನೇ ಸಾಲಿನ ಅವಧಿಯಲ್ಲಿ ಖಜಾನೆ ಯೋಜನೆಯ ಮೂಲಕ ಖಜಾನೆಗ¼ ಅಂತರಿಕ ಗಣಕೀಕರಣವನ್ನು ಸಾಧಿಸಲಾಗಿತ್ತು. ಈ ಯೋಜನೆಯು ರಾಜ್ಯಕ್ಕೆ ಒಳ್ಳೆಯ ಹೆಸರು ಹಾಗೂ ಗೌರವವನ್ನು ತಂದುಕೊಟ್ಟಿದ್ದು ಸದರಿ ತಂತ್ರಾಂಶವು ತಾಂತ್ರಿಕ ಹಾಗೂ ಆಡಳಿತಾತ್ಮಿಕ ವಲಯಗಳಲ್ಲಿ ಒಂದು ಬೃಹತ್ ಹೆಜ್ಜೆಯೆಂದು ಇ-ಆಡಳಿತದಲ್ಲಿ ಗುರುತಿಸಲ್ಲಟ್ಟಿದೆ. ಈ ತಂತ್ರಾಂಶದ ಮುಖ್ಯ ಗುರಿ ಬಿಗಿಯಾದ ಹಣಕಾಸು ನಿರ್ವಹಣೆ ಹಾಗೂ ಆಯವ್ಯಯ ನಿಯಂತ್ರಣವಾಗಿ ಹೊರಹೊಮ್ಮಿದೆ. ಖಜಾನೆಗಳ ಅಂತರಿಕ ಚಟುವಟಿಕೆಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಸಾಧಿಸಲಾಯಿತು.

ಪ್ರಸ್ರ್ತುತ ಖಜಾನೆ ಯೋಜನೆಯನ್ನು 2001 ರಲ್ಲಿ ಅಂದಿನ ತಂತ್ರಾಂಶ ಹಾಗೂ ಯಂತ್ರಾಂಶಗಳ ತಾಂತ್ರಿಕತೆಯ ಚೌಕಟಿನಲ್ಲಿ ರೂಪಿಸಲಾಗಿದೆ. ಆದರೆ ಇಂದಿನ ಚಲನ ಶೀಲ ಹಣಕಾಸಿನ ನಿರ್ವಹಣೆಯ ಅವಶ್ಯಕತೆಗಳನ್ನು ಪೂರೈಸಲು ಖಜಾನೆ ತಂತ್ರಾಂಶವು ಕೆಲವು ಮುಖ್ಯ ಕ್ರಿಯೆಗಳಲ್ಲಿ ಹಾಗೂ ಕೆಲವು ತಾಂತ್ರಿಕ ಕ್ರಿಯೆಗಳಲ್ಲಿ ನಿರ್ಭಂದತೆ ಹೊಂದಿರುತ್ತದೆ. ರಾಜ್ಯ ಆಯವ್ಯಯದಲ್ಲಿ ಗಮನರ್ಹ ಏರಿಕೆಯಾಗಿದ್ದು ಆಗಾಗ್ಗೆ ಸರ್ಕಾರ ಜಮೆ ಮತ್ತು ಖರ್ಚುಗಳ ಮಾಹಿತಿಗಳು ಲಭ್ಯವಾಗಬೇಕಾಗುತ್ತದೆ. ಖಜಾನೆ-2 ತಂತ್ರಾಂಶವು 2002-04ರಲ್ಲಿ ಅಭಿವೃಧಿ ಪಡಿಸಿದ ಖಜಾನೆ ತಂತ್ರಾಂಶವನ್ನು ಬದಲಾಯಿಸಲು ಬಯಸುತ್ತದೆ. ಖಜಾನೆ-2 ಪ್ರಸ್ತುತ ಖಜಾನೆ ತಂತ್ರಾಂಶದಲ್ಲಿ ಇರುವ ಮುಖ್ಯ ಕ್ರಿಯೆಗಳು ಹಾಗೂ ತಾಂತ್ರಿಕ ನಿರ್ಭಂದತೆಯನ್ನುಅಳಿಸಿ ಹಾಕಲಿದೆ. ಸರ್ಕಾರದ ಒಳಗಿನ ಹಾಗೂ ಹೊರಗಿನ ಬಳಕೆದಾರರ, ಸಾರ್ವಜನಿಕರ ಹಾಗೂ ಸಿಬ್ಬಂದಿಗಳ ಹಾಗೂ ಸರಬಾರಾಜುದಾರಿಗೆ ಹಣಕಾಸು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅನುಕೂಲ ಮಾಡಿ ಕೊಡಲಿದೆ.

ಖಜಾನೆ-II ಯೋಜನೆ

ಕರ್ನಾಟಕ ಸರ್ಕಾರವು ರಾಜ್ಯದ ಹಣಕಾಸು ವ್ಯವಹಾರಗಳನ್ನು ಹಾಗೂ ಪಾವತಿಗಳನ್ನು ಇನ್ನಷ್ಟು ಪರಿಣಾಮಕಾರಿಯಾದ ರೀತಿಯಲ್ಲಿ ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕವಾದ ಮತ್ತು ಏಕೀಕೃತವಾದ ನೂತನ ವ್ಯವಸ್ಥೆ ಖಜಾನೆ-II ಯನ್ನು ಜಾರಿಗೊಳಿಸುತ್ತಿದೆ. ಖಜಾನೆ-II ಎನ್ನುವುದು, ``ಒಂದು ನೂತನ ಏಕೀಕೃತ ಹಣಕಾಸು ನಿರ್ವಹಣಾ ವ್ಯವಸ್ಥೆಯಾಗಿದೆ’’. ಇದು ಸರ್ಕಾರದ ಎಲ್ಲಾ ಪ್ರಮುಖ ಇಲಾಖೆಗಳು ಮತ್ತು ಖಜಾನೆಯ ನಾಗರಿಕರನ್ನು ಹಣಕಾಸು ವ್ಯವಹರಣೆಯಲ್ಲಿ ಒಂದೇ ವೇದಿಕೆಗೆ ತರುತ್ತದೆ. ಅತ್ಯಂತ ಸಮಗ್ರವಾದ ಈ ವ್ಯವಸ್ಥೆಯು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಖಜಾನೆ-II ಯೋಜನೆಯ ಧ್ಯೇಯ

``ಸರ್ಕಾರದ ಹಣಕಾಸು ವ್ಯವಹಾರಗಳಲ್ಲಿ ದಕ್ಷ, ಪರಿಣಾಮಕಾರಿ ಮತ್ತು ಪಾರದರ್ಶಕ ನಿರ್ವಹಣೆಯನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ನೆರವಾಗುವುದು''

  1. ಕರ್ನಾಟಕ ರಾಜ್ಯ ಸರ್ಕಾರದ ಎಲ್ಲ ಹಣಕಾಸು ವ್ಯವಹರಣೆಗಳನ್ನು ನಿರ್ವಹಿಸಲು ಏಕೀಕೃತ ವಿದ್ಯುನ್ಮಾನ ವ್ಯವಸ್ಥೆಯನ್ನು ಕಲ್ಪಿಸುವುದು.  ಖಜಾನೆ-II ಯೋಜನೆಯ ಧ್ಯೇಯೋದ್ದೇಶ.

  2. ಹಣಕಾಸು ನಿರ್ಣಯ ಕೈಗೊಳ್ಳುವಿಕೆ, ಲೆಕ್ಕ ನಿರ್ವಹಣೆ ಮತ್ತು ಸಾರ್ವಜನಿಕ ಹಣಕಾಸುಗಳ ಲೆಕ್ಕಪರಿಶೋಧನೆಗೆ ಅನುಕೂಲವಾಗುವ ರೀತಿಯಲ್ಲಿ ನಿರಂತರವಾಗಿ ಆನ್‍ಲೈನ್ ಮಾಹಿತಿ ವಿನಿಮಯ ಮಾಡಿಕೊಳ್ಳುವುದು. 

  3. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಹಣಪಾವತಿಸುವುದು ಹಾಗೂ ಸ್ವೀಕರಿಸುವುದು.

  4. ಸಾರ್ವಜನಿಕ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು. 

  5. ಖಜಾನೆ-II ಯೋಜನೆಯ ಉಪಯೋಗವನ್ನು ಖಜಾನೆ ಇಲಾಖೆ, ಹಣಕಾಸು ಇಲಾಖೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಪ್ರಧಾನ ನಿಯಂತ್ರಣಾಧಿಕಾರಿಗಳು, ನಿಯಂತ್ರಣಾಧಿಕಾರಿಗಳು, ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ (ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ) ಹಣ ಸೆಳೆಯುವ ಹಾಗೂ ಬಟವಾಡೆ ಮಾಡುವ ಅಧಿಕಾರಿಗಳು, ಯೋಜನಾ ಇಲಾಖೆ, ಮಹಾಲೇಖಾಪಾಲರ ಕಚೇರಿ, ಬ್ಯಾಂಕುಗಳು ಮತ್ತು ನಾಗರೀಕರು ಪಡೆಯುವರು.

  6. ಈ ಯೋಜನೆಯಿಂದ ಸುಮಾರು, ಹಣ ಸೆಳೆಯುವ ಮತ್ತು ಬಟವಾಡೆ ಮಾಡುವ 24,000 ಅಧಿಕಾರಿಗಳು, 6 ಲಕ್ಷ ಸರ್ಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಮತ್ತು ಹೆಚ್ಚಿನ ಸಂಖ್ಯೆಯ ನಾಗರಿಕರಿಗೆ ಅನುಕೂಲವಾಗುವುದೆಂದು ನಿರೀಕ್ಷಿಸಲಾಗಿದೆ. ಶೇ.90ರಷ್ಟು ಹಣಪಾವತಿಗಳು ಆನ್‍ಲೈನ್ ಮೂಲಕ ನಿರ್ವಹಿಸಲಾಗುವುದು.

ಖಜಾನೆ-II ಯೋಜನೆಯ ವಿದ್ಯುನ್ಮಾನ ವೇದಿಕೆಯಲ್ಲಿ ಆಯವ್ಯಯದಿಂದ, ಬಿಲ್ಲುಗಳವರೆಗೆ ಸರ್ಕಾರದ ಸಂಪೂರ್ಣ ಹಣಕಾಸು ವ್ಯವಹಾರಗಳು ಒಳಗೊಳ್ಳತ್ತದೆ. ಈ ಕಾರ್ಯತಂತ್ತಾಶಗಳು ಹೀಗಿವೆ

 

ಬಿಲ್ಲುಗಳನ್ನು ತಯಾರಿಸುವುದಕ್ಕೆ ಸಂಬಂಧಿಸಿದ ಏಕೈಕ ವೇದಿಕೆಯಾಗಿದೆ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ, ಮಹಾಲೇಖಾಪಾಲರು, ನೂತನ ಪಿಂಚಣಿ ಯೋಜನೆ ಮತ್ತು ಮೇಲು ರುಜು ಮಾಡುವುದು ಹಾಗೂ ಮಂಜೂರಾತಿ ಪ್ರಾಧಿಕಾರಗಳನ್ನು ಒಳಗೊಂಡಿದೆ.

 

  1. ಹಣ ಸೆಳೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಬಿಲ್ಲುಗಳನ್ನು ಸಿದ್ಧಪಡಿಸುವ, ಸಲ್ಲಿಸುವ ಮತ್ತು ಸಿಸ್ಟಂ ಆಧಾರಿತ ತೀರುವಳಿ ಮಾಡುವ ವ್ಯವಸ್ಥೆಯಾಗಿದೆ.

  2. ಸ್ವಯಂ ನಿರ್ಮಿತ ವ್ಯಾಲಿಡೇಷನ್ ಪ್ರಮಾಣಪತ್ರಗಳು ಮತ್ತು ಪೂರಕ ದಸ್ತಾವೇಜುಗಳನ್ನು ಒಳಗೊಂಡಿರುವ ದೋಷಮುಕ್ತ ಬಿಲ್ಲು ಸಿದ್ಧಪಡಿಸುವವ್ಯವಸ್ಥೆ ಇದೆ.

  3. ದಿನವಹಿ ಆನ್‍ಲೈನ್ ಮೂಲಕ ಪಾವತಿಗಳು ಮತ್ತು ಜಮೆಗಳನ್ನು ಕ್ರೋಢೀಕರಿಸುವ ಸಾಮಥ್ರ್ಯವುಳ್ಳ ವ್ಯವಸ್ಥೆಯಾಗಿದೆ.

  4. ಆನ್‍ಲೈನ್ ಮೂಲಕ ವರದಿಗಳು, ಸಕಾಲಿಕ ವೆಚ್ಚಗಳು (62-ಬಿ), ಆಯವ್ಯಯ ಬ್ಯಾಲೆನ್ಸ್ ಮತ್ತು ರಾಜಸ್ವ ಸಂಗ್ರಹಗಳನ್ನು ನಿರ್ವಹಿಸಲಾಗುವುದು.

  5. ಆನ್‍ಲೈನ್ ಮೂಲಕ ಅನುದಾನವನ್ನು ಕಾರ್ಯದರ್ಶಿಗಳಿಂದ ಹಣಸೆಳೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಗಳವರೆಗಿನ ಎಲ್ಲಾ ಹಂತಗಳವರೆಗೆ ಬಿಡುಗಡೆ ಮಾಡುವ ವ್ಯವಸ್ಥೆಯಾಗಿದೆ.

  6. ಆಯವ್ಯಯ ಹಂಚಿಕೆಯಲ್ಲಿ ಆಗುವ ಬದಲಾವಣೆಗಳನ್ನು-ಪುನರ್ ವಿನಿಯೋಗ, ಪೂರಕ ಹಾಗೂ ಹೆಚ್ಚುವರಿ ಅಯವ್ಯಯಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ವ್ಯವಸ್ಥೆಯಾಗಿದೆ.

  7. ಹಣಕಾಸು ಇಲಾಖೆ ಮತ್ತು ಇತರ ಇಲಾಖೆಗಳು/ ಏಜೆನ್ಸಿಗಳ ಆಯವ್ಯಯ ಸಿದ್ಧಪಡಿಸುವಿಕೆ ಮತ್ತು ನಿಯಂತ್ರಣ, ನಿಧಿಗಳನ್ನು ಬಿಡುಗಡೆ ಮಾಡುವುದು ಮತ್ತು ಪುನರ್ವಿನಿಯೋಗಿಸುವುದು, ಮೊದಲಾದಂಥ ಚಟುವಟಿಕೆಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸುವ ವ್ಯವಸ್ಥೆಯಾಗಿದೆ.

  8. ಅನುದಾನ ಬಿಡುಗಡೆಯಲ್ಲಿ ತ್ವರಿತ ಹಾಗೂ ಅಗತ್ಯ ಬದಲಾವಣೆಗಳನ್ನು ಮಾಡುವ ಅವಕಾಶವಿದೆ.

ಮೂಲ : ಕರುನಾಡು

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate